For Quick Alerts
ALLOW NOTIFICATIONS  
For Daily Alerts

ಭಾರತದಲ್ಲಿ ಮಾರ್ಚ್‌ ತಿಂಗಳಿನಲ್ಲಿ ಚಿನ್ನದ ಆಮದು ಪ್ರಮಾಣ ದಾಖಲೆಯ ಕುಸಿತ

|

ಕೊರೊನಾವೈರಸ್‌ನಿಂದಾಗಿ ದೇಶದಲ್ಲಿ 21 ದಿನಗಳ ಕಾಲ ಲಾಕ್‌ಡೌನ್‌ ವಿಧಿಸಲಾಗಿದೆ. ಎಲ್ಲಾ ಉದ್ಯಮಗಳು ಬಂದ್ ಆಗಿದ್ದು ಬೇಡಿಕೆ ಕುಸಿದಿದ್ದು, ಪೂರೈಕೆಯು ಇಳಿಮುಖವಾಗಿದೆ. ಇದರ ಜೊತೆಗೆ ವಿಶ್ವದ 2ನೇ ಅತಿದೊಡ್ಡ ಚಿನ್ನದ ಗ್ರಾಹಕ ಭಾರತವು ಮಾರ್ಚ್‌ ತಿಂಗಳಿನಲ್ಲಿ ಚಿನ್ನದ ಆಮದು ಪ್ರಮಾಣ ಇಳಿಸಿದೆ.

 

ದುಬೈನಲ್ಲಿ ಚಿನ್ನ ಖರೀದಿ ಚೀಪ್ ಅಂಡ್ ಬೆಸ್ಟ್ ಏಕೆ? ಇಲ್ಲಿವೆ 5 ಕಾರಣಗಳುದುಬೈನಲ್ಲಿ ಚಿನ್ನ ಖರೀದಿ ಚೀಪ್ ಅಂಡ್ ಬೆಸ್ಟ್ ಏಕೆ? ಇಲ್ಲಿವೆ 5 ಕಾರಣಗಳು

ಭಾರತದ ಚಿನ್ನದ ಆಮದು ಮಾರ್ಚ್‌ನಲ್ಲಿ ವರ್ಷಕ್ಕೆ 73 ಪರ್ಸೆಂಟ್‌ಗಿಂತಲೂ ಹೆಚ್ಚು ಕುಸಿದಿದೆ. ಇದು ಕಳೆದ ಆರು ಇಲ್ಲವೆ, ಆರೂವರೆ ವರ್ಷಗಳಲ್ಲಿ ದಾಖಲಾದ ಅತಿ ಕಡಿಮೆ ಆಮದು ಪ್ರಮಾಣವಾಗಿದೆ. ಕೊರೊನಾವೈರಸ್ ಹರಡುವಿಕೆಯನ್ನು ತಡೆಗಟ್ಟಲು ಲಾಕ್‌ಡೌನ್ ಆಗಿರುವುದರಿಂದ ಚಿಲ್ಲರೆ ಬೇಡಿಕೆಯು ಕುಸಿದಿದ್ದು, ಚಿನ್ನದ ಆಮದು ಪ್ರಮಾಣವು ಇಳಿಕೆಯಾಗಿದೆ ಎಂದು ಸರ್ಕಾರಿ ಮೂಲಗಳು ಸೋಮವಾರ ತಿಳಿಸಿವೆ.

 
ಮಾರ್ಚ್‌ ತಿಂಗಳಿನಲ್ಲಿ ಚಿನ್ನದ ಆಮದು ಪ್ರಮಾಣ ದಾಖಲೆಯ ಕುಸಿತ

ವಿಶ್ವದ ಎರಡನೇ ಅತಿದೊಡ್ಡ ಹಳದಿ ಲೋಹದ ಗ್ರಾಹಕ ಭಾರತ, ಮಾರ್ಚ್‌ನಲ್ಲಿ 25 ಟನ್ ಚಿನ್ನವನ್ನು ಆಮದು ಮಾಡಿಕೊಂಡಿದೆ. ಇದು ವರ್ಷದ ಹಿಂದಿನ ಪ್ರಮಾಣ 93.24 ಟನ್‌ಗಿಂತ ಕಡಿಮೆಯಾಗಿದೆ ಎಂದು ಮೂಲಗಳು ತಿಳಿಸಿವೆ.

ಚಿನ್ನದ ಮೇಲೆ ಹೂಡಿಕೆ ಮಾಡಲು ಬೊಂಬಾಟ್‌ ಐಡಿಯಾಗಳುಚಿನ್ನದ ಮೇಲೆ ಹೂಡಿಕೆ ಮಾಡಲು ಬೊಂಬಾಟ್‌ ಐಡಿಯಾಗಳು

ಮೌಲ್ಯದ ಪ್ರಕಾರ, ಮಾರ್ಚ್ ಆಮದು ಸುಮಾರು 63 ಪರ್ಸೆಂಟ್‌ನಷ್ಟು ಇಳಿದು 1.22 ಶತಕೋಟಿ(ಬಿಲಿಯನ್) ಡಾಲರ್‌ಗೆ ತಲುಪಿದೆ ಎಂದು ಮೂಲಗಳು ತಿಳಿಸಿವೆ.

English summary

India's March Gold Import Hit 6 Year Low

India’s gold imports plunged more than 73% year-on-year in March to their lowest in 6-1/2 years
Story first published: Monday, April 6, 2020, 13:59 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X