For Quick Alerts
ALLOW NOTIFICATIONS  
For Daily Alerts

ಐಡಿಎಫ್‌ಸಿ ಬ್ಯಾಂಕ್ ಫಾಸ್ಟ್‌ಟ್ಯಾಗ್‌ ಸಮಸ್ಯೆ: ಸ್ಕ್ಯಾನ್ ಆಗದೆ ದುಪ್ಪಟ್ಟು ಹಣ ಕಟ್ಟುತ್ತಿದ್ದಾರೆ ಜನರು!

|

ಇತ್ತೀಚೆಗಷ್ಟೇ ಒಂದೇ ದಿನದಲ್ಲಿ ಫಾಸ್ಟ್‌ಟ್ಯಾಗ್ ಮೂಲಕ ಟೋಲ್ ಸಂಗ್ರಹವು ದಾಖಲೆಯ 104 ಕೋಟಿ ರೂ. ತಲುಪಿದ್ದ ಸುದ್ದಿಯನ್ನು ನೀವೆಲ್ಲಾ ಓದಿರ್ತಿರಿ. ಆದರೆ ಇದೇ ಫಾಸ್ಟ್‌ಟ್ಯಾಗ್ ಇದೀಗ ಕೆಲವೆಡೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ.

 

ಫೆಬ್ರವರಿ 16, 2021 ರಿಂದ ಟೋಲ್ ಪ್ಲಾಜಾಗಳಲ್ಲಿ ಫಾಸ್ಟ್‌ಟ್ಯಾಗ್‌ ಮೂಲಕ ಬಳಕೆದಾರರ ಶುಲ್ಕವನ್ನು ಕಡ್ಡಾಯಗೊಳಿಸಿದ ನಂತರ, ಫಾಸ್ಟ್‌ಟ್ಯಾಗ್‌ ಮೂಲಕ ಟೋಲ್ ಸಂಗ್ರಹವು ಸ್ಥಿರವಾದ ಬೆಳವಣಿಗೆಯನ್ನು ಕಂಡಿದೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (ಎನ್‌ಎಚ್‌ಎಐ) ಹೇಳಿಕೊಂಡಿದೆ. ಆದ್ರೆ ಕೆಲವೊಂದು ಬ್ಯಾಂಕ್ ಮೂಲಕ ಫಾಸ್ಟ್‌ಟ್ಯಾಗ್ ಪಡೆದ ಗ್ರಾಹಕರು ಟೋಲ್‌ಗಳಲ್ಲಿ ಪಾಸ್ಟ್‌ಟ್ಯಾಗ್ ಸರಿಯಾಗಿ ಕಾರ್ಯ ನಿರ್ವಹಿಸದ ಪರಿಣಾಮ ದುಪ್ಪಟ್ಟು ಹಣ ಕೊಡುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ.

 
ಫಾಸ್ಟ್‌ಟ್ಯಾಗ್ ಸಮಸ್ಯೆ: ದುಪ್ಪಟ್ಟು ಹಣ ಕಟ್ಟುವ ಪರಿಸ್ಥಿತಿ ನಿರ್ಮಾಣ!

ಪ್ರತಿದಿನ ದೇಶಾದ್ಯಂತ ವಿವಿಧ ಟೋಲ್‌ಗಳಲ್ಲಿ ಈ ಫಾಸ್ಟ್‌ಟ್ಯಾಗ್ ಸ್ಕ್ಯಾನ್ ಆಗದ ಸಮಸ್ಯೆ ಇದ್ದೇ ಇರುತ್ತದೆ. ಒಂದಲ್ಲಾ ಒಂದು ಬ್ಯಾಂಕ್‌ನ ಫಾಸ್ಟ್‌ ಟ್ಯಾಗ್‌ ಸ್ಕ್ಯಾನ್ ಆಗದೆ ಜನರು ದುಪ್ಪಟ್ಟು ಹಣ ಕಟ್ಟುತ್ತಿದ್ದಾರೆ. ಹಣ ಕೊಟ್ಟು ರೀಚಾರ್ಜ್ ಮಾಡಿದ್ರೂ ಸಹ ಸ್ಕ್ಯಾನ್ ಆಗದ ಪರಿಣಾಮ, ಮತ್ತೆ ಹಣವನ್ನೇ ಕೊಟ್ಟು ಹೋಗುವಂತಾಗಿದೆ.

ಈ ಮೇಲ್ಕಂಡ ವೀಡಿಯೋದಲ್ಲಿನ ಗ್ರಾಹಕರು ಎದುರಿಸಿರುವ ಸಮಸ್ಯೆ ಕೇವಲ ಒಂದು ಉದಾಹರಣೆಯಷ್ಟೆ. ಐಡಿಎಫ್‌ಸಿ ಬ್ಯಾಂಕ್‌ನಿಂದ ಫಾಸ್ಟ್‌ಟ್ಯಾಗ್ ಪಡೆದಿದ್ದ ಈ ವ್ಯಕ್ತಿ ಹೇಳುವಂತೆ 3,000 ರೂಪಾಯಿ ರೀಚಾರ್ಜ್ ಮಾಡಿದ್ದಾರೆ. ಆದರೆ ಚೆಳ್ಳಗೆರೆ ಟೋಲ್‌ನಲ್ಲಿ ಸ್ಕ್ಯಾನ್ ಆಗದ ಕಾರಣ ದುಪ್ಪಟ್ಟು ಹಣ ಕೊಡುವಂತಾಗಿದೆ.

ಫಾಸ್ಟ್‌ಟ್ಯಾಗ್ ಸ್ಟಿಕ್ಕರ್‌ನಲ್ಲಿ ಸಮಸ್ಯೆ ಇದೆ, ಅದನ್ನು ಬದಲಾಯಿಸಬೇಕು ಎಂದು ಟೋಲ್‌ನ ಸಿಬ್ಬಂದಿ ಹೇಳುತ್ತಾರೆ. ಆದರೆ ಆ ಫಾಸ್ಟ್‌ಟ್ಯಾಗ್ ಸ್ಟಿಕ್ಕರ್ ಬದಲಾಯಿಸೋಕೆ, ಅದಕ್ಕೆ ಸಂಬಂಧಪಟ್ಟ ವ್ಯಕ್ತಿ ಇಲ್ಲ. ಹೀಗಾಗಿ ಫಾಸ್ಟ್‌ಟ್ಯಾಗ್ ಹೊಂದಿದ್ದರೂ , ರೀಚಾರ್ಜ್ ಆಗಿದ್ದರೂ ಸಮಸ್ಯೆ ಎದುರಿಸುವಂತಾಗಿದೆ.

ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (ಎನ್‌ಎಚ್‌ಎಐ) ಟೋಲ್‌ಗಳಲ್ಲಿ ಸುಲಭ ಸಂಚಾರಕ್ಕಾಗಿ ಈ ಫಾಸ್ಟ್‌ಟ್ಯಾಗ್ ಜಾರಿ ತಂದಿದೆ. ಆದ್ರೆ ಈ ರೀತಿಯ ಸಮಸ್ಯೆ ಎದುರಾದಾಗ ಟೋಲ್‌ ಫ್ರೀ ನಂಬರ್‌ನಿಂದಲೂ ತುರ್ತಾಗಿ ಪರಿಹಾರ ಸಿಗುತ್ತಿಲ್ಲ. ಹೀಗಾಗಿ ಜನಸಾಮಾನ್ಯರು ಎನ್‌ಎಸ್‌ಎಐಗೆ ಹಾಗೂ ಕೇಂದ್ರ ಸರ್ಕಾರಕ್ಕೆ ಹಿಡಿಶಾಪ ಹಾಕುತ್ತಿದ್ದಾರೆ.

Read more about: fastag money toll ಹಣ ಟೋಲ್
English summary

IDFC Bank Fastag Problem: Who Is Responsible for FasTag System?

Customers who have received FastTag through some bank have created a situation where the paytag does not work properly on the tolls.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X