For Quick Alerts
ALLOW NOTIFICATIONS  
For Daily Alerts

ಜಗತ್ತಿನ ಅತ್ಯಂತ ದುಬಾರಿ ಮತ್ತು ಅಗ್ಗದ ಪೆಟ್ರೋಲ್ ದರ ಹೊಂದಿರುವ ರಾಷ್ಟ್ರಗಳು

|

ದೇಶದಲ್ಲಿ ದಿನೇ ದಿನೇ ಪೆಟ್ರೋಲ್ ಹಾಗೂ ಡೀಸೆಲ್ ದರ ಗಗನಕ್ಕೇರುತ್ತಿರುವುದು ನಿಮಗೆಲ್ಲಾ ತಿಳಿದಿದೆ. ಅಕ್ಕ ಪಕ್ಕದ ರಾಷ್ಟ್ರಗಳಲ್ಲಿ ನಮಗಿಂತ ಕಡಿಮೆ ದರದಲ್ಲಿ ಪೆಟ್ರೋಲ್ ಹಾಗೂ ಡೀಸೆಲ್ ಸಿಗುತ್ತಿದೆ. ಆದ್ರೂ ಭಾರತದಲ್ಲಿ ಇಷ್ಟೊಂದು ದುಬಾರಿ ಬೆಲೆಯಲ್ಲಿ ಪೆಟ್ರೋಲ್, ಡೀಸೆಲ್ ದರ ಏಕೆ ಎಂಬುದು ನಿಮ್ಮ ಪ್ರಶ್ನೆಯಾಗಿರಬಹುದು. ಆದರೆ ಭಾರತಕ್ಕಿಂತ ಹೆಚ್ಚಿನ ಮಟ್ಟದಲ್ಲಿ ಪೆಟ್ರೋಲ್, ಡೀಸೆಲ್ ಮಾರಾಟ ಮಾಡುವ ರಾಷ್ಟ್ರಗಳು ಇವೆ.

ದುಬಾರಿ ಪೆಟ್ರೋಲ್ ದರ ಹೊಂದಿರುವ ರಾಷ್ಟ್ರಗಳು ಒಂದೆಡೆಯಾದ್ರೆ, ಅತ್ಯಂತ ಕಡಿಮೆ ದರವನ್ನೂ ಹೊಂದಿರುವ ರಾಷ್ಟ್ರಗಳನ್ನು ನಾವು ಕಾಣಬಹುದು. ಕೆಲವೊಂದು ರಾಷ್ಟ್ರಗಳಲ್ಲಿ ಮುಂದುವರೆದ ರಾಷ್ಟ್ರಗಳಲ್ಲಿನ ಬಾಟಲ್ ವಾಟರ್ ದರದಲ್ಲಿ ಪೆಟ್ರೋಲ್ ಸಿಗುವ ಉದಾಹರಣೆಯು ಇದೆ. ಹೀಗೆ ಜಗತ್ತಿನಲ್ಲಿ ಅತ್ಯಂತ ಗರಿಷ್ಠ ಮಟ್ಟದ ಪೆಟ್ರೋಲ್ ದರ ಹಾಗೂ ಅಗ್ಗದ ಪೆಟ್ರೋಲ್ ದರ ಹೊಂದಿರುವ ರಾಷ್ಟ್ರಗಳು ಯಾವುವು ಎಂಬುದನ್ನು ಈ ಕೆಳಗೆ ತಿಳಿಯಿರಿ.

ಅತ್ಯಂತ ದುಬಾರಿ ಪೆಟ್ರೋಲ್ ದರ ಹೊಂದಿರುವ ರಾಷ್ಟ್ರಗಳು

ಅತ್ಯಂತ ದುಬಾರಿ ಪೆಟ್ರೋಲ್ ದರ ಹೊಂದಿರುವ ರಾಷ್ಟ್ರಗಳು

ಸೆಪ್ಟೆಂಬರ್ 2021 ರ ಹೊತ್ತಿಗೆ, ಹಾಂಗ್ ಕಾಂಗ್ ವಿಶ್ವದ ಅತ್ಯಂತ ದುಬಾರಿ ಪೆಟ್ರೋಲ್ ಅನ್ನು ಲೀಟರ್‌ಗೆ $ 2.56 (ಗ್ಯಾಲನ್‌ಗೆ $ 11.63) ಮಾರುತ್ತಿದೆ. ಇದರ ನಂತರ ನೆದರ್‌ಲ್ಯಾಂಡ್ಸ್ $ 2.18 (ಗ್ಯಾಲನ್‌ಗೆ $ 9.91) ಮತ್ತು ಸೆಂಟ್ರಲ್ ಆಫ್ರಿಕನ್ ರಿಪಬ್ಲಿಕ್ $ 2.14 (ಗ್ಯಾಲನ್‌ಗೆ $ 9.72) ದರ ಹೊಂದಿವೆ. ಇತರೆ ಯಾವೆಲ್ಲಾ ರಾಷ್ಟ್ರಗಳು ದುಬಾರಿ ಪೆಟ್ರೋಲ್ ದರ (ಪ್ರತಿ ಲೀಟರ್‌ಗೆ) ಹೊಂದಿದೆ ಎಂಬುದನ್ನು ತಿಳಿಯಿರಿ

ಹಾಂಕಾಂಗ್ $ 2.56
ನೆದರ್ಲೆಂಡ್ಸ್‌ $ 2.18
ಸಿಎಆರ್‌ $ 2.14
ನಾರ್ವೆ $ 2.11
ಇಸ್ರೇಲ್ $ 2.03
ಡೆನ್ಮಾರ್ಕ್ $ 2.02
ಮೊನಾಕೊ $ 1.99
ಗ್ರೀಸ್ $ 1.99
ಫಿನ್‌ಲ್ಯಾಂಡ್ $ 1.97
ಐಸ್‌ಲ್ಯಾಂಡ್ $ 1.97

 

ಅಗ್ಗದ ಪೆಟ್ರೋಲ್ ದರ ಹೊಂದಿರುವ ರಾಷ್ಟ್ರಗಳು
 

ಅಗ್ಗದ ಪೆಟ್ರೋಲ್ ದರ ಹೊಂದಿರುವ ರಾಷ್ಟ್ರಗಳು

ದುಬಾರಿ ದರದ ಪೆಟ್ರೋಲ್ ದರ ಒಂದೆಡೆಯಾದ್ರೆ, ಅಗ್ಗದ ಪೆಟ್ರೋಲ್ ಹೊಂದಿರುವ ದೇಶಗಳಲ್ಲಿ ವೆನಿಜುವೆಲಾ ಸೇರಿದಂತೆ $ 0.02 (ಗ್ಯಾಲನ್‌ಗೆ $ 0.09), ಇರಾನ್-$ 0.06 (ಗ್ಯಾಲನ್‌ಗೆ $ 0.27) ಮತ್ತು ಸಿರಿಯಾ $ 0.23 (ಗ್ಯಾಲನ್‌ಗೆ $ 1.04) ಅಗ್ಗದ ದರವನ್ನು ಹೊಂದಿವೆ. ಇತರೆ ಯಾವೆಲ್ಲಾ ರಾಷ್ಟ್ರಗಳು ಕಡಿಮೆ ಪೆಟ್ರೋಲ್ ದರವನ್ನು(ಪ್ರತಿ ಲೀಟರ್‌ಗೆ) ಹೊಂದಿವೆ ಎಂಬುದನ್ನು ಈ ಕೆಳಗೆ ತಿಳಿಯಿರಿ

ವೆನಿಜುವೆಲಾ $ 0.02
ಇರಾನ್ $ 0.06
ಸಿರಿಯಾ $ 0.23
ಅಂಗೋಲ $ 0.26
ಅಲ್ಜೀರಿಯಾ $ 0.33
ಕುವೈತ್ $ 0.34
ನೈಜೀರಿಯಾ $ 0.40
ತುರ್ಕ್‌ಮೇನಿಸ್ತಾನ್ $ 0.42
ಕಜಕಿಸ್ತಾನ್ $ 0.46
ಇಥಿಯೋಪಿಯಾ $ 0.46

 ಪೆಟ್ರೋಲ್, ಡೀಸೆಲ್ ದರ ಮತ್ತೆ ಏರಿಕೆ: ಅ. 02ರ ದರ ಇಲ್ಲಿದೆ ಪೆಟ್ರೋಲ್, ಡೀಸೆಲ್ ದರ ಮತ್ತೆ ಏರಿಕೆ: ಅ. 02ರ ದರ ಇಲ್ಲಿದೆ

ವಿವಿಧ ದೇಶಗಳ ನಡುವೆ ಪೆಟ್ರೋಲ್ ಬೆಲೆ ವ್ಯತ್ಯಾಸವೇಕೆ?

ವಿವಿಧ ದೇಶಗಳ ನಡುವೆ ಪೆಟ್ರೋಲ್ ಬೆಲೆ ವ್ಯತ್ಯಾಸವೇಕೆ?

ಆಯಾ ದೇಶಗಳ ಪೆಟ್ರೋಲ್, ಡೀಸೆಲ್ ಬೆಲೆಯು ಕಚ್ಚಾ ತೈಲದ ಬೆಲೆ, ಸಾರಿಗೆ ವೆಚ್ಚಗಳು, ರಾಜ್ಯ ತೆರಿಗೆಗಳು ಮತ್ತು ವಿತರಣಾ ವೆಚ್ಚಗಳು ಸೇರಿದಂತೆ ವಿವಿಧ ಅಂಶಗಳ ಮೇಲೆ ಅವಲಂಬಿತವಾಗಿರುತ್ತದೆ. ಹೀಗಾಗಿ ಒಂದೊಂದು ರಾಷ್ಟ್ರದಲ್ಲಿ ಒಂದು ರೀತಿಯ ದರಗಳು ನಿಗದಿಯಾಗಿರುತ್ತವೆ ಮತ್ತು ವ್ಯತ್ಯಾಸಗೊಳ್ಳುತ್ತವೆ.

ಇದರ ಜೊತೆಗೆ ಜಾಗತಿಕ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಬೆಲೆಯಲ್ಲಿ ಏರಿಳಿತ ಮತ್ತು ಡಾಲರ್-ಆಯಾ ದೇಶದ ಕರೆನ್ಸಿ ವಿನಿಮಯ ದರದ ಆಧಾರದ ಮೇಲೆ ಪೆಟ್ರೋಲ್, ಡೀಸೆಲ್ ಬೆಲೆಯು ಏರಿಳಿತ ಕಾಣುತ್ತದೆ.

2001 ರಿಂದ 2021ರವರೆಗೆ ಪೆಟ್ರೋಲ್ ದರ ಎಷ್ಟು ಏರಿಕೆಯಾಗಿದೆ: ವ್ಯತ್ಯಾಸ ತಿಳಿಯಿರಿ2001 ರಿಂದ 2021ರವರೆಗೆ ಪೆಟ್ರೋಲ್ ದರ ಎಷ್ಟು ಏರಿಕೆಯಾಗಿದೆ: ವ್ಯತ್ಯಾಸ ತಿಳಿಯಿರಿ

 

ಕಚ್ಚಾ ತೈಲ ಸಂಗ್ರಹಣೆ ಮತ್ತು ಉತ್ಪಾದನೆ

ಕಚ್ಚಾ ತೈಲ ಸಂಗ್ರಹಣೆ ಮತ್ತು ಉತ್ಪಾದನೆ

ವಿಶ್ವದ ತೈಲ ಉತ್ಪಾದನೆಗೆ ಪ್ರಮುಖ ಕೇಂದ್ರ ಒಪೆಕ್ ಸಂಘಟನೆಯು ವಿಶ್ವದಲ್ಲೇ ಅತಿ ಹೆಚ್ಚು ತೈಲ ಸಂಗ್ರಹವನ್ನು ಹೊಂದಿದೆ. 1960 ರಲ್ಲಿ ಇರಾಕ್‌ನ ಬಾಗ್ದಾದ್‌ನಲ್ಲಿ ಸ್ಥಾಪಿತವಾದ ಈ ಬಹುರಾಷ್ಟ್ರೀಯ ಸಂಸ್ಥೆಯು 13 ರಾಷ್ಟ್ರಗಳನ್ನು ಒಳಗೊಂಡಿದೆ. ಇದು ಒಟ್ಟಾರೆ ವಿಶ್ವದ ಕಚ್ಚಾ ತೈಲ ಸಂಗ್ರಹದ ಶೇಕಡಾ 80ರಷ್ಟು ಪ್ರಮಾಣವನ್ನು ಹೊಂದಿದೆ.

ಇನ್ನು ಉತ್ಪಾದನೆಯ ವಿಚಾರಕ್ಕೆ ಬಂದರೆ ಯುನೈಟೆಡ್ ಸ್ಟೇಟ್ಸ್ ಎನರ್ಜಿ ಇನ್ಫಾರ್ಮೇಶನ್ ಅಡ್ಮಿನಿಸ್ಟ್ರೇಷನ್ ಪ್ರಕಾರ, ಒಪೆಕ್ ಸದಸ್ಯ ರಾಷ್ಟ್ರಗಳು ವಿಶ್ವದ ಕಚ್ಚಾ ತೈಲದ 40 ಪ್ರತಿಶತವನ್ನು ಉತ್ಪಾದಿಸುತ್ತವೆ ಮತ್ತು ಅಂತಾರಾಷ್ಟ್ರೀಯವಾಗಿ ವ್ಯಾಪಾರ ಮಾಡುವ ಒಟ್ಟು ಪೆಟ್ರೋಲಿಯಂನ 60 ಪ್ರತಿಶತವನ್ನು ಪ್ರತಿನಿಧಿಸುತ್ತವೆ.

ಒಪೆಕ್ ತೈಲ ಬೇಡಿಕೆ 2022 ರಲ್ಲಿ ಸಾಂಕ್ರಾಮಿಕ ಪೂರ್ವ ಮಟ್ಟಕ್ಕೆ ಮರಳುವುದನ್ನು ಕಾಣಬಹುದು. ಜೊತೆಗೆ 2023 ರಲ್ಲಿ ಉತ್ಪಾದನೆಯು ದಿನಕ್ಕೆ 1.7 ಮಿಲಿಯನ್ ಬ್ಯಾರೆಲ್‌ಗಳಷ್ಟು ಬೆಳೆಯುತ್ತದೆ ಎಂದು ನಿರೀಕ್ಷಿಸಲಾಗಿದೆ.

 

English summary

Highest And Lowest Petrol Prices: Which Countries Has the most expensive Petrol?

Find out which countries have the highest petrol rates and the cheapest petrol rates in the world.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X