ಹ್ಯಾಪಿಯೆಸ್ಟ್ ಮೈಂಡ್ಸ್ ಟೆಕ್ನಾಲಜೀಸ್ ಬಿಎಸ್ ಇಯಲ್ಲಿ ಗುರುವಾರ (ಸೆಪ್ಟೆಂಬರ್ 17, 2020) ಪ್ರತಿ ಷೇರಿಗೆ 351 ರುಪಾಯಿಯಂತೆ ಲಿಸ್ಟಿಂಗ್ ಆಯಿತು. ಪ್ರತಿ ಷೇರಿಗೆ 166 ರುಪಾಯಿಯಂತೆ ವಿತರಣೆ ಮಾಡಿದ್ದು, ಎನ್ ಎಸ್ ಇಯಲ್ಲಿ 394.95 ರುಪಾಯಿವರೆಗೆ ಓಟ ಮುಂದುವರಿಸಿತು. ಮಾರ್ಕೆಟ್ ಏರಿಳಿತದ ಮಧ್ಯೆಯೂ ಹ್ಯಾಪಿಯೆಸ್ಟ್ ಮೈಂಡ್ಸ್ ಟೆಕ್ನಾಲಜೀಸ್ ಗೆ 150.98 ಪಟ್ಟು ಹೆಚ್ಚು ಬೇಡಿಕೆ ಬಂದಿತ್ತು.
2.32 ಕೋಟಿ ಷೇರುಗಳ ವಿತರಣೆಗೆ 351 ಕೋಟಿ ಷೇರಿಗೆ ಹೂಡಿಕೆದಾರರು ಬಿಡ್ ಮಾಡಿದ್ದರು. ಅವಧಿ ಪೂರ್ವ ವಹಿವಾಟಿನಲ್ಲಿ ಷೇರಿನ ಬೆಲೆ 350 ರುಪಾಯಿಯಲ್ಲಿ ನಿಂತಿತ್ತು. 702 ಕೋಟಿ ರುಪಾಯಿ ಸಂಗ್ರಹಕ್ಕಾಗಿ ಸೆಪ್ಟೆಂಬರ್ 7ರಿಂದ 9, 2020ರ ಮಧ್ಯೆ ಐಪಿಒ ಸಬ್ ಸ್ಕ್ರಿಪ್ಷನ್ ಇತ್ತು. ಪ್ರತಿ ಷೇರಿಗೆ 165ರಿಂದ 167ರ ದರ ಹಾಗೂ ಕನಿಷ್ಠ 90 ಷೇರುಗಳ ಲಾಟ್ ಖರೀದಿ ನಿಗದಿ ಮಾಡಲಾಗಿತ್ತು.

ಪ್ರಸಕ್ತ ಹಣಕಾಸು ವರ್ಷದಲ್ಲಿ ಇದು ಅತ್ಯುತ್ತಮ ರಿಟರ್ನ್ಸ್ ನೀಡಿದ ಐಪಿಒ. ಈ ಷೇರಿನ ಲಿಸ್ಟಿಂಗ್ 300 ರುಪಾಯಿಗೂ ಹೆಚ್ಚಿಗೆ ಆಗುತ್ತದೆ ಎಂದು ತಜ್ಞರು ನಿರೀಕ್ಷಿಸಿದ್ದರು. ವಿತರಣೆ ಬೆಲೆಗಿಂತ 140 ರುಪಾಯಿ ಪ್ರೀಮಿಯಂಗೆ ಲಿಸ್ಟ್ ಆಗುವ ಅಂದಾಜಿತ್ತು. ಕೊರೊನಾ ಬಿಕ್ಕಟ್ಟು ಕಡಿಮೆ ಆಗುತ್ತಿರುವುದು ಹಾಗೂ ಎಲ್ಲ ವ್ಯವಹಾರಗಳಲ್ಲೂ ಡಿಜಿಟಲೈಸೇಷನ್ ಹೆಚ್ಚಾಗುತ್ತಿರುವುದರಿಂದ ಐಟಿ ವಲಯದಲ್ಲಿ ಚೇತರಿಕೆ ಲಕ್ಷಣಗಳು ಕಾಣುತ್ತಿವೆ.
More From GoodReturns

ಎಮಿಯಾಕ್ ಟೆಕ್ನಾಲಜೀಸ್ ಐಪಿಒ: ಹೂಡಿಕೆದಾರರ ಮುಗಿಬಿದ್ದ ಭರ್ಜರಿ ಬೇಡಿಕೆ!

ಆರ್ಬಿಐ ರೆಪೋ ದರ ಸ್ಥಿರತೆ: ನಿಮ್ಮ ಇಎಂಐ ಹೊರೆ ಇಳಿಯುತ್ತಾ?

ಆರ್ಬಿಐ ಪಾಲಿಸಿಗೂ ಮುನ್ನ ನಿಮ್ಮ ಬಂಡವಾಳಕ್ಕೆ ಈ ರಕ್ಷಣೆ ಬೇಕೇ?

ಆರ್ಬಿಐ ಪಾಲಿಸಿ ಅಬ್ಬರ: ನಿಮ್ಮ ಹಣ ಉಳಿಸಲು ಈ ತಂತ್ರ ಬಳಸಿ

ಸೇಫ್ಟಿ ಕಂಟ್ರೋಲ್ಸ್ ಐಪಿಒ: ಹೂಡಿಕೆದಾರರೇ ಇಂದೇ ಕೊನೆಯ ಅವಕಾಶ!

ಆರ್ಬಿಐ ಬಡ್ಡಿ ದರ: ನಿಮ್ಮ ಇಎಂಐ ಹೊರೆ ಕಡಿಮೆಯಾಗುತ್ತಾ?

ಆರ್ಬಿಐ ಪಾಲಿಸಿ: ಇಂದಿನ ನಿರ್ಧಾರ ನಿಮ್ಮ ಹೂಡಿಕೆಯನ್ನು ಬದಲಿಸುತ್ತಾ?

ಗೃಹ ಸಾಲದ ಇಎಂಐ ಇಳಿಕೆ: ಆರ್ಬಿಐ ನಿರ್ಧಾರದ ಅಸಲಿ ಸತ್ಯ

ಹೋಮ್ ಲೋನ್ ಇಎಂಐ ಉಳಿಸಲು ಈ ಟ್ರಿಕ್ ಬಳಸಿ ನೋಡಿ

ಆರ್ಬಿಐ ರೆಪೋ ದರ ಸ್ಥಿರ: ನಿಮ್ಮ ಇಎಂಐ ಹೊರೆ ಇಳಿಯುತ್ತಾ?

ಚಿನ್ನದ ಬೆಲೆ ಏರಿಕೆ: ಹೂಡಿಕೆದಾರರೇ ಎಚ್ಚರ, ಈ ತಪ್ಪು ಮಾಡಬೇಡಿ!



Click it and Unblock the Notifications