For Quick Alerts
ALLOW NOTIFICATIONS  
For Daily Alerts

"ಬೇನಾಮಿ ಆಸ್ತಿ ಬಗ್ಗೆ ಆನ್ ಲೈನ್ ದೂರು ನೀಡಿ, ಬಹುಮಾನ ಪಡೆಯಿರಿ"

|

ಆದಾಯ ತೆರಿಗೆ ಇಲಾಖೆಯಿಂದ ಹೊಸ ಆನ್ ಲೈನ್ ವ್ಯವಸ್ಥೆ ಆರಂಭಿಸಲಾಗಿದೆ. ಇದರ ಮೂಲಕ ಜನರು ವ್ಯಕ್ತಿ ಅಥವಾ ಸಂಸ್ಥೆಗಳ ವಿದೇಶದಲ್ಲಿ ಇರುವ ಲೆಕ್ಕಕ್ಕೆ ನೀಡದ ಆಸ್ತಿ, ಬೇನಾಮಿ ಸ್ವತ್ತು ಅಥವಾ ಯಾವುದೇ ತೆರಿಗೆ ಕಳುವಿನ ಮಾಹಿತಿ ನೀಡಬಹುದು ಎಂದು ಮಂಗಳವಾರ ಸಿಬಿಡಿಟಿ ಹೇಳಿದೆ.

 

ಇ ಫೈಲಿಂಗ್ ಪೋರ್ಟಲ್ https://www.incometaxindiaefiling.gov.inನಲ್ಲಿ ಸೋಮವಾರ "submit tax evasion petition or benami property holding" ಲಿಂಕ್ ಗೆ ಚಾಲನೆ ನೀಡಲಾಗಿದೆ. ಈಗಾಗಲೇ PAN ಇರುವವರು ಮತ್ತು ಆಧಾರ್ ಇರುವಂಥವರು ಅಥವಾ PAN ಅಥವಾ ಆಧಾರ್ ಯಾವುದೂ ಇಲ್ಲದವರು ದೂರು ನೀಡಬಹುದು.

 

ಭಾರತೀಯರ ವಿದೇಶದಲ್ಲಿರುವ ಕಪ್ಪು ಹಣ, ಅಕ್ರಮ ಆಸ್ತಿ ತನಿಖೆಗೆ ವಿಶೇಷ ಘಟಕಭಾರತೀಯರ ವಿದೇಶದಲ್ಲಿರುವ ಕಪ್ಪು ಹಣ, ಅಕ್ರಮ ಆಸ್ತಿ ತನಿಖೆಗೆ ವಿಶೇಷ ಘಟಕ

ಆ ನಂತರ ನೋಂದಾಯಿತಿ ಮೊಬೈಲ್ ಮತ್ತು/ಅಥವಾ ಇ ಮೇಲ್ ಗೆ ಒಟಿಪಿ ಬರುತ್ತದೆ. ಅದನ್ನು ಬಳಸಿ, ಆದಾಯ ತೆರಿಗೆ ಕಾಯ್ದೆ 1961ರ ಉಲ್ಲಂಘನೆ ಬಗ್ಗೆ ದೂರನ್ನು ನೀಡಬಹುದು. ಅದರಲ್ಲಿ ಕಪ್ಪುಹಣ, ತೆರಿಗೆ ವಿಧಿಸುವ ಕಾಯ್ದೆ ಮತ್ತು ಬೇನಾಮಿ ವ್ಯವಹಾರಗಳ ನಿಯಂತ್ರಣ ಕಾಯ್ದೆ ಹೀಗೆ ಮೂರು ಪ್ರತ್ಯೇಕ ಅರ್ಜಿಗಳು ಇರುತ್ತವೆ. ಆ ಮೂಲಕ ದೂರು ನೀಡಬಹುದು ಎಂದು ತಿಳಿಸಲಾಗಿದೆ.

ಒಂದು ಸಲ ದೂರು ದಾಖಲಾದ ಮೇಲೆ ಇಲಾಖೆಯಿಂದ ವಿಶಿಷ್ಟ ಅಂಕೆಯನ್ನು ನೀಡಲಾಗುತ್ತದೆ. ಅದೇ ವೆಬ್ ಲಿಂಕ್ ನಲ್ಲಿ ದೂರಿನ ಸ್ಥಿತಿಯನ್ನು ಪರಿಶೀಲಿಸಬಹುದು. ಇನ್ನು ಈ ವ್ಯವಸ್ಥೆ ಮೂಲಕ "ಮಾಹಿತಿದಾರರಾಗಿ", ಬಹುಮಾನವನ್ನು ಸಹ ಪಡೆಯಬಹುದು. ಇಷ್ಟು ಸಮಯ ಇಂಥ ದೂರು ನೀಡಬೇಕಿದ್ದಲ್ಲಿ ಭಾರತೀಯ ನಾಗರಿಕರು ಐ.ಟಿ. ತನಿಖಾ ವಿಭಾಗ ದಳದ ಕಚೇರಿಗೆ ವೈಯಕ್ತಿಕವಾಗಿ ಭೇಟಿ ನೀಡಿ, ಮಾಹಿತಿ ನೀಡಬೇಕಿತ್ತು. ವಿದೇಶಿಗರು ಸಾಕ್ಷ್ಯ ಸಹಿತ ಇಮೇಲ್ ಮಾಡಬಹುದಿತ್ತು.

ಈಗ ಇರುವ ನಿಯಮಾವಳಿಗಳ ಪ್ರಕಾರ ಬೇನಾಮಿ ಆಸ್ತಿ ಪ್ರಕರಣದಲ್ಲಿ 1 ಕೋಟಿ ರುಪಾಯಿ ತನಕ, ಇತರ ತೆರಿಗೆ ಕಳುವಿನ ಪ್ರಕರಣಗಳಲ್ಲಿ ಗರಿಷ್ಠ 5 ಕೋಟಿ ರುಪಾಯಿ ತನಕ ಬಹುಮಾನ ಇದೆ. ಅದಕ್ಕೆ ಕೆಲ ನಿಬಂಧನೆಗಳು ಸಹ ಇವೆ.

English summary

Income Tax Dept Launches Online Facility To Tip It Off On Benami Properties

Income Tax department Tuesday launches online facility to tip it off on tax evasion, unaccounted assets and benami properties.
Story first published: Tuesday, January 12, 2021, 23:32 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X