For Quick Alerts
ALLOW NOTIFICATIONS  
For Daily Alerts

ಭಾರತ ಯುಎಸ್‌ಗೆ ಅತೀ ಮುಖ್ಯ ದೇಶ, 'ಫ್ರೆಂಡ್‌ಶೋರಿಂಗ್': ಯುಎಸ್ ನಾಯಕಿ

|

ಯುನೈಟೆಡ್ ಸ್ಟೇಟ್ಸ್‌ಗೆ ಭಾರತ ಅತೀ ಮುಖ್ಯವಾದ ಪಾಲುದಾರ ದೇಶ ಎಂದು ಅಮೆರಿಕದ ಹಣಕಾಸು ಸಚಿವೆ ಜಾನೆಟ್ ಯೆಲನ್ ಹೇಳಿದ್ದಾರೆ. ಜಿ20ಯಲ್ಲಿ ನವದೆಹಲಿಯ ಅಧ್ಯಕ್ಷತೆಯನ್ನು ವಾಷಿಂಗ್ಟನ್ ಬೆಂಬಲಿಸಲು ಸಿದ್ಧವಾಗಿದೆ, ಫ್ರೆಂಡ್‌ಶೋರಿಂಗ್ ಎಂದು ಕೂಡಾ ತಿಳಿಸಿದ್ದಾರೆ.

 

ಯುಎಸ್‌-ಭಾರತದ ನಡುವಿನ ವ್ಯಾಪಾರ ಹಾಗೂ ಹೂಡಿಕೆ ಅವಕಾಶ ಸಂಬಂಧಿತ ಕಾರ್ಯಕ್ರಮದಲ್ಲಿ ಯುಎಸ್ ಹಣಕಾಸು ಸಚಿವೆ ಜಾನೆಟ್ ಯೆಲನ್ ಈ ಮಾತನ್ನು ಹೇಳಿದ್ದಾರೆ. ಯೆಲನ್ ಯುಎಸ್‌ನಲ್ಲಿ ಸಚಿವೆಯಾದ ಬಳಿಕ ಮೊದಲ ಬಾರಿಗೆ ಭಾರತಕ್ಕೆ ಭೇಟಿ ನೀಡಿದ್ದಾರೆ. ಈ ಕಾರ್ಯಕ್ರಮದಲ್ಲೇ ಮಾತನಾಡಿದ ದೇಶದ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಭಾರತ ವಿಶ್ವದಲ್ಲಿ ಅತೀ ವೇಗವಾಗಿ ಬೆಳೆಯುತ್ತಿರುವ ಆರ್ಥಿಕತೆಯಲ್ಲಿ ಒಂದಾಗಿದೆ ಎಂದು ಹೇಳಿದ್ದಾರೆ.

ಭಾರತ ಇತ್ತೀಚೆಗೆ ಯುಕೆಯನ್ನು ಹಿಂದಿಕ್ಕಿ ವಿಶ್ವದ ಐದನೇ ಅತೀ ದೊಡ್ಡ ಆರ್ಥಿಕತೆ ಇರುವ ದೇಶ ಎಂದೆನಿಸಿಕೊಂಡಿದೆ. ಹಾಗೆಯೇ ಮುಂದಿನ 10-15 ವರ್ಷಗಳಲ್ಲಿ ವಿಶ್ವದ ಪ್ರಮುಖ ಮೂರು ಅತೀ ದೊಡ್ಡ ಆರ್ಥಿಕತೆ ಹೊಂದಿರುವ ದೇಶಗಳಲ್ಲಿ ಭಾರತ ಕೂಡಾ ಒಂದಾಗುವ ನಿರೀಕ್ಷೆಯಿದೆ ಎಂದು ಕೂಡಾ ಜಾನೆಟ್ ಯೆಲನ್ ಹೇಳಿಕೊಂಡಿದ್ದಾರೆ. ಅಷ್ಟಕ್ಕೂ ಈ ಫ್ರೆಂಡ್‌ಶೋರಿಂಗ್ ಎಂದರೇನು?, ಈ ಬಗ್ಗೆ ಇಲ್ಲಿದೆ ಅಧಿಕ ಮಾಹಿತಿ ಮುಂದೆ ಓದಿ...

  ಜಿ20ಯ ಅಧ್ಯಕ್ಷತೆ: ಭಾರತದೊಂದಿಗೆ ಯುಎಸ್

ಜಿ20ಯ ಅಧ್ಯಕ್ಷತೆ: ಭಾರತದೊಂದಿಗೆ ಯುಎಸ್

"ಪ್ರಸ್ತುತ ಸ್ಥಿತಿಯು ಭಾರತ ಹಾಗೂ ಯುನೈಟೆಡ್ ಸ್ಟೇಟ್ಸ್ ನಡುವೆ ಇನ್ನಷ್ಟು ಭಾಂದವ್ಯವನ್ನು ಹೆಚ್ಚಿಸುತ್ತಿದೆ. ಭಾರತ ಜಿ20ಯ ಅಧ್ಯಕ್ಷತೆಯನ್ನು ವಹಿಸಿಕೊಳ್ಳಲು ಸಿದ್ಧವಾಗುತ್ತಿರುವಾಗ ಭಾರತದೊಂದಿಗೆ ನಿಲ್ಲಲು ಯುಎಸ್ ಕೂಡಾ ಸಿದ್ಧವಾಗಿದೆ," ಎಂದು ಹೇಳಿದ ಜಾನೆಟ್ ಭಾರತ ಹಾಗೂ ಯುಎಸ್ ನಡುವಿನ ಹೂಡಿಕೆಗೂ ಒತ್ತು ನೀಡಿ ಮಾತನಾಡಿದ್ದಾರೆ. ಆರ್ಥಿಕವಾಗಿ ಉಭಯ ದೇಶಗಳ ನಡುವೆ ಸಂಬಂಧ ಹೆಚ್ಚಾದರೆ ಎರಡು ದೇಶದ ಆರ್ಥಿಕ ಬೆಳವಣಿಗೆಗೂ ಕೂಡಾ ಸಹಕಾರಿಯಾಗಲಿದೆ ಎಂದು ಅಭಿಪ್ರಾಯಿಸಿದ್ದಾರೆ.

 ಭಾರತ-ಯುಎಸ್ ಹೂಡಿಕೆ

ಭಾರತ-ಯುಎಸ್ ಹೂಡಿಕೆ

"ಈ ಹಿಂದೆದಿಂಗಿತಲೂ ಪ್ರಸ್ತುತ ಯುಎಸ್ ಹಾಗೂ ಭಾರತದ ನಡುವಿನ ಆರ್ಥಿಕ ಪಾಲುದಾರಿಕೆ, ಹೂಡಿಕೆ, ನಂಟು ಹೆಚ್ಚಾಗಿದೆ. ಯುನೈಟೆಡ್ ಸ್ಟೇಟ್ಸ್ ಭಾರತದ ಅತೀ ದೊಡ್ಡ ಟ್ರೇಡಿಂಗ್ ಪಾರ್ಟ್‌ನರ್. ಉಭಯ ದೇಶಗಳಲ್ಲಿ 2021ರಲ್ಲಿ ವಹಿವಾಟು ಸಾರ್ವಕಾಲಿಕವಾಗಿ ಏರಿಕೆಯಾಗಿದೆ. ಸುಮಾರು 150 ಬಿಲಿಯನ್ ಡಾಲರ್ ವಹಿವಾಟು ನಡೆದಿದೆ. ಯುಎಸ್‌ನಲ್ಲಿ ಭಾರತ ಮಾಡಿದ ಹೂಡಿಕೆಯಿಂದಾಗಿ 2020ರ ಕೊನೆಯಲ್ಲಿ ಸುಮಾರು 70,000 ಉದ್ಯೋಗವನ್ನು ಸೃಷ್ಟಿ ಮಾಡಲು ಸಾಧ್ಯವಾಗಿದೆ. ಹಾಗೆಯೇ ಅಮೆರಿಕದ ಹಲವಾರು ಸಂಸ್ಥೆಗಳು ಕೂಡಾ ಭಾರತದಲ್ಲಿ ಹೂಡಿಕೆ ಮಾಡಿ, ಆರ್ಥಿಕ ಬೆಳವಣಿಗೆಗೆ ಸಹಕರಿಸುತ್ತಿದೆ ಎಂದು ಜಾನೆಟ್ ವಿವರಿಸಿದ್ದಾರೆ.

 ಭಾರತ-ಯುಎಸ್ ನಡುವಿನ ಆರ್ಥಿಕ ನಂಟು
 

ಭಾರತ-ಯುಎಸ್ ನಡುವಿನ ಆರ್ಥಿಕ ನಂಟು

ಇನ್ಫೋಸಿಸ್ ಹಾಗೂ ಮೈಂಡ್‌ಟ್ರೀಯಂತಹ ಭಾರತದ ತಾಂತ್ರಿಕ ಸಂಸ್ಥೆಗಳು ಯುಎಸ್‌ನ ಕಾರ್ಪೋರೇಟ್ ಸಂಸ್ಥೆಗಳೊಂದಿಗೆ ದೈನಂದಿನವಾಗಿ ಕಾರ್ಯನಿರ್ವಹಣೆ ಮಾಡುತ್ತಿದೆ. ಉಭಯ ದೇಶಗಳ ನಡುವಿನ ಭಾಂದವ್ಯ ಯಾವುದೇ ಬಿರುಕುಗಳಿಲ್ಲದೆ ಗಟ್ಟಿಯಾಗಿರುವುದು ಮಾತ್ರವಲ್ಲ, ಇನ್ನಷ್ಟು ಬೆಳವಣಿಗೆಯನ್ನು ಹೊಂದುತ್ತಿದೆ. ಹಾಗೆಯೇ ಕೋವಿಡ್ ಸಾಂಕ್ರಾಮಿಕ ಹಾಗೂ ರಷ್ಯಾವು-ಉಕ್ರೇನ್ ಯುದ್ಧವು ಭಾರತ ಹಾಗೂ ಯುಎಸ್ ನಡುವಿನ ಆರ್ಥಿಕ ನಂಟನ್ನು ಇನ್ನಷ್ಟು ಬಲಗೊಳಿಸಿದೆ. ಭಾರತವು ಯುಎಸ್‌ನ ಅತೀ ನಂಬಿಕೆಯ ವಹಿವಾಟು ಪಾಲುದಾರರಲ್ಲಿ ಒಂದಾಗಿದೆ," ಎಂದು ಭಾರತ ಹಾಗೂ ಯುಎಸ್ ಸಂಬಂಧವನ್ನು ಹಾಡಿಹೊಗಳಿದ್ದಾರೆ.

 ಫ್ರೆಂಡ್‌ಶೋರಿಂಗ್‌ ಎಂದರೇನು?

ಫ್ರೆಂಡ್‌ಶೋರಿಂಗ್‌ ಎಂದರೇನು?

ಇನ್ನು ಉಭಯ ದೇಶಗಳ ನಡುವಿನ ಈ ನಂಟನ್ನು ಫ್ರೆಂಡ್‌ಶೋರಿಂಗ್‌ ಎಂದು ಕರೆದಿರುವ ಜಾನೆಟ್, "ಉಭಯ ದೇಶಗಳ ನಡುವೆ ವ್ಯಾಪಾರ, ವಹಿವಾಟು ಹೆಚ್ಚಾದರೆ ನಮ್ಮ ಜನರಿಗೆ ಪ್ರಯೋಜನವಾಗಲಿದೆ ಎಂದಿದ್ದಾರೆ. ಕೊರೊನಾ ಸಾಂಕ್ರಾಮಿಕದ ಬಳಿಕ ವಿಶ್ವದ ವಾಣಿಜ್ಯ ವಹಿವಾಟು ಮತ್ತು ಆರ್ಥಿಕ ಸ್ಥಿತಿ ಬದಲಾಗಿದೆ. ಈ ಸಂದರ್ಭದಲ್ಲಿ ಅಮೆರಿಕದ ಬೈಡನ್ ಆಡಳಿತವು, ಕಚ್ಚಾ ವಸ್ತುಗಳ ರಫ್ತು ಆಮದು ಸಮಾನ ಮನಸ್ಕ ದೇಶಗಳ ನಡುವೆ ಆಗಬೇಕು, ತಯಾರಿಕೆಯೂ ಈ ದೇಶಗಳ ನಡುವೆ ಇರಬೇಕು ಎಂಬ ನೀತಿಯನ್ನು ಎತ್ತಿ ಹಿಡಿದಿದೆ. ಈ ನೀತಿಯನ್ನು ಅಮೆರಿಕ ಫ್ರೆಂಡ್‌ಶೋರಿಂಗ್ ಎಂದು ಕರೆದಿದೆ.

English summary

India Indispensable Partner To United States Says US Treasury Secretary Janet Yellen

India is an indispensable partner to the United States, and Washington is looking forward to support New Delhi's presidency Says US Treasury Secretary Janet Yellen.
Story first published: Saturday, November 12, 2022, 12:41 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X