For Quick Alerts
ALLOW NOTIFICATIONS  
For Daily Alerts

ದೇಶದಲ್ಲಿ ಇಂಧನ ಬೇಡಿಕೆ ಬೆಳವಣಿಗೆಗೆ ಅಡ್ಡಿಯಾಯ್ತು ಮಳೆ

|

ಮಳೆಗೂ ಇಂಧನ ಬೇಡಿಕೆ ಬೆಳವಣಿಗೆ ಕುಸಿತಕ್ಕೂ ಏನು ಸಂಬಂಧ? ಹೆಚ್ಚು ಮಳೆ ಸುರಿದ ಪರಿಣಾಮ ಇಂಧನ ಬೆಳವಣಿಗೆ ಕಡಿಮೆಯಾಯ್ತ? ಹೌದು ಎನ್ನುತ್ತಿವೆ ಸರ್ಕಾರದ ಅಂಕಿ-ಅಂಶಗಳು. ಭಾರತದಲ್ಲಿ ಇಂಧನ ಬೇಡಿಕೆಯ ಬೆಳವಣಿಗೆ ದರವು ಕಳೆದ 6 ವರ್ಷಗಳಲ್ಲಿ ಕನಿಷ್ಟ ಮಟ್ಟಕ್ಕೆ ಇಳಿದಿದೆ.

ಆರ್ಥಿಕತೆ ನಿಧಾನಗೊಳ್ಳುತ್ತಿರುವುದರ ಜೊತೆಗೆ ದೇಶದ ಹಲವೆಡೆ ಹೆಚ್ಚು ಮಳೆ ಸುರಿದು ಗ್ಯಾಸೋಯಿಲ್ ಬಳಕೆಯ ಪ್ರಮಾಣದ ಮೇಲೆ ಪರಿಣಾಮ ಬೀರುತ್ತಿದೆ. ಇದು ದೇಶದ ಒಟ್ಟಾರೆ ಇಂಧನ ಬಳಕೆಯ ಐದನೇ ಒಂದು ಭಾಗದಷ್ಟಿದೆ. ಅಲ್ಲದೆ ಭಾರೀ ಮಳೆಯು ರಸ್ತೆ ಸಾರಿಗೆ, ನಿರ್ಮಾಣ ಹಾಗೂ ಕೈಗಾರಿಕಾ ಚಟುವಟಿಕೆ ಮೇಲೂ ಪರಿಣಾಮ ಬೀರಿದ್ದು, ಡೀಸೆಲ್ ಬೇಡಿಕೆಯ ಮೇಲೆ ಹೊಡೆತ ನೀಡಿದೆ.

ದೇಶದಲ್ಲಿ ಇಂಧನ ಬೇಡಿಕೆ ಬೆಳವಣಿಗೆಗೆ ಅಡ್ಡಿಯಾಯ್ತು ಮಳೆ

2019 ಮಾರ್ಚ್ ಆರ್ಥಿಕ ವರ್ಷದಲ್ಲಿ ಇಂಧನ ಬೇಡಿಕೆಯು 3.4ರಷ್ಟು ಏರಿಕೆಯಾಗಿದೆ. ಇದು ಕಳೆದ 5 ವರ್ಷಗಳಲ್ಲಿ ಅತ್ಯಂತ ಕಡಿಮೆ. ಏಪ್ರಿಲ್-ಸೆಪ್ಟೆಂಬರ್ ಅವಧಿಯಲ್ಲಿ ಸಂಸ್ಕರಿಸಿದ ಇಂಧನಗಳ ಬಳಕೆ ಒಂದು ವರ್ಷದ ಹಿಂದಿನಿಂದ ಶೇಕಡಾ 1.4ರಷ್ಟು ಏರಿಕೆಯಾಗಿದೆ ಎಂದು ಸರ್ಕಾರದ ಅಂಕಿ-ಅಂಶಗಳು ತಿಳಿಸಿವೆ.

ರಾಜ್ಯ ಹಿಂದೂಸ್ತಾನ್ ಪೆಟ್ರೋಲಿಯಂ ಅಧ್ಯಕ್ಷ ಎಂ.ಕೆ ಸುರಾನಾ ಪ್ರಕಾರ 'ಮುಂದಿನ ಕೆಲವು ತಿಂಗಳುಗಳಲ್ಲಿ (ಈ ಆರ್ಥಿಕ ವರ್ಷದಲ್ಲಿ) ಇಂಧನ ಬೇಡಿಕೆ ಕಳೆದ ವರ್ಷದ ಮಟ್ಟವನ್ನು ತಲುಪಲು ಶೇಕಡಾ 3 ರಿಂದ 4ರಷ್ಟು ಹೆಚ್ಚಾಗಬೇಕಿದೆ. ಆದ್ರೆ ಇದು ಅಸಂಭವವಾಗಿದೆ ಎಂದು ಸುದ್ದಿಗೋಷ್ಟಿಯಲ್ಲಿ ತಿಳಿಸಿದ್ದಾರೆ.

ಈಗಾಗಲೇ ಕೆಲವು ಜಾಗತಿಕ ಏಜೆನ್ಸಿಗಳು ಭಾರತಕ್ಕಾಗಿ ತಮ್ಮ ಇಂಧನ ಬೇಡಿಕೆಯ ಮುನ್ಸೂಚನೆಯನ್ನು ಕಡಿತಗೊಳಿಸಿವೆ. ದೇಶದಲ್ಲಿ ನಿಧಾನಗತಿಯ ಆರ್ಥಿಕ ಹಾಗೂ ಕೈಗಾರಿಕಾ ಚಟುವಟಿಕೆಗಳ ಆಧಾರದ ಮೇಲೆ ಈ ಇಂಧನ ಬೇಡಿಕೆ ಮುನ್ಸೂಚನೆ ಕಡಿತಗೊಂಡಿದೆ.

English summary

Heavy Rain Impacted On India Fuel Demand Growth

India fuel demand growth fall its lowest in least six years as the economy slows and after heavy rains impacted
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X