For Quick Alerts
ALLOW NOTIFICATIONS  
For Daily Alerts

INCOME TAX ಪೋರ್ಟಲ್ನಲ್ಲಿ ಪ್ಯಾನ್ - ಆಧಾರ್ ಲಿಂಕ್ ಮಾಡುವುದು ಹೇಗೆ?

|

ನಿಮ್ಮ ಹಣಕಾಸು ವ್ಯವಹಾರ ಮತ್ತು ಆದಾಯ ತೆರಿಗೆ ರಿಟರ್ನ್ಸ್ ಪಾವತಿಗಳ ಬಗ್ಗೆ ಪಾರದರ್ಶಕತೆಯನ್ನು ಬಿಂಬಿಸುವುದಕ್ಕಾಗಿ ಪ್ಯಾನ್ ಮತ್ತು ಆಧಾರ್ ಲಿಂಕ್ ಮಾಡುವುದು ಬಹಳ ಅಗತ್ಯವಾಗಿದೆ. ಈಗ ಇನಕಮ್ ಟ್ಯಾಕ್ಸ್ ಇ-ಫೈಲಿಂಗ್ ಪೋರ್ಟಲ್‌ನಲ್ಲಿಯೂ ಸುಲಭವಾಗಿ ಆನ್‌ಲೈನ್ ಮೂಲಕ ಪ್ಯಾನ್ ಮತ್ತು ಆಧಾರ್ ಜೋಡಣೆ ಮಾಡಬಹುದು. ಈಗಾಗಲೇ ಪ್ಯಾನ್ ಮತ್ತು ಆಧಾರ್ ಕಾರ್ಡ್ ಹೊಂದಿರುವ, ಇ-ಫೈಲಿಂಗ್ ಪೋರ್ಟಲ್‌ನಲ್ಲಿ ಈಗಾಗಲೇ ನೋಂದಾಯಿತ ಅಥವಾ ನೋಂದಾಯಿಸಿಕೊಳ್ಳದ ವೈಯಕ್ತಿಕ ತೆರಿಗೆದಾರರು ಪೋರ್ಟಲ್‌ನಲ್ಲಿರುವ 'Link Aadhaar' ಆಯ್ಕೆ ಬಳಸಿ ಪ್ಯಾನ್ ಮತ್ತು ಆಧಾರ್ ಲಿಂಕ್ ಮಾಡಬಹುದು.

 

ಬೇಕಾಗುವ ದಾಖಲೆಗಳು

ಆದಾಯ ತೆರಿಗೆ ಇ-ಪೋರ್ಟಲ್ ಮುಖಾಂತರ ಪ್ಯಾನ್ ಮತ್ತು ಆಧಾರ್ ಜೋಡಣೆ ಮಾಡಲು- ಪ್ರಸ್ತುತ ಸಿಂಧುತ್ವದಲ್ಲಿರುವ ಪ್ಯಾನ್ ಕಾರ್ಡ್ ಹಾಗೂ ಸಿಂಧುತ್ವದಲ್ಲಿರುವ ಆಧಾರ್ ಕಾರ್ಡ್ ಮತ್ತು ಚಾಲನೆಯಲ್ಲಿರುವ ಮೊಬೈಲ್ ನಂಬರ್ ಬೇಕಾಗುತ್ತವೆ.

 

 77.92 ಲಕ್ಷ ತೆರಿಗೆದಾರರಿಗೆ 1.02 ಲಕ್ಷ ಕೋಟಿ ರೂ. ತೆರಿಗೆ ಮರುಪಾವತಿ ಮಾಡಿದ ಸಿಬಿಡಿಟಿ 77.92 ಲಕ್ಷ ತೆರಿಗೆದಾರರಿಗೆ 1.02 ಲಕ್ಷ ಕೋಟಿ ರೂ. ತೆರಿಗೆ ಮರುಪಾವತಿ ಮಾಡಿದ ಸಿಬಿಡಿಟಿ

ಪ್ಯಾನ್ - ಆಧಾರ್ ಲಿಂಕ್ ಮಾಡುವ ಸ್ಟೆಪ್- ಬೈ -ಸ್ಟೆಪ್ ಗೈಡ್

ಲಾಗಿನ್ ಮುಂಚಿನ ಪ್ರಕ್ರಿಯೆ (Pre-log-in): ಇ-ಫೈಲಿಂಗ್ ಪೋರ್ಟಲ್ ಹೋಮ್ ಪೇಜಿನಲ್ಲಿ 'Link Aadhaar' ಆಯ್ಕೆಯನ್ನು ಕ್ಲಿಕ್ ಮಾಡಿ ಮತ್ತು ಆಧಾರ್ ಸಂಖ್ಯೆ, ಮೊಬೈಲ್ ಸಂಖ್ಯೆ, ಪ್ಯಾನ್ ಸಂಖ್ಯೆ ಹಾಗೂ ಆಧಾರ್ ಕಾರ್ಡಿನಲ್ಲಿರುವಂತೆ ನಿಮ್ಮ ಹೆಸರನ್ನು ನಮೂದಿಸಿ. ಈಗ ನಿಮ್ಮ ನೋಂದಾಯಿತ ಮೊಬೈಲ್ ಸಂಖ್ಯೆಗೆ 6-ಅಂಕಿಯ OTP ಬರುತ್ತದೆ. ವೆರಿಫಿಕೇಶನ್ ಪೇಜಿನಲ್ಲಿ OTP ನಮೂದಿಸಿ ಮತ್ತು 'Validate' ಎಂಬುದರ ಮೇಲೆ ಕ್ಲಿಕ್ ಮಾಡಿ. ಲಾಗಿನ್ ನಂತರದ ಪ್ರಕ್ರಿಯೆ (ಪೋಸ್ಟ್-ಲಾಗ್-ಇನ್) ಸಂದರ್ಭದಲ್ಲಿ ಈ ಹಂತವು ಇರುವುದಿಲ್ಲ.

ಪ್ಯಾನ್ - ಆಧಾರ್ ಲಿಂಕ್ ಮಾಡುವ ಸುಲಭ ವಿಧಾನ

ಲಾಗಿನ್ ನಂತರದ ಪ್ರಕ್ರಿಯೆ (Post-log-in): ಡ್ಯಾಶ್‌ಬೋರ್ಡ್‌ನಲ್ಲಿ ಲಿಂಕ್ ಆಧಾರ್ ಟು ಪ್ಯಾನ್ ಆಯ್ಕೆಯ ಅಡಿಯಲ್ಲಿ, 'Link Aadhaar'' ವಿಂಡೋ ಮೇಲೆ ಕ್ಲಿಕ್ ಮಾಡಿ. My Profile> Link Aadhaar ಮೂಲಕವೂ ಈ ಹಂತವನ್ನು ಪ್ರವೇಶಿಸಬಹುದು. ಲಿಂಕ್ ಆಧಾರ್ ಪುಟದಲ್ಲಿ, ನೀವು ನಿಮ್ಮ ಹೆಸರು, ಜನ್ಮ ದಿನಾಂಕ (DOB) ನಮೂದಿಸಬೇಕು. ಪ್ಯಾನ್ ಕಾರ್ಡ್ ಪ್ರಕಾರ ಲಿಂಗವನ್ನು ಮೊದಲೇ ಭರ್ತಿ ಮಾಡಲಾಗಿರುವುದರಿಂದ ಅದನ್ನು ತಿದ್ದುಪಡಿ ಮಾಡಲು ಸಾಧ್ಯವಿಲ್ಲ. ನಂತರ ಆಧಾರ್ ಕಾರ್ಡಿನಲ್ಲಿರುವಂತೆ ನಿಮ್ಮ ಆಧಾರ್ ಸಂಖ್ಯೆ ಮತ್ತು ಹೆಸರನ್ನು ನಮೂದಿಸಿ. ಒಂದು ವೇಳೆ, ನಿಮ್ಮ ಆಧಾರ್ ಕಾರ್ಡ್‌ನಲ್ಲಿ ನಿಮ್ಮ ಹುಟ್ಟಿದ ವರ್ಷ ಮಾತ್ರ ನಮೂದಿಸಲ್ಪಟ್ಟಿದ್ದರೆ 'I have only year of birth in Aadhaar card' ಆಯ್ಕೆಯನ್ನು ಕ್ಲಿಕ್ ಮಾಡಿ. ಲಿಂಕ್ ಆಧಾರ್ ಕಾರ್ಯವಿಧಾನವನ್ನು ಮುಂದುವರಿಸಲು 'I agree to validate my Aadhaar details' ಆಯ್ಕೆಯನ್ನು ಕ್ಲಿಕ್ ಮಾಡುವುದು ಕಡ್ಡಾಯ.

ರಿಕ್ಷಾ ಎಳೆಯುವ ಕಾರ್ಮಿಕನಿಗೆ 3 ಕೋಟಿ ತೆರಿಗೆ ಪಾವತಿಸುವಂತೆ ಐಟಿ ಇಲಾಖೆಯ ನೋಟಿಸ್! ರಿಕ್ಷಾ ಎಳೆಯುವ ಕಾರ್ಮಿಕನಿಗೆ 3 ಕೋಟಿ ತೆರಿಗೆ ಪಾವತಿಸುವಂತೆ ಐಟಿ ಇಲಾಖೆಯ ನೋಟಿಸ್!

ಸ್ಟೇಟಸ್ ಹೀಗೆ ಚೆಕ್ ಮಾಡಿ

ಇ-ಫೈಲಿಂಗ್ ಪೋರ್ಟಲ್‌ನಲ್ಲಿ e-service ಗಳನ್ನು ನಾಗರಿಕರು ಸುಲಭವಾಗಿ ಬಳಸುವಂತೆ ರೂಪಿಸಲಾಗಿದೆ. ಲಾಗಿನ್ ಮಾಡದೆ ಇ-ಫೈಲಿಂಗ್ ಹೋಮ್ ಪೇಜ್ ಮೂಲಕ (ನೋಂದಾಯಿತ ಅಥವಾ ನೋಂದಾಯಿಸಿಕೊಳ್ಳದ ಬಳಕೆದಾರರು) ಹಾಗೂ ಲಾಗಿನ್ ನಂತರ ಇ-ಫೈಲಿಂಗ್ ಪೋರ್ಟಲ್ ಮೂಲಕ (ನೋಂದಾಯಿತ ಬಳಕೆದಾರರು ಮಾತ್ರ) ಪ್ಯಾನ್ ಮತ್ತು ಆಧಾರ್ ಲಿಂಕ್ ಮಾಡಬಹುದು. ಇನ್ನು ಇನಕಂ ಟ್ಯಾಕ್ಸ್ ಪೋರ್ಟಲ್ ನಲ್ಲಿ ಇ-ಫೈಲಿಂಗ್ ಹೋಮ್ ಪೇಜಿನಲ್ಲಿ 'Link Aadhaar' ಆಯ್ಕೆಯನ್ನು ಕ್ಲಿಕ್ ಮಾಡುವ ಮೂಲಕ ತಮ್ಮ ಪ್ಯಾನ್ ಮತ್ತು ಆಧಾರ್ ಲಿಂಕ್ ಆಗಿದೆಯಾ ಇಲ್ಲವಾ ಎಂಬುದನ್ನು ತಿಳಿಯಬಹುದು.

English summary

How To Link Pan With Aadhaar Through Income Tax E-filing Portal

How To Link Pan With Aadhaar Through Income Tax E-filing Portal - Here is step by step guide in Kannada.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X