For Quick Alerts
ALLOW NOTIFICATIONS  
For Daily Alerts

ಹೀರೋ ಎಕ್ಸ್‌ಟ್ರೀಮ್ 160 ಆರ್ 100 ಮಿಲಿಯನ್ ಎಡಿಷನ್ ಬೈಕ್ ಬಿಡುಗಡೆ

|

ಹೀರೋ ಮೊಟೊಕಾರ್ಪ್ ಅಂತಿಮವಾಗಿ ಬಹುನಿರೀಕ್ಷಿತ ಎಕ್ಸ್‌ಟ್ರೀಮ್ 160 ಆರ್ 100 ಮಿಲಿಯನ್ ಎಡಿಷನ್ ಮೋಟಾರ್‌ಸೈಕಲ್‌ ಅನ್ನು ಭಾರತದಲ್ಲಿ ಬಿಡುಗಡೆ ಮಾಡಿದೆ. ಬೈಕ್‌ನ ಬೆಲೆ ದೆಹಲಿ ಎಕ್ಸ್‌ ಶೋರೂಂ 1,08,750 (ಎಕ್ಸ್‌ಶೋರೂಂ ದೆಹಲಿ) ರೂಪಾಯಿ ನಷ್ಟಿದೆ.

 

ಇದು ಸಾಮಾನ್ಯ ಆವೃತ್ತಿಯ ಬೈಕ್‌1,03,900 (ಎಕ್ಸ್-ಶೋರೂಮ್ ದೆಹಲಿ) ಗೆ ಮಾರಾಟವಾಗುವ ಸಾಮಾನ್ಯ ಆವೃತ್ತಿಗಿಂತ ಇದು ದುಬಾರಿಯಾಗಿದೆ ಮತ್ತು ಡಿಸ್ಕ್ ರೂಪಾಂತರಕ್ಕಾಗಿ 1,06,950 (ಎಕ್ಸ್ ಶೋರೂಮ್ ದೆಹಲಿ) ರೂಪಾಯಿವರೆಗೆ ಬೆಲೆಯನ್ನು ಹೊಂದಿದೆ.

 
ಹೀರೋ ಎಕ್ಸ್‌ಟ್ರೀಮ್ 160 ಆರ್ 100 ಮಿಲಿಯನ್ ಎಡಿಷನ್ ಬೈಕ್ ಬಿಡುಗಡೆ

ಹೀರೋ ಮೋಟೊಕಾರ್ಪ್ ಕಂಪನಿಯು ಸದ್ಯ ಮಾರುಕಟ್ಟೆಯಲ್ಲಿ ಗ್ರಾಹಕರ ಬೇಡಿಕೆಗೆ ಅನುಗುಣವಾಗಿ ಎಕ್ಸ್‌ಟ್ರಿಮ್ 160ಆರ್, ಎಕ್ಸ್‌ಪಲ್ಸ್ 200, ಎಕ್ಸ್‌ಟ್ರಿಮ್ 200ಎಸ್, ಎಕ್ಸ್‌ಪಲ್ಸ್ 200ಟಿ, ಪ್ಯಾಶನ್ ಪ್ರೋ, ಸ್ಲೈಂಡರ್ ಐ ಸ್ಮಾರ್ಟ್, ಗ್ಲ್ಯಾಮರ್, ಸ್ಲೈಂಡರ್ ಪ್ಲಸ್, ಹೆಚ್‍ಎಫ್ ಡಿಲಕ್ಸ್, ಸೂಪರ್ ಸ್ಲೈಂಡರ್, ಡೆಸ್ಟಿನಿ 125, ಮ್ಯಾಸ್ಟ್ರೊ ಎಡ್ಜ್ 125, ಮ್ಯಾಸ್ಟ್ರೊ ಎಡ್ಜ್ 110, ಪ್ರೆಷರ್ ಪ್ಲಸ್ ಆವೃತ್ತಿಗಳನ್ನು ಮಾರಾಟ ಮಾಡುತ್ತಿದ್ದು, 10 ಕೋಟಿ ಬೈಕ್ ಉತ್ಪಾದನಾ ಸಂಭ್ರಮಕ್ಕಾಗಿ ಪ್ರಮುಖ ಬೈಕ್ ಮತ್ತು ಸ್ಕೂಟರ್‌ಗಳಲ್ಲಿ ಸ್ಪೆಷಲ್ ಎಡಿಷನ್‌ನಲ್ಲಿ ಬಿಡುಗಡೆ ಮಾಡಲಾಗುತ್ತಿದೆ.

ಎಕ್ಸ್‌ಟ್ರೀಮ್ 160 ಆರ್ 100 ಮಿಲಿಯನ್ ಆವೃತ್ತಿ ಒಂದೇ ರೂಪಾಂತರದಲ್ಲಿ ಮಾತ್ರ ಲಭ್ಯವಿದೆ. ಬೈಕ್‌ನ ಕೆಲವು ಪ್ರಮುಖ ಪ್ರತಿಸ್ಪರ್ಧಿಗಳೆಂದರೆ ಟಿವಿಎಸ್ ಅಪಾಚೆ ಆರ್‌ಟಿಆರ್ 160 4 ವಿ ಮತ್ತು ಬಜಾಜ್ ಪಲ್ಸರ್ ಎನ್ಎಸ್ 160.

ಹೀರೋ ಮೋಟೊಕಾರ್ಪ್ ಕಂಪನಿಯು ಭಾರತದಲ್ಲಿ ಬೈಕ್ ಉತ್ಪಾದನೆಯ ಆರಂಭಿಸಿದ 36 ವರ್ಷಗಳ ಅವಧಿಯಲ್ಲಿ ಇದುವರೆಗೆ ಬರೋಬ್ಬರಿ 10 ಕೋಟಿ ಬೈಕ್ ಉತ್ಪಾದನೆಯನ್ನು ಪೂರ್ಣಗೊಳಿಸುವ ಮೂಲಕ ಹೊಸ ದಾಖಲೆಗೆ ಕಾರಣವಾಗಿದೆ.

English summary

Hero Xtreme 160R 100 Million Edition Launched In India

Hero MotoCorp has finally launched the Xtreme 160R 100 Million Edition motorcycle in India. The bike has been priced at Rs 1,08,750 (ex-showroom Delhi).
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X