For Quick Alerts
ALLOW NOTIFICATIONS  
For Daily Alerts

ಕಾರು ವಿಮೆ: ಪ್ರೀಮಿಯಂಗಳ ಶೇ.25 ಕ್ಲೇಮ್‌ಗೆ ಎಚ್‌ಡಿಎಫ್‌ಸಿ ಅವಕಾಶ

|

ಬೆಂಗಳೂರು: ಪ್ರಮುಖ ಖಾಸಗಿ ಕ್ಷೇತ್ರ ಸಾಮಾನ್ಯ ವಿಮೆ ಸಂಸ್ಥೆಯಾದ ಎಚ್‌ಡಿಎಫ್‌ಸಿ ಎರ್ಗೋ, ತನ್ನ ಎಲ್ಲಾ ಖಾಸಗಿ ಕಾರು ಮಾಲೀಕರಿಗೆ "ಪೇ ಕ್ಯಾಸ್ ಯೂ ಡ್ರೈವ್-ಕಿಲೋಮೀಟರ್ ಬೆನಿಫಿಟ್" ಹೆಚ್ಚುವರಿ ವಿಮೆ ರಕ್ಷಣೆ ಒದಗಿಸಿದೆ. ವರ್ಷದಲ್ಲಿ ಮಾಲೀಕರು 10,000 ಕಿ.ಮೀ.ಗಿಂತ ಕಡಿಮೆ ದೂರ ತಮ್ಮ ವಾಹನ ಓಡಿಸಿದ್ದರೆ, ಅಂತಹವರು, ಅವರ ಕಾರಿನ ಓಡೋಮೀಟರ್ ರೀಡಿಂಗ್‍ಗೆ ಒಳಪಟ್ಟು, ತಮ್ಮ ವಾರ್ಷಿಕ ಸ್ವಂತ ಹಾನಿ ಪ್ರೀಮಿಯಂಗಳ ಶೇಕಡ 25ವರೆಗೆ ಕ್ಲೇಮ್ ಮಾಡಲು ಅವಕಾಶವಿರುತ್ತದೆ.

 

"ಪೇ ಕ್ಯಾಸ್ ಯೂ ಡ್ರೈವ್-ಕಿಲೋಮೀಟರ್ ಬೆನಿಫಿಟ್", ಬಿಡುಗಡೆ ಸಂದರ್ಭದಲ್ಲಿ ಎಚ್‌ಡಿಎಫ್‌ಸಿ ಎರ್ಗೋ ಜೆನರಲ್ ಇನ್ಶ್ಯುರೆನ್ಸ್ ಕಂಪನಿಯ ರೀಟೈಲ್ ವ್ಯಾಪಾರ ವಿಭಾಗದ ಅಧ್ಯಕ್ಷರಾದ ಪಾರ್ಥನಿಲ್ಕ್ ಘೋಷ್ ಮಾತನಾಡುತ್ತಾ, "ವಿಮೆ ಕ್ಷೇತ್ರದಲ್ಲಿ ತಂತ್ರಜ್ಞಾನದ ಭಂಗವು, ಗ್ರಾಹಕರ ಅವಶ್ಯಕತೆಗಳಿಗೆ ಅನುಗುಣವಾಗಿ ತಮ್ಮ ಸೇವೆಗಳನ್ನು ಒದಗಿಸಬೇಕೆನ್ನುವ ವಿಮೆ ಸಂಸ್ಥೆಗಳಿಗೆ ಪ್ರಚೋದಕಾರಕವಾಗಿ ಕೆಲಸ ಮಾಡಿದೆ," ಎಂದು ಹೇಳಿದರು.

 

ಗಮನಿಸಿ: ಕಾರಿನ ಬಳಕೆ ಆಧಾರದಲ್ಲಿ ಪ್ರೀಮಿಯಂ ವಿಧಿಸುತ್ತೆ ಈ ವಿಮಾ ಪಾಲಿಸಿಗಮನಿಸಿ: ಕಾರಿನ ಬಳಕೆ ಆಧಾರದಲ್ಲಿ ಪ್ರೀಮಿಯಂ ವಿಧಿಸುತ್ತೆ ಈ ವಿಮಾ ಪಾಲಿಸಿ

"ಇಂದು ನಾವು ಬಿಡುಗಡೆ ಮಾಡಿರುವ ವಿನೂತನ ಪರಿಹಾರವು ಒಂದು ಬಗೆಯ ವಿಮೆ ಎಲ್ಲಾ ಕಾರು ವಿಮೆ ಪ್ರೀಮಿಯಂಗಳಿಗೆ ಸರಿಹೊಂದುತ್ತದೆ ಎನ್ನುವ ಹಳೆಯ ಪರಿಕಲ್ಪನೆಯನ್ನು ತೆಗೆದುಹಾಕುವುದಷ್ಟೇ ಅಲ್ಲದೆ ಸಾಂಪ್ರದಾಯಿಕ ಮೋಟರು ವಾಹನ ವಿಮೆ ಪಾಲಿಸಿಯ ಸರಳತೆಯನ್ನು ಉಳಿಸಿಕೊಂಡು ಪ್ರೀಮಿಯಂ ಮೇಲೆ ಉತ್ತಮ ಹಿಡಿತ ಸಾಧಿಸಿ ತಮ್ಮ ಸ್ವಂತ ಹಾನಿ ರಕ್ಷಣೆಯನ್ನು ತಮ್ಮ ಇಚ್ಛೆಗೆ ಅನುಗುಣವಾಗಿ ರೂಪಿಸಿಕೊಳ್ಳಲು ಗ್ರಾಹಕರಿಗೆ ಅವಕಾಶ ಒದಗಿಸುತ್ತದೆ. ಗರಿಷ್ಠ ಕಿಲೋಮೀಟರ್‌ಗಳ ಕಟ್ಟುಪಾಡಿನ ಒತ್ತಡ ಮತ್ತು ಬಹಿರಂಗಪಡಿಸುವ ಒತ್ತಡವನ್ನು ತಡೆಗಟ್ಟಲು ಗ್ರಾಹಕರನ್ನು ಸೆಳೆಯಲು ಕಂಪನಿಯು ಬಹಳ ಎಚ್ಚರಿಕೆಯಿಂದ ಪಾಲಿಸಿಯನ್ನು ವಿನ್ಯಾಸಪಡಿಸಿದೆ," ಎಂದು ವಿವರಿಸಿದರು.

ಕಾರು ವಿಮೆ: ಪ್ರೀಮಿಯಂಗಳ ಶೇ.25 ಕ್ಲೇಮ್‌ಗೆ ಎಚ್‌ಡಿಎಫ್‌ಸಿ ಅವಕಾಶ

ಪಾಲಿಸಿ ಬಗ್ಗೆ ಅಧಿಕ ಮಾಹಿತಿ

ಪಾಲಿಸಿ ಅವಧಿಯಲ್ಲಿ ಗ್ರಾಹಕರು ತಾವು ವಾಹನವನ್ನು ಎಷ್ಟು ದೂರ ಓಡಿಸಿದ್ದೇವೆ ಎನ್ನುವುದರ ಬಗ್ಗೆ ಚಿಂತಿಸುವ ಮತ್ತು ಪದೇ ಪದೇ ಬರುವ ರಿಮೈಂಡರ್ ಗಳನ್ನು ನೋಡಲು ಸಮಯ ವ್ಯಯ ಮಾಡುವ ಬದಲು ನಿರಾತಂಕವಾಗಿ ಪಯಣವನ್ನು ಆನಂದಿಸಬೇಕು ಎನ್ನುವುದು ನಮ್ಮ ಆಶಯ. ಗ್ರಾಹಕರು ಒಂದು ನಿರ್ದಿಷ್ಟ ಮಿತಿಯನ್ನು ಮೀರಿ ವಾಹನ ಓಡಿಸಿದ್ದರೂ, ಅದಕ್ಕಾಗಿ ಅವರಿಗೆ ದಂಡ ವಿಧಿಸುವುದಿಲ್ಲ ಮತ್ತು ಅವರ ಖಾಸಗಿ ಕಾರು ವಿಮೆ ಪಾಲಿಸಿ ಅಡಿ ರಕ್ಷಣೆ ಹೊಂದಿರುತ್ತಾರೆ.

ವಿಮೆಯ ಮೇಲೆ ಪ್ರಭಾವ ಬೀರುತ್ತದೆ ಕಾರಿನ ಮೋಡಿಫಿಕೇಶನ್!ವಿಮೆಯ ಮೇಲೆ ಪ್ರಭಾವ ಬೀರುತ್ತದೆ ಕಾರಿನ ಮೋಡಿಫಿಕೇಶನ್!

"ಇಷ್ಟೇ ಅಲ್ಲದೆ, ಪಾಲಿಸಿ ಅವಧಿ ಮುಗಿದ ನಂತರ, ಕ್ರಮಿಸಿದ ದೂರಗಳ ಕಿಲೋಮೀಟರ್ ತಿಳಿಸುವ ಷರತ್ತಿಗೆ ಒಳಪಟ್ಟು, ಪಾಲಿಸಿಯನ್ನು ಮುಂದೆ ನಮ್ಮೊಂದಿಗೆ ನವೀಕರಿಸುವ ಅಥವಾ ನವೀಕರಿಸದಿರುವ ನಿರ್ಧಾರವನ್ನು ಅವಲಂಬಿಸದೆ ಕ್ಲೇಮ್ ಮಾಡುವ ಅವಕಾಶ ಹೊಂದಿರುತ್ತಾರೆ. ಒಂದೊಮ್ಮೆ ಗ್ರಾಹಕರು ಪಾಲಿಸಿಯನ್ನು ನಮ್ಮಲ್ಲೇ ನವೀಕರಿಸಲು ನಿರ್ಧರಿಸಿದರೆ, ಎಲ್ಲ ಕ್ಲೇಮ್‌ರಹಿತ ಪಾಲಿಸಿಗಳಿಗೆ ಶೇಕಡ 5 ಹೆಚ್ಚುವರಿ ರಿಯಾಯಿತಿ ಪಡೆಯುತ್ತಾರೆ," ಎಂದರು.

ಕೊರೊನಾ ಸಾಂಕ್ರಾಮಿಕ ಹರಡಿಕೊಂಡ ನಂತರದಲ್ಲಿ, ಅನೇಕ ಜನರು ಪದೇ ಪದೇ ವಾಹನ ಓಡಿಸುವುದಿಲ್ಲ, ಆದರೂ ಅವರು, ವಾಹನವು ಹೆಚ್ಚಾಗಿ ಬಳಸುವ ವ್ಯಕ್ತಿಯಷ್ಟೇ ಪ್ರೀಮಿಯಂ ಪಾವತಿಸಬೇಕು. ಈಗ ಬಿಡುಗಡೆಯಾಗಿರುವ "ಪೇ ಕ್ಯಾಸ್ ಯೂ ಡ್ರೈವ್-ಕಿಲೋಮೀಟರ್ ಬೆನಿಫಿಟ್'', ಅಷ್ಟಾಗಿ ವಾಹನ ಬಳಸದಿರುವ ಅಥವಾ ಒಂದಕ್ಕಿಂತ ಹೆಚ್ಚಿನ ಕಾರು ಹೊಂದಿರುವ ಗ್ರಾಹಕರಿಗೆ ಸಹಾಯವಾಗುತ್ತದೆ.

English summary

HDFC ERGO Launches Pay As You Drive-Kilometre Benefit

HDFC ERGO general insurance co has launched a pay as you drive kilometre benefit add on cover for all its private car owners.
Story first published: Saturday, August 13, 2022, 12:11 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X