For Quick Alerts
ALLOW NOTIFICATIONS  
For Daily Alerts

Happy New Year 2023: ಹೊಸ ವರ್ಷದಲ್ಲಿ ಷೇರುಪೇಟೆ ಹೂಡಿಕೆ ಮುನ್ನ ಓದಿ

|

ನಾವು ಹೊಸ ವರ್ಷಕ್ಕೆ ಎಂಟ್ರಿ ನೀಡಿದ್ದೇವೆ. ಈ ಸಂದರ್ಭದಲ್ಲಿ ನಮ್ಮ ಹೂಡಿಕೆಯನ್ನು ಕೂಡಾ ಕೊಂಚ ಪರಿಷ್ಕರಣೆ ಮಾಡಬೇಕಾಗುತ್ತದೆ. 2023ರಲ್ಲಿ ಎರಡು ಮಹತ್ವದ ಬದಲಾವಣೆಗಳಾಗುವ ನಿರೀಕ್ಷೆಯಿದೆ. ಒಂದು ಹಣದುಬ್ಬರವು ಮತ್ತಷ್ಟು ಇಳಿಕೆಯಾಗುವ ಸಾಧ್ಯತೆಯಿದೆ, ಡಾಲರ್‌ ಮೌಲ್ಯ ಕೊಂಚ ಇಳಿಕೆಯಾಗಬಹುದು. ಹಾಗೆಯೇ ಯುಎಸ್‌ನಲ್ಲಿ ಫೆಡ್ ಬಡ್ಡಿದರ ಏರಿಕೆಯು ನಿಲ್ಲಬಹುದು. ಇವೆಲ್ಲವೂ ಕೂಡಾ ಷೇರು ಮಾರುಕಟ್ಟೆಯ ನೇಲೆ ಪ್ರಭಾವವನ್ನು ಬೀರುವ ಅಂಶಗಳಾಗಿದೆ.

 

ಜಾಗತಿಕವಾಗಿ ಷೇರು ಮಾರುಕಟ್ಟೆಯು ಸುಮಾರು ಶೇಕಡ 18ರಷ್ಟು ಕುಸಿದಿದೆ. ಬಾಂಡ್ ಮಾರುಕಟ್ಟೆಯು ಸುಮಾರು ಶೇಕಡ 12ರಷ್ಟು ಕುಸಿದಿದೆ. ಬಂಡವಾಳ ಮಾರುಕಟ್ಟೆಯಲ್ಲಿ ಉಂಟಾದ ನಷ್ಟದಿಂದಾಗಿ ಒಟ್ಟಾರೆಯಾಗಿ ಕಳೆದ ವರ್ಷದಲ್ಲಿ ಹತ್ತಾರು ಟ್ರಿಲಿಯನ್ ಡಾಲರ್‌ಗಳಷ್ಟು ನಷ್ಟ ಉಂಟಾಗಿದೆ.

ಮುಂದಿನ ವಾರ ಈ ಷೇರುಗಳಲ್ಲಿ ಹೂಡಿಕೆ ಮಾಡಲು ಐಸಿಐಸಿಐ ಸೆಕ್ಯೂರಿಟೀಸ್ ಸಲಹೆಮುಂದಿನ ವಾರ ಈ ಷೇರುಗಳಲ್ಲಿ ಹೂಡಿಕೆ ಮಾಡಲು ಐಸಿಐಸಿಐ ಸೆಕ್ಯೂರಿಟೀಸ್ ಸಲಹೆ

ಹೀಗಿರುವಾಗ ಮುಂದಿನ ವರ್ಷದಲ್ಲಿ ಹೂಡಿಕೆದಾರರು ಹಾಗೂ ಹಣ ಉಳಿತಾಯ ಮಾಡುವವರು ಈ ಹಿಂದಿನ ಬೆಳವಣಿಗೆಯನ್ನು ಕೂಡಾ ಗಮನಿಸುವುದು ಮುಖ್ಯವಾಗಿದೆ. ಮುಂದಿನ ವರ್ಷದಲ್ಲಿ ಹೂಡಿಕೆ ಮಾಡುವಾಗ ಅತೀ ಜಾಗರೂಕರಾಗಿರುವುದು ಮುಖ್ಯ ಎಂದು ಆರ್ಥಿಕ ತಜ್ಞರಾದ ನಿಗೆಲ್ ಗ್ರೀನ್ ಹೇಳಿದ್ದಾರೆ.

 ಹಣದುಬ್ಬರ ಏರಿಕೆ ನಿರೀಕ್ಷೆ

ಹಣದುಬ್ಬರ ಏರಿಕೆ ನಿರೀಕ್ಷೆ

ಹಣದುಬ್ಬರವು ಮುಂದಿನ ವರ್ಷದಲ್ಲಿ ಏರಿಕೆಯಾಗುವ ಸಾಧ್ಯತೆಯಿದೆ. ಹೂಡಿಕೆದಾರರಿಗೆ ಇನ್ನೂ ಕೂಡಾ ಹಣದುಬ್ಬರ ಒಂದು ದೊಡ್ಡ ಸವಾಲಾಗಿದೆಯೇ ಉಳಿದಿದೆ. ಯುಎಸ್‌ ಹಾಗೂ ಭಾರತ ಸೇರಿದಂತೆ ಬೇರೆ ಬೇರೆ ಸ್ಟಾಕ್ ಮಾರುಕಟ್ಟೆಯಲ್ಲಿ ಈ ಹಣದುಬ್ಬರ ಹೆಚ್ಚಾಗಲಿದೆ. ಹಣದುಬ್ಬರವು ಮಾರಾಟ ಹಾಗೂ ಲಾಭದ ಮೇಲೆ ನೆಗೆಟಿವ್ ಪ್ರಭಾವ ಬೀರಲಿದೆ ಎಂದು ಗ್ರೀನ್ ತಿಳಿಸಿದ್ದಾರೆ.

 ಚೀನಾ ಮತ್ತೆ ಕೊಂಚ ಸರಳತೆಗೆ

ಚೀನಾ ಮತ್ತೆ ಕೊಂಚ ಸರಳತೆಗೆ

ಚೀನಾದ ಆರ್ಥಿಕತೆಯು ವಿಶ್ವದ ಎರಡನೇ ಅತಿದೊಡ್ಡ ಆರ್ಥಿಕತೆಯಾಗಿದೆ. ಮೂರು ವರ್ಷಗಳ ಕೋವಿಡ್ ನಿರ್ಬಂಧಗಳ ಬಳಿಕ ಈಗ ಕೊಂಚ ಸಹಜ ಸ್ಥಿತಿಗೆ ಮರಳುತ್ತಿದೆ. ಆದರೂ ಕೋವಿಡ್‌ನ ಕಾಟ ಇನ್ನು ತಪ್ಪಿಲ್ಲ. ಚೀನಾದ ಆರ್ಥಿಕತೆಯು ಹೆಚ್ಚು ನಿರೀಕ್ಷಿತ, ಪ್ರಭಾವಶಾಲಿ ಆರ್ಥಿಕತೆಯಾಗುವ ನಿರೀಕ್ಷೆಯಿದೆ. ಚೀನಾದ ಆರ್ಥಿಕ ಚೇತರಿಕೆಯು ಒಂದು ನಾಟಕೀಯ ಬೆಳವಣಿಗೆಯಂತೆ ಕಾಣಬಹುದು," ಎಂದು ಕೂಡಾ ನಿಗೆಲ್ ಗ್ರೀನ್ ಅಭಿಪ್ರಾಯಿಸಿದ್ದಾರೆ.

 ಯುಎಸ್ ಡಾಲರ್ ಮೌಲ್ಯ ಇಳಿಕೆ
 

ಯುಎಸ್ ಡಾಲರ್ ಮೌಲ್ಯ ಇಳಿಕೆ

ಮೂರನೇಯದಾಗಿ ಯುಎಸ್ ಡಾಲರ್ ಮೌಲ್ಯ ಇಳಿಕೆಯಾಗುವುದು, ಇದು ಕೂಡಾ ಷೇರು ಮಾರುಕಟ್ಟೆಯ ಮೇಲೆ ಪ್ರಭಾವ ಬೀರಲಿದೆ. ಡಾಲರ್ ಮೌಲ್ಯ ಏರಿಕೆಯಾದರೆ ಷೇರು ಮಾರುಕಟ್ಟೆಯ ಮೇಲೆ ನೆಗೆಟಿವ್ ಪರಿಣಾಮ ಉಂಟಾಗುತ್ತದೆ. ಡಾಲರ್ ಮೌಲ್ಯ ಹೆಚ್ಚಾದಂತೆ ಆಮದು ಕಡಿಮೆಯಾಗುತ್ತದೆ. ವೆಚ್ಚ ಅಧಿಕವಾಗುವ ಸಾಮಾನ್ಯವಾಗಿ ಆಮದು ಕಡಿಮೆ ಮಾಡಲಾಗುತ್ತದೆ. ಈ ಬಗ್ಗೆ ಮಾಹಿತಿ ನೀಡಿದ ಆರ್ಥಿಕ ತಜ್ಞ ನಿಗೆಲ್ ಗ್ರೀನ್, "2023ರ ಮಧ್ಯದಲ್ಲಿ ಡಾಲರ್ ಮೌಲ್ಯ ಮತ್ತಷ್ಟು ಹೆಚ್ಚಾಗುವ ನಿರೀಕ್ಷೆಯಿದೆ. ಡಾಲರ್ ಮಾರುಕಟ್ಟೆಯ ಮೇಲೆ ಅಧಿಕ ಪರಿಣಾಮ ಬೀರಿದೆ. ಆಮದು ವೆಚ್ಚ ಅಧಿಕವಾಗಲಿದೆ. ಕೇಂದ್ರ ಬ್ಯಾಂಕುಗಳು ವಿತ್ತೀಯ ನೀತಿಯನ್ನು ಬದಲಾವಣೆ ಮಾಡಬೇಕಾದ ಸ್ಥಿತಿ ಉಂಟಾಗಿದೆ," ಎಂದು ನಿಗೆಲ್ ಗ್ರೀನ್ ವಿವರಿಸಿದ್ದಾರೆ.

 ಟೆಕ್ ಸ್ಟಾಕ್ ಮಹತ್ವದ ಪಾತ್ರ

ಟೆಕ್ ಸ್ಟಾಕ್ ಮಹತ್ವದ ಪಾತ್ರ

ಇನ್ನು ಟೆಕ್ ಸ್ಟಾಕ್‌ಗಳು ಪ್ರಮುಖ ಸ್ಟಾಕ್ ಆಗಲಿದೆ. ಹೊಸ ತಂತ್ರಜ್ಞಾನಗಳು ಮತ್ತು ಡಿಜಿಟಲೀಕರಣದ ಕಾರಣದಿಂದಾಗಿ 2023ರಲ್ಲಿ ಟೆಕ್ ಸ್ಟಾಕ್‌ಗಳು ಯುಎಸ್ ಮಾರುಕಟ್ಟೆಯಲ್ಲಿ ಮಹತ್ವದ ಪಾತ್ರವನ್ನು ವಹಿಸುವುದನ್ನು ಮುಂದುವರಿಸುವ ನಿರೀಕ್ಷೆಯಿದೆ. ಹಾಗೆಯೇ 2023ರಲ್ಲಿ ಡಿಜಿಟಲೀಕರಣ ಇನ್ನಷ್ಟು ವಿಸ್ತಾರವಾಗಬಹುದು. ಉತ್ಪಾದಕತೆ ಹೆಚ್ಚಿಸಲು ಡಿಜಿಟಲೀಕರಣಕ್ಕೆ ಹೆಚ್ಚಿನ ಜನರು ಮಾರುಹೋಗಬಹುದು ಎಂಬ ಅಭಿಪ್ರಾಯ ವ್ಯಕ್ತವಾಗಿದೆ.

English summary

Happy New Year 2023: Themes to Stock Market Investments in 2023

Going into 2023, stock market investors in the US will need to fundamentally alter their priorities.
Story first published: Sunday, January 1, 2023, 10:00 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X