For Quick Alerts
ALLOW NOTIFICATIONS  
For Daily Alerts

UBLನಲ್ಲಿ 39.6 ಮಿಲಿಯನ್ ಷೇರುಗಳನ್ನ ಖರೀದಿಸಿದ ಹೈನೆಕೆನ್

|

ಖ್ಯಾತ ಮದ್ಯ ತಯಾರಿಕಾ ಕಂಪನಿ ಯುನೈಟೆಡ್‌ ಬ್ರೂವರೀಸ್ ಲಿಮಿಟೆಡ್‌ (UB) ತನ್ನ ಪಾಲುಗಳನ್ನು ಮಾರಾಟ ಮಾಡಿರುವುದಾಗಿ ಬುಧವಾರ ಸ್ಟಾಕ್‌ ಎಕ್ಸ್‌ಚೇಂಜ್ ಫೈಲಿಂಗ್‌ನಲ್ಲಿ ತಿಳಿಸಿದೆ. ಸುಮಾರು 39.64 ಮಿಲಿಯನ್ ಷೇರುಗಳನ್ನು ಕಂಪನಿಯು ಹಸ್ತಾಂತರಿಸಿದೆ ಎಂದು ಬ್ಲೂಮ್‌ಬರ್ಗ್‌ ವರದಿ ಮಾಡಿದೆ.

 

ಯುಬಿಎಲ್‌ನಲ್ಲಿ ಹೆಚ್ಚುವರಿ 39.64 ಮಿಲಿಯನ್ ಷೇರುಗಳನ್ನು ಖರೀದಿಸಿದೆ ಎಂದು ಹೈನೆಕೆನ್ ಎನ್‌ವಿ ಘೋಷಿಸಿದೆ. ಈ ಷೇರು ಖರೀದಿಯೊಂದಿಗೆ, ಯುಬಿಎಲ್‌ನಲ್ಲಿ ಹೈನೆಕೆನ್ ಕಂಪನಿ ಷೇರುಗಳು ಶೇಕಡಾ 46.50 ರಿಂದ ಶೇಕಡಾ 61.50ಕ್ಕೆ ಏರಿಕೆಯಾಗಿದೆ.

 
UBLನಲ್ಲಿ 39.6 ಮಿಲಿಯನ್ ಷೇರುಗಳನ್ನ ಖರೀದಿಸಿದ ಹೈನೆಕೆನ್

ಯುನೈಟೆಡ್ ಬ್ರೂವರೀಸ್ ಲಿಮಿಟೆಡ್ ಷೇರುಗಳು ಬುಧವಾರ ದಿನದ ವಹಿವಾಟು ಅಂತ್ಯಕ್ಕೆ ಶೇಕಡಾ 3.51ರಷ್ಟು ಕುಸಿದು 1,405.35 ರೂಪಾಯಿಗೆ ತಲುಪಿದೆ.

'' ಈ ವಹಿವಾಟು ಸಕಾರಾತ್ಮಕವಾಗಿದೆ ಮತ್ತು ಯುಬಿಬಿಎಲ್‌ ಮತ್ತು ಭಾರತೀಯ ಬಿಯರ್ ಮಾರುಕಟ್ಟೆಯಲ್ಲಿ ಅದರ ಬದ್ಧತೆ ಮತ್ತು ಆಸಕ್ತಿಯನ್ನು ಸೂಚಿಸುತ್ತದೆ. ಸೆಬಿ ಅನುಮೋದನೆಯು ಹೈನೆಕೆನ್ ಅನ್ನು ಮುಕ್ತವಾಗಿ ಖರೀದಿಗೆ ಸಾಧ್ಯವಾಗಿದೆ. ಇದರ ಜೊತೆಗೆ ಬ್ಯಾಂಕ್‌ನಲ್ಲಿ ಅಡಮಾನ ಇಟ್ಟಿರುವ ಉಳಿದ ಶೇಕಡಾ 11ರಷ್ಟು ಯುಬಿ ಗ್ರೂಪ್ ಪಾಲನ್ನು ಕೂಡ ಹೈನೆಕನ್ ಖರೀದಿಸಬಹುದು'' ಎಂದು ಎಮ್‌ಕೆ ರಿಸರ್ಚ್‌ ತನ್ನ ವರದಿಯಲ್ಲಿ ತಿಳಿಸಿದೆ.

ಮಂಗಳವಾರ (ಜೂನ್ 22), ಭಾರತದ ಸ್ಪರ್ಧಾ ಆಯೋಗವು ಯುನೈಟೆಡ್ ಬ್ರೂವರೀಸ್‌ನಲ್ಲಿ ಹೈನೆಕೆನ್‌ ಹೆಚ್ಚುವರಿ ಷೇರುಗಳನ್ನು ಸ್ವಾಧೀನಪಡಿಸಿಕೊಳ್ಳಲು ಅನುಮೋದನೆ ನೀಡಿತು.

English summary

Heineken Buys Additional 39.6 Million Shares In UBL

United Breweries Ltd witnessed a series of block deals on the exchanges on Wednesday, with around 39.64 million shares, comprising 15% stake in the company.
Story first published: Wednesday, June 23, 2021, 17:37 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X