For Quick Alerts
ALLOW NOTIFICATIONS  
For Daily Alerts

ಎಚ್ ಎಸ್ ಬಿಸಿಯಿಂದ 35 ಸಾವಿರ ಉದ್ಯೋಗಕ್ಕೆ ಕತ್ತರಿ

|

ಸತತವಾಗಿ ಮೂರನೇ ವರ್ಷ ಲಾಭದಲ್ಲಿ ಇಳಿಕೆ ಕಂಡಿರುವ ಎಚ್ ಎಸ್ ಬಿಸಿಯು (ಹಾಂಕಾಂಗ್ ಅಂಡ್ ಶಾಂಘೈ ಬ್ಯಾಂಕಿಂಗ್ ಕಾರ್ಪೊರೇಷನ್) ಮಂಗಳವಾರ ಹಲವು ಯೋಜನೆಗಳನ್ನು ಘೋಷಿಸಿದೆ. 35 ಸಾವಿರ ಉದ್ಯೋಗಗಳ ಕಡಿತ, ಯುಎಸ್ ಎ ಮತ್ತು ಯುರೋಪ್ ನಲ್ಲಿ ಕಾರ್ಯ ನಿರ್ವಹಣೆ ಪ್ರಮಾಣ ಕಡಿಮೆ ಮಾಡುವುದು ಸೇರಿದಂತೆ ವಿವಿಧ ಕ್ರಮಗಳನ್ನು ಘೋಷಿಸಿದೆ.

 

ಅಮೆರಿಕ- ಚೀನಾ ಮಧ್ಯದ ವಾಣಿಜ್ಯ ಸಮರ, ಬ್ರೆಕ್ಸಿಟ್ ಮತ್ತು ಚೀನಾದ ಕೊರೊನಾ ವೈರಾಣು ಪರಿಣಾಮವನ್ನು ಎದುರಿಸುತ್ತಿರುವ ಎಚ್ ಎಸ್ ಬಿಸಿ, ವೆಚ್ಚ ಕಡಿಮೆ ಮಾಡುವ ಪ್ರಯತ್ನದಲ್ಲಿದೆ. ಏಷ್ಯಾ ಮೂಲದ ಎಚ್ ಎಸ್ ಬಿಸಿ ಈಚಿನ ವರ್ಷಗಳಲ್ಲಿ ಈ ಭಾಗದಲ್ಲಿ ಉತ್ತಮವಾಗಿಯೇ ಕಾರ್ಯ ನಿರ್ವಹಣೆ ಮಾಡುತ್ತಿದೆ. ಯುರೋಪ್ ಮತ್ತು ಚೀನಾದಲ್ಲಿ ಎಚ್ ಎಸ್ ಬಿಸಿ ಫಲಿತಾಂಶ ನಿರಾಶಾದಾಯಕವಾಗಿದೆ.

 

ಎಚ್ ಎಸ್ ಬಿಸಿಯಿಂದ ಇನ್ ವೆಸ್ಟ್ ಮೆಂಟ್ ಬ್ಯಾಂಕಿಂಗ್ ಸಿಬ್ಬಂದಿ ಕಡಿತ!ಎಚ್ ಎಸ್ ಬಿಸಿಯಿಂದ ಇನ್ ವೆಸ್ಟ್ ಮೆಂಟ್ ಬ್ಯಾಂಕಿಂಗ್ ಸಿಬ್ಬಂದಿ ಕಡಿತ!

50ಕ್ಕೂ ಹೆಚ್ಚು ದೇಶಗಳಲ್ಲಿ ಎಚ್ ಎಸ್ ಬಿಸಿ ಕಾರ್ಯ ನಿರ್ವಹಿಸುತ್ತದೆ. ಅದರಲ್ಲಿ ಲಾಭದ ಬಹುಪಾಲು ಬರುವುದು ಏಷ್ಯಾ ಖಂಡದಿಂದಲೇ. ಕಳೆದ ಆಗಸ್ಟ್ ನಲ್ಲಿ ಜಾನ್ ಫ್ಲಿಂಟ್ ನಿರ್ಗಮನದ ನಂತರ ನೋಯೆಲ್ ಕ್ವಿನ್ ಅವರು ಹಂಗಾಮಿ ಸಿಇಒ ಆಗಿ ಅಧಿಕಾರ ವಹಿಸಿದ್ದು, ಎಚ್ ಎಸ್ ಬಿಸಿಯನ್ನು ಗಟ್ಟಿಗೊಳಿಸುವ ಪ್ರಯತ್ನದಲ್ಲಿ ಇದ್ದಾರೆ.

ಎಚ್ ಎಸ್ ಬಿಸಿಯಿಂದ 35 ಸಾವಿರ ಉದ್ಯೋಗಕ್ಕೆ ಕತ್ತರಿ

ನಮ್ಮ ಕೆಲವು ವ್ಯವಹಾರ ಒಪ್ಪಿಕೊಳ್ಳಬಹುದಾದ ರಿಟರ್ನ್ಸ್ ನೀಡುತ್ತಿಲ್ಲ. ಆದ್ದರಿಂದ ಹೂಡಿಕೆದಾರರಿಗೆ ರಿಟರ್ನ್ಸ್ ಜಾಸ್ತಿ ಮಾಡುವ ಪ್ರಯತ್ನದಲ್ಲಿ ಇದ್ದೇವೆ ಎಂದು ಕ್ವಿನ್ ಹೇಳಿದ್ದಾರೆ. ಜಾಗತಿಕ ಮಟ್ಟದಲ್ಲಿ ಎಚ್ ಎಸ್ ಬಿಸಿಗೆ 2,35,000 ಸಿಬ್ಬಂದಿ ಇದ್ದು, ಅದನ್ನು ಮುಂದಿನ ಮೂರು ವರ್ಷದಲ್ಲಿ 2 ಲಕ್ಷಕ್ಕೆ ಇಳಿಸಲಾಗುವುದು ಎಂದಿದ್ದು, ಎಲ್ಲಿ ಮತ್ತು ಯಾವ ಉದ್ಯೋಗ ಕಡಿತ ಮಾಡಲಾಗುವುದು ಎಂಬ ಮಾಹಿತಿ ನೀಡಿಲ್ಲ.

2022ರ ಹೊತ್ತಿಗೆ 4.5 ಬಿಲಿಯನ್ ಅಮೆರಿಕನ್ ಡಾಲರ್ ವೆಚ್ಚ ಕಡಿತ ಮಾಡಿ, ಒಟ್ಟು ವೆಚ್ಚವನ್ನು 6 ಬಿಲಿಯನ್ ಅಮೆರಿಕನ್ ಡಾಲರ್ ಗೆ ತರುವ ಗುರಿ ಎಚ್ ಎಸ್ ಬಿಸಿಗೆ ಇದೆ. ಮೆಕ್ಸಿಕನ್ ಅಕ್ರಮ ಹಣ ವರ್ಗಾವಣೆ ಹಗರಣದ ನಂತರ 2012ರಿಂದಲೂ ಎಚ್ ಎಸ್ ಬಿಸಿ ಪುನಾರಚನೆ ಯೋಜನೆಯಲ್ಲಿದೆ.

English summary

HSBC Plan To Cut 35 Thousand Jobs

Asia based HSBC planning to cut 35,000 jobs. After profits slide for consecutive 3rd year.
Story first published: Tuesday, February 18, 2020, 16:42 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X