For Quick Alerts
ALLOW NOTIFICATIONS  
For Daily Alerts

ಹಾಂಕಾಂಗ್ ನಿವಾಸಿಗಳಿಗೆ 10,000 ಡಾಲರ್ ನೀಡಲು ಸರ್ಕಾರದ ಸಿದ್ಧತೆ

|

ಹಾಂಕಾಂಗ್ ಸರ್ಕಾರದ ವಾರ್ಷಿಕ ಬಜೆಟ್ ನಲ್ಲಿ ಅಲ್ಲಿನ ಎಲ್ಲ ಶಾಶ್ವತ ನಿವಾಸಿಗಳಿಗೆ 10,000 ಹಾಂಕಾಂಗ್ ಡಾಲರ್ (ಭಾರತೀಯ ರುಪಾಯಿಗಳಲ್ಲಿ 92,000) ನಗದು ನೀಡಲು ಸಿದ್ಧತೆ ನಡೆಸಿದೆ. ಕೊರೊನಾ ವೈರಾಣು ವ್ಯಾಪಿಸಿರುವುದು ಹಾಗೂ ತಿಂಗಳಗಟ್ಟಲೆ ನಡೆದ ಸರ್ಕಾರದ ವಿರುದ್ಧದ ಪ್ರತಿಭಟನೆಯಿಂದ ಹೈರಾಣಾಗಿರುವವರಿಗೆ ಪರಿಹಾರ ರೂಪದಲ್ಲಿ ನೀಡಲು ಯೋಚಿಸಲಾಗಿದೆ.

ಹಾಂಕಾಂಗ್ ನ ಶಾಶ್ವತ ನಿವಾಸಿಗಳಾಗಿರಬೇಕು ಹಾಗೂ 18 ವರ್ಷ ವಯಸ್ಸಿನ ಮೇಲ್ಪಟ್ಟವರಾಗಿರಬೇಕು ಎಂಬುದು ಷರತ್ತು. ಇದಕ್ಕಾಗಿ 12 ಸಾವಿರ ಕೋಟಿ ಹಾಂಕಾಂಗ್ ಡಾಲರ್ ಮೀಸಲಿಡಲಾಗುತ್ತದೆ ಎನ್ನಲಾಗುತ್ತಿದೆ. ಅದರೊಳಗೆ ಸಣ್ಣ ವ್ಯಾಪಾರದ ಸಾಲಗಳಿಗೆ ಗ್ಯಾರಂಟಿ ಕೂಡ ಒಳಗೊಂಡಿರುತ್ತದೆ ಎಂದು ಸೌತ್ ಚೀನಾ ಮಾರ್ನಿಂಗ್ ಪೋಸ್ಟ್ ವರದಿ ಮಾಡಿದೆ.

2019ರ ಮೊದಲಾರ್ಧದಲ್ಲಿ ಅದಾಗಲೇ ಹಾಂಕಾಂಗ್ ಆರ್ಥಿಕತೆ ಸ್ವಲ್ಪ ದುರ್ಬಲವಾಗಿತ್ತು. ಅದರ ಜತೆಗೆ ಅಲ್ಲಿ ನಡೆದ ಪ್ರತಿಭಟನೆಗಳಿಂದ ಆರ್ಥಿಕತೆಯಲ್ಲಿ ಕುಸಿತ ಕಾಣಿಸಿಕೊಂಡಿತು. 2009ರ ಆರ್ಥಿಕ ಕುಸಿತದ ನಂತರದ ಮೊದಲ ಬಾರಿಗೆ ವಾರ್ಷಿಕ ಪ್ರಗತಿಯಲ್ಲಿ ಕುಸಿತ ಕಂಡುಬಂದಿತು.

ಹಾಂಕಾಂಗ್ ನಿವಾಸಿಗಳಿಗೆ 10,000 ಡಾಲರ್ ನೀಡಲು ಸರ್ಕಾರದ ಸಿದ್ಧತೆ

ಚೀನಾ ಆಡಳಿತ ನಡೆಸುತ್ತಿರುವ ನಗರದ ನಾಯಕ ಕ್ಯಾರಿ ಲ್ಯಾಮ್ ಈಗಾಗಲೇ 3 ಸಾವಿರ ಕೋಟಿ ಹಾಂಕಾಂಗ್ ಡಾಲರ್ ಮೌಲ್ಯದ ಕ್ರಮಗಳ ಪ್ರಸ್ತಾವ ಮಾಡಿದ್ದಾರೆ. ಸಣ್ಣ ಮತ್ತು ಮಧ್ಯಮ ಗಾತ್ರದ ಕಂಪೆನಿಗಳು, ಕಡಿಮೆ ಆದಾಯದ ಕುಟುಂಬಗಳಿಗೆ ಕೊರೊನಾ ಸಮಸ್ಯೆಯಿಂದ ಹೊರಬರಲು ನೆರವು ನೀಡುವುದು ಇದರ ಉದ್ದೇಶವಾಗಿದೆ.

English summary

Hong Kong Set To Announce 10 Thousand Dollars To Permanent Residents

The Hong Kong government is set to announce a cash handout of HK$10,000 to every permanent resident.
Story first published: Wednesday, February 26, 2020, 10:22 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X