For Quick Alerts
ALLOW NOTIFICATIONS  
For Daily Alerts

ಭಾರತದಲ್ಲಿದ್ದಾರೆ 177 ಶತಕೋಟ್ಯಧಿಪತಿಗಳು: ಅಂಬಾನಿಗೆ ಅಗ್ರಸ್ಥಾನ

|

ಗರಿಷ್ಠ ಸಂಖ್ಯೆಯ ಶತಕೋಟ್ಯಧಿಪತಿಗಳನ್ನು ಹೊಂದಿರುವ ದೇಶಗಳ ಪಟ್ಟಿಯಲ್ಲಿ ಭಾರತ ತನ್ನ ಮೂರನೇ ಸ್ಥಾನವನ್ನು ಉಳಿಸಿಕೊಂಡಿದೆ. ಹುರುನ್ ಜಾಗತಿಕ ಶ್ರೀಮಂತರ ಪಟ್ಟಿ 2021 ರ ಪ್ರಕಾರ, ವಿಶ್ವದಲ್ಲಿ ಒಟ್ಟು 209 ಭಾರತೀಯ ಬಿಲಿಯನೇರ್‌ಗಳಿದ್ದು, ಇವರು 32 ದೇಶಗಳಲ್ಲಿ ವಾಸಿಸುತ್ತಿದ್ದು, ಭಾರತದಲ್ಲಿರುವ ಬಿಲಿಯನೇರ್‌ಗಳ ಸಂಖ್ಯೆಯನ್ನು 177 ಕ್ಕೆ ಏರಿಸಿದೆ.

 

ರಿಲಯನ್ಸ್ ಇಂಡಸ್ಟ್ರೀಸ್ ಮುಖ್ಯಸ್ಥ ಮುಕೇಶ್ ಅಂಬಾನಿ, ಗೌತಮ್ ಅದಾನಿ ಸೇರಿದಂತೆ ಅನೇಕರು ಈ ಪಟ್ಟಿಯಲ್ಲಿ ಅಗ್ರಸ್ಥಾನ ಹೊಂದಿರುವ ಭಾರತೀಯ ಬಿಲಿಯನೇರ್‌ಗಳಾಗಿದ್ದಾರೆ.

ಒಟ್ಟು 177 ಭಾರತೀಯ ಬಿಲಿಯನೇರ್‌ಗಳಲ್ಲಿ ಕನಿಷ್ಠ 61 ಶತಕೋಟ್ಯಾಧಿಪತಿಗಳು ಮುಂಬೈನಲ್ಲಿ ವಾಸಿಸುತ್ತಿದ್ದರೆ, ದೆಹಲಿಯಲ್ಲಿ 40 ಮತ್ತು ಬೆಂಗಳೂರು 22 ಜನರು ವಾಸವಾಗಿದ್ದಾರೆ.

ಟಾಪ್‌ 10ನಲ್ಲಿ ಮತ್ತೆ ಕಾಣಿಸಿಕೊಂಡ ಮುಕೇಶ್ ಅಂಬಾನಿ

ಟಾಪ್‌ 10ನಲ್ಲಿ ಮತ್ತೆ ಕಾಣಿಸಿಕೊಂಡ ಮುಕೇಶ್ ಅಂಬಾನಿ

ರಿಲಯನ್ಸ್ ಇಂಡಸ್ಟ್ರೀಸ್ ಮುಖ್ಯಸ್ಥ ಮುಖೇಶ್ ಅಂಬಾನಿ 83 ಬಿಲಿಯನ್ ಡಾಲರ್ ಆಸ್ತಿಯನ್ನು ಹೊಂದಿರುವ ವಿಶ್ವದ ಎಂಟನೇ ಶ್ರೀಮಂತ ವ್ಯಕ್ತಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಅವರ ಸಂಪತ್ತು ಕಳೆದ ವರ್ಷ ಶೇಕಡಾ 24 ರಷ್ಟು ಬೆಳೆಯಿತು. ಅಂದರೆ ರೂಪಾಯಿಗಳಲ್ಲಿ 6.09 ಲಕ್ಷ ಕೋಟಿ ರೂ. ಹೆಚ್ಚಾಗಿದೆ ಎಂದು ಹುರುನ್ ಗ್ಲೋಬಲ್ ರಿಚ್ ಲಿಸ್ಟ್ ಅನ್ನು ಮಂಗಳವಾರ ಬಿಡುಗಡೆ ಮಾಡಲಾಗಿದೆ. ಇದರ ಪ್ರಕಾರ ಮುಖೇಶ್ ಅಂಬಾನಿ ವಿಶ್ವದ ಎಂಟನೇ ಶ್ರೀಮಂತರೆನಿಸಿಕೊಂಡಿದ್ದಾರೆ ಮತ್ತು ಟೆಸ್ಲಾ ಮುಖ್ಯಸ್ಥ ಎಲೋನ್ ಮಸ್ಕ್ ಮೊದಲ ಸ್ಥಾನದಲ್ಲಿದ್ದಾರೆ.

ಗೌತಮ್ ಅದಾನಿ ಭಾರತದ ಎರಡನೇ ಶ್ರೀಮಂತ ವ್ಯಕ್ತಿ

ಗೌತಮ್ ಅದಾನಿ ಭಾರತದ ಎರಡನೇ ಶ್ರೀಮಂತ ವ್ಯಕ್ತಿ

ಗೌತಮ್ ಅದಾನಿ ಮತ್ತು ಅವರ ಕುಟುಂಬದ ಸಂಪತ್ತು ಈ ವರ್ಷ ಸುಮಾರು 32 ಶತಕೋಟಿಗೆ ದ್ವಿಗುಣಗೊಂಡಿದೆ. ಅದಾನಿ ಗ್ರೀನ್ ಎನರ್ಜಿ 20 ಬಿಲಿಯನ್ ಡಾಲರ್ ಬೆಳೆದಿದ್ದು, ಹುರುನ್ ಹುರುನ್ ಗ್ಲೋಬಲ್ ರಿಚ್ ಲಿಸ್ಟ್ ಪ್ರಕಾರ ಅದಾನಿ ಎರಡನೇ ಶ್ರೀಮಂತ ಭಾರತೀಯ.

ಹೆಚ್‌ಸಿಎಲ್‌ ಸಂಸ್ಥಾಪಕ ಶಿವ ನಾಡರ್ ಸಂಪತ್ತು ಏರಿಕೆ
 

ಹೆಚ್‌ಸಿಎಲ್‌ ಸಂಸ್ಥಾಪಕ ಶಿವ ನಾಡರ್ ಸಂಪತ್ತು ಏರಿಕೆ

ಎಚ್‌ಸಿಎಲ್ ಟೆಕ್ನಾಲಜೀಸ್‌ನ ಸ್ಥಾಪಕ ಮತ್ತು ಅಧ್ಯಕ್ಷ ಶಿವ ನಾಡರ್ ಅವರ ಸಂಪತ್ತು 10 ಬಿಲಿಯನ್ ಡಾಲರ್‌ಗಳಷ್ಟು ಏರಿಕೆಗೊಂಡು, 27 ಬಿಲಿಯನ್ ಡಾಲರ್‌ಗೆ ಏರಿದೆ. ಇದು ಅವರ ಕಂಪನಿಯ ಷೇರು ಬೆಲೆಯಲ್ಲಿ ಶೇಕಡಾ 66 ರಷ್ಟು ಹೆಚ್ಚಳವಾಗಿದೆ. ಅವರು ಪ್ರಸ್ತುತ ಮೂರನೇ ಶ್ರೀಮಂತ ಭಾರತೀಯರಾಗಿದ್ದಾರೆ. ಎನ್.ಆರ್ ನಾರಾಯಣ ಮೂರ್ತಿ ಅವರ ನಿವ್ವಳ ಮೌಲ್ಯವು ಶೇಕಡಾ 35 ರಷ್ಟು ಏರಿಕೆಯಾಗಿ 3.1 ಬಿಲಿಯನ್ ಡಾಲರ್‌ಗಳಿಗೆ ತಲುಪಿದೆ ಎಂದು ವರದಿ ತಿಳಿಸಿದೆ.

ಪಟ್ಟಿಯಲ್ಲಿರುವ ಪ್ರಮುಖ ಬಿಲಿಯನೇರ್‌ಗಳು

ಪಟ್ಟಿಯಲ್ಲಿರುವ ಪ್ರಮುಖ ಬಿಲಿಯನೇರ್‌ಗಳು

ಬಿಲಿಯನೇರ್‌ಗಳ ಪಟ್ಟಿಯಲ್ಲಿ ಲಕ್ಷ್ಮಿ ನಿವಾಸ್ ಮಿತ್ತಲ್ 104 ನೇ ಮತ್ತು ಸೀರಮ್ ಇನ್ಸ್ಟಿಟ್ಯೂಟ್ ಮುಖ್ಯಸ್ಥ ಸೈರಸ್ ಪೂನವಾಲಾ 114 ನೇ ಸ್ಥಾನದಲ್ಲಿದ್ದು, ಅವರ ನಿವ್ವಳ ಮೌಲ್ಯ 1.94 ಲಕ್ಷ ಕೋಟಿ ರೂ. ಏರಿಕೆಯಾಗಿದೆ.

ಇನ್ನುಳಿದಂತೆ ಇನ್‌ಸ್ಟಾಕಾರ್ಟ್‌ನ ಅಪೂರ್ವ ಮೆಹ್ತಾ ಮತ್ತು ಜೆರೋಧಾ ಕಂಪನಿ ಸ್ಥಾಪಕ ನಿಖಿಲ್ ಕಾಮತ್ ಈ ಪಟ್ಟಿಯಲ್ಲಿರುವ ಅತ್ಯಂತ ಕಿರಿಯ ಭಾರತೀಯ ಬಿಲಿಯನೇರ್ ಆಗಿ 1.5 ಬಿಲಿಯನ್ ಡಾಲರ್ ಆಸ್ತಿಯನ್ನು ಹೊಂದಿದ್ದಾರೆ. ಲ್ಯಾಂಡ್‌ಮಾರ್ಕ್‌ನ ಮುಖೇಶ್ ಜಗ್ತಿಯಾನಿ 2021 ರ ಹುರುನ್ ಶ್ರೀಮಂತ ಪಟ್ಟಿಯಲ್ಲಿ ಕಾಣಿಸಿಕೊಂಡ ಹೊಸ ಭಾರತೀಯ.

 

English summary

Hurun Rich List: India Is Home To 177 Billionaires

India has retained its third position on the list of countries with a maximum number of billionaires. According to Hurun Global Rich List 2021, there are a total of 209 Indian billionaires in the world.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X