For Quick Alerts
ALLOW NOTIFICATIONS  
For Daily Alerts

ಕೇಂದ್ರ ಬಜೆಟ್ 2020ರ ಕಂಪ್ಲೀಟ್ ಹೈಲೈಟ್ಸ್

|

ಮೊದಲ ಬಾರಿಗೆ ಸಂಸತ್ತಿನಲ್ಲಿ ಪೂರ್ಣಾವದಿ ಬಜೆಟ್ ಮಂಡಿಸಿದ ನಿರ್ಮಲಾ ಸೀತಾರಾಮನ್ ಬಜೆಟ್ ಲೆಕ್ಕದ ಮೇಲೆ ಎಲ್ಲರ ಕಣ್ಣಿತ್ತು. ಶನಿವಾರ ಸಂಸತ್ತಿನಲ್ಲಿ ಮಂಡನೆಯಾದ ಬಜೆಟ್‌ನಲ್ಲಿ ವಿವಿಧ ವಲಯಗಳಿಗೆ ಸಾವಿರಾರು ಕೋಟಿ ರುಪಾಯಿಗಳಲ್ಲಿ ಅನುದಾನವನ್ನು ಘೋಷಣೆ ಮಾಡಲಾಗಿದೆ. ನೂತನ ಯೋಜನೆಗಳ ಜೊತೆಗೆ ಹಳೆಯ ಯೋಜನೆಗಳ ವಿಸ್ತರಣೆ ಮಾಡಲಾಗಿದೆ.

2020ರ ಕೇಂದ್ರ ಬಜೆಟ್‌ನಲ್ಲಿ ಯಾವ ವಲಯಕ್ಕೆ ಎಷ್ಟು ಅನುದಾನ ನೀಡಲಾಗಿದೆ? ಯಾವ ಯೋಜನೆಗಳಿಗೆ , ಕ್ಷೇತ್ರಗಳಿಗೆ ಘೋಷಣೆಯಾದ ಹಣವೆಷ್ಟು ಎಂಬುದರ ಮಾಹಿತಿ ಈ ಕೆಳಕಂಡಂತಿದೆ.

ಬಜೆಟ್‌ನ ಅತ್ಯಂತ ಪ್ರಮುಖ ಅಂಶಗಳು

ಬಜೆಟ್‌ನ ಅತ್ಯಂತ ಪ್ರಮುಖ ಅಂಶಗಳು

- ಮಾರ್ಚ್‌ 2014 ರಲ್ಲಿ 52.2 ಪರ್ಸೆಂಟ್‌ನಷ್ಟಿದ್ದ ಕೇಂದ್ರ ಸರ್ಕಾರದ ಸಾಲದ ಪ್ರಮಾಣವು, ಮಾರ್ಚ್‌ 2019ಕ್ಕೆ 48.7 ಪರ್ಸೆಂಟ್‌ಗೆ ಇಳಿಕೆಯಾಗಿದೆ.

- ವಿತ್ತೀಯ ಕೊರತೆಯನ್ನು ಜಿಡಿಪಿಯ 3.8 ಪರ್ಸೆಂಟ್ ನಿಂದ 3.5 ಪರ್ಸೆಂಟ್ಗೆ ಇಳಿಸಲು ಗುರಿ

- 2014 ರಿಂದ 2019ರ ಅವಧಿಯಲ್ಲಿ 284 ಬಿಲಿಯನ್ ಡಾಲರ್‌ನಷ್ಟು ಎಫ್‌ಡಿಐ (ವಿದೇಶಿ ನೇರ ಹೂಡಿಕೆ) ಪಡೆಯಲಾಗಿದೆ.

- 2019-20 ನೇ ಸಾಲಿನ ಹಣಕಾಸು ವರ್ಷದ ಖರ್ಚು ಅಂದಾಜು 26.99 ಲಕ್ಷ ಕೋಟಿ ರುಪಾಯಿಗಳು

- 2021ನೇ ಹಣಕಾಸು ವರ್ಷದ ಪರಿಷ್ಕೃತ ಸ್ವೀಕೃತಿ 19.32 ಲಕ್ಷ ಕೋಟಿ ರುಪಾಯಿಗಳು

- 2022ರ ವೇಳೆಗೆ ರೈತರ ಆದಾಯವನ್ನು ದ್ವಿಗುಣಗೊಳಿಸಲು 16 ಕಾರ್ಯ ತಂತ್ರಗಳನ್ನು ಪ್ರಸ್ತಾಪಿಸಲಾಗಿದೆ.

- ಮೊಬೈಲ್‌, ಅರೆವಾಹಕಗಳು (ಸೆಮಿಕಂಡಕ್ಟರ್) ಮತ್ತು ಇತರೆ ಎಲೆಕ್ಟ್ರಾನಿಕ್‌ ಸಾಧನಗಳ ತಯಾರಿಕೆಗೆ ಒಂದು ಯೋಜನೆಯನ್ನು ಪ್ರಸ್ತಾಪಿಸಲಾಗಿದೆ.

 

2020-21ರ ಹಣಕಾಸು ವರ್ಷದ ಆದಾಯ ತೆರಿಗೆಯಲ್ಲಿನ ಬದಲಾವಣೆ

2020-21ರ ಹಣಕಾಸು ವರ್ಷದ ಆದಾಯ ತೆರಿಗೆಯಲ್ಲಿನ ಬದಲಾವಣೆ

- 5 ಲಕ್ಷದವರೆಗೆ ಆದಾಯ ಪಡೆಯುವವರಿಗೆ ಯಾವುದೇ ತೆರಿಗೆ ಇಲ್ಲ

- 5 ರಿಂದ 7.5 ಲಕ್ಷದವರೆಗೆ ಆದಾಯಗಳಿಸುವವರಿಗೆ 10 ಪರ್ಸೆಂಟ್ ತೆರಿಗೆ, ಪ್ರಸ್ತುತ 20 ಪರ್ಸೆಂಟ್ ಆದಾಯ ತೆರಿಗೆಯನ್ನು ಪಾವತಿಸಬೇಕಾಗಿತ್ತು

- 7.5 ರಿಂದ 10 ಲಕ್ಷದವರೆಗೆ ಆದಾಯ ಪಡೆಯುವವರಿಗೆ 15 ಪರ್ಸೆಂಟ್ ತೆರಿಗೆ, ಪ್ರಸ್ತುತ 20 ಪರ್ಸೆಂಟ್ ಆದಾಯ ತೆರಿಗೆಯಿತ್ತು.

-10 ರಿಂದ 12.5 ಲಕ್ಷದವರೆಗೆ ಆದಾಯಕ್ಕೆ 20 ಪರ್ಸೆಂಟ್ ತೆರಿಗೆ, ಪ್ರಸ್ತುತ 30 ಪರ್ಸೆಂಟ್‌ನಷ್ಟು ತೆರಿಗೆಯಿತ್ತು.

-12.5 ರಿಂದ 15 ಲಕ್ಷದವರೆಗೆ ಆದಾಯಕ್ಕೆ 25 ಪರ್ಸೆಂಟ್ ತೆರಿಗೆ, ಪ್ರಸ್ತುತ 30 ಪರ್ಸೆಂಟ್‌ನಷ್ಟು ತೆರಿಗೆಯಿತ್ತು.

-15 ಲಕ್ಷ ಮೇಲ್ಪಟ್ಟು ಆದಾಯ ಪಡೆಯುವವರು 30 ಪರ್ಸೆಂಟ್ ತೆರಿಗೆ ಪಾವತಿಸಬೇಕಾಗಿದ್ದು ಯಾವುದೇ ತೆರಿಗೆ ದರ ಬದಲಾವಣೆ ಇಲ್ಲ.

 

ಬ್ಯಾಂಕಿಂಗ್ ಮತ್ತು ಹಣಕಾಸು

ಬ್ಯಾಂಕಿಂಗ್ ಮತ್ತು ಹಣಕಾಸು

- ಬ್ಯಾಂಕ್‌ನಲ್ಲಿ ನೀವು ಇಟ್ಟ ಠೇವಣಿ ಏನಾದರೂ ನೈಸರ್ಗಿಕ ವಿಕೋಪಗಳು, ಇಲ್ಲವೆ ಕಳ್ಳತನವಾಗಿದ್ದರೆ 1 ಲಕ್ಷದವರೆಗೆ ಪರಿಹಾರ ಮೊತ್ತವನ್ನು ನೀಡಲಾಗುತ್ತಿತ್ತು. ಇದೀಗ ಈ ಬಜೆಟ್‌ನಲ್ಲಿ ಪರಿಹಾರ ಮೊತ್ತವನ್ನು ಐದು ಪಟ್ಟು ಹೆಚ್ಚಿಸಲಾಗಿದ್ದು, ನೀವಿಟ್ಟ ಠೇವಣಿಗೆ ಪರಿಹಾರವಾಗಿ ಐದು ಲಕ್ಷ ರುಪಾಯಿ ನೀಡಲಾಗುವುದು

- ಎನ್‌ಬಿಎಫ್‌ಸಿಗಳಿಗೆ ಸರ್ಫೇಸಿ ಕಾಯ್ದೆಯಡಿ ಸಾಲ ಮರುಪಡೆಯುವಿಕೆಗೆ ಅರ್ಹತಾ ಮಿತಿಯನ್ನು 100 ಕೋಟಿ ರೂ.ಗಳ ಆಸ್ತಿ ಗಾತ್ರಕ್ಕೆ ಅಥವಾ ಸಾಲದ ಗಾತ್ರ 50 ಲಕ್ಷಕ್ಕೆ ಇಳಿಸಲು ಪ್ರಸ್ತಾಪಿಸಲಾಗಿದೆ.

- ಐಡಿಬಿಐ ಬ್ಯಾಂಕಿನಲ್ಲಿ ಸರ್ಕಾರದ ಬ್ಯಾಲೆನ್ಸ್ ಹೋಲ್ಡಿಂಗ್ ಅನ್ನು ಮಾರಾಟ ಮಾಡುವ ಪ್ರಸ್ತಾಪ

- ಸರ್ಕಾರಿ ನೌಕರರಿಗೆ ಎನ್‌ಪಿಎಸ್ ಟ್ರಸ್ಟ್ ಅನ್ನು ಪಿಎಫ್‌ಆರ್‌ಡಿಎಐನಿಂದ ಬೇರ್ಪಡಿಸುವುದು

 

ಮಾರುಕಟ್ಟೆ

ಮಾರುಕಟ್ಟೆ

-ಎಲ್‌ಐಸಿಯನ್ನು ಷೇರು ವಿನಿಮಯ ಕೇಂದ್ರಗಳಲ್ಲಿ ಪಟ್ಟಿ ಮಾಡಲು ಸರ್ಕಾರ ಅನುಮೋದನೆ. ಎಲ್‌ಐಸಿಯಲ್ಲಿನ ಸರ್ಕಾರಿ ಹೂಡಿಕೆ ಅಲ್ಪ ಪ್ರಮಾಣದ ಮಾರಾಟ

-ಲಾಭಾಂಶ ವಿತರಣಾ ತೆರಿಗೆಯನ್ನು ತೆಗೆದುಹಾಕಲಾಗಿದೆ

-ಸರ್ಕಾರಿ ಭದ್ರತೆಗಳನ್ನು ಒಳಗೊಂಡಿರುವ ಸಾಲ ಇಟಿಎಫ್ ಅನ್ನು ಪ್ರಾರಂಭಿಸಲಾಗುವುದು

-ಅನಿವಾಸಿ ಹೂಡಿಕೆದಾರರಿಗೆ ಸರ್ಕಾರಿ ಭದ್ರತೆಗಳ ನಿರ್ದಿಷ್ಟ ವರ್ಗಗಳನ್ನು ತೆರೆಯಲಾಗುತ್ತದೆ

- ಕಾರ್ಪೊರೇಟ್ ಬಾಂಡ್‌ಗಳ ಎಫ್‌ಪಿಐ ಮಿತಿಯನ್ನು 15 ಪರ್ಸೆಂಟ್ ಹೆಚ್ಚಿಸಬೇಕು.

 

ಯಾವ ವಲಯಕ್ಕೆ ಎಷ್ಟು ಅನುದಾನ ಮತ್ತು ಗುರಿ

ಯಾವ ವಲಯಕ್ಕೆ ಎಷ್ಟು ಅನುದಾನ ಮತ್ತು ಗುರಿ

2.83 ಲಕ್ಷ ಕೋಟಿ : ಕೃಷಿ ಮತ್ತು ಗ್ರಾಮೀಣಾಭಿವೃದ್ಧಿ

15 ಲಕ್ಷ ಕೋಟಿ : ಕೃಷಿ ಸಾಲ ಗುರಿ

1.7 ಲಕ್ಷ ಕೋಟಿ: ಸಾರಿಗೆ ಮೂಲಸೌಕರ್ಯ

27,300 ಕೋಟಿ: ಕೈಗಾರಿಕೆ ಮತ್ತು ವಾಣಿಜ್ಯ ಅಭಿವೃದ್ಧಿ

3,000 ಕೋಟಿ : ಕೌಶಲ್ಯ ಅಭಿವೃದ್ದಿ

69, 000 ಕೋಟಿ: ಆರೋಗ್ಯ ಕ್ಷೇತ್ರ

12,300 ಕೋಟಿ : ಸ್ವಚ್ಛ ಭಾರತ ಮಿಷನ್

53,700 ಕೋಟಿ: ಬುಡಕಟ್ಟು ಜನಾಂಗ ಕಲ್ಯಾಣ ಯೋಜನೆಗಳು

85,000 ಕೋಟಿ : ಎಸ್‌ಸಿ, ಒಬಿಸಿ ವರ್ಗಗಳ ಕಲ್ಯಾಣ ಯೋಜನೆಗಳು

3.6 ಲಕ್ಷ ಕೋಟಿ : ಜಲ ಜೀವನ ಯೋಜನೆ

4,400 ಕೋಟಿ: ಹವಾಮಾನ ಬದಲಾವಣೆ ಯೋಜನೆಗಳಿಗಾಗಿ

99,300 ಕೋಟಿ: ಶಿಕ್ಷಣ ಕ್ಷೇತ್ರ

2,500 ಕೋಟಿ: ಪ್ರವಾಸೋದ್ಯಮ ಅಭಿವೃದ್ಧಿ

9,500 ಕೋಟಿ: ಹಿರಿಯ ನಾಗರೀಕರು ಮತ್ತು ದಿವ್ಯಾಂಗರ ಕಲ್ಯಾಣ ಯೋಜನೆಗಳು

3,150 ಕೋಟಿ: ಸಂಸ್ಕೃತಿ ಇಲಾಖೆ

6,000 ಕೋಟಿ: ಹಳ್ಳಿಗಳಲ್ಲಿ ಬ್ರಾಡ್‌ಬ್ಯಾಂಡ್ ಇಂಟರ್‌ನೆಟ್ ಸೇವೆ ಒದಗಿಸುವ ಭಾರತ್ ನೆಟ್‌ ಯೋಜನೆ

28,600 ಕೋಟಿ: ಮಹಿಳಾ ನಿರ್ದಿಷ್ಟ ಕಾರ್ಯಕ್ರಮಗಳು

22,000 ಕೋಟಿ:ಇಂಧನ ಮತ್ತು ನವೀಕರಿಸಬಹುದಾದ ಶಕ್ತಿ

1,480 ಕೋಟಿ: ರಾಷ್ಟ್ರೀಯ ತಾಂತ್ರಿಕ ಜವಳಿ ಮಿಷನ್

 

ರೈಲ್ವೆ, ರಸ್ತೆ ಮತ್ತು ನಾಗರಿಕ ವಿಮಾನಯಾನ

ರೈಲ್ವೆ, ರಸ್ತೆ ಮತ್ತು ನಾಗರಿಕ ವಿಮಾನಯಾನ

- ಪಿಪಿಪಿ (ಸಾರ್ವಜನಿಕ-ಖಾಸಗಿ ಸಹಭಾಗಿತ್ವ) ಮಾದರಿಯಲ್ಲಿ 150 ರೈಲುಗಳ ಓಡಾಟ ಆರಂಭಿಸುವುದು

- ಪ್ರವಾಸಿ ತಾಣಗಳಿಗೆ ಹೆಚ್ಚಿನ ತೇಜಸ್ ಮಾದರಿಯ ರೈಲುಗಳು

-ಖಾಸಗಿ ಸಹಭಾಗಿತ್ವದಲ್ಲಿ ನಾಲ್ಕು ರೈಲ್ವೇ ನಿಲ್ದಾಣಗಳ ಅಭಿವೃದ್ಧಿ

- ಬೆಂಗಳೂರಿನ ಉಪನಗರ ರೈಲು ಯೋಜನೆ ಪೂರ್ಣಗೊಳಿಸಲು 18,600 ಕೋಟಿ ರುಪಾಯಿ

- 2023ರ ವೇಳಗೆ ದೆಹಲಿ-ಮುಂಬೈ ಎಕ್ಸ್‌ಪ್ರೆಸ್ ಹೆದ್ದಾರಿ ಪೂರ್ಣಗೊಳ್ಳುವುದು

- ಪಿಪಿಪಿ ಮಾದರಿಯಲ್ಲಿ ಭಾರತೀಯ ರೈಲ್ವೆ ಶೀತ ಪೂರೈಕೆ ಸರಪಳಿಯನ್ನು ಸ್ಥಾಪಿಸಲು 'ಕಿಸಾನ್ ರೈಲು' ಸ್ಥಾಪಿಸುವುದು

- ಉದ್ದಾನ್ ಅಡಿಯಲ್ಲಿ ನೂರಕ್ಕೂ ಹೆಚ್ಚು ವಿಮಾನ ನಿಲ್ದಾಣಗಳ ಸ್ಥಾಪನೆಯ ಗುರಿ

 

ಕೃಷಿ ಮತ್ತು ಗ್ರಾಮೀಣಾಭಿವೃದ್ಧಿ

ಕೃಷಿ ಮತ್ತು ಗ್ರಾಮೀಣಾಭಿವೃದ್ಧಿ

- ಪಿಎಂ ಕುಸುಮ್ ಯೋಜನೆಯಡಿ ೨೦ ಲಕ್ಷ ರೈತರಿಗೆ ಸೋಲಾರ್ ಪಂಪ್‌ಗಳು ಮತ್ತು ೧೫ ಲಕ್ಷ ರೈತರಿಗೆ ಗ್ರಿಡ್ ಕನೆಕ್ಟೆಡ್ ಪಂಪ್‌ಗಳು ತಲುಪುವಂತೆ ಮಾಡುವುದು.


- ಪಿಪಿಪಿ ಮಾದರಿಯಲ್ಲಿ ದಕ್ಷ ಗೋದಾಮುಗಳ ರಚನೆಗೆ ನಿಧಿಗಳ ಸ್ಥಾಪನೆ


- ಸ್ವಸಹಾಯ ಗುಂಪುಗಳು ಪ್ರಾರಂಭಿಸಲು ಗ್ರಾಮ ಸಂಗ್ರಹಣೆ ಯೋಜನೆಯನ್ನು ನಡೆಸುತ್ತವೆ.


- ಇ-ನ್ಯಾಮ್‌ನೊಂದಿಗೆ ಇ-ಎನ್‌ಡಬ್ಲ್ಯೂಆರ್ ಸಂಯೋಜನೆ


- 2025ರ ಹೊತ್ತಿಗೆ ಹಾಲು ಉತ್ಪಾದನೆಯನ್ನು ದ್ವಿಗುಣಗೊಳಿಸುವುದು


- 15 ಲಕ್ಷ ಕೋಟಿ ರುಪಾಯಿ ಕೃಷಿ ಸಾಲದ ಗುರಿ


- 2022-23ರ ವೇಳೆಗೆ 200 ಟನ್‌ಗಳಷ್ಟು ಮೀನು ಉತ್ಪಾದನಾ ಗುರಿ


- 2024-25 ರ ಹೊತ್ತಿಗೆ ಮೀನುಗಾರಿಕೆ ರಫ್ತು 1 ಲಕ್ಷ ಕೋಟಿಗೆ ಹೆಚ್ಚಿಸುವುದು

- ಪಿಎಂ ಕುಸುಮ್ ಯೋಜನೆಯಡಿ ೨೦ ಲಕ್ಷ ರೈತರಿಗೆ ಸೋಲಾರ್ ಪಂಪ್‌ಗಳು ಮತ್ತು ೧೫ ಲಕ್ಷ ರೈತರಿಗೆ ಗ್ರಿಡ್ ಕನೆಕ್ಟೆಡ್ ಪಂಪ್‌ಗಳು ತಲುಪುವಂತೆ ಮಾಡುವುದು.


- ಪಿಪಿಪಿ ಮಾದರಿಯಲ್ಲಿ ದಕ್ಷ ಗೋದಾಮುಗಳ ರಚನೆಗೆ ನಿಧಿಗಳ ಸ್ಥಾಪನೆ


- ಸ್ವಸಹಾಯ ಗುಂಪುಗಳು ಪ್ರಾರಂಭಿಸಲು ಗ್ರಾಮ ಸಂಗ್ರಹಣೆ ಯೋಜನೆಯನ್ನು ನಡೆಸುತ್ತವೆ.


- ಇ-ನ್ಯಾಮ್‌ನೊಂದಿಗೆ ಇ-ಎನ್‌ಡಬ್ಲ್ಯೂಆರ್ ಸಂಯೋಜನೆ


- 2025ರ ಹೊತ್ತಿಗೆ ಹಾಲು ಉತ್ಪಾದನೆಯನ್ನು ದ್ವಿಗುಣಗೊಳಿಸುವುದು


- 15 ಲಕ್ಷ ಕೋಟಿ ರುಪಾಯಿ ಕೃಷಿ ಸಾಲದ ಗುರಿ


- 2022-23ರ ವೇಳೆಗೆ 200 ಟನ್‌ಗಳಷ್ಟು ಮೀನು ಉತ್ಪಾದನಾ ಗುರಿ


- 2024-25 ರ ಹೊತ್ತಿಗೆ ಮೀನುಗಾರಿಕೆ ರಫ್ತು 1 ಲಕ್ಷ ಕೋಟಿಗೆ ಹೆಚ್ಚಿಸುವುದು

 

English summary

Highlights Of Central Budget 2020

In this article given Highlights Of Central Budget 2020
Story first published: Saturday, February 1, 2020, 17:58 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X