For Quick Alerts
ALLOW NOTIFICATIONS  
For Daily Alerts

ಎಚ್1 ಬಿ ವೀಸಾಕ್ಕೆ ಹಿಡಿಯಿತು ಗ್ರಹಣ: ಟೆಕ್ಕಿಗಳ ಕಣ್ಣು ಬಿತ್ತು ಈ ದೇಶದ ಮೇಲೆ

|

ಇದೇ ವಾರ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಭಾರತಕ್ಕೆ ಆಘಾತ ನೀಡುವಂತ ನಿರ್ಧಾರ ತೆಗೆದುಕೊಂಡರು. 2020 ರ ಡಿಸೆಂಬರ್ ರವರೆಗೆ ಎಚ್‌-1ಬಿ ವೀಸಾವನ್ನು ತಾತ್ಕಾಲಿಕವಾಗಿ ರದ್ದು ಮಾಡಿದರು. ಅಮೆರಿಕನ್ನರಿಗೆ ಉದ್ಯೋಗ ಹೆಚ್ಚಿಸಲು ಟ್ರಂಪ್ ಈ ಕ್ರಮ ಕೈಗೊಂಡರಾದರೂ ಅಮೆರಿಕದಲ್ಲಿ ಉದ್ಯೋಗಕ್ಕೆ ತೆರಳಲು ಕಾಯುತ್ತಿದ್ದ ಲಕ್ಷಾಂತರ ಭಾರತೀಯರು ಸೇರಿದಂತೆ ಅನೇಕರು ಟ್ರಂಪ್ ನಿರ್ಧಾರದಿಂದ ನಿರಾಶೆಗೊಂಡಿದ್ದಾರೆ.

ಆದರೆ, ಇದಕ್ಕೆ ಪರ್ಯಾಯ ಎನ್ನುವಂತೆ 2017 ರಲ್ಲಿ ಕೆನಡಾ ಪ್ರಾರಂಭಿಸಿದ ಫಾಸ್ಟ್-ಟ್ರ್ಯಾಕ್ ವೀಸಾ ಕಾರ್ಯಕ್ರಮವು ಹೆಚ್ಚುತ್ತಿರುವ ಸಾಪ್ಟವೇರ್ ತಂತ್ರಜ್ಞರನ್ನು ಕೆನಡಾಕ್ಕೆ ಆಕರ್ಷಿಸಿದೆ.

H-1ಬಿ ವೀಸಾದಡಿ ಅಮೆರಿಕಾದಲ್ಲಿರುವ 2 ಲಕ್ಷ ಜನರು ಅತಂತ್ರ? ಕಾನೂನು ಮಾನ್ಯತೆ ಕಳೆದುಕೊಳ್ಳುವ ಭೀತಿ!H-1ಬಿ ವೀಸಾದಡಿ ಅಮೆರಿಕಾದಲ್ಲಿರುವ 2 ಲಕ್ಷ ಜನರು ಅತಂತ್ರ? ಕಾನೂನು ಮಾನ್ಯತೆ ಕಳೆದುಕೊಳ್ಳುವ ಭೀತಿ!

ಇದಕ್ಕೆ ಪೂರಕವೆನ್ನುವಂತೆ ಕೆನಡಾ ಆರಂಭಿಸಿರುವ ಗ್ಲೋಬಲ್ ಸ್ಕಿಲ್ಸ್ ಸ್ಟ್ರಾಟಜಿ (ಜಿಎಸ್ಎಸ್) ಕಾರ್ಯಕ್ರಮಕ್ಕೆ ಅರ್ಜಿದಾರರ ಸಂಖ್ಯೆ ಮೂರು ವರ್ಷಗಳಲ್ಲಿ ಐದು ಪಟ್ಟು ಏರಿಕೆಯಾಗಿದೆ. ಐದು ವಿಭಾಗಗಳ ಅಡಿಯಲ್ಲಿ 23,000 ಕ್ಕೂ ಹೆಚ್ಚು ಕಾರ್ಮಿಕರನ್ನು ಜಿಎಸ್ಎಸ್ ಕಾರ್ಯಕ್ರಮಕ್ಕೆ ಅನುಮೋದಿಸಲಾಗಿದೆ. ಇದು ಎಚ್ 1 ಬಿ ವೀಸಾ ರದ್ದಾದ ನಂತರ ಕೆನಡಾದ ಮೇಲೆ ತಂತ್ರಜ್ಞರು ಆಕರ್ಷಣೆಗೊಳ್ಳಲು ಕಾರಣವಾಗಿದೆ

ಕೆನಡಾವನ್ನು ಗಂಭೀರವಾಗಿ ನೋಡುತ್ತಿದ್ದಾರೆ

ಕೆನಡಾವನ್ನು ಗಂಭೀರವಾಗಿ ನೋಡುತ್ತಿದ್ದಾರೆ

ಟ್ರಂಪ್ ಅಧಿಕಾರಕ್ಕೆ ಬಂದ ನಂತರ ಅಮೆರಿಕ ಫಸ್ಟ್ ಎನ್ನುವ ನೀತಿಯನ್ನು ಬಲಗೊಳಿಸಿ, ವಲಸಿಗರ ಮೇಲೆ ಸಾಕಷ್ಟು ನಿಯಂತ್ರಣ ಹೇರಿದ್ದಾರೆ. ಇದರ ಲಾಭವನ್ನು 2017 ರಿಂದ ಕೆನಡಾ ಪಡೆಯುತ್ತಿದೆ. ಉದ್ಯೋಗಿಗಳು ಖಂಡಿತವಾಗಿಯೂ ಕೆನಡಾವನ್ನು ಗಂಭೀರವಾಗಿ ನೋಡುತ್ತಿದ್ದಾರೆ ಎಂದು ವ್ಯಾಂಕೋವರ್ನಲ್ಲಿನ ಮೆಕ್ಕ್ರಿಯಾ ವಲಸೆ ಕಾನೂನಿನ ಪಾಲುದಾರ ಕೈಲ್ ಹಿಂಡ್ಮನ್ ಹೇಳಿದ್ದಾರೆ.

ಕೆನಡಾದ ಕಾರ್ಯಾಚರಣೆಯನ್ನು ವಿಸ್ತರಿಸಿವೆ

ಕೆನಡಾದ ಕಾರ್ಯಾಚರಣೆಯನ್ನು ವಿಸ್ತರಿಸಿವೆ

ಅಮೆಜಾನ್, ಆಲ್ಫಾಬೆಟ್, ಫೇಸ್‌ಬುಕ್, ನೆಟ್‌ಫ್ಲಿಕ್ಸ್ ಸೇರಿದಂತೆ ಅಮೆರಿಕ ಮೂಲದ ಕಂಪನಿಗಳು ಇತ್ತೀಚಿನ ವರ್ಷಗಳಲ್ಲಿ ತಮ್ಮ ಕೆನಡಾದ ಕಾರ್ಯಾಚರಣೆಯನ್ನು ವಿಸ್ತರಿಸಿವೆ. ಕೆನಡಾದ ಇ-ಕಾಮರ್ಸ್ ಕಂಪನಿ ಶಾಪಿಫೈನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಟೋಬಿ ಲುಟ್ಕೆ, ಟ್ರಂಪ್ ಅವರ ವೀಸಾ ರದ್ದತಿ ನಂತರ ಅಂತಾರಾಷ್ಟ್ರೀಯ ಮಟ್ಟದಲ್ಲಿ ಉದ್ಯೋಗಿಗಳಿಗೆ ಕೆನಡಾ ಪ್ರಮುಖ ಆಕರ್ಷಣೆ ಎಂದು ತಿಳಿಸಿದ್ದಾರೆ.

ಉನ್ನತ ಪ್ರತಿಭೆಗಳನ್ನು ನೇಮಿಸಿಕೊಳ್ಳಲು ಸಾಧ್ಯವಾಗಿಸಿದೆ
 

ಉನ್ನತ ಪ್ರತಿಭೆಗಳನ್ನು ನೇಮಿಸಿಕೊಳ್ಳಲು ಸಾಧ್ಯವಾಗಿಸಿದೆ

ಕೆನಡಾದ ಗ್ಲೋಬಲ್ ಸ್ಕಿಲ್ಸ್ ಸ್ಟ್ರಾಟಜಿ (ಜಿಎಸ್ಎಸ್) ಕಾರ್ಯಕ್ರಮವು ನಮ್ಮ ಗಡಿಯನ್ನು ಮೀರಿ ಉನ್ನತ ಪ್ರತಿಭೆಗಳನ್ನು ನೇಮಿಸಿಕೊಳ್ಳಲು ಸಾಧ್ಯವಾಗಿಸಿದೆ ಎಂದು ಶಾಪಿಫೈನ ಜಾಗತಿಕ ತಂಡದ ಹಿರಿಯ ನಾಯಕ ಸಂದೀಪ್ ಆನಂದ್ ಹೇಳಿದ್ದಾರೆ. ಎಚ್ 1 ಬಿ ವೀಸಾ ರದ್ದು ಮಾಡಿರುವುದು ಉದ್ಯೋಗಿಗಳನ್ನು ಕೆನಡಾಕ್ಕೆ ಸ್ಥಳಾಂತರಿಸಲು ಸಹಾಯ ಮಾಡಿದೆ ಎಂದು ಹೇಳಿದರು.

ಭಾರತೀಯ ನಾಗರಿಕರು 62.1% ರಷ್ಟಿದ್ದಾರೆ

ಭಾರತೀಯ ನಾಗರಿಕರು 62.1% ರಷ್ಟಿದ್ದಾರೆ

ಫಾಸ್ಟ್-ಟ್ರ್ಯಾಕ್ ವೀಸಾಗೆ ಯಶಸ್ವಿ ಅರ್ಜಿದಾರರಲ್ಲಿ ಭಾರತೀಯ ನಾಗರಿಕರು 62.1% ರಷ್ಟಿದ್ದಾರೆ. ನಂತರ ಚೀನಾದ ನಾಗರಿಕರಿದ್ದಾರೆ. ಸುಮಾರು 1,000 ಯು.ಎಸ್. ನಾಗರಿಕರು ಫಾಸ್ಟ್-ಟ್ರ್ಯಾಕ್ ವೀಸಾಗೆ ಅರ್ಜಿಗಳನ್ನು ಹಾಕಿದ್ದಾರೆ. ಬಹುತೇಕರು ಸಾಪ್ಟವೇರ್ ತಂತ್ರಜ್ಞರಾಗಿದ್ದಾರೆ.

English summary

H1 B Visa Suspended: Now Canada Is Attracting IT Professionals

H1 B Visa Suspended: Now Canada Is Attracting IT Professionals in worldwide.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X