For Quick Alerts
ALLOW NOTIFICATIONS  
For Daily Alerts

ನ್ಯಾಷನಲ್ ಪೆನ್ಷನ್ ಫಂಡ್ (NPS) ಭಾಗಶಃ ವಿಥ್ ಡ್ರಾ ಮಾಡಲು ನಿಯಮಗಳೇನು?

|

ಕೊರೊನಾ ವೈರಸ್ ಗೆ ಸಂಬಂಧಿಸಿದ ಚಿಕಿತ್ಸೆ ವೆಚ್ಚಗಳನ್ನು ಭರಿಸುವುದಕ್ಕಾಗಿ ನ್ಯಾಷನಲ್ ಪೆನ್ಷನ್ ಸ್ಕೀಮ್ ನಿಂದ(ಎನ್ ಪಿಎಸ್) ಅದರ ಚಂದಾದಾರರಿಗೆ ಭಾಗಶಃ ವಿಥ್ ಡ್ರಾ ಮಾಡುವ ಅವಕಾಶ ನೀಡಲಾಗುತ್ತಿದೆ ಎಂದು ಪೆನ್ಷನ್ ಫಂಡ್ ರೆಗ್ಯುಲೇಟರಿ ಅಂಡ್ ಡೆವಲಪ್ ಮೆಂಟ್ ಅಥಾರಿಟಿ ಆಫ್ ಇಂಡಿಯಾ (PFRDA) ಹೇಳಿದೆ.

 

ಅದರ ಪ್ರಕಾರ, ಚಂದಾದಾರರು, ಆ ವ್ಯಕ್ತಿಯ ಸಂಗಾತಿ, ಮಕ್ಕಳು ಸೇರಿದಂತೆ ಕಾನೂನುಬದ್ಧವಾಗಿ ದತ್ತು ಪಡೆದ ಮಕ್ಕಳು, ಅವಲಂಬಿತ ಪೋಷಕರ ಅನಾರೋಗ್ಯದ ಕಾರಣಕ್ಕೆ ಎನ್ ಪಿಎಸ್ ನಿಂದ ಹಣ ವಿಥ್ ಡ್ರಾ ಮಾಡಬಹುದು. ಉಳಿದಂತೆ ಎನ್ ಪಿಎಸ್ ನಿಯಮಗಳು ಹಾಗೇ ಮುಂದುವರಿಯಲಿವೆ.

 
ನ್ಯಾಷನಲ್ ಪೆನ್ಷನ್ ಫಂಡ್ (NPS) ಭಾಗಶಃ ವಿಥ್ ಡ್ರಾ ಮಾಡಲು ನಿಯಮಗಳೇನು?

ಎನ್ ಪಿಎಸ್ ಭಾಗಶಃ ವಿಥ್ ಡ್ರಾ ಬಗ್ಗೆ ಗೊತ್ತಿರಬೇಕಾದ ಅಂಶಗಳು:
* ಕೆಲವು ನಿರ್ದಿಷ್ಟ ಸನ್ನಿವೇಶದಲ್ಲಿ ಎನ್ ಪಿಎಸ್ ಗೆ ಸೇರ್ಪಡೆಯಾದ ಮೂರು ವರ್ಷಗಳ ನಂತರವಷ್ಟೇ ಭಾಗಶಃ ಹಣವನ್ನು ವಿಥ್ ಡ್ರಾ ಮಾಡಲು ಸಾಧ್ಯ.

* ಶಿಕ್ಷಣ, ಮದುವೆ, ಮನೆ ನಿರ್ಮಾಣ ಹಾಗೂ ಗಂಭೀರ ಸ್ವರೂಪದ ಕಾಯಿಲೆಯ ಚಿಕಿತ್ಸೆಗಾಗಿ ಹಣ ವಿಥ್ ಡ್ರಾ ಮಾಡಬಹುದು.

* ಒಟ್ಟಾರೆಯಾಗಿ ಎನ್ ಪಿಎಸ್ ಗೆ ಚಂದಾದಾರರು ಆಗಿರುವ ಅವಧಿಯಲ್ಲಿ ಗರಿಷ್ಠ ಮೂರು ಬಾರಿ ಹಣ ವಿಥ್ ಡ್ರಾ ಮಾಡಲು ಅವಕಾಶ ಇರುತ್ತದೆ.

* ಎನ್ ಪಿಎಸ್ ಗೆ ಕಟ್ಟಿರುವ ಒಟ್ಟು ಮೊತ್ತದ ಶೇಕಡಾ 25ರಷ್ಟನ್ನು ವಿಥ್ ಡ್ರಾ ಮಾಡಲು ಅವಕಾಶ ಇರುತ್ತದೆ.

* ಎನ್ ಪಿಎಸ್ ಚಂದಾದಾರರು ಆನ್ ಲೈನ್ ನಲ್ಲಿ ಭಾಗಶಃ ವಿಥ್ ಡ್ರಾಗೆ ಮನವಿ ಸಲ್ಲಿಸಬಹುದು. ಅಷ್ಟೇ ಅಲ್ಲ, ಫಿಸಿಕಲ್ ಫಾರ್ಮ್ (ಮುದ್ರಿತ ಅರ್ಜಿಯನ್ನು) ಕೂಡ ಸಲ್ಲಿಸಲು ಅವಕಾಶ ಇದೆ. ಸಂಬಂಧಪಟ್ಟು ದಾಖಲೆಗಳು ಜತೆಗೆ ಇರಬೇಕು.

* ನೋಡಲ್ ಆಫೀಸ್/ ಪಾಯಿಂಟ್ ಆಫ್ ಪ್ರೆಸೆನ್ಸ್ (PoP's) ಚಂದಾದಾರರ ಮೆಡಿಕಲ್ ಸರ್ಟಿಫಿಕೇಟ್ ಮತ್ತು ಭಾಗಶಃ ವಿಥ್ ಡ್ರಾಗೆ ಅಧಿಕೃತ ಮನವಿಯನ್ನು ಖಾತ್ರಿಪಡಿಸಬೇಕು.

English summary

How To Apply For NPS Partial Withdraw? Here Is The Must Know Details

During Corona lock down how to apply for NPS partial withdraw? Here is the must know details.
Story first published: Monday, April 13, 2020, 20:10 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X