For Quick Alerts
ALLOW NOTIFICATIONS  
For Daily Alerts

ಹೂಡಿಕೆ ನಿರೀಕ್ಷೆಯಲ್ಲಿ ಎಚ್‌ಡಿಎಫ್‌ಸಿಯಿಂದ ಬಾಂಡ್ ವಿತರಣೆ; ನೀವು ಕೊಳ್ಳಬಹುದೇ?

|

ಭಾರತದ ಅತಿದೊಡ್ಡ ನಾನ್-ಬ್ಯಾಂಕಿಂಗ್ ಹಣಕಾಸು ಸಂಸ್ಥೆಗಳಲ್ಲಿ ಒಂದೆನಿಸಿದ ಎಚ್‌ಡಿಎಫ್‌ಸಿ ಇದೀಗ 5,500 ಕೋಟಿ ರೂ ಬಂಡವಾಳದ ನಿರೀಕ್ಷೆಯಲ್ಲಿ ಬಾಂಡ್‌ಗಳನ್ನು ಬಿಡುಗಡೆ ಮಾಡುತ್ತಿದೆ. ನಾನ್-ಕನ್ವರ್ಟಿಬಲ್ ಡಿಬಂಚರ್ಸ್ (ಎನ್‌ಸಿಡಿ) ಅನ್ನು ಖಾಸಗಿಯಾಗಿ ವಿತರಿಸುತ್ತಿದೆ. ಈ ಎನ್‌ಸಿಡಿಗಳ ಮೂಲ ಗಾತ್ರ 4 ಸಾವಿರ ಕೋಟಿ ರೂ ಇರಲಿದ್ದು, 1,500 ಕೋಟಿ ರೂವರೆಗೆ ಓವರ್‌ಸಬ್ಸ್‌ಕ್ರಿಪ್ಚನ್ ಉಳಿಸಿಕೊಳ್ಳುವ ಆಯ್ಕೆ ಇರುತ್ತದೆ.

ನಾನ್ ಕನ್ವರ್ಟಿಬಲ್ ಡಿಬಂಚರ್ಸ್ ಅನ್ನು ಷೇರು ಅಥವಾ ಈಕ್ವಿಟಿಗೆ ಪರಿವರ್ತಿಸಲು ಆಗುವುದಿಲ್ಲ. ಆದರೆ, ಸಂಸ್ಥೆ ನಿಗದಿ ಪಡಿಸಿದ ದರದಲ್ಲಿ ಇಲ್ಲಿ ಹಣ ಬೆಳೆಯುತ್ತದೆ. ಇದನ್ನು ಬಳಸಿ ಬೇಕೆಂದಾಗ ನಗದು ರೂಪದಲ್ಲಿ ಹಣ ಪಡೆಯಬಹುದು. ಇವು ಒಂದು ರೀತಿಯಲ್ಲಿ ಸರ್ಕಾರಿ ಬಾಂಡ್‌ಗಳಿದ್ದಂತೆ.

ಷೇರುಪೇಟೆಯ ವಾರದ ಕಥೆ; 9 ಕಂಪನಿಗಳಿಂದ 2.12 ಲಕ್ಷ ಕೋಟಿ ರೂ; ಅತಿಹೆಚ್ಚು ಲಾಭ ಯಾರಿಗೆ?ಷೇರುಪೇಟೆಯ ವಾರದ ಕಥೆ; 9 ಕಂಪನಿಗಳಿಂದ 2.12 ಲಕ್ಷ ಕೋಟಿ ರೂ; ಅತಿಹೆಚ್ಚು ಲಾಭ ಯಾರಿಗೆ?

ನವೆಂಬರ್ 17ರಂದು ಬಾಂಡ್ ಬಿಡುಗಡೆ

ನವೆಂಬರ್ 17ರಂದು ಬಾಂಡ್ ಬಿಡುಗಡೆ

ಎಚ್‌ಡಿಎಫ್‌ಸಿ ನವೆಂಬರ್ 17, ಗುರುವಾರದಂದು ಬಾಂಡ್‌ಗಳನ್ನು ಬಿಡುಗಡೆ ಮಾಡುತ್ತಿದೆ. ಅದೇ ದಿನ ಈ ಆಫರ್ ಅಂತ್ಯಗೊಳ್ಳುತ್ತದೆ. ಇದು ಓಪನ್ ಮಾರ್ಕೆಟ್‌ನಲ್ಲಿ ಲಭ್ಯ ಇರುವುದಿಲ್ಲ. ಮೊದಲೇ ಗುರುತಿಸಲಾದ ಖಾಸಗಿ ಹೂಡಿಕೆದಾರರು ಮತ್ತು ಸಂಸ್ಥೆಗಳಿಗೆ ಎಚ್‌ಡಿಎಫ್‌ಸಿ ಈ ನಾನ್ ಕನ್ವರ್ಟಿಬಲ್ ಡಿಬಂಚರ್‌ಗಳನ್ನು ವಿತರಿಸುತ್ತಿದೆ. ಐಪಿಒ ಮೂಲಕ ಸಾರ್ವನಿಕವಾಗಿ ಹೂಡಿಕೆ ಸಂಗ್ರಹಿಸಬಹುದಾದರೆ ಪ್ರೈವೇಟ್ ಪ್ಲೇಸ್ಮೆಂಟ್ ಮೂಲಕ ಖಾಸಗಿಯಾಗಿ ಹೂಡಿಕೆ ಪಡೆಯಬಹುದು. ಹೆಚ್‌ಡಿಎಫ್‌ಸಿ ಈಗ ಖಾಸಗಿ ಹಾದಿ ತುಳಿದಿದೆ.

ಎಚ್‌ಡಿಎಫ್‌ಸಿ ಈಗ ತಾನು ಬಿಡುಗಡೆ ಮಾಡಲಿರುವ ಬಾಂಡ್‌ಗೆ ವಾರ್ಷಿಕ ಶೇ. 7.70ರಂತೆ ಕೂಪನ್ ಒದಗಿಸುತ್ತಿದೆ. ಈ ಬಾಂಡ್‌ಗಳ ಕಾಲಾವಧಿ 3 ವರ್ಷ ಎಂದು ಹೇಳಲಾಗುತ್ತಿದೆ. ಕೆಲ ವರದಿಗಳಲ್ಲಿ ಈ ಬಾಂಡ್‌ಗಳ ಕಾಲಾವಧಿ 10 ವರ್ಷ ಎಂದಿದೆ. ಈ ಬಾಂಡ್ ಮೆಚ್ಯೂರ್ ಆದ ಬಳಿಕ ಖರೀದಿದಾರರು ಅದನ್ನು ರಿಡೀಮ್ ಮಾಡಿಕೊಳ್ಳಬಹುದು. ಸೆಪ್ಟೆಂಬರ್ ತಿಂಗಳಲ್ಲೇ ಬಾಂಡ್‌ಗಳಿಗೆ ಆಸಕ್ತಿ ಕೋರಿ ಬಿಡ್‌ಗಳನ್ನು ಆಹ್ವಾನಿಸಲಾಗಿತ್ತು. ಗುರುವಾರ ನಡೆಯುವ ಬಾಂಡ್ ವಿತರಣೆ ಪೂರ್ವ ನಿಶ್ಚಿತ ಹೂಡಿಕೆದಾರರು ಮತ್ತು ಸಂಸ್ಥೆಗಳಿಗೆ ಸಂದಾಯ ಆಗಲಿದೆ.

 

ಎಚ್‌ಡಿಎಫ್‌ಸಿ ಮತ್ತು ಬ್ಯಾಂಕ್ ವಿಲೀನ
 

ಎಚ್‌ಡಿಎಫ್‌ಸಿ ಮತ್ತು ಬ್ಯಾಂಕ್ ವಿಲೀನ

ಎಚ್‌ಡಿಎಫ್‌ಸಿ ಮತ್ತು ಎಚ್‌ಡಿಎಫ್‌ಸಿ ಬ್ಯಾಂಕ್ ಅನ್ನು ವಿಲೀನಗೊಳಿಸುವ ಪ್ರಕ್ರಿಯೆ ಆರಂಭವಾಗಲಿದೆ. ಎನ್‌ಸಿಎಲ್‌ಟಿಯಿಂದ ಈ ವಿಲೀನಕ್ಕೆ ಅನುಮೋದನೆ ಸಿಕ್ಕಿದೆ. 40 ಬಿಲಿಯನ್ ಡಾಲರ್ (ಸುಮಾರು 3.84 ಲಕ್ಷ ಕೋಟಿ ರೂಪಾಯಿ) ಹಣಕ್ಕೆ ಎಚ್‌ಡಿಎಫ್‌ಸಿಯನ್ನು ಎಚ್‌ಡಿಎಫ್‌ಸಿ ಬ್ಯಾಂಕ್ ಖರೀದಿಸುತ್ತಿದೆ. 2023ರ ಏಪ್ರಿಲ್ ನಂತರದ ತ್ರೈಮಾಸಿಕ ಅವಧಿಯಲ್ಲಿ ಈ ವಿಲೀನ ಪ್ರಕ್ರಿಯೆ ಮುಕ್ತಾಯಗೊಳ್ಳುವ ಸಾಧ್ಯತೆ ಇದೆ.

ಎಚ್‌ಡಿಎಫ್‌ಸಿ ಬ್ಯಾಂಕ್ ಸುಮಾರು 50 ಸಾವಿರ ಕೋಟಿ ರೂ ಹಣವನ್ನು ಬಾಂಡ್‌ಗಳ ಮೂಲಕ ಇತ್ತೀಚೆಗೆ ಸಂಗ್ರಹಿಸಿತ್ತು.

 

ಷೇರುಪೇಟೆಯಲ್ಲಿ...

ಷೇರುಪೇಟೆಯಲ್ಲಿ...

ಎಚ್‌ಡಿಎಫ್‌ಸಿ ಸಂಸ್ಥೆಯ ಷೇರು ಉತ್ತಮವಾಗಿ ಸಾಗುತ್ತಿದೆ. ಬಿಎಸ್‌ಇ ಸೆನ್ಸೆಕ್ಸ್‌ನಲ್ಲಿ ಲಿಸ್ಟಿಂಗ್ ಆಗಿರುವ ಎಚ್‌ಡಿಎಫ್‌ಸಿಯ ಒಂದು ಷೇರಿನ ಬೆಲೆ ಈಗ 2,667.10 ರೂ ಇದೆ. ನಿನ್ನೆಗೆ ಹೋಲಿಸಿದರೆ ಎಚ್‌ಡಿಎಫ್‌ಸಿ ಷೇರು ಬೆಲೆ ಶೇ. 0.21ರಷ್ಟು ಹೆಚ್ಚಾಗಿದೆ.

ಇನ್ನೊಂದೆಡೆ, ಎಚ್‌ಡಿಎಫ್‌ಸಿ ಬ್ಯಾಂಕ್‌ನ ಷೇರು ಬೆಲೆ ಎನ್‌ಎಸ್‌ಇ ನಿಫ್ಟಿಯಲ್ಲಿ 1622 ರೂಪಾಯಿ ಇದೆ. ಇದೂ ಕೂಡ ನಿನ್ನೆಗೆ ಹೋಲಿಸಿದರೆ ಶೇ.. 0.43ರಷ್ಟು ಮೌಲ್ಯ ಹೆಚ್ಚಿಸಿಕೊಂಡಿದೆ.

 

<strong>LIC Q2 Results: ಎಲ್‌ಐಸಿ Q2 ವರದಿ: 15,952 ಕೋಟಿ ರೂ ನಿವ್ವಳ ಲಾಭ </strong>LIC Q2 Results: ಎಲ್‌ಐಸಿ Q2 ವರದಿ: 15,952 ಕೋಟಿ ರೂ ನಿವ್ವಳ ಲಾಭ

English summary

HDFC To Raise Rs 5500 Crore Through Bonds, Know Date and Other Details

Non banking finance company HDFC is issuing bonds on November 17th to raise the investment of about Rs 5,500 crore. The bonds will be redeemable non-convertible debuntures.
Story first published: Tuesday, November 15, 2022, 17:34 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X