For Quick Alerts
ALLOW NOTIFICATIONS  
For Daily Alerts

ಬಾಟಾ ಇಂಡಿಯಾ ಲಿಮಿಟೆಡ್ ಸಿಇಒ ಆಗಿ ಗುಂಜನ್ ಷಾ ಆಯ್ಕೆ

|

ಭಾರತದ ಅತಿದೊಡ್ಡ ಪಾದರಕ್ಷೆಗಳ ತಯಾರಕ ಹಾಗೂ ಮಾರಾಟಗಾರ ಬಾಟಾ ಇಂಡಿಯಾ ಲಿಮಿಟೆಡ್‌ನ ಹೊಸ ಸಿಇಒ ಆಗಿ ಗುಂಜನ್ ಷಾ ನೇಮಕಗೊಂಡಿದ್ದಾರೆ ಎಂದು ಬಾಟಾ ಇಂಡಿಯಾ ಘೋಷಿಸಿದೆ.

 

ಕಳೆದ ವರ್ಷವಷ್ಟೇ ಬಾಟಾ ಬ್ರ್ಯಾಂಡ್ಸ್‌ನ ಜಾಗತಿಕ ಸಿಇಒ ಆಗಿ ಸಂದೀಪ್ ಕಟಾರಿಯಾ ಆಯ್ಕೆಗೊಂಡ ಬಳಿಕ ಇದೀಗ ಬ್ರಿಟಾನಿಯಾ ಇಂಡಸ್ಟ್ರೀಸ್‌ನಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಗುಂಜನ್ ಷಾ ಸಿಇಒ ಆಗಿ ನೇಮಕವಾಗಿದ್ದಾರೆ.

ಬಾಟಾ ಇಂಡಿಯಾ ಲಿಮಿಟೆಡ್ ಸಿಇಒ ಆಗಿ ಗುಂಜನ್ ಷಾ ಆಯ್ಕೆ

ಹೊಸ ಸಿಇಒ ಆಗಿ ಆಯ್ಕೆಗೊಂಡಿರು ಗುಂಜನ್ ಷಾ ಜೂನ್ 21ರಂದು ಕಂಪನಿಗೆ ಸೇರಲು ಸಿದ್ದರಾಗಿದ್ದು, 2021ರ ಜೂನ್ 21ರಿಂದ ಜಾರಿಗೆ ಬರುವಂತೆ ಐದು ವರ್ಷಗಳ ಅವಧಿಗೆ ಕಂಪನಿಯ ಸಿಇಒ ಆಗಿ ಅಧಿಕಾರ ಸ್ವೀಕರಿಸಲಿದ್ದಾರೆ ಎಂದು ಕಂಪನಿಯು ಶುಕ್ರವಾರ ಸ್ಟಾಕ್ ಎಕ್ಸ್‌ಚೇಂಜ್‌ ಫೈಲಿಂಗ್‌ನಲ್ಲಿ ತಿಳಿಸಿದೆ.

ಬಾಟಾ ಇಂಡಿಯಾ ಸಿಇಒ ಆಗಿ ಆಯ್ಕೆಗೊಂಡಿರುವ ಗುಂಜನ್ ಷಾ ಈ ಮೊದಲು ಬ್ರಿಟಾನಿಯಾ ಇಂಡಸ್ಟ್ರೀಸ್ ಲಿಮಿಟೆಡ್‌ನಲ್ಲಿ ವಾಣಿಜ್ಯ ಅಧಿಕಾರಿಯಾಗಿ ಕಾರ್ಯ ನಿರ್ವಹಿಸಿದ್ದರು.

ಬಾಟಾ ಇಂಡಿಯಾ ದೇಶಾದ್ಯಂತ 1,600ಕ್ಕೂ ಹೆಚ್ಚು ಮಾರಾಟ ಮಳಿಗೆಗಳನ್ನು ಹೊಂದಿದೆ. ಆನ್‌ಲೈನ್ ಮಾರಾಟದ ಹೊರತಾಗಿ ಭಾರತದಾದ್ಯಂತ ಸಾವಿರಾರು ಮಲ್ಟಿ-ಬ್ರಾಂಡ್ ಪಾದರಕ್ಷೆಗಳ ಅಂಗಡಿಗಳ ಮೂಲಕ ಚಿಲ್ಲರೆ ಮಾರಾಟ ಮಾಡುತ್ತದೆ.

Read more about: ceo ಸಿಇಒ
English summary

Gunjan Shah Set To Join Bata India Ltd as Its New CEO

India's largest footwear retailer Bata India Ltd., on Friday announced the appointment of Gunjan Shah as its new chief executive officer
Story first published: Saturday, May 15, 2021, 15:37 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X