For Quick Alerts
ALLOW NOTIFICATIONS  
For Daily Alerts

ಜಿಎಸ್‌ಟಿ ಕೌನ್ಸಿಲ್ ಸಭೆ ಆರಂಭ: ಈ ಮಾಹಿತಿ ತಿಳಿದಿರಿ

|

ಬಹುನಿರೀಕ್ಷಿತ ಜಿಎಸ್‌ಟಿ ಕೌನ್ಸಿಲ್ ಸಭೆಯು ಮಂಗಳವಾರ (ಜೂನ್ 28) ಆರಂಭವಾಗಿದೆ. ಈ ಸಭೆಯು ಮಂಗಳವಾರ ಹಾಗೂ ಬುಧವಾರ ಎರಡು ದಿನಗಳ ಕಾಲ ನಡೆಯಲಿದೆ. ಹಲವಾರು ಸರಕು ಹಾಗೂ ಸೇವೆಗಳ ಮೇಲಿನ ಜಿಎಸ್‌ಟಿಯನ್ನು ಈ ಸಭೆಯಲ್ಲಿ ಪರಿಷ್ಕರಣೆ ಮಾಡುವ ಸಾಧ್ಯತೆ ಇದೆ.

 

ಪ್ರಮುಖವಾಗಿ ವಜ್ರ ಹಾಗೂ ವೈದ್ಯಕೀಯ ಉಪಕರಣಗಳ ಮೇಲಿನ ಜಿಎಸ್‌ಟಿಯನ್ನು ಹೆಚ್ಚಳ ಮಾಡುವ ಸಾಧ್ಯತೆ ಇದೆ. ಇನ್ನು ಆನ್‌ಲೈನ್ ಗೇಮಿಂಗ್, ಕ್ಯಾಸಿನೋ, ಕುದುರೆ ರೇಸಿಂಗ್ ಮೇಲೆ ಸುಮಾರು ಶೇಕಡ 28ರಷ್ಟು ಜಿಎಸ್‌ಟಿ ವಿಧಿಸುವ ಬಗ್ಗೆಯೂ ಚರ್ಚೆ ನಡೆಯುವ ಸಾಧ್ಯತೆ ಇದೆ.

ಜಿಎಸ್‌ಟಿ ಕೌನ್ಸಿಲ್ ಸಭೆ: ಟಾಪ್ ಅಜೆಂಡಾ ಏನಿದೆ?ಜಿಎಸ್‌ಟಿ ಕೌನ್ಸಿಲ್ ಸಭೆ: ಟಾಪ್ ಅಜೆಂಡಾ ಏನಿದೆ?

ಹಲವಾರು ವಸ್ತುಗಳ ಮೇಲಿನ ಜಿಎಸ್‌ಟಿಯನ್ನು ಹೆಚ್ಚಳ ಮಾಡುವ ಸಾಧ್ಯತೆ ಇದ್ದರೆ, ಇನ್ನೊಂದೆಡೆ ಕೆಲವು ವಸ್ತುಗಳ ಮೇಲಿನ ಜಿಎಸ್‌ಟಿಯನ್ನು ಕಡಿತ ಮಾಡುವ ನಿರೀಕ್ಷೆ ಇದೆ. ಈ ನಡುವೆ ಈಗಾಗಲೇ ಸುಮಾರು 215 ವಸ್ತುಗಳ ಮೇಲಿನ ಜಿಎಸ್‌ಟಿಯಲ್ಲಿ ಯಥಾಸ್ಥಿತಿ ಕಾಯ್ದುಕೊಳ್ಳಲು ಸಮಿತಿ ಶಿಫಾರಸ್ಸು ಮಾಡಿದೆ. ಈ ಸಭೆಯ ಬಗ್ಗೆ ನೀವು ತಿಳಿದಿರಲೇ ಬೇಕಾದ ಪ್ರಮುಖ ಮಾಹಿತಿ ಇಲ್ಲಿದೆ ಮುಂದೆ ಓದಿ...

 ಜಿಎಸ್‌ಟಿ ಕೌನ್ಸಿಲ್ ಎಂದರೇನು?

ಜಿಎಸ್‌ಟಿ ಕೌನ್ಸಿಲ್ ಎಂದರೇನು?

ನಾವು ಜಿಎಸ್‌ಟಿ ಕೌನ್ಸಿಲ್ ಸಭೆ ನಡೆಯಲಿರುವ ಬಗ್ಗೆ ಚರ್ಚೆ ನಡೆಸುತ್ತಿದ್ದೇವೆ. ಆದರೆ ಈ ಜಿಎಸ್‌ಟಿ ಕೌನ್ಸಿಲ್ ಎಂದರೆ ಏನು ಎಂಬುವುದು ಹಲವಾರು ಮಂದಿಗೆ ತಿಳಿದಿಲ್ಲ. ಸರಕು ಹಾಗೂ ಸೇವೆಗಳ ತೆರಿಗೆಯನ್ನು (ಜಿಎಸ್‌ಟಿ) ಜಾರಿಗೆ ತರುವ ನಿಟ್ಟಿನಲ್ಲಿ 2016ರಲ್ಲಿ ಸಂವಿಧಾನಕ್ಕೆ 279A (1) ವಿಧಿಯನ್ನು ಸೇರ್ಪಡೆ ಮಾಡಲಾಯಿತು. ಈ ಸಂದರ್ಭದಲ್ಲೇ ಜಿಎಸ್‌ಟಿ ಬಗ್ಗೆ ಚರ್ಚಿಸಿ ನಿರ್ಧಾರಕ್ಕೆ ಬರಲು ಜಿಎಸ್‌ಟಿ ಕೌನ್ಸಿಲ್ ಅನ್ನು ಸ್ಥಾಪನೆ ಮಾಡಲಾಯಿತು. ಈ ಕೌನ್ಸಿಲ್‌ ಅನ್ನು ಕೇಂದ್ರ ಹಣಕಾಸು ಸಚಿವರು ಮುನ್ನಡೆಸುತ್ತಾರೆ. ಪ್ರಸ್ತುತ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ನೇತೃತ್ವದಲ್ಲಿ ಈ ಸಭೆಯು ನಡೆಯುತ್ತಿದೆ. ಹಾಗೆಯೇ ಇತರೆ ರಾಜ್ಯ, ಕೇಂದ್ರಾಡಳಿತ ಪ್ರದೇಶದ ಪ್ರತಿನಿಧಿಗಳು ಕೂಡಾ ಈ ಸಭೆಯಲ್ಲಿ ಭಾಗಿಯಾಗುತ್ತಾರೆ. ಇದರ ಕಾರ್ಯದರ್ಶಿ ಮಂಡಳಿ ಕಚೇರಿ ನವದೆಹಲಿಯಲ್ಲಿದೆ.

 ಜಿಎಸ್‌ಟಿ ಕೌನ್ಸಿಲ್ ಕಾರ್ಯವೇನು?

ಜಿಎಸ್‌ಟಿ ಕೌನ್ಸಿಲ್ ಕಾರ್ಯವೇನು?

ಜಿಎಸ್‌ಟಿ ಕೌನ್ಸಿಲ್ ರಾಜ್ಯ ಹಾಗೂ ಕೇಂದ್ರಗಳಿಗೆ ಜಿಎಸ್‌ಟಿ ಸಂಬಂಧಿತ ಸೂಚನೆ, ಸಲಹೆ, ಶಿಫಾರಸನ್ನು ಮಾಡುತ್ತದೆ. ಈ ಸಭೆಯಲ್ಲಿ 3/4 ಬಹುಮತ ಇರಬೇಕಾಗುತ್ತದೆ. ಮತದ ಮೂಲಕ ಯಾವುದೇ ನಿರ್ಧಾರವನ್ನು ಕೈಗೊಳ್ಳಲಾಗುತ್ತದೆ. ಈಗಾಗಲೇ 46 ಸಭೆಗಳು ನಡೆದಿದೆ. ಇದು 47ನೇ ಸಭೆಯಾಗಿದೆ. ಈ ಸಭೆಯು ಚಂಡೀಗಢದಲ್ಲಿ ನಡೆಯುತ್ತಿದೆ. ಸಭೆಯ ಕೊನೆಯ ದಿನ ಅಂದರೆ ಬುಧವಾರ ಪ್ರಮುಖ ವಿಚಾರಗಳನ್ನು ಘೋಷಣೆ ಮಾಡಲಾಗುತ್ತದೆ.

 ಜಿಎಸ್‌ಟಿ ಕೌನ್ಸಿಲ್ ಆದೇಶ ನೀಡಬಹುದೇ?
 

ಜಿಎಸ್‌ಟಿ ಕೌನ್ಸಿಲ್ ಆದೇಶ ನೀಡಬಹುದೇ?

ಜಿಎಸ್‌ಟಿ ಕೌನ್ಸಿಲ್ ಆದೇಶವನ್ನು ನೀಡಬಹುದೇ ಎಂಬ ವಿಚಾರದಲ್ಲಿ ಹಲವಾರು ಮಂದಿಗೆ ಅನುಮಾನಗಳಿದೆ. ಕಳೆದ ತಿಂಗಳು ಸುಪ್ರೀಂ ಕೋರ್ಟ್ ಈ ಬಗ್ಗೆ ಸ್ಪಷ್ಟತೆಯನ್ನು ನೀಡಿದೆ. ಜಿಎಸ್‌ಟಿ ಕೌನ್ಸಿಲ್ ಕೇವಲ ಸಲಹೆ ನೀಡುವ ಸಮಿತಿಯಾಗಿದೆ. ಇದರ ಎಲ್ಲಾ ಸಲಹೆಯನ್ನು ಕೇಂದ್ರ, ರಾಜ್ಯ ಸರ್ಕಾರಕ್ಕೆ ನೀಡುವ ಆದೇಶವಲ್ಲ ಎಂದು ಸ್ಪಷ್ಟಪಡಿಸಿದೆ. ಈ ಸಲಹೆಯನ್ನು ಗಣನೆಗೆ ತೆಗೆದುಕೊಳ್ಳಬಹುದು.

English summary

GST Council's 47th Meeting Starts Today: Key Things To Know Explained in Kannada

The much-awaited GST Council meeting will take place in Chandigarh on Tuesday and Wednesday. The Council is likely to take up issues such as rate changes on a handful of items.
Story first published: Tuesday, June 28, 2022, 13:36 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X