For Quick Alerts
ALLOW NOTIFICATIONS  
For Daily Alerts

40 ಲಕ್ಷ ಆದಾಯ ತೆರಿಗೆದಾರರಿಗೆ 1.36 ಲಕ್ಷ ಕೋಟಿ ರು. ಮರುಪಾವತಿ

|

ಆದಾಯ ತೆರಿಗೆ ಇಲಾಖೆಯಿಂದ ಪ್ರಸಕ್ತ ಹಣಕಾಸು ವರ್ಷದಲ್ಲಿ ಇಲ್ಲಿಯ ತನಕ 40 ಲಕ್ಷ ಆದಾಯ ತೆರಿಗೆದಾರರಿಗೆ 1.36 ಲಕ್ಷ ಕೋಟಿ ರುಪಾಯಿ ಮೌಲ್ಯದ ಮರುಪಾವತಿ ಮಾಡಲಾಗಿದೆ. ಇದರಲ್ಲಿ ವೈಯಕ್ತಿಕ ಆದಾಯ ತೆರಿಗೆ ಮರುಪಾವತಿ ಮೊತ್ತವಾದ 35,750 ಕೋಟಿ ರುಪಾಯಿ ಮತ್ತು ಕಾರ್ಪೊರೇಟ್ ತೆರಿಗೆ ಮರುಪಾವತಿ ಮೊತ್ತ 1 ಲಕ್ಷ ಕೋಟಿ ರುಪಾಯಿಗೂ ಹೆಚ್ಚು ಮೊತ್ತ ಒಳಗೊಂಡಿದೆ.

ಆದಾಯ ತೆರಿಗೆ ಇಲಾಖೆಯಿಂದ 88,652 ಸಾವಿರ ಕೋಟಿ ರೀಫಂಡ್ಆದಾಯ ತೆರಿಗೆ ಇಲಾಖೆಯಿಂದ 88,652 ಸಾವಿರ ಕೋಟಿ ರೀಫಂಡ್

ಏಪ್ರಿಲ್ 1, 2020ರಿಂದ ನವೆಂಬರ್ 17, 2020ರ ಮಧ್ಯೆ CBDTಯಿಂದ 40.19 ಲಕ್ಷಕ್ಕೂ ಹೆಚ್ಚು ತೆರಿಗೆ ಪಾವತಿದಾರರಿಗೆ 1,36,066 ಕೋಟಿ ರುಪಾಯಿಯನ್ನು ಮರುಪಾವತಿ ಮಾಡಲಾಗಿದೆ. ಆದಾಯ ತೆರಿಗೆ ಮರುಪಾವತಿಯನ್ನು 38,23,304 ಪ್ರಕರಣದಲ್ಲಿ 35,750 ಕೋಟಿ ರುಪಾಯಿ ಮಾಡಲಾಗಿದೆ.

40 ಲಕ್ಷ ಆದಾಯ ತೆರಿಗೆದಾರರಿಗೆ 1.36 ಲಕ್ಷ ಕೋಟಿ ರು. ಮರುಪಾವತಿ

ಇನ್ನು ಕಾರ್ಪೊರೇಟ್ ತೆರಿಗೆ ವಿಚಾರಕ್ಕೆ ಬಂದಲ್ಲಿ 1,95,518 ಪ್ರಕರಣಗಳಲ್ಲಿ 1,00,316 ಕೋಟಿ ರುಪಾಯಿಯನ್ನು ವಿತರಣೆ ಮಾಡಲಾಗಿದೆ ಎಂದು ಆದಾಯ ತೆರಿಗೆ ಇಲಾಖೆಯ ಟ್ವೀಟ್ ನಲ್ಲಿ ತಿಳಿಸಲಾಗಿದೆ. ಕೊರೊನಾ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ಶೀಘ್ರವಾಗಿ ತೆರಿಗೆ ಮರುಪಾವತಿ ಮಾಡುವಂತೆ ಕೇಂದ್ರ ಸರ್ಕಾರವು ಸೂಚನೆ ನೀಡಿತ್ತು.

English summary

IT refunds worth Rs 1.36 lakh cr issued to 40.19 lakh taxpayers till Nov 17

Income Tax department refund 1.36 lakh crore rupees to 40 lakh tax payers till date, November 18, 2020.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X