For Quick Alerts
ALLOW NOTIFICATIONS  
For Daily Alerts

'ಪಹಲ್' ಯೋಜನೆಯಡಿ LPG ಸಿಲಿಂಡರ್‌ಗೆ ಸಬ್ಸಿಡಿ:ಕೇಂದ್ರ ಸರ್ಕಾರ

|

ಸರ್ಕಾರಿ ತೈಲ ಮಾರಾಟ ಕಂಪನಿಗಳು ಬುಧವಾರವಷ್ಟೇ(ಫೆಬ್ರವರಿ 12) ಎಲ್‌ಪಿಜಿ ಸಿಲಿಂಡರ್‌ಗಳ ಬೆಲೆಯನ್ನು ಏರಿಕೆ ಮಾಡಿದವು. ಇದರ ಬೆನ್ನಲ್ಲೇ ಪಹಲ್‌(ಡಿಬಿಟಿಎಲ್) ಯೋಜನೆಯಡಿ ಗ್ರಾಹಕರಿಗೆ ವಿತರಿಸಲಾಗುವ ಅಡುಗೆ ಅನಿಲಕ್ಕೆ ಕೇಂದ್ರ ಸರ್ಕಾರ ಸಬ್ಸಿಡಿ ನೀಡಲಿದೆ ಎಂದು ಪೆಟ್ರೋಲಿಯಂ ಸಚಿವಾಲಯ ಗುರುವಾರ ಅಧಿಕೃತ ಪ್ರಕಟಣೆಯಲ್ಲಿ ತಿಳಿಸಿದೆ.

ಹಿಂದಿನ ತಿಂಗಳಿನ ಅಂತಾರಾಷ್ಟ್ರೀಯ ಮಾರುಕಟ್ಟೆ ದರವನ್ನು ಆಧರಿಸಿ, ಅಡುಗೆ ಅನಿಲ ದರವನ್ನು ಪರಿಷ್ಕರಿಸಲಾಗಿದೆ ಎಂದು ಸಚಿವಾಯ ಹೇಳಿದೆ. ಪಹಲ್ (ಡಿಬಿಟಿಎಲ್) ಯೋಜನೆಯಡಿ ಗ್ರಾಹಕರಿಗೆ ವಿತರಿಸಲಾಗುವ ಅಡುಗೆ ಅನಿಲಕ್ಕೆ ಭಾರತ ಸರ್ಕಾರವು ಸಬ್ಸಿಡಿ ಒದಗಿಸುತ್ತಿದೆ. ಪಹಲ್ ಗ್ರಾಹಕರಿಗೆ ನೀಡುವ ಸಬ್ಸಿಡಿಯನ್ನು ನೇರವಾಗಿ ಅವರ ಬ್ಯಾಂಕ್ ಖಾತೆಗಳಿಗೆ ವರ್ಗಾಯಿಸಲಾಗುತ್ತಿದ್ದು, ಇದು ಮಾರುಕಟ್ಟೆ ನಿರ್ಧರಿಸಿದ ದರ ಮತ್ತು ಸಬ್ಸಿಡಿ ದರದ ನಡುವಿನ ವ್ಯತ್ಯಾಸವಾಗಿದೆ.' ಎಂದು ಸಚಿವಾಲಯ ಹೇಳಿದೆ.

'ಪಹಲ್' ಯೋಜನೆಯಡಿ LPG ಸಿಲಿಂಡರ್‌ಗೆ ಸಬ್ಸಿಡಿ:ಕೇಂದ್ರ ಸರ್ಕಾರ

ಸದ್ಯ ದೇಶದ ಸುಮಾರು 97 ಪರ್ಸೆಂಟ್‌ರಷ್ಟು ಪ್ರದೇಶದಲ್ಲಿ ಅಡುಗೆ ಅನಿಲ ಬಳಕೆಯಲ್ಲಿದೆ. 27.76 ಕೋಟಿಗೂ ಹೆಚ್ಚು ಸಂಪರ್ಕಗಳನ್ನು ಒದಗಿಸಲಾಗಿದೆ. ಸುಮಾರು 27.76 ಕೋಟಿ ಗ್ರಾಹಕರ ಪೈಕಿ ಸುಮಾರು 26.12 ಕೋಟಿ ಗ್ರಾಹಕರಿಗೆ ಸಬ್ಸಿಡಿ ಹೆಚ್ಚಿಸುವ ಮೂಲಕ ಸರ್ಕಾರ ದರ ಹೆಚ್ಚಳವನ್ನು ಭರಿಸುತ್ತಿದೆ.

2020ರ ಜನವರಿಯಲ್ಲಿ ಅಂತರಾಷ್ಟ್ರೀಯ ಮಟ್ಟದಲ್ಲಿ ಅಡುಗೆ ಅನಿಲದ ದರ ಒಂದು ಮೆಟ್ರಿಕ್ ಟನ್ ಗೆ 448 ಡಾಲರ್ ನಿಂದ 567 ಡಾಲರ್ ಗೆ ತೀವ್ರ ಏರಿಕೆಯಾಗಿದ್ದು, ಇದರಿಂದ ದೆಹಲಿಯಲ್ಲಿ ಸಬ್ಸಿಡಿ ರಹಿತ ಸಿಲಿಂಡರ್ ದರ 144.50 ರೂ.ನಷ್ಟು ಏರಿಕೆಯಾಗಿದೆ.

ಭಾರತದಲ್ಲಿ ಎಲ್‌ಪಿಜಿ ಸಿಲಿಂಡರ್‌ಗಳ ಬೆಲೆ ಮುಖ್ಯವಾಗಿ ಎರಡು ಅಂಶಗಳ ಮೇಲೆ ಅವಲಂಬಿತವಾಗಿದೆ . ಅಂತರರಾಷ್ಟ್ರೀಯ ಮಾನದಂಡದ ಎಲ್‌ಪಿಜಿಯ ದರ ಮತ್ತು ಯುಎಸ್ ಡಾಲರ್ ಹಾಗೂ ರುಪಾಯಿ ವಿನಿಮಯ ದರ. ಇದರ ಆಧಾರದ ಮೇಲೆ ಇಂಧನ ಚಿಲ್ಲರೆ ವ್ಯಾಪಾರಿಗಳು ಪ್ರತಿ ತಿಂಗಳು ಎಲ್‌ಪಿಜಿ ಸಿಲಿಂಡರ್‌ಗಳ ಬೆಲೆಯನ್ನು ಪರಿಷ್ಕರಿಸುತ್ತಾರೆ.

English summary

Higher Subsidies To The PAHAL Consumers Says Govt

After the Price hike of LPG the subsidy quantum given to the PAHAL consumers by way of DBT said Government of India
Story first published: Friday, February 14, 2020, 11:23 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X