For Quick Alerts
ALLOW NOTIFICATIONS  
For Daily Alerts

ಮಾಸಿಕ ಜಿಎಸ್‌ಟಿ ರಿಟರ್ನ್‌ ಫೈಲಿಂಗ್: ಜೂನ್ 26ರವರೆಗೆ ಗಡುವು ವಿಸ್ತರಣೆ

|

ಮೇ ತಿಂಗಳ ಮಾಸಿಕ ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ಮಾರಾಟಕ್ಕೆ ಸಂಬಂಧಿಸಿದ ವಿವರಗಳಿರುವ ಜಿಎಸ್‌ಟಿಆರ್‌-1 ಸಲ್ಲಿಸುವ ಗಡುವನ್ನು ಜೂನ್ 26 ರವರೆಗೆ 15 ದಿನಗಳ ಕಾಲ ವಿಸ್ತರಿಸಲಾಗಿದೆ ಎಂದು ಕೇಂದ್ರೀಯ ಪರೋಕ್ಷ ತೆರಿಗೆ ಮತ್ತು ಕಸ್ಟಮ್ಸ್ ಮಂಡಳಿ (CBIC) ಸೋಮವಾರ ತಿಳಿಸಿದೆ.

Big Alert: ಜೂನ್ 01ರಿಂದ ಈ ನಿಯಮಗಳು ಬದಲಾವಣೆ: ಯಾವುದೆಲ್ಲಾ ಬೆಲೆ ಏರಿಕೆ?Big Alert: ಜೂನ್ 01ರಿಂದ ಈ ನಿಯಮಗಳು ಬದಲಾವಣೆ: ಯಾವುದೆಲ್ಲಾ ಬೆಲೆ ಏರಿಕೆ?

ವಹಿವಾಟು ನಡೆಸುವವರು ನಿರ್ದಿಷ್ಟ ತಿಂಗಳಿನಲ್ಲಿ ಪೂರೈಕೆ ಮಾಡಿರುವುದಕ್ಕೆ ಸಂಬಂಧಿಸಿದ ಮಾಹಿತಿಗಳನ್ನು ಮುಂದಿನ ತಿಂಗಳ 11ನೇ ತಾರೀಖಿನ ಒಳಗೆ ಜಿಎಸ್‌ಟಿಆರ್‌-1ರಲ್ಲಿ ತುಂಬಬೇಕು. ಇದಕ್ಕೆ 15 ದಿನಗಳ ಹೆಚ್ಚುವರಿ ಕಾಲಾವಕಾಶ ದೊರೆತಂತಾಗದೆ. ಪಾವತಿಗೆ ಸಂಬಂಧಿಸಿದ ಜಿಎಸ್‌ಟಿಆರ್‌-3ಬಿಯನ್ನು ಮುಂದಿನ ತಿಂಗಳು 20ರಿಂದ 24ನೇ ದಿನದೊಳಗೆ ಸಲ್ಲಿಸಬೇಕು.

ಮಾಸಿಕ ಜಿಎಸ್‌ಟಿ ರಿಟರ್ನ್‌ ಫೈಲಿಂಗ್: ಜೂನ್ 26ರವರೆಗೆ ವಿಸ್ತರಣೆ

ಇತ್ತೀಚೆಗಷ್ಟೇ ನಡೆದ 43ನೇ ಜಿಎಸ್‌ಟಿ ಕೌನ್ಸಿಲ್ ಸಭೆಯಲ್ಲಿ ಸದ್ಯ ಎದುರಾಗಿರುವ ಕೋವಿಡ್-19 ಎರಡನೇ ಅಲೆಯಿಂದಾಗಿರುವ ಸಮಸ್ಯೆಗಳನ್ನು ಪರಿಗಣಿಸಿ, ರಿಟರ್ನ್ಸ್ ಸಲ್ಲಿಕೆ ಗಡುವನ್ನು ವಿಸ್ತರಿಸಲು ನಿರ್ಧರಿಸಲಾಗಿತ್ತು.

ಇನ್ನು 2020-21ರ ಹಣಕಾಸು ವರ್ಷಕ್ಕೆ ವಾರ್ಷಿಕ ರಿಟರ್ನ್ಸ್ ಸಲ್ಲಿಸುವ ದಿನಾಂಕವನ್ನು ಜುಲೈ 31 ರವರೆಗೆ ಮೂರು ತಿಂಗಳವರೆಗೆ ವಿಸ್ತರಿಸಲು ಜಿಎಸ್‌ಟಿ ಕೌನ್ಸಿಲ್ ಈಗಾಗಲೇ ಅನುಮೋದನೆ ನೀಡಿದೆ.

English summary

GST Monthly Return Filing Deadline Extended Till June 26

The government on Monday said the deadline for filing monthly GST sales returns for May has been extended by 15 days till June 26
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X