For Quick Alerts
ALLOW NOTIFICATIONS  
For Daily Alerts

ಟ್ರೂ ಕಾಲರ್ ರೀತಿಯಲ್ಲೇ ಬಂದಿದೆ ಭಾರತ್‌ ಕಾಲರ್..! ಏನಿದರ ವಿಶೇಷತೆ?

|

ಭಾರತವು ತನ್ನದೇ ಆದ ಕಾಲರ್ ಐಡಿಯ ಆವೃತ್ತಿಯನ್ನು ಪ್ರಾರಂಭಿಸುವ ಮೂಲಕ ಟ್ರೂ ಕಾಲರ್ ರೀತಿಯಲ್ಲೇ ಪಯಣ ಆರಂಭಿಸಿದೆ. ಟ್ರೂ ಕಾಲರ್‌ಗಿಂತಲೂ ಕೆಲವೊಂದು ಅಂಶಗಳಲ್ಲಿ ಭಾರತ್ ಕಾಲರ್ ಮುಂದಿದೆ ಎಂದು ಲೈವ್ ಹಿಂದೂಸ್ತಾನ್ ಶುಕ್ರವಾರ ವರದಿ ಮಾಡಿದೆ.

"ಭಾರತ್ ಕಾಲರ್ ಐಡಿ 50 ದಶಲಕ್ಷಕ್ಕೂ ಹೆಚ್ಚು ಬಳಕೆದಾರ ಡೇಟಾಬೇಸ್‌ಗಳನ್ನು ಹೊಂದಿದೆ ಮತ್ತು ಜಾಗತಿಕ ಸಮುದಾಯದಿಂದ 1 ಬಿಲಿಯನ್ ಸಂಖ್ಯೆಗಳ ಡೇಟಾವನ್ನು ಹೊಂದಿದೆ. ನಿಮ್ಮ ಸಂವಹನವನ್ನು ಸುರಕ್ಷಿತವಾಗಿ ಮತ್ತು ಚುರುಕಾಗಿ ಮಾಡಲು ನಿಮಗೆ ಬೇಕಾಗಿರುವ ಏಕೈಕ ಅಪ್ಲಿಕೇಶನ್ ಇದಾಗಿದೆ, "ಎಂದು ಪ್ಲೇಸ್ಟೋರ್‌ನಲ್ಲಿ ಅಪ್ಲಿಕೇಶನ್‌ನ ವಿವರಣೆ ನೀಡಲಾಗಿದೆ.

ನೀವು ಗೂಗಲ್ ಪೇ ಬಳಸುತ್ತೀರಾ..? ಹಾಗಿದ್ರೆ ಫಿಕ್ಸೆಡ್ ಡೆಪಾಸಿಟ್‌ಗೆ ಅವಕಾಶ..!ನೀವು ಗೂಗಲ್ ಪೇ ಬಳಸುತ್ತೀರಾ..? ಹಾಗಿದ್ರೆ ಫಿಕ್ಸೆಡ್ ಡೆಪಾಸಿಟ್‌ಗೆ ಅವಕಾಶ..!

ಭಾರತ್ ಕಾಲರ್ ಅನ್ನು ಬೆಂಗಳೂರಿನ ಪ್ರತಿಷ್ಠಿತ ಭಾರತೀಯ ನಿರ್ವಹಣಾ ಸಂಸ್ಥೆಯ (ಐಐಎಂ) ಹಳೆ ವಿದ್ಯಾರ್ಥಿ ಪ್ರಜ್ವಲ್ ಸಿನ್ಹಾ ನಿರ್ಮಿಸಿದ್ದಾರೆ. ಇದರ ಸಹ ಸಂಸ್ಥಾಪಕರು ಕುನಾಲ್ ಪಾಸ್ರಿಚಾ. ಸಿನ್ಹಾ ಮತ್ತು ಪಾಸ್ರಿಚಾ ಇಬ್ಬರೂ ರಾಷ್ಟ್ರೀಯ ಸ್ಟಾರ್ಟಪ್ ಪ್ರಶಸ್ತಿ 2020 ರ ವಿಜೇತರಾಗಿದ್ದರು.
ಅಪ್ಲಿಕೇಶನ್ ಪ್ಲೇಸ್ಟೋರ್ ಮತ್ತು ಐಒಎಸ್‌ನಲ್ಲಿ ಉಚಿತವಾಗಿ ಲಭ್ಯವಿದೆ ಮತ್ತು ಇಲ್ಲಿಯವರೆಗೆ 6,000 ಬಾರಿ ಡೌನ್‌ಲೋಡ್ ಮಾಡಲಾಗಿದೆ.

ಟ್ರೂ ಕಾಲರ್ ರೀತಿಯಲ್ಲೇ ಬಂದಿದೆ ಭಾರತ್‌ ಕಾಲರ್..! ಏನಿದರ ವಿಶೇಷತೆ?

ಭಾರತ್ ಕಾಲರ್ ಫೀಚರ್ಸ್ ಏನು?
ಲೈವ್ ಹಿಂದುಸ್ತಾನ್ ವರದಿ ಪ್ರಕಾರ, ಭಾರತ್ ಕಾಲರ್ ತನ್ನ ಸರ್ವರ್‌ನಲ್ಲಿ ಬಳಕೆದಾರರ ಸಂಪರ್ಕಗಳನ್ನು ಮತ್ತೆ ಕರೆ ಲಾಗ್‌ಗಳನ್ನು ಉಳಿಸುವುದಿಲ್ಲ ಮತ್ತು ಅವರ ಗೌಪ್ಯತೆಗೆ ಯಾವುದೇ ಪರಿಣಾಮ ಬೀರುವುದಿಲ್ಲ. ಅಲ್ಲದೆ , ಸಂಸ್ಥೆಯು ಉದ್ಯೋಗಿಗಳು ಬಳಕೆದಾರರ ಫೋನ್ ಸಂಖ್ಯೆಗಳ ಡೇಟಾಬೇಸ್ ಅನ್ನು ಸಹ ಹೊಂದಿಲ್ಲ ಮತ್ತು ಅಂತಹ ಯಾವುದೇ ಡೇಟಾಕ್ಕೆ ಪ್ರವೇಶವನ್ನು ಸಹ ಹೊಂದಿಲ್ಲ.

ಇದರ ಜೊತೆಗೆ ಭಾರತ್ ಕಾಲರ್‌ನ ಎಲ್ಲಾ ಡೇಟಾವನ್ನು ಎನ್‌ಕ್ರಿಪ್ಟ್‌ ಮಾಡಲಾದ ರೂಪದಲ್ಲಿ ಸಂಗ್ರಹಿಸಲಾಗಿದೆ. ಭಾರತದ ಹೊರಗೆ ಯಾರೂ ಕೂಡ ಅದರ ಸರ್ವರ್ ಅನ್ನು ಬಳಸುವ ಹಾಗಿಲ್ಲ. ಇಂಗ್ಲೀಷ್ ಹೊರತುಪಡಿಸಿ ಈ ಅಪ್ಲಿಕೇಶನ್ ಹಿಂದಿ, ಮರಾಠಿ, ತಮಿಳು, ಗುಜರಾತಿ ಇತ್ಯಾದಿ ಭಾಷೆಗಳಲ್ಲಿ ಲಭ್ಯವಿದೆ.

ಭಾರತ್ ಕಾಲರ್ ಅನ್ನು ಏಕೆ ರಚಿಸಲಾಗಿದೆ?

ಭಾರತ್ ಕಾಲರ್ ಅನ್ನು ರಚಿಸುವುದರ ಹಿಂದಿನ ಉದ್ದೇಶ ಭಾರತಕ್ಕೆ ತನ್ನದೇ ಕಾಲರ್ ಐಡಿ ಅಪ್ಲಿಕೇಶನ್ ಅನ್ನು ನೀಡುವುದಾಗಿದೆ. ಖಾಸಗಿತನದ ಸಮಸ್ಯೆಗಳಿಂದಾಗಿ ಭಾರತೀಯ ಸೇನೆಯು ಟ್ರೂಕಾಲರ್ ಅನ್ನು ನಿಷೇಧಿಸಿದ ನಂತರ ಇದು ಬಂದಿದೆ. ಈ ಅಪ್ಲಿಕೇಶನ್ ಸ್ಪೈವೇರ್ ಆಗಿರಬಹುದು ಎಂದು ಸಹ ಸೂಚಿಸಲಾಗಿದೆ. ಈಗಾಗಲೇ ಸೇನಾ ಸಿಬ್ಬಂದಿಗೆ ತಮ್ಮ ಮೊಬೈಲ್ ಫೋನ್‌ಗಳಿಂದ ತಕ್ಷಣವೇ ಟ್ರೂಕಾಲರ್ ಅನ್ನು ಅಳಿಸುವಂತೆ ಆದೇಶಿಸಿದೆ.

English summary

India Launches Bharat Caller: Features Explained in Kannada

India has come up with its own version of the caller ID and Blocking application TrueCaller, Calld BharatCaller
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X