For Quick Alerts
ALLOW NOTIFICATIONS  
For Daily Alerts

ಇರಾನ್‌ನಿಂದ ತೈಲ ಆಮದಿಗೆ ಭಾರತದ ತಯಾರಿ: ಅಮೆರಿಕಾದಿಂದ ಸಿಗುತ್ತಾ ಗ್ರೀನ್ ಸಿಗ್ನಲ್?

|

ಇರಾನ್‌ ಮೇಲಿನ ನಿರ್ಬಂಧವನ್ನು ಅಮೆರಿಕಾ ಸದ್ಯದಲ್ಲೇ ತೆರವುಗೊಳಿಸುವ ಸಾಧ್ಯತೆಯಿರುವುದರಿಂದ ತೈಲ ಆಮದಿಗೆ ಭಾರತವು ಸಜ್ಜಾಗುತ್ತಿದೆ. ದೇಶದ ಸರ್ಕಾರಿ ಸ್ವಾಮ್ಯದ ತೈಲ ಸಂಸ್ಥೆಗಳು ಭವಿಷ್ಯದಲ್ಲಿ ಸೌದಿ ಅರೇಬಿಯಾದಿಂದ ತೈಲ ಆಮದನ್ನು ತಗ್ಗಿಸಲು ಯೋಜಿಸಿದೆ.

 

2019ರಲ್ಲಿ ಡೊನಾಲ್ಡ್‌ ಟ್ರಂಪ್ ಆಡಳಿತದಲ್ಲಿ ಅಮೆರಿಕಾವು ಹೇರಲಾಗಿದ್ದ ನಿರ್ಬಂಧದಿಂದಾಗಿ ಭಾರತವು ಕ್ರಮೇಣ ಇರಾನ್‌ನಿಂದ ತೈಲ ಆಮದನ್ನು ತಗ್ಗಿಸಿತ್ತು. ಆದರೆ ಈಗ ಅಮೆರಿಕಾವು ಹೊಸ ಅಧ್ಯಕ್ಷ ಜೋ ಬೈಡನ್ ಆಡಳಿತದಲ್ಲಿ ಅನೇಕ ಬದಲಾವಣೆಗಳನ್ನು ತರುತ್ತಿದ್ದು, ಇರಾನ್ ಮೇಲೆ ಮೃದುಧೋರಣೆ ತೋರಿದರೆ ಭಾರತಕ್ಕೂ ಅನುಕೂಲವಾಗಲಿದೆ.

ಇರಾನ್‌ನಿಂದ ತೈಲ ಆಮದಿಗೆ ಭಾರತದ ತಯಾರಿ!

ಸೌದಿ ಅರೇಬಿಯಾದಿಂದ ತೈಲ ಆಮದನ್ನು ಕಡಿಮೆ ಮಾಡಲು ನಿರ್ಧರಿಸಿರುವ ಭಾರತಕ್ಕೆ, ಪರ್ಯಾಯವಾಗಿ ಇರಾನ್‌ನಿಂದ ತೈಲ ಸಿಕ್ಕಿದರೆ ಹೆಚ್ಚಿನ ಲಾಭವಾಗಲಿದೆ. ಜೊತೆಗೆ ಪೆಟ್ರೋಲ್ ಹಾಗೂ ಡೀಸೆಲ್ ಮೇಲಿನ ಬೆಲೆ ನಿಯಂತ್ರಣಕ್ಕೂ ಸಹಕಾರಿಯಾಗಲಿದೆ.

ಭಾರತೀಯ ಸರ್ಕಾರಿ ತೈಲ ಸಂಸ್ಕರಣಾಗಾರರು ಗಯಾನಾ ಮತ್ತು ನಾರ್ವೆ ಸೇರಿದಂತೆ ಮಧ್ಯಪ್ರಾಚ್ಯದ ಹೊರಗಿನ ಪ್ರದೇಶಗಳಿಂದ ತೈಲವನ್ನು ಖರೀದಿಸುತ್ತಿದ್ದಾರೆ. ಈ ಮೂಲಕ ಒಪೆಕ್ ಉತ್ಪಾದಕರ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡುವ ಪ್ರಯತ್ನದಲ್ಲಿ ಹೆಚ್ಚು ಅಮೆರಿಕಾದ ಕಚ್ಚಾ ತೈಲವನ್ನು ಖರೀದಿಸುತ್ತಿದ್ದಾರೆ.

ಭಾರತವು ಈ ಹಿಂದೆ ಇರಾನ್‌ ಎರಡನೇ ಅತಿದೊಡ್ಡ ಗ್ರಾಹಕವಾಗಿತ್ತು. ಅದರ ಒಟ್ಟು ತೈಲ ಅಗತ್ಯಗಳಲ್ಲಿ 85% ಕ್ಕಿಂತ ಹೆಚ್ಚು ಆಮದು ಮಾಡಿಕೊಳ್ಳುತ್ತದೆ. ಇರಾನ್‌ನಿಂದ ಕಡಿಮೆ ಬೆಲೆಯಲ್ಲಿ ಅಗ್ಗದ ಕಚ್ಚಾ ತೈಲ ಬ್ಯಾರೆಲ್‌ಗಳು ಸೇರಿದಂತೆ ಹಲವಾರು ಪ್ರಯೋಜನಗಳು ಸಿಗುತ್ತಿದ್ದವು. ಜೊತೆಗೆ ಇರಾನ್‌ನಿಂದ ಸಮುದ್ರಯಾನವು ಹೆಚ್ಚು ವೆಚ್ಚ ತಗುಲುವುದಿಲ್ಲ ಹೀಗಾಗಿ ಸರಕು ವೆಚ್ಚದಲ್ಲಿ ಉಳಿತಾಯ ಸಾಧ್ಯವಾಗುತ್ತದೆ.

English summary

India Preparing To Buy Iranian Oil From Once US Sanctions Ease

India will look to resume buying crude oil from Iran the moment U.S. sanctions are eased, helping it diversify its import basket, a senior government official said.
Story first published: Friday, April 9, 2021, 20:32 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X