ಸೆಪ್ಟೆಂಬರ್‌ನಲ್ಲಿ ಜಿಎಸ್‌ಟಿ ಆದಾಯ 1,17,010 ಕೋಟಿ ರೂಪಾಯಿಗೆ ಏರಿಕೆ
ಕೋವಿಡ್-19 ಸಾಂಕ್ರಾಮಿಕ ಎರಡನೇ ಅಲೆ ನಡುವೆ ಸೆಪ್ಟೆಂಬರ್ 2021 ತಿಂಗಳಲ್ಲಿ ಸಂಗ್ರಹಿಸಿದ ಒಟ್ಟು ಜಿಎಸ್‌ಟಿ ಆದಾಯ 1,17,010 ಕೋಟಿ ರೂಪಾಯಿಗೆ ಏರಿಕೆಗೊಂಡಿದೆ.
ಎಲ್ಪಿಜಿ ಸಿಲಿಂಡರ್ ದರ ಮತ್ತೆ ಹೆಚ್ಚಳ: 43 ರೂಪಾಯಿ ಏರಿಕೆ
ಸೆಪ್ಟೆಂಬರ್ 2021 ರಲ್ಲಿ ಸಂಗ್ರಹಿಸಿದ ಒಟ್ಟು ಜಿಎಸ್‌ಟಿ ಆದಾಯವು 1,17,010 ಕೋಟಿ ರೂಪಾಯಿಗಳಲ್ಲಿ , ಸಿಜಿಎಸ್‌ಟಿ ರೂ 20,578 ಕೋಟಿ, ಎಸ್‌ಜಿಎಸ್‌ಟಿ ರೂ 26,767 ಕೋಟಿ, ಐಜಿಎಸ್‌ಟಿ ರೂ 60,911 ಕೋಟಿ (ಸರಕುಗಳ ಆಮದು ಮೇಲೆ ಸಂಗ್ರಹಿಸಿದ ರೂ 29,555 ಕೋಟಿ) ಮತ್ತು ಸೆಸ್ ರೂ 8,754 ಕೋಟಿ ಸರಕುಗಳ ಆಮದಿನ ಮೇಲೆ ಸಂಗ್ರಹಿಸಿದ ರೂ. 623 ಕೋಟಿ ಸೇರಿದಂತೆ) ಸಂಗ್ರಹಗೊಂಡಿದೆ.

ಜಿಎಸ್‌ಟಿ ವ್ಯವಸ್ಥೆಯನ್ನು ಪರಿಚಯಿಸಿದ ನಂತರ ಈ ವರ್ಷ ಏಪ್ರಿಲ್‌ನಲ್ಲಿ ಅತಿ ಹೆಚ್ಚು ಆದಾಯ ಸಂಗ್ರಹವಾಗಿತ್ತು. ನಂತರದಲ್ಲಿ ಸ್ವಲ್ಪ ಇಳಿಕೆಯಾಗಿದ್ದರೂ, ಆರ್ಥಿಕತೆ ಪುನಾರಂಭದಿಂದಾಗಿ ಜಿಎಸ್‌ಟಿ ಆದಾಯ ಏರಿಕೆಯಾಗಿದ್ದು, ಸತತ ತಿಂಗಳುಗಳು 1 ಲಕ್ಷ ಕೋಟಿ ರೂಪಾಯಿ ದಾಟಿದೆ.
ಕಳೆದ ವರ್ಷದ ಆಗಸ್ಟ್ ತಿಂಗಳಿಗೆ ಹೋಲಿಸಿದರೆ, ಆಗಸ್ಟ್ 2021ರ ಆದಾಯವು ಶೇಕಡಾ 30ರಷ್ಟು ಹೆಚ್ಚಾಗಿತ್ತು. ಇದೀಗ ಸೆಪ್ಟೆಂಬರ್‌ನಲ್ಲಿ ಜಿಎಸ್‌ಟಿ ಆದಾಯ ಸಂಗ್ರಹವು ಮತ್ತುಷ್ಟು ಏರಿಕೆಗೊಂಡಿದೆ.
ಇನ್ನು ಸೆಪ್ಟೆಂಬರ್‌ನಲ್ಲಿ ತೆರಿಗೆ ಸಂಗ್ರಹವು ಹೋಲಿಕೆಯಾಗಿ ಕಳೆದ ವರ್ಷದ ಇದೇ ತಿಂಗಳಲ್ಲಿ ಜಿಎಸ್‌ಟಿ ಆದಾಯಕ್ಕಿಂತ 23% ಹೆಚ್ಚಾಗಿದೆ. ತಿಂಗಳಲ್ಲಿ, ಸರಕುಗಳ ಆಮದಿನ ಆದಾಯವು 30% ಹೆಚ್ಚಾಗಿದೆ ಮತ್ತು ದೇಶೀಯ ವಹಿವಾಟಿನಿಂದ (ಸೇವೆಗಳ ಆಮದು ಸೇರಿದಂತೆ) ಆದಾಯವು ಕಳೆದ ವರ್ಷ ಇದೇ ತಿಂಗಳಲ್ಲಿ ಈ ಮೂಲಗಳಿಂದ ಬಂದ ಆದಾಯಕ್ಕಿಂತ 20% ಹೆಚ್ಚಾಗಿದೆ. ಸೆಪ್ಟೆಂಬರ್ 2020 ರ ಆದಾಯವು ಸೆಪ್ಟೆಂಬರ್ 2019 ರ ಆದಾಯಕ್ಕಿಂತ 91,916 ಕೋಟಿ ಅಥವಾ 4% ಬೆಳವಣಿಗೆಯಾಗಿದೆ.