For Quick Alerts
ALLOW NOTIFICATIONS  
For Daily Alerts

ಡಿಜಿಟಲ್ ಕರೆನ್ಸಿ ಮೇಲೆ ಶೇ.30ರಷ್ಟು ತೆರಿಗೆ ಉಳಿತಾಯ ಹೇಗೆ?

|

ನವದೆಹಲಿ, ಫೆಬ್ರವರಿ 8: ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ ಮಂಡಿಸಿದ 2022-23ನೇ ಸಾಲಿನ ಬಜೆಟ್ ದೇಶದ ಡಿಜಿಟಲ್ ಹಣದ ಮೇಲೆ ಹೂಡಿಕೆ ಮಾಡುವವರಿಗೆ ಸಿಹಿಸುದ್ದಿ ನೀಡಿದೆ. ಡಿಜಿಟಲ್ ವಹಿವಾಟಿಗೆ ಅನುಮತಿ ನೀಡಿದ ಸರ್ಕಾರದ ಕೊಂಚ ಷರತ್ತುಗಳನ್ನೂ ಸಹ ವಿಧಿಸಿದೆ. ಡಿಜಿಟಲ್ ಕರೆನ್ಸಿ ವಟಿವಾಹಿನ ಮೇಲೆ ಶೇ.30ರಷ್ಟು ತೆರಿಗೆ ವಿಧಿಸುವುದಾಗಿ ಘೋಷಿಸಿದೆ.

 

"ವರ್ಚುವಲ್ ಡಿಜಿಟಲ್ ಸ್ವತ್ತುಗಳ ವಹಿವಾಟುಗಳು ತೀವ್ರ ಪ್ರಮಾಣದಲ್ಲಿ ಹೆಚ್ಚಳವಾಗುತ್ತಿದೆ. ಇಂಥ ವಟಿವಾಟಿನ ವರ್ಗಾವಣೆ ಮೇಲೆ ತೆರಿಗೆ ವಿಧಿಸಲಾಗುವುದನ್ನು ಕಡ್ಡಾಯಗೊಳಿಸಲಾಗಿದೆ. ಅಂತೆ ವರ್ಚುವಲ್ ಡಿಜಿಟಲ್ ಆಸ್ತಿಗಳ ತೆರಿಗೆ ಹಾಗೂ ಯಾವುದೇ ವರ್ಚುವಲ್ ಡಿಜಿಟಲ್ ಆಸ್ತಿಯ ವರ್ಗಾವಣೆಯಿಂದ ಬರುವ ಆದಾಯದ ಮೇಲೆ ಶೇಕಡಾ 30ರ ದರದಲ್ಲಿ ತೆರಿಗೆ ವಿಧಿಸುವುದಕ್ಕೆ ನಾನು ಪ್ರಸ್ತಾಪಿಸುತ್ತೇನೆ," ಎಂದು ಕೇಂದ್ರ ಸಚಿವ ನಿರ್ಮಲಾ ಸೀತಾರಾಮನ್ ತಮ್ಮ ಬಜೆಟ್ ಭಾಷಣದಲ್ಲಿ ಉಲ್ಲೇಖಿಸಿದ್ದರು.

 

ಎಚ್‌‌ಡಿಎಫ್‌ಸಿ ಬ್ಯಾಂಕ್ ಉಳಿತಾಯ ಬ್ಯಾಂಕ್‌ ಬಡ್ಡಿದರ ಪರಿಷ್ಕರಣೆ: ಇಲ್ಲಿದೆ ವಿವರಎಚ್‌‌ಡಿಎಫ್‌ಸಿ ಬ್ಯಾಂಕ್ ಉಳಿತಾಯ ಬ್ಯಾಂಕ್‌ ಬಡ್ಡಿದರ ಪರಿಷ್ಕರಣೆ: ಇಲ್ಲಿದೆ ವಿವರ

"ಇದಲ್ಲದೆ, ವಹಿವಾಟಿನ ವಿವರಗಳನ್ನು ಸೆರೆಹಿಡಿಯಲು ವಿತ್ತೀಯ ಮಿತಿಗಿಂತ ಹೆಚ್ಚಿನ ಪರಿಗಣನೆಯ ಶೇ.1ರಷ್ಟು ವರ್ಚುವಲ್ ಡಿಜಿಟಲ್ ಆಸ್ತಿಯ ವರ್ಗಾವಣೆಗೆ ಸಂಬಂಧಿಸಿದಂತೆ ಮಾಡಿದ ಪಾವತಿಯ ಮೇಲೆ TDS ಅನ್ನು ವಿಧಿಸಲು ಪ್ರಸ್ತಾಪಿಸುತ್ತೇನೆ ಎಂದಿದ್ದಾರೆ.

ಡಿಜಿಟಲ್ ಕರೆನ್ಸಿ ಮೇಲೆ ಶೇ.30ರಷ್ಟು ತೆರಿಗೆ ಉಳಿತಾಯ ಹೇಗೆ?

ಡಿಜಿಟಲ್ ಕರೆನ್ಸಿ ಮೇಲಿನ ತೆರಿಗೆ ಉಳಿತಾಯ ಹೇಗೆ?:

ಫೈನಾನ್ಶಿಯಲ್ ಎಕ್ಸ್‌ಪ್ರೆಸ್‌ನ ವರದಿಯ ಪ್ರಕಾರ, ಪ್ರಸಕ್ತ ಹಣಕಾಸು ವರ್ಷದಲ್ಲಿ ಅಂದರೆ ಮಾರ್ಚ್ 31, 2022ಕ್ಕೆ ಕೊನೆಗೊಳ್ಳುವ ವರ್ಷದಲ್ಲಿ ಶೇ.30ರಷ್ಟು ತೆರಿಗೆಯು ಅನ್ವಯಿಸುವುದಿಲ್ಲ. ಆದ್ದರಿಂದ, ನೀವು ಮಾರ್ಚ್ 31, 2022ರ ಮೊದಲು ನಿಮ್ಮ ಡಿಜಿಟಲ್ ಆಸ್ತಿಯನ್ನು ಮಾರಾಟ ಮಾಡಿದರೆ, ಅವುಗಳ ಮಾರಾಟದಿಂದ ಬರುವ ಆದಾಯದ ಮೇಲೆ ಯಾವುದೇ ತೆರಿಗೆಯನ್ನು ವಿಧಿಸಲಾಗುವುದಿಲ್ಲ.

"ಏಪ್ರಿಲ್ 1ರ ಮೊದಲು ವಹಿವಾಟುಗಳಿಗಾಗಿ, ನಿಮ್ಮ ITR ನಲ್ಲಿ ನೀವು ಕೆಲವು ತಲೆಗಳನ್ನು ತೋರಿಸುತ್ತೀರಿ ಮತ್ತು ಮೌಲ್ಯಮಾಪನ ಅಧಿಕಾರಿಯು ನಿಮಗಾಗಿ ಮೌಲ್ಯಮಾಪನವನ್ನು ಮಾಡುತ್ತಾರೆ," ಕಂದಾಯ ಕಾರ್ಯದರ್ಶಿ ತರುಣ್ ಬಜಾಜ್ ಹೇಳಿದ್ದಾರೆ.

ಡಿಜಿಟಲ್ ಆಸ್ತಿ ಮಾರಾಟದ ಮೇಲಿನ ಒಟ್ಟು ಮೌಲ್ಯಮಾಪನ ಮಾಡುವುದನ್ನು ಸಂಬಂಧಿತ ಅಧಿಕಾರಿಗೆ ಬಿಡಲಾಗಿದೆ. ಆದಾಯದ ಮೇಲೆ ಯಾವುದೇ ರೀತಿ ತೆರಿಗೆ ವಿಧಿಸುವುದಿಲ್ಲ ಎಂದು ಹೇಳಲಾಗುವುದಿಲ್ಲ. ಆದರೆ ಈ ಆರ್ಥಿಕ ಸಾಲಿನಲ್ಲಿ ವಿಧಿಸುವ ಲಾಭದ ಮೇಲಿನ ತೆರಿಗೆಯು ಶೇಕಡಾ 30ರಷ್ಟು ಆಗಿರುವುದಿಲ್ಲ ಎಂದು ವರಿಯಲ್ಲಿ ಹೇಳಲಾಗಿದೆ. ಅಲ್ಲದೆ, ಜುಲೈ 2022 ರಿಂದ ಶೇ.1ರಷ್ಟು ಟಿಡಿಎಸ್ ನಿಯಮವೂ ಅನ್ವಯಿಸುತ್ತದೆ ಎಂದು ವರದಿ ಹೇಳಿದೆ.

ಜಾಗತಿಕ ಕ್ರಿಪ್ಟೋಕರೆನ್ಸಿ ಮಾರುಕಟ್ಟೆಯ ಮೌಲ್ಯ:

ಜಾಗತಿಕ ಮಟ್ಟದ ಕ್ರಿಪ್ಟೋಕರೆನ್ಸಿ ಮಾರುಕಟ್ಟೆಯಲ್ಲಿ ಏರಿಳಿತ ಮುಂದುವರಿದಿದೆ. ಒಟ್ಟಾರೆ, ಎಲ್ಲಾ ಕ್ರಿಪ್ಟೋಕರೆನ್ಸಿಗಳ ಮಾರುಕಟ್ಟೆ ಮೌಲ್ಯ 1,691,673,882,424 ಯುಎಸ್ ಡಾಲರ್ ಗೇರಿದೆ. ಕ್ರಿಪ್ಟೋಕರೆನ್ಸಿ ಮೇಲೆ ಹೂಡಿಕೆಗೆ ಜಗತ್ತಿನ ಬಹುತೇಕ ರಾಷ್ಟ್ರಗಳು ನಿಯಂತ್ರಣ ಹೇರಿವೆ. ಹೀಗಿದ್ದರೂ ಪ್ರಮುಖ ಕ್ರಿಪ್ಟೋಕರೆನ್ಸಿಗಳ ಬೆಲೆಯಲ್ಲಿ ಏರಿಕೆ ಮುಂದುವರಿದಿದೆ. ಕ್ರಿಪ್ಟೋಕರೆನ್ಸಿಗಳ ಖರೀದಿ ಪ್ರಮಾಣ ಹೆಚ್ಚಾಗುತ್ತಿದ್ದಂತೆ ಕ್ರಿಪ್ಟೋಕರೆನ್ಸಿಗಳ ಮೌಲ್ಯದಲ್ಲಿ ಭಾರಿ ಏರಿಕೆ ಕಂಡು ಬರುತ್ತಿದೆ. ಭಾರತದಲ್ಲಿ ಕ್ರಿಪ್ಟೋಕರೆನ್ಸಿ ಸೇರಿದಂತೆ ಡಿಜಿಟಲ್ ಕರೆನ್ಸಿಗಳ ವರ್ಗಾವಣೆ ಮೇಲೆ ಶೇ.30ರಷ್ಟು ತೆರಿಗೆ ವಿಧಿಸಲು ಕೇಂದ್ರ ಸರ್ಕಾರ ಈಗಾಗಲೇ ನಿರ್ಧರಿಸಿದೆ.

ಏನಿದು ಬಿಟ್‌ಕಾಯಿನ್ ಮತ್ತು ಕ್ರಿಪ್ಟೋ ಮಾರುಕಟ್ಟೆ?:

ಬಿಟ್‌ಕಾಯಿನ್ ಕ್ರಿಪ್ಟೋಕರೆನ್ಸಿಯಾಗಿದ್ದು, ಇದು ಆಧುನಿಕ ಡಿಜಿಟಲ್ ಯುಗದ ಡಿಜಿಟಲ್ ಕರೆನ್ಸಿ ಆಗಿದೆ. ಈ ಕ್ರಿಪ್ಟೋ ಕರೆನ್ಸಿಗೆ ಯಾವುದೇ ರೀತಿಯ ಮುದ್ರಣ ರೂಪ ಇರುವುದಿಲ್ಲ. ಬಿಟ್ ಕಾಯಿನ್ ಎಂಬ ಕರೆನ್ಸಿಯು ಕೇವಲ ಎಲೆಕ್ಟ್ರಾನಿಕ್ ರೂಪದಲ್ಲಿರುತ್ತದೆ. ರೂಪಾಯಿ, ಡಾಲರ್, ಯುರೋಗಳಂತೆ ಭೌತಿಕ ರೂಪದಲ್ಲಿ ಇರುವುದಿಲ್ಲ. ಅಲ್ಲದೇ ಇದಕ್ಕೆ ಯಾವುದೇ ದೇಶ, ಭಾಷೆ, ಬ್ಯಾಂಕ್ ಇದ್ಯಾವುದು ಇರುವುದಿಲ್ಲ.

English summary

India: How To Save 30 Per Cent Tax On Cryptocurrency Income? Know How Here

India: How To Save 30 Per Cent Tax On Cryptocurrency Income? Know How Here.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X