For Quick Alerts
ALLOW NOTIFICATIONS  
For Daily Alerts

ಬೇರೆ ದೇಶದಿಂದ ಅಂಚೆ ಕಚೇರಿ ಮೂಲಕ ಹಣ ವರ್ಗಾವಣೆ ಮಾಡುವುದು ಹೇಗೆ?

|

ಹಣ ವರ್ಗಾವಣೆ ಸೇವಾ ಯೋಜನೆ (MTSS) ಭಾರತ ಸರ್ಕಾರದ ಅಂಚೆ ಇಲಾಖೆ (ಪೋಸ್ಟ್ ಆಫೀಸ್) ನೀಡುವ ಅಂತರರಾಷ್ಟ್ರೀಯ ಹಣ ವರ್ಗಾವಣೆ ಸೇವೆಯಾಗಿದೆ. ಈ ಸೇವೆಯ ಮೂಲಕ ಸುಮಾರು 195 ದೇಶಗಳಿಂದ ಮತ್ತು ಪ್ರಾಂತ್ಯಗಳಿಂದ ಹಣವನ್ನು ವರ್ಗಾವಣೆ ಮಾಡಲು ನಿಮಗೆ ಸಾಧ್ಯವಾಗಲಿದೆ.

ಅಂತಾರಾಷ್ಟ್ರೀಯ ಹಣಕಾಸು ವರ್ಗಾವಣೆ ಸಂಸ್ಥೆಯಾದ ವೆಸ್ಟರ್ನ್ ಯೂನಿಯನ್ ಫೈನಾನ್ಶಿಯಲ್ ಸರ್ವಿಸ್ ಸಹಭಾಗಿತ್ವದಲ್ಲಿ ಭಾರತದ ಅಂಚೆ ಕಚೇರಿ ಇಲಾಖೆಯು ಹಣ ವರ್ಗಾವಣೆ ಮಾಡುತ್ತದೆ. ಯೋಜನೆಯಡಿಯಲ್ಲಿ, ಭಾರತಕ್ಕೆ ಭೇಟಿ ನೀಡುವ ವಿದೇಶಿ ಪ್ರವಾಸಿಗರಿಗೆ ಬೆಂಬಲ ಮತ್ತು ಕುಟುಂಬ ಬೆಂಬಲಕ್ಕಾಗಿ ಆಂತರಿಕ ವೈಯಕ್ತಿಕ ಹಣ ರವಾನೆಗಳನ್ನು ಮಾತ್ರ ಅನುಮತಿಸಲಾಗುತ್ತದೆ.

ಮಾಸಿಕ ಶೇಕಡ 6.6ರಷ್ಟು ಬಡ್ಡಿ ಪಡೆಯಲು ಈ ಯೋಜನೆಯಲ್ಲಿ ಹೂಡಿಕೆ ಮಾಡಿಮಾಸಿಕ ಶೇಕಡ 6.6ರಷ್ಟು ಬಡ್ಡಿ ಪಡೆಯಲು ಈ ಯೋಜನೆಯಲ್ಲಿ ಹೂಡಿಕೆ ಮಾಡಿ

ಎಂಟಿಎಸ್‌ಎಸ್ ಅಡಿಯಲ್ಲಿ, ಭಾರತದಿಂದ ಯಾವುದೇ ಬಾಹ್ಯ ಹಣ ರವಾನೆಗಳನ್ನು ಅನುಮತಿಸಲಾಗುವುದಿಲ್ಲ. ಈ ಅಂತರರಾಷ್ಟ್ರೀಯ ಹಣ ವರ್ಗಾವಣೆ ಸೇವೆ ಸುರಕ್ಷಿತ, ಕಾನೂನಾತ್ಮಕ, ವೇಗದ ಹಾಗೂ ವಿಶ್ವಾಸಾರ್ಹವಾಗಿದೆ. ಅಲ್ಲದೆ, ಇದನ್ನು ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ಅನುಮೋದಿಸಿದೆ. ಭಾರತ ಸರ್ಕಾರದ ಅಂಚೆ ಇಲಾಖೆಯು ಇದನ್ನು ಒದಗಿಸುತ್ತದೆ. ಈ ಬಗ್ಗೆ ಇಲ್ಲಿದೆ ಮಾಹಿತಿ ಮುಂದೆ ಓದಿ....

 ಭಾರತದಲ್ಲಿ ಬೇರೆ ದೇಶದಿಂದ ಹಣ ಹೇಗೆ ಪಡೆಯುವುದು?

ಭಾರತದಲ್ಲಿ ಬೇರೆ ದೇಶದಿಂದ ಹಣ ಹೇಗೆ ಪಡೆಯುವುದು?

ಈ ಸೇವೆಯನ್ನು ಪಡೆಯಬೇಕಾದರೆ ಈ ಸೇವೆ ಕಾರ್ಯನಿರ್ವಹಣೆಯಲ್ಲಿರುವ ದೇಶದಲ್ಲಿ ವ್ಯಕ್ತಿಯು ಇರಬೇಕಾಗುತ್ತದೆ. ಆ ದೇಶದಲ್ಲಿಯೂ ಈ ಸೇವೆ ಇದ್ದರೆ ಮಾತ್ರ ಹಣ ವರ್ಗಾವಣೆ ಮಾಡಲು ಸಾಧ್ಯವಾಗಲಿದೆ. ಮೊತ್ತವನ್ನು ಕಳುಹಿಸಬೇಕಾದರೆ ಫಾರ್ಮ್ ಅನ್ನು ಭರ್ತಿ ಮಾಡಬೇಕಾಗುತ್ತದೆ. ಅಸಲು ಮೊತ್ತ ಮತ್ತು ಶುಲ್ಕಗಳನ್ನು ಪಾವತಿ ಮಾಡಬೇಕಾಗುತ್ತದೆ. ಸಿಸ್ಟಂ ಮೂಲಕ ವಹಿವಾಟು ವರ್ಗಾವಣೆ ಮಾಡಿದ ನಂತರ ರಶೀದಿಯಲ್ಲಿ ಯುನಿಕ್ ಮನಿ ಟ್ರಾನ್ಫರ್ ಕಂಟ್ರೋಲ್ ನಂಬರ್/ ರೆಫೆರೆನ್ಸ್ ನಂಬರ್ ಅನ್ನು ನೀಡಲಾಗುತ್ತದೆ. ಬಳಿಕ ಹಣವನ್ನು ಸ್ವೀಕಾರ ಮಾಡುವವರು ಪೋಸ್ಟ್ ಆಫೀಸ್‌ಗೆ ಹೋಗಿ ಹಣವನ್ನು ಸ್ವೀಕರಿಸಲು ಫಾರ್ಮ್ ಅನ್ನು ಭರ್ತಿ ಮಾಡಬೇಕಾಗುತ್ತದೆ. ಹಾಗೆಯೇ ಅದಕ್ಕೆ ಬೇಕಾದ ಗುರುತನ್ನು ಕೂಡಾ ಪ್ರಸ್ತುತ ಪಡಿಸಬೇಕಾಗುತ್ತದೆ. ವಹಿವಾಟು ಪರಿಶೀಲಿಸಿದ ನಂತರ ರಸೀದಿಯೊಂದಿಗೆ ಹಣವನ್ನು ಸ್ವೀಕರಿಸುತ್ತಾರೆ. ಈ ಸಂಪೂರ್ಣ ಪ್ರಕ್ರಿಯೆಯು ಸುಮಾರು 10 ನಿಮಿಷದಲ್ಲಿ ಪೂರ್ಣವಾಗುತ್ತದೆ.

 ಹಣ ವರ್ಗಾವಣೆ ನಿಯಮಗಳನ್ನು ಕೂಡಾ ತಿಳಿಯಿರಿ

ಹಣ ವರ್ಗಾವಣೆ ನಿಯಮಗಳನ್ನು ಕೂಡಾ ತಿಳಿಯಿರಿ

1. ಪಾವತಿದಾರರು ಪೂರ್ಣ ಮೊತ್ತವನ್ನು ಭಾರತೀಯ ರೂಪಾಯಿಗಳಲ್ಲಿ ಪಡೆಯುತ್ತಾರೆ. RBI ನಿಯಮಾವಳಿಗಳ ಪ್ರಕಾರ ಒಂದು ಬಾರಿಗೆ ಕಳುಹಿಸಬಹುದಾದ ಗರಿಷ್ಠ ಮಿತಿ 2500 ಯುಎಸ್‌ ಡಾಲರ್ ಆಗಿದೆ. ಆದರೆ ಅದು ವೈಯಕ್ತಿಕ ಬಳಕೆಗಾಗಿ ಮಾತ್ರ ಆಗಿರಬೇಕು.

2. 50,000/- ರೂಪಾಯಿವರೆಗಿನ ಮೊತ್ತವನ್ನು ಫಲಾನುಭವಿಗೆ ನಗದು ರೂಪದಲ್ಲಿ ಪಾವತಿಸಬಹುದು. ಈ ಮಿತಿಯನ್ನು ಮೀರಿದ ಯಾವುದೇ ಮೊತ್ತವನ್ನು ಖಾತೆಯ ಪಾವತಿದಾರರ ಚೆಕ್ ಮೂಲಕ ಪಾವತಿಸಲಾಗುತ್ತದೆ. ಅಥವಾ ಫಲಾನುಭವಿಯ ಹೆಸರಿನಲ್ಲಿ ಅಂಚೆ ಕಚೇರಿಯಲ್ಲಿ ಇರುವ ಉಳಿತಾಯ ಖಾತೆಗೆ ನೇರವಾಗಿ ಜಮಾ ಮಾಡಲಾಗುತ್ತದೆ. ಇನ್ನು ವಿದೇಶಿ ಪ್ರವಾಸಿಗರಾಗಿದ್ದರೆ ಹೆಚ್ಚಿನ ಮೊತ್ತವನ್ನು ನಗದು ರೂಪದಲ್ಲಿ ಪಾವತಿಸಬಹುದು.

3. ಒಂದು ಕ್ಯಾಲೆಂಡರ್ ವರ್ಷದಲ್ಲಿ ಒಬ್ಬ ಫಲಾನುಭವಿಯು ಕೇವಲ 30 ವಹಿವಾಟುಗಳನ್ನು ಮಾತ್ರ ಸ್ವೀಕರಿಸಬಹುದು.

4. ಪಾವತಿಸುವವರನ್ನು "ಅತ್ಯಂತ ಒಲವು ಹೊಂದಿರುವ ಗ್ರಾಹಕರು" ಎಂದು ಪರಿಗಣಿಸಲು ಅಂಚೆ ಕಛೇರಿಗಳಿಗೆ ನಿರ್ದೇಶನ ನೀಡಲಾಗಿದೆ.

 ಯಾವೆಲ್ಲ ದಾಖಲೆಗಳು ಬೇಕು?

ಯಾವೆಲ್ಲ ದಾಖಲೆಗಳು ಬೇಕು?

ಇನ್ನು ಆರ್‌ಬಿಐ ಹೊರಡಿಸಿದ ಕೆವೈಸಿ/ಎಎಂಎಲ್/ಸಿಎಫ್‌ಟಿ ಮಾರ್ಗಸೂಚಿಗಳ ಅಡಿಯಲ್ಲಿ, ಅಕ್ರಮ ಹಣ ವರ್ಗಾವಣೆ ಅಥವಾ ಭಯೋತ್ಪಾದಕ ಹಣಕಾಸು ಚಟುವಟಿಕೆಗಳಿಗೆ ಕ್ರಿಮಿನಲ್ ಚಟುವಟಿಕೆಗಳನ್ನು ತಡೆಗಟ್ಟಲು ಹಣ ವರ್ಗಾವಣೆ ಮಾಡುವವರು ದಾಖಲೆಗಳನ್ನು ಪ್ರಸ್ತುತ ಪಡಿಸುವುದು ಮುಖ್ಯವಾಗಿದೆ. ಪ್ರಮುಖ ದಾಖಲೆಗಳ ಪಟ್ಟಿ ಈ ಕೆಳಗಿದೆ...

1. ಮತದಾನ ಪತ್ರ
2. ಡ್ರೈವಿಂಗ್ ಲೈಸೆನ್ಸ್
3. ಪ್ಯಾನ್ ಕಾರ್ಡ್
4. ರೇಷನ್ ಕಾರ್ಡ್
5. ಆಧಾರ್ ಕಾರ್ಡ್ ಸೇರಿದಂತೆ ಇನ್ನು ಕೆಲವು ದಾಖಲೆಗಳನ್ನು ಪ್ರಸ್ತುತ ಪಡಿಸಬೇಕಾಗುತ್ತದೆ.

 

English summary

How To Receive Money In India From Another Country Via Post Office?

Money Transfer Service Scheme (MTSS) is an international Money transfer service offered by the Department of Posts (Post Office), Government of India. Here's How To Receive Money In India From Another Country.
Story first published: Saturday, October 8, 2022, 12:13 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X