For Quick Alerts
ALLOW NOTIFICATIONS  
For Daily Alerts

3ನೇ ತ್ರೈಮಾಸಿಕದಲ್ಲಿ ಚಿನ್ನದ ಬೇಡಿಕೆ ಶೇ 48ರಷ್ಟು ಕುಸಿತ

|

ಭಾರತದಲ್ಲಿ ಈ ವರ್ಷದ ಜುಲೈ-ಸೆಪ್ಟೆಂಬರ್‌ ತ್ರೈಮಾಸಿಕದಲ್ಲಿ ಚಿನ್ನದ ಬೇಡಿಕೆಯು ಶೇ 48ರಷ್ಟು ಇಳಿಕೆಯಾಗಿ 52.8 ಟನ್‌ ತಲುಪಿದೆ. ಕಳೆದ ವರ್ಷ ಭಾರತದಲ್ಲಿ ಬೇಡಿಕೆ 101.6 ಟನ್ ಗಳಷ್ಟಿದ್ದರೆ, ಜಾಗತಿಕವಾಗಿ ಶೇ 29ರಷ್ಟು ಕುಸಿತ ಕಂಡು 333 ಟನ್ ಗಳಿಷ್ಟಾಗಿತ್ತು. ಈ ಹಿಂದಿನ ವರ್ಷ ಸುಮಾರು 468.1 ಟನ್ ಬೇಡಿಕೆ ಕಂಡು ಬಂದಿತ್ತು. ಕೋವಿಡ್‌-19 ಹಾಗೂ ಬೆಲೆ ಏರಿಕೆಯಿಂದ ಚಿನ್ನಕ್ಕೆ ಬೇಡಿಕೆ ಕಡಿಮೆಯಾಗಿದೆ ಎಂದು ಹೋಲ್ ಸೇಲ್ ಚಿನ್ನದ ಬಗ್ಗೆ ನಿಗಾವಹಿಸುವ ವಿಶ್ವ ಚಿನ್ನ ಮಂಡಳಿಯು (ಡಬ್ಲ್ಯುಜಿಸಿ) ವರದಿ ಮಾಡಿದೆ.

ದಸರಾ, ದೀಪಾವಳಿ ಹಬ್ಬದ ಸೀಸನ್ ಶುಭ ಸಮಾರಂಭಗಳ ಕಾರಣದಿಂದ ನಾಲ್ಕನೇ ತ್ರೈಮಾಸಿಕದಲ್ಲಿ ಚಿನ್ನದ ಖರೀದಿಪ್ರಮಾಣ ಹೆಚ್ಚಳವಾಗುವ ನಿರೀಕ್ಷೆಯಿದೆ ಎಂದು ಡಬ್ಲ್ಯುಜಿಸಿಯ ಸೋಮಸುಂದರಂ ಅಭಿಪ್ರಾಯ ಪಟ್ಟಿದ್ದಾರೆ.

ಸತತ ಎರಡನೇ ದಿನ ಚಿನ್ನದ ಬೆಲೆಯಲ್ಲಿ ಸ್ವಲ್ಪ ಕುಸಿತಸತತ ಎರಡನೇ ದಿನ ಚಿನ್ನದ ಬೆಲೆಯಲ್ಲಿ ಸ್ವಲ್ಪ ಕುಸಿತ

ವಿಶ್ವದಲ್ಲಿ ಅತಿ ಹೆಚ್ಚು ಬಳಕೆ ಮಾಡುವ ಚೀನಾದಲ್ಲಿ ಕಳೆದ ವರ್ಷ ಇದೇ ಅವಧಿಯ ಬೇಡಿಕೆಗೆ ಹೋಲಿಸಿದರೆ ಶೇ 25ರಷ್ಟು ಇಳಿಕೆಯಾಗಿ 119.1 ಟನ್ ಗಳಷ್ಟಾಗಿದೆ.

3ನೇ ತ್ರೈಮಾಸಿಕದಲ್ಲಿ ಚಿನ್ನದ ಬೇಡಿಕೆ ಶೇ 48ರಷ್ಟು ಕುಸಿತ

2020ರ ಮೊದಲ ತ್ರೈಮಾಸಿಕದಲ್ಲಿ ಭಾರತದಲ್ಲಿ 73.9 ಟನ್ ಗಳಷ್ಟು ಚಿನ್ನಾಭರಣ ಬಳಕೆಯಾಗಿದೆ. 2ನೇ ತ್ರೈಮಾಸಿಕದಲ್ಲಿ ಬೇಡಿಕೆ, ಬಳಕೆ ಕುಸಿದು 44 ಟನ್ ನಷ್ಟಾಗಿದ್ದರೆ ಮೂರನೇ ತ್ರೈಮಾಸಿಕದಲ್ಲಿ 52.8 ಟನ್ ಗಳಿಗೆ ಏರಿಕೆಯಾಗಿದೆ.

3ನೇ ತ್ರೈಮಾಸಿಕದಲ್ಲಿ ಚಿನ್ನದ ಬೇಡಿಕೆ ಶೇ 48ರಷ್ಟು ಕುಸಿತ

ಆದರೆ, ಚಿನ್ನದ ಹೂಡಿಕೆ(ನಾಣ್ಯ, ಬಾರ್) ಪ್ರಮಾಣ ಕಳೆದ ವರ್ಷಕ್ಕಿಂತ ಶೇ 51ರಷ್ಟು ಏರಿಕೆಯಾಗಿ 33.8 ಟನ್ ಹೂಡಿಕೆ ಕಂಡಿದೆ 2019ರಲ್ಲಿ ಮೂರನೇ ತ್ರೈಮಾಸಿಕದಲ್ಲಿ 22.3 ಟನ್‌ ಚಿನ್ನ ಹೂಡಿಕೆಯಾಗಿತ್ತು. 2019ರಲ್ಲಿ 145.8 ಟನ್ ಬೇಡಿಕೆ, 2018ರಲ್ಲಿ 162.4 ಟನ್ ಬೇಡಿಕೆ ಇತ್ತು. ಜಾಗತಿಕವಾಗಿ ಈ ತ್ರೈಮಾಸಿಕದಲ್ಲಿ ನಾಣ್ಯ, ಬಾರ್ ಮೇಲೆ ಹೂಡಿಕೆ ಶೇ 49ರಷ್ಟು ಏರಿಕೆಯಾಗಿ 222.1 ಟನ್ ಗಳಷ್ಟಾಗಿರುವುದು ಆಶಾದಾಯಕವಾಗಿದೆ.

English summary

India's quarterly gold jewellery demand falls 48% to 53 tonnes

Gold jewellery demand in India has fallen 48% in the third quarter of 2020 to 52.8 tonnes, whereas the demand during the same quarter of last year was 101.6 tonnes.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X