For Quick Alerts
ALLOW NOTIFICATIONS  
For Daily Alerts

ಐಐಎಫ್‍ಎಲ್ ಫೈನಾನ್ಸ್ ಸೆಕ್ಯೂರ್ಡ್ ಬಾಂಡ್: ವಾರ್ಷಿಕ 8.75% ರಿಟರ್ನ್

|

ಭಾರತದ ಅತಿದೊಡ್ಡ ಬ್ಯಾಂಕೇತರ ಹಣಕಾಸು ಕಂಪನಿಗಳಲ್ಲಿ ಒಂದಾದ ಐಐಎಫ್‍ಎಲ್ ಫೈನಾನ್ಸ್, ವ್ಯಾಪಾರ ಬೆಳವಣಿಗೆ ಮತ್ತು ಬಂಡವಾಳ ವೃದ್ಧಿ ಉದ್ದೇಶಕ್ಕಾಗಿ ಸೆಕ್ಯೂರ್ಡ್ ಬಾಂಡ್‍ಗಳ ಮೂಲಕ ರೂ. 1000 ಕೋಟಿ ಕ್ರೋಢೀಕರಿಸುವ ದೃಷ್ಟಿಯಿಂದ ಸೆಪ್ಟೆಂಬರ್ 27, 2021 ರಂದು ಪಬ್ಲಿಕ್ ಇಶ್ಶೂ ತೆರೆಯಲಿದೆ. ಈ ಬಾಂಡ್‍ಗಳು 8.75% ವಾರ್ಷಿಕ ಪ್ರತಿಫಲ ಮತ್ತು ಹೆಚ್ಚಿನ ಮಟ್ಟದ ಸುರಕ್ಷತೆಯನ್ನು ನೀಡುತ್ತವೆ.

 

ಫೇರ್‍ಫ್ಯಾಕ್ಸ್-ಬೆಂಬಲಿತ ಐಐಎಫ್‍ಎಲ್ ಫೈನಾನ್ಸ್ ಸುರಕ್ಷಿತವಾದ ನಗದೀಕರಿಸಿಕೊಳ್ಳಬಹುದಾದ, ಪರಿವರ್ತನೀಯವಲ್ಲದ ಡಿಬೆಂಚರ್‍ಗಳನ್ನು (NSD) ಬಿಡುಗಡೆ ಮಾಡುತ್ತದೆ, ಒಟ್ಟು 100 ಕೋಟಿ ರೂಪಾಯಿಗಳನ್ನು ಗ್ರೀನ್‍ ಇಶೂ ಆಯ್ಕೆಯ ಮೂಲಕ ಮತ್ತು ಅಧಿಕ ಬೆಲೆಗೆ ಖರೀದಿಸುವ ಆಯ್ಕೆಯಡಿ 900 ಕೋಟಿ ರೂಪಾಯಿ (ಒಟ್ಟು 1000 ಕೋಟಿ ರೂಪಾಯಿ) ಸಂಗ್ರಹಿಸಲು ಉದ್ದೇಶಿಸಿದೆ.

ಜಾಗತಿಕ ಮಟ್ಟದ ಜೀರೋ -ಸಮ್ ಗೇಮ್ ಗೆ ಚೀನಾ ಚಕ್ಮೇಟ್ !

ಐಐಎಫ್‍ಎಲ್ ಬಾಂಡ್‍ಗಳು 60 ತಿಂಗಳ ಅವಧಿಗೆ ವಾರ್ಷಿಕ 8.75% ರಷ್ಟು ಆಕರ್ಷಕ ಪ್ರತಿಫಲವನ್ನು ನೀಡುತ್ತವೆ. ಕಂಪನಿಯು ಅಸ್ತಿತ್ವದಲ್ಲಿರುವ ಬಾಂಡ್ ಅಥವಾ ಈಕ್ವಿಟಿ ಷೇರುದಾರರಿಗೆ ವಾರ್ಷಿಕ 0.25% ಪ್ರೋತ್ಸಾಹವನ್ನು ನೀಡಲಿದೆ. ಎನ್‍ಸಿಡಿ 24 ತಿಂಗಳು, 36 ತಿಂಗಳು ಮತ್ತು 60 ತಿಂಗಳ ಅವಧಿಗಳಲ್ಲಿ ಲಭ್ಯವಿದೆ. ಬಡ್ಡಿಯ ಪಾವತಿಯ ಆವರ್ತನವು ಮಾಸಿಕ, ವಾರ್ಷಿಕ ಮತ್ತು ಮೆಚ್ಯೂರಿಟಿ ಆಧಾರದ ಮೇಲೆ 60 ತಿಂಗಳ ಅವಧಿಯವರೆಗೆ ಲಭ್ಯವಿರುತ್ತದೆ, ಇತರ ಅವಧಿಗಳಿಗೆ ಇದು ವಾರ್ಷಿಕವಾಗಿ ಮತ್ತು ಪರಿಪಕ್ವತೆ ಆಧಾರದ ಮೇಲೆ ಲಭ್ಯವಿದೆ.

ಐಐಎಫ್‍ಎಲ್ ಫೈನಾನ್ಸ್ ಸೆಕ್ಯೂರ್ಡ್ ಬಾಂಡ್: ವಾರ್ಷಿಕ 8.75% ರಿಟರ್ನ್

ಐಐಎಫ್‍ಎಲ್ ಫೈನಾನ್ಸ್ ಸಿಎಫ್‍ಓ ರಾಜೇಶ್ ರಜಕ್ ಈ ಬಗ್ಗೆ ಮಾತನಾಡಿ, "ಭಾರತದಾದ್ಯಂತ 2500ಕ್ಕೂ ಹೆಚ್ಚು ಶಾಖೆಗಳ ಬಲವಾದ ಭೌತಿಕ ಉಪಸ್ಥಿತಿ ಮತ್ತು ವೈವಿಧ್ಯಮಯ ಚಿಲ್ಲರೆ ಬಂಡವಾಳವನ್ನು ಹೊಂದಿರುವ ಐಐಎಫ್‍ಎಲ್ ಫೈನಾನ್ಸ್, ಸೌಲಭ್ಯವಂಚಿತ ಜನಸಂಖ್ಯೆಯ ಸಾಲದ ಅಗತ್ಯವನ್ನು ಪೂರೈಸುತ್ತದೆ. ಸಂಗ್ರಹಿಸಿದ ಹಣವನ್ನು ಅಂಥ ಹೆಚ್ಚಿನ ಗ್ರಾಹಕರ ಸಾಲದ ಅಗತ್ಯವನ್ನು ಪೂರೈಸಲು ಮತ್ತು ಸುಲಲಿತ ಅನುಭವವನ್ನು ಸಕ್ರಿಯಗೊಳಿಸಲು ನಮ್ಮ ಡಿಜಿಟಲ್ ಪ್ರಕ್ರಿಯೆಯ ರೂಪಾಂತರವನ್ನು ವೇಗಗೊಳಿಸಲು ಬಳಸಲಾಗುತ್ತದೆ" ಎಂದು ಬಣ್ಣಿಸಿದರು.

 

"ಐಐಎಫ್‍ಎಲ್ 25 ವರ್ಷಗಳಿಗಿಂತ ಹೆಚ್ಚು ಕಳಂಕರಹಿತ ಇತಿಹಾಸವನ್ನು ಹೊಂದಿದೆ ಮತ್ತು ಎಲ್ಲ ಬಾಂಡ್ ಸಮಸ್ಯೆಗಳು ಮತ್ತು ಸಾಲದ ಬಾಧ್ಯತೆಗಳನ್ನು ಯಾವಾಗಲೂ ಸಮಯಕ್ಕೆ ಸರಿಯಾಗಿ ಪಾವತಿಸುತ್ತಾ ಬಂದಿದೆ" ಎಂದು ಅವರು ಹೇಳಿದರು.

ಐಐಎಫ್‍ಎಲ್ ಫೈನಾನ್ಸ್ ಭಾರತದ ಅತಿದೊಡ್ಡ ಚಿಲ್ಲರೆ ಕೇಂದ್ರಿತ ಹಣಕಾಸು ಸೇವಾ ಕಂಪನಿಗಳಲ್ಲಿ ಒಂದಾಗಿದೆ. ನಿರ್ವಹಣೆ ಅಡಿಯಲ್ಲಿ ಐಐಎಫ್‍ಎಲ್ ಫೈನಾನ್ಸ್ ನ ಸಾಲದ ಆಸ್ತಿಗಳು ಜೂನ್ 30, 2021 ರ ವೇಳೆಗೆ 43,160 ಕೋಟಿ ರೂಪಾಯಿಗಳಾಗಿವೆ. ಮುಖ್ಯವಾಗಿ, ಒಟ್ಟು ವಹಿವಾಟಿಗ 93% ರಷ್ಟು ಪ್ರಮಾಣ ಚಿಲ್ಲರೆ ವ್ಯಾಪಾರವಾಗಿದೆ. ಇದು ಸಣ್ಣ ಟಿಕೆಟ್ ಸಾಲಗಳ ಮೇಲೆ ಕೇಂದ್ರೀಕೃತವಾಗಿದೆ.

ಐಐಎಫ್‍ಎಲ್ ಫೈನಾನ್ಸ್ ಕಾರ್ಯಾಚರಣೆಯ ವರ್ಷಗಳಲ್ಲಿ ನಿರಂತರವಾಗಿ ಕಡಿಮೆ ಮಟ್ಟದ ಎನ್‍ಪಿಎಗಳನ್ನು ನಿರ್ವಹಿಸುತ್ತಿದೆ ಮತ್ತು ಒಟ್ಟು ಎನ್‍ಪಿಎ ಪ್ರಮಾಣ ಶೇಕಡ 2.21ರಷ್ಟಾಗಿದೆ. ನಿವ್ವಳ ಎನ್‍ಪಿಎ 1.02% ಇದ್ದು, ಈ ಸಂಸ್ಥೆ ಉತ್ತಮ ಗುಣಮಟ್ಟದ ಸ್ವತ್ತುಗಳ ಮೇಲೆ ಗಮನ ಕೇಂದ್ರೀಕರಿಸಿದೆ. ಜೂನ್ 30 ರ ಹೊತ್ತಿಗೆ, ಕಂಪನಿಯ ಕ್ರೋಢೀಕೃತ ಸಾಲದ ಪುಸ್ತಕದ ಸುಮಾರು 86% ನಷ್ಟು ಸಾಲಗಳು ಸಮರ್ಪಕವಾದ ಮೇಲಾಧಾರಗಳೊಂದಿಗೆ ಸುರಕ್ಷಿತವಾಗಿರುತ್ತದೆ. ಇದು ಅಪಾಯಗಳನ್ನು ಮತ್ತಷ್ಟು ತಗ್ಗಿಸಲು ಸಹಾಯ ಮಾಡುತ್ತದೆ.

2022ರ ಮೊದಲನೇ ತ್ರೈಮಾಸಿಕ ಅವಧಿಯಲ್ಲಿ, ಐಐಎಫ್‍ಎಲ್ ಫೈನಾನ್ಸ್ ತೆರಿಗೆ ನಂತರ 266 ಕೋಟಿ ರೂಪಾಯಿಗಳ ಲಾಭವನ್ನು ವರದಿ ಮಾಡಿದೆ. ಇದು ಕಳೆದ ವರ್ಷಕ್ಕೆ ಹೋಲಿಸಿದರೆ ಶೇಕಡ 735ರಷ್ಟು ಅಧಿಕ ಹಾಗೂ ಈಕ್ವಿಟಿಯ ಮೇಲೆ ಶೇಕಡ 19.7ರಷ್ಟು ಪ್ರತಿಫಲವನ್ನು ನೀಡುತ್ತದೆ. ಇದು ಹಲವು ಬ್ಯಾಂಕುಗಳು ಮತ್ತು ಹಣಕಾಸು ಸಂಸ್ಥೆಗಳೊಂದಿಗೆ ಬಲವಾದ ಸಂಬಂಧವನ್ನು ಹೊಂದಿದೆ.

ಈ ಪಬ್ಲಿಕ್ ಇಶ್ಯೂವಿನ ಪ್ರಮುಖ ವ್ಯವಸ್ಥಾಪಕರು ಎಡೆಲ್ವಿಸ್ ಫೈನಾನ್ಶಿಯಲ್ ಸರ್ವೀಸಸ್ ಲಿಮಿಟೆಡ್, ಇಕ್ವೈರಸ್ ಕ್ಯಾಪಿಟಲ್ ಪ್ರೈವೇಟ್ ಲಿಮಿಟೆಡ್, ಐಐಎಎಫ್‍ಎಲ್ ಸೆಕ್ಯುರಿಟೀಸ್ ಲಿಮಿಟೆಡ್ ಆಗಿವೆ. ಹೂಡಿಕೆದಾರರಿಗೆ ದ್ರವ್ಯತೆಯನ್ನು ಒದಗಿಸಲು ಎನ್‍ಸಿಡಿಗಳನ್ನು ಬಿಎಸ್‍ಇ ಲಿಮಿಟೆಡ್ ಮತ್ತು ನ್ಯಾಷನಲ್ ಸ್ಟಾಕ್ ಎಕ್ಸ್ಚೇಂಜ್ ಆಫ್ ಇಂಡಿಯಾ ಲಿಮಿಟೆಡ್ (ಎನ್‍ಎಸ್‍ಡಿ) ಪಟ್ಟಿ ಮಾಡಲಾಗುತ್ತದೆ. ಐಐಎಫ್‍ಎಲ್ ಬಾಂಡ್‍ಗಳನ್ನು 1,000 ರೂಪಾಯಿ ಮುಖಬೆಲೆಯಲ್ಲಿ ನೀಡಲಾಗುತ್ತದೆ ಮತ್ತು ಕನಿಷ್ಠ ಅರ್ಜಿ ಪ್ರಮಾಣವು ಎಲ್ಲ ವರ್ಗಗಳಲ್ಲಿ 10,000 ರೂ ಆಗಿದ್ದು, ಪಬ್ಲಿಕ್ ಇಶ್ಶೂ ಸೆಪ್ಟೆಂಬರ್ 27, 2021 ರಂದು ತೆರೆಯುತ್ತದೆ ಮತ್ತು ಮುಂಚಿತವಾಗಿ ಮುಚ್ಚುವ ಆಯ್ಕೆಯೊಂದಿಗೆ ಅಕ್ಟೋಬರ್ 18, 2021 ರಂದು ಮುಚ್ಚುತ್ತದೆ. ಮೊದೂದಲು ಬಂದವರಿಗೆ ಮೊದಲ ಆದ್ಯತೆ ಮೇಲೆ ಹಂಚಿಕೆ ಮಾಡಲಾಗುತ್ತದೆ.

English summary

IIFL Finance to raise up to Rs. 1,000 crore via secured bonds, offers up to 8.75% yield

IIFL Finance, one of India’s largest Non-Banking Financial Companies, will open a public issue of secured bonds on September 27, 2021, to raise up to Rs. 1,000 crore, for the purpose of business growth and capital augmentation.
Story first published: Friday, September 24, 2021, 17:34 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X