For Quick Alerts
ALLOW NOTIFICATIONS  
For Daily Alerts

ಭಾರತದಲ್ಲಿ ನೇಮಕಾತಿ ಚಟುವಟಿಕೆ ನವೆಂಬರ್‌ನಲ್ಲಿ ಶೇ. 26 ಏರಿಕೆ

|

ಕಳೆದ ವರ್ಷಕ್ಕೆ ಹೋಲಿಕೆ ಮಾಡಿದಾಗ ಈ ವರ್ಷದ ನವೆಂಬರ್‌ನಲ್ಲಿ ಭಾರತದಲ್ಲಿ ನೇಮಕಾತಿ ಪ್ರಕ್ರಿಯೆಯು ಶೇಕಡ 26 ರಷ್ಟು ಅಧಿಕವಾಗಿದೆ ಎಂದು ನೌಕ್ರಿ ಜಾಬ್‌ಸ್ಪೀಕ್ ಸೂಚ್ಯಂಕವು ಉಲ್ಲೇಖ ಮಾಡಿದೆ. ಹೆಚ್ಚಿದ ಚಿಲ್ಲರೆ ಬೇಡಿಕೆ, ಹಬ್ಬ ಹಾಗೂ ಶಿಕ್ಷಣ ಸಂಸ್ಥೆಗಳು ಮತ್ತೆ ತೆರೆದ ಹಿನ್ನೆಲೆಯಿಂದಾಗಿ ದೇಶದಲ್ಲಿ ನೇಮಕಾತಿ ಪ್ರಕ್ರಿಯೆಯು ನವೆಂಬರ್ 2021 ರಲ್ಲಿ ಕಳೆದ ವರ್ಷಕ್ಕಿಂತ ಶೇಕಡ 26 ರಷ್ಟು ಹೆಚ್ಚಾಗಿದೆ.

2020 ರ ನವೆಂಬರ್‌ ತಿಂಗಳಿನಲ್ಲಿ ದೇಶದಲ್ಲಿ 1,727 ನೇಮಕಾತಿ ಪ್ರಕ್ರಿಯೆಯು ನಡೆದಿತ್ತು. ಆದರೆ 2021 ರ ನವೆಂಬರ್‌ ತಿಂಗಳಿನಲ್ಲಿ 2,173 ನೇಮಕಾತಿ ನಡೆದಿದೆ ಎಂದಿ ನೌಕ್ರಿ ಜಾಬ್‌ಸ್ಪೀಕ್ ಸೂಚ್ಯಂಕ ತಿಳಿಸಿದೆ. ಇನ್ನು ಈ ಬೆಳವಣಿಗೆಯು ಕಂಡ ಕ್ಷೇತ್ರವು ಚಿಲ್ಲರೆ ವ್ಯಾಪಾರ, ಶಿಕ್ಷಣ ಆಗಿದೆ. ವಾಸ್ತವವಾಗಿ, ಚಿಲ್ಲರೆ ವಲಯವು ಈ ಅವಧಿಗೆ 47 ಶೇಕಡದಷ್ಟು ಬೆಳವಣಿಗೆ ಆಗಿದೆ. ಹಬ್ಬದ ಈ ಋತುವಿನ ಸಂದರ್ಭದಲ್ಲಿ ಚೇತರಿಕೆಯು ಕಂಡು ಬಂದಿದೆ.

ಇನ್ನು ಹಾಸ್ಪಿಟಲಿಟಿ ಹಾಗೂ ಪ್ರಯಾಣ ಕ್ಷೇತ್ರವು ಶೇಕಡ 58 ರಷ್ಟು ಬೆಳವಣಿಗೆ ಆಗಿದೆ. ಆದರೆ ಶಿಕ್ಷಣ ಶಿಕ್ಷಣ ಕ್ಷೇತ್ರವು ಕಳೆದ ವರ್ಷಕ್ಕೆ ಹೋಲಿಕೆ ಮಾಡಿದಾಗ ಈ ವರ್ಷದಲ್ಲಿ 54 ಶೇಕಡದಷ್ಟು ಜಿಗಿತ ಕಂಡಿದೆ. ಈ ಬಗ್ಗೆ ಮಾಹಿತಿ ನೀಡಿರುವ Naukri.com ನ ಮುಖ್ಯ ವ್ಯಾಪಾರ ಅಧಿಕಾರಿ ಪವನ್ ಗೋಯಲ್, "ಕೊರೊನಾ ವೈರಸ್‌ ಸೋಂಕಿನಿಂದಾಗಿ ಅತೀ ಹೆಚ್ಚು ಪ್ರಭಾವಕ್ಕೆ ಒಳಗಾದ ಎರಡು ಕ್ಷೇತ್ರಗಳು ಆತಿಥ್ಯ/ಪ್ರಯಾಣ ಮತ್ತು ಚಿಲ್ಲರೆ ಉದ್ಯಮವಾಗಿದೆ. ಅದು ಈಗ ಕೊಂಚ ಚೇತರಿಕೆ ಕಾಣುತ್ತಿದೆ," ಎಂದು ತಿಳಿಸಿದ್ದಾರೆ.

ನೇಮಕಾತಿ ಸೇರಿ ಬೇರೆ ಯಾವ ಕ್ಷೇತ್ರ ಬೆಳವಣಿಗೆ?

ನೇಮಕಾತಿ ಸೇರಿ ಬೇರೆ ಯಾವ ಕ್ಷೇತ್ರ ಬೆಳವಣಿಗೆ?

ಈ ನಡುವೆ ನೇಮಕಾತಿ ಚಟುವಟಿಕೆಯೂ ಕೂಡಾ ದೇಶದಲ್ಲಿ ಅಧಿಕವಾಗಿದೆ. ಕಳೆದ ವರ್ಷದ ನವೆಂಬರ್‌ಗೆ ಹೋಲಿಸಿದರೆ, ಉದ್ಯೋಗ ಸೃಷ್ಟಿ ಕ್ಷೇತ್ರಗಳಾದ ಬ್ಯಾಂಕಿಂಗ್ ಮತ್ತು ಹಣಕಾಸು ಸೇವೆಗಳಲ್ಲಿ 30 ಪ್ರತಿಶತದಷ್ಟು ಜಿಗಿತ ಕಂಡು ಬಂದಿದೆ. ಇನ್ನು ಐಟಿ ಹಾಗೂ ಸಾಫ್ಟ್‌ವೇರ್‌ ಕ್ಷೇತ್ರದಲ್ಲಿ ಶೇಕಡ 50 ಕ್ಕಿಂತ ಅಧಿಕ ಬೆಳವಣಿಗೆಗಳು ಕಂಡು ಬಂದಿದೆ. ಬೆಳವಣಿಗೆ ಹೊಂದುತ್ತಿರುವ ಮತ್ತೊಂದು ಪ್ರಮುಖ ವಲಯ ಟೆಲಿಕಾಂ ಮತ್ತು ಐಎಸ್‌ಪಿ ಆಗಿದೆ. ಈ ನಡುವೆ ವೈದ್ಯಕೀಯ ಮತ್ತು ಆರೋಗ್ಯ ಹಾಗೂ ಎಫ್‌ಎಂಸಿಜಿಯಂತಹ ವಲಯಗಳು ಕ್ರಮವಾಗಿ 3 ಪ್ರತಿಶತ ಮತ್ತು 6 ಪ್ರತಿಶತದಷ್ಟು ನಿಧಾನಗತಿಯಾಗಿ ಬೆಳವಣಿಗೆ ಹೊಂದಿದೆ.

ಮೆಟ್ರೋ ಶ್ರೇಣಿ ನಗರದಲ್ಲಿ ನೇಮಕಾತಿ ಹೆಚ್ಚಳ

ಮೆಟ್ರೋ ಶ್ರೇಣಿ ನಗರದಲ್ಲಿ ನೇಮಕಾತಿ ಹೆಚ್ಚಳ

ಎಲ್ಲಾ ಪ್ರಮುಖ ನಗರಗಳಲ್ಲಿ ನೇಮಕಾತಿ ಪ್ರಕ್ರಿಯೆಯು ಉತ್ತಮವಾಗಿ ನಡೆಯುತ್ತಿದೆ. ಈ ನಡುವೆ ಮೆಟ್ರೋ ನಗರಗಳಲ್ಲಿ ಹಾಗೂ ಶ್ರೇಣಿ II ನಗರಗಳಲ್ಲಿ ನೇಮಕಾತಿ ಬೆಳವಣಿಗೆಯು ಕ್ರಮವಾಗಿ 39 ಶೇಕಡ ಹಾಗೂ 16 ಶೇಕಡ ಆಗಿದೆ. ಐಟಿ-ಸಾಫ್ಟ್‌ವೇರ್ ಮತ್ತು ಬಿಎಫ್‌ಎಸ್‌ಐ ವಲಯಗಳ ನಿರಂತರ ಬೆಳವಣಿಗೆಯಾಗಿದ್ದು, ವಾರ್ಷಿಕ ಬೆಳವಣಿಗೆಯ ಚಾರ್ಟ್‌ಗಳಲ್ಲಿ ಮೆಟ್ರೋಗಳು ಶ್ರೇಣಿ - II ಪ್ರದೇಶಕ್ಕಿಂತ ಹೆಚ್ಚು ಬೆಳವಣಿಗೆಯನ್ನು ಕಂಡಿದೆ.

ಎಲ್ಲಿ ಎಷ್ಟು ಪ್ರತಿಶತ ಬೆಳವಣಿಗೆ ಕಂಡಿದೆ?

ಎಲ್ಲಿ ಎಷ್ಟು ಪ್ರತಿಶತ ಬೆಳವಣಿಗೆ ಕಂಡಿದೆ?

ಹೈದರಾಬಾದ್ +47 ಶೇಕಡ, ಪುಣೆ +47 ಶೇಕಡ ಮತ್ತು ಬೆಂಗಳೂರು +49 ಶೇಕಡ, ನವೆಂಬರ್‌ನಲ್ಲಿ ಅತ್ಯಧಿಕ ಬೆಳವಣಿಗೆಯನ್ನು ದಾಖಲಿಸಿವೆ. ಮುಂಬೈ +36 ಪ್ರತಿಶತ, ದೆಹಲಿ/ಎನ್‌ಸಿಆರ್ +34 ಪ್ರತಿಶತ ಮತ್ತು ಚೆನ್ನೈನಲ್ಲಿ +35 ಪ್ರತಿಶತ ನೇಮಕಾತಿ ದಾಖಲಾಗಿದೆ. ಆದರೆ ಕೊಲ್ಕತ್ತಾದಲ್ಲಿ +23 ಪ್ರತಿಶತ ಬೆಳವಣಿಗೆ ದಾಖಲು ಆಗಿದ್ದು, ನಿಧಾನಗತಿಯಾಗಿ ಬೆಳವಣಿಗೆ ಕಂಡು ಬಂದಿದೆ. ಮೆಟ್ರೋ ಅಲ್ಲದ ನಗರಗಳಾದ ಅಹಮದಾಬಾದ್‌ನಲ್ಲಿ +61 ಪ್ರತಿಶತ ಬೆಳವಣಿಗೆ ಆಗಿದ್ದು, 2021 ರ ನವೆಂಬರ್‌ನಲ್ಲಿ ಗರಿಷ್ಠ ಬೆಳವಣಿಗೆಯನ್ನು ಕಂಡಿದೆ. ಕೊಯಮತ್ತೂರಿನಲ್ಲಿ +28 ಪ್ರತಿಶತ ಬೆಳವಣಿಗೆ ಕಂಡು ಬಂದಿದೆ.

ಹಿರಿಯ ವೃತ್ತಿಪರರಿಗೆ ಅಧಿಕ ಬೇಡಿಕೆ

ಹಿರಿಯ ವೃತ್ತಿಪರರಿಗೆ ಅಧಿಕ ಬೇಡಿಕೆ

ಇನ್ನು ಬೇಡಿಕೆಯ ವಿಚಾರಕ್ಕೆ ಬಂದಾಗ ಹೆಚ್ಚಾಗಿ ಹಿರಿಯ ವೃತ್ತಿಪರರಿಗೆ ಆದ್ಯತೆ ನೀಡಲಾಗುತ್ತಿದೆ. ಉತ್ತಮವಾದ ಉದ್ಯೋಗ ಪ್ರೊಫೈಲ್‌ ಹೊಂದಿರುವ, ವೃತ್ತಿಯಲ್ಲಿ ಅಧಿಕ ಅನುಭವ ಇರುವವರಿಗೆ ಕಳೆದ ವರ್ಷಕ್ಕೆ ಹೋಲಿಸಿದರೆ ಅಧಿಕ ಆದ್ಯತೆ ಈ ಬಾರಿ ನೀಡಲಾಗುತ್ತಿದೆ. ಹಿರಿಯ ವೃತ್ತಿಪರರು ಅಂದರೆ 8-12 ವರ್ಷಗಳ ಅನುಭವ ಹೊಂದಿರುವವರಿಗೆ ಬೇಡಿಕೆ 37 ಪ್ರತಿಶತದಷ್ಟು ಜಿಗಿತ ಕಂಡಿದೆ.

English summary

Hiring activity in India grew 26% YoY in November Says Naukri JobSpeak

Hiring activity in India grew 26% YoY in November Says Naukri JobSpeak.
Story first published: Tuesday, December 7, 2021, 13:50 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X