For Quick Alerts
ALLOW NOTIFICATIONS  
For Daily Alerts

ತೈಲ ಬಳಕೆಯಲ್ಲಿ ದಾಖಲೆಯ ಕುಸಿತ: ಶೇಕಡಾ 9.1ರಷ್ಟು ಇಳಿಕೆ

|

ಮಾರ್ಚ್‌ 31ಕ್ಕೆ ಕೊನೆಗೊಂಡ 2020-21ರ ಹಣಕಾಸು ವರ್ಷದಲ್ಲಿ ಭಾರತದ ತೈಲ ಬೇಡಿಕೆಯು ಶೇಕಡಾ 9.1ರಷ್ಟು ಕುಸಿತ ಕಂಡಿದೆ. ಇದು 1998-99ರ ನಂತರ ದಾಖಲಾದ ಕಡಿಮೆ ಬೇಡಿಕೆ ಪ್ರಮಾಣ ಎಂದು ಸರ್ಕಾರದ ಅಂಕಿ ಅಂಶಗಳು ಶುಕ್ರವಾರ ತೋರಿಸಿವೆ.

 

ಬೇಡಿಕೆ ಪ್ರಮಾಣ ಇಷ್ಟು ದೊಡ್ಡ ಪ್ರಮಾಣದಲ್ಲಿ ಕುಸಿಯಲು ಕೊರೊನಾವೈರಸ್‌ ಸಾಂಕ್ರಾಮಿಕ ರೋಗದ ಪ್ರೇರಿತ ಲಾಕ್‌ಡೌನ್‌ ಪ್ರಮುಖ ಕಾರಣವಾಗಿದೆ.

ಗ್ಯಾಸ್‌ ಸಬ್ಸಿಡಿ ಹಣ ಬರುತ್ತದೆಯೋ ಅಥವಾ ಇಲ್ಲವೋ ಎಂದು ತಿಳಿಯುವುದು ಹೇಗೆ?

ಸರ್ಕಾರ ಬಿಡುಗಡೆ ಮಾಡಿರುವ ಅಂಕಿ-ಅಂಶಗಳ ಪ್ರಕಾರ 2020-21ರಲ್ಲಿ ಭಾರತವು 194.63 ಮಿಲಿಯನ್ ಟನ್ ಪೆಟ್ರೋಲಿಯಂ ಉತ್ಪನ್ನಗಳನ್ನು ಬಳಕೆ ಮಾಡಿದೆ. ಆದರೆ ಹಿಂದಿನ ವರ್ಷದಲ್ಲಿ 214.12 ಮಿಲಿಯನ್ ಟನ್ ಬೇಡಿಕೆಯನ್ನು ಕಂಡಿತ್ತು.

ತೈಲ ಬಳಕೆಯಲ್ಲಿ ದಾಖಲೆಯ ಕುಸಿತ: ಶೇಕಡಾ 9.1ರಷ್ಟು ಇಳಿಕೆ

ಇನ್ನು ಡೀಸೆಲ್ ಬೇಡಿಕೆಯಲ್ಲಿ ಶೇಕಡಾ 12ರಷ್ಟು, ಪೆಟ್ರೋಲ್ ಬೇಡಿಕೆಯಲ್ಲಿ ಶೇಕಡಾ 6.7ರಷ್ಟು ಇಳಿಕೆ ಆಗಿದೆ. ವಿಮಾನ ಇಂಧನ ಬಳಕೆಯಲ್ಲಿ ಶೇಕಡಾ 53.6ರಷ್ಟು ಇಳಿಕೆ ಆಗಿದೆ.

ಕಳೆದ ವರ್ಷ ಮಾರ್ಚ್‌ ಅಂತ್ಯದಲ್ಲಿ ಕೇಂದ್ರ ಸರ್ಕಾರವು ಲಾಕ್‌ಡೌನ್ ಘೋಷಿಸಿದ ಕಾರಣ ಕಾರ್ಖಾನೆಗಳು, ರಸ್ತೆ, ಜಲ ಹಾಗೂ ವಾಯು ಸಾರಿಗೆಗಳನ್ನು ರದ್ದುಗೊಳಿಸಲಾಯಿತು. ಇದರಿಂದಾಗಿ ತೈಲ ಬೇಡಿಕೆ ಹಾಗೂ ಬಳಕೆ ಪ್ರಮಾಣ ಕುಗ್ಗಿತ್ತು.

2020ರ ಕೊನೆಯ ತ್ರೈಮಾಸಿಕದಲ್ಲಿ ಆರ್ಥಿಕ ಚಟುವಟಿಕೆಗಳು ಚೇತರಿಕೆಯ ಲಕ್ಷಣಗಳನ್ನು ತೋರಿಸಿದ ನಂತರ ಜಿಡಿಪಿ 2020-21ರಲ್ಲಿ ಶೇಕಡಾ 7 ರಿಂದ 8 ರಷ್ಟು ಕುಗ್ಗಿದೆ ಎಂದು ಅಂದಾಜಿಸಲಾಗಿದೆ. ಇದೇ ವೇಳೆಯಲ್ಲಿ ದೇಶದ 2021-22ರ ನೈಜ ಜಿಡಿಪಿ ಬೆಳವಣಿಗೆಯ ದರವನ್ನು ಶೇಕಡಾ 10.5ರಷ್ಟು ಉಳಿಸಿಕೊಳ್ಳಲಾಗಿದೆ ಎಂದು ಆರ್‌ಬಿಐ ಗವರ್ನರ್ ಶಕ್ತಿಕಾಂತ ದಾಸ್ ಹೇಳಿದ್ದಾರೆ.

English summary

India's Fuel Consumption Contracts 9.1 Percent In 2020-21

India's fuel demand contracted by a massive 9.1 per cent in the financial year ended March 31, the first in more than two decades
Story first published: Saturday, April 10, 2021, 12:54 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X