September 2022 GST collection: ಸೆಪ್ಟೆಂಬರ್ ಜಿಎಸ್‌ಟಿ ಸಂಗ್ರಹ 7ನೇ ಬಾರಿಗೆ 1.4 ಲಕ್ಷ ಕೋಟಿ ರೂ
ದಾಖಲೆಯಲ್ಲಿ ಸತತ ಏಳನೇ ಬಾರಿಗೆ ದೇಶದ ಒಟ್ಟು ಜಿಎಸ್‌ಟಿ ಆದಾಯ ಸಂಗ್ರಹ 1.4 ಲಕ್ಷ ಕೋಟಿ ರೂಪಾಯಿ ಮೀರಿದೆ. ಸೆಪ್ಟೆಂಬರ್ ತಿಂಗಳಲ್ಲಿ, ಸರ್ಕಾರವು ರೂಪಾಯಿ 1,47,686 ಕೋಟಿ ಒಟ್ಟು ಜಿಎಸ್‌ಟಿ ಆದಾಯವನ್ನು ಸಂಗ್ರಹ ಮಾಡಿದೆ.
ಸೆಪ್ಟೆಂಬರ್‌ನಲ್ಲಿ 1.1 ಕೋಟಿಗೂ ಹೆಚ್ಚು ಇ-ವೇ ಬಿಲ್‌ಗಳು ಮತ್ತು ಇ-ಇನ್‌ವಾಯ್ಸ್ ನಡೆದಿದ್ದು, ಇದು ಮತ್ತೊಂದು ಮೈಲಿಗಲ್ಲು ದಾಟಿದೆ. 72.94 ಲಕ್ಷ ಇ-ಇನ್‌ವಾಯ್ಸ್‌ಗಳು ಮತ್ತು 37.74 ಲಕ್ಷ ಇ-ವೇ ಬಿಲ್‌ಗಳು ಆಗಿದೆ. ಸೆಪ್ಟೆಂಬರ್ 30 ರಂದು ಎನ್‌ಐಸಿ ನಡೆಸುತ್ತಿರುವ ಜಿಎಸ್‌ಟಿ ಪೋರ್ಟಲ್‌ನಲ್ಲಿ ಯಾವುದೇ ದೋಷವಿಲ್ಲದೆ 1.1 ಕೋಟಿಗೂ ಹೆಚ್ಚು ಇ-ವೇ ಬಿಲ್‌ಗಳು ಮತ್ತು ಇ-ಇನ್‌ವಾಯ್ಸ್ ರಚಿಸಲಾಗಿದೆ.
ಇನ್ನು ಆಗಸ್ಟ್ ತಿಂಗಳಿನಲ್ಲಿ ಒಟ್ಟು ಜಿಎಸ್‌ಟಿ 1,43,612 ಕೋಟಿ ರೂಪಾಯಿ ಸಂಗ್ರಹವಾಗಿದೆ. ವರ್ಷದಿಂದ ವರ್ಷಕ್ಕೆ ಶೇಕಡ 28ರಷ್ಟು ಹೆಚ್ಚಳವಾಗಿದೆ. "ಆರ್ಥಿಕವಾಗಿ ಕಂಡ ಚೇತರಿಕೆಯು ಜಿಎಸ್‌ಟಿ ಆದಾಯ ಸಂಗ್ರಹದ ಮೇಲೆ ಉತ್ತಮ ಪರಿಣಾಮ ಉಂಟು ಮಾಡಿದೆ. 2022ರ ಜುಲೈ ತಿಂಗಳಿನಲ್ಲಿ 7.6 ಕೋಟಿ ಇ ವೇ ಬಿಲ್‌ಗಳು ಜನರೇಟ್ ಮಾಡಲಾಗಿದೆ. ಇದು 2022ರ ಜೂನ್ ತಿಂಗಳಿಗಿಂತ ಸುಮಾರು 7.4 ಕೋಟಿ ಅಧಿಕವಾಗಿದೆ. ಹಾಗೆಯೇ 2021ರ ಜೂನ್ ತಿಂಗಳಿಗಿಂತ ಶೇಕಡ 19ರಷ್ಟು ಹೆಚ್ಚಾಗಿದೆ. 2021ರ ಜೂನ್ ತಿಂಗಳಿನಲ್ಲಿ ಇವೇ ಬುಲ್‌ಗಳು 6.4 ಕೋಟಿ ಜನರೇಟ್ ಆಗಿತ್ತು," ಎಂದು ಕೇಂದ್ರ ಹಣಕಾಸು ಸಚಿವಾಲಯವು ಮಾಹಿತಿಯನ್ನು ನೀಡಿದೆ.

ಜಿಎಸ್‌ಟಿ ಸಂಗ್ರಹದ ವಿವರ
"ಸೆಪ್ಟೆಂಬರ್ 2022 ರಲ್ಲಿ ಒಟ್ಟು ಜಿಎಸ್‌ಟಿ ಆದಾಯವು ರೂಪಾಯಿ 1,47,686 ಕೋಟಿಗಳಾಗಿದ್ದು, ಇದರಲ್ಲಿ ಸಿಜಿಎಸ್‌ಟಿ ರೂಪಾಯಿ 25,271 ಕೋಟಿ, ಎಸ್‌ಜಿಎಸ್‌ಟಿ ರೂಪಾಯಿ 31,813 ಕೋಟಿ, ಐಜಿಎಸ್‌ಟಿ ರೂಪಾಯಿ 80,464 ಕೋಟಿ ಆಗಿದೆ. ಇದರಲ್ಲಿ ಸಂಗ್ರಹಿಸಿದ ರೂಪಾಯಿ 41,215 ಕೋಟಿ ಸೇರಿದೆ. ಸಿಎಸ್‌ಗಳ ಆಮದು ರೂಪಾಯಿ 10,137 ಕೋಟಿ ಆಗಿದೆ. ಇದರಲ್ಲಿ ಸರಕುಗಳ ಆಮದಿನ ಮೇಲೆ ಸಂಗ್ರಹಿಸಲಾದ ರೂಪಾಯಿ 856 ಕೋಟಿ ಸೇರಿದೆ," ಎಂದು ಹಣಕಾಸು ಸಚಿವಾಲಯ ಶನಿವಾರ ಹೇಳಿಕೆಯಲ್ಲಿ ತಿಳಿಸಿದೆ.
ಸರ್ಕಾರವು ಸಿಜಿಎಸ್‌ಟಿಗೆ ರೂಪಾಯಿ 31,880 ಕೋಟಿ ಮತ್ತು ಎಸ್‌ಜಿಎಸ್‌ಟಿಗೆ ರೂಪಾಯಿ 27,403 ಕೋಟಿಯನ್ನು ಐಜಿಎಸ್‌ಟಿಯಿಂದ ರೆಗ್ಯೂಲರ್ ಸೆಟಲ್‌ಮೆಂಟ್ ಎಂದು ನಿಗದಿಪಡಿಸಿದೆ ಎಂದು ಕೂಡಾ ಉಲ್ಲೇಖ ಮಾಡಲಾಗಿದೆ.
"ಸೆಪ್ಟೆಂಬರ್ 2022 ರಲ್ಲಿ ನಿಯಮಿತ ಲೆಕ್ಕಾಚಾರದ ನಂತರ ಕೇಂದ್ರ ಮತ್ತು ರಾಜ್ಯಗಳ ಒಟ್ಟು ಆದಾಯವು ಸಿಜಿಎಸ್‌ಟಿಗೆ ರೂಪಾಯಿ 57,151 ಕೋಟಿ ಮತ್ತು ಎಸ್‌ಜಿಎಸ್‌ಟಿಗೆ ರೂಪಾಯಿ 59,216 ಕೋಟಿ ಆಗಿದೆ," ಎಂದು ಕೂಡಾ ಸೇರಿಸಲಾಗಿದೆ.
ಸತತ ಏಳನೇ ತಿಂಗಳು ಜಿಎಸ್‌ಟಿ ರೂಪಾಯಿ 1.4 ಲಕ್ಷ ಕೋಟಿಗಿಂತ ಅಧಿಕ
ಇನ್ನು ಇದು ಎಂಟನೇ ತಿಂಗಳು ಮತ್ತು ಸತತ ಏಳನೇ ತಿಂಗಳಿನಿಂದ ಮಾಸಿಕ ಜಿಎಸ್‌ಟಿ ಆದಾಯವು ರೂಪಾಯಿ 1.4 ಲಕ್ಷ ಕೋಟಿಗಿಂತ ಹೆಚ್ಚಿದೆ. ಕಳೆದ ವರ್ಷದ ಇದೇ ಅವಧಿಯಲ್ಲಿ ಸೆಪ್ಟೆಂಬರ್ 2022 ರವರೆಗಿನ ಜಿಎಸ್‌ಟಿ ಆದಾಯದ ಬೆಳವಣಿಗೆಯು ಶೇಕಡ 27 ಆಗಿದೆ. ಆಗಸ್ಟ್ 2022 ರಲ್ಲಿ, 7.7 ಕೋಟಿ ಇ-ವೇ ಬಿಲ್‌ಗಳನ್ನು ರಚಿಸಲಾಗಿದೆ. ಇದು ಜುಲೈ 2022 ರಲ್ಲಿ 7.5 ಕೋಟಿಗಿಂತ ಸ್ವಲ್ಪ ಹೆಚ್ಚಾಗಿದೆ.