For Quick Alerts
ALLOW NOTIFICATIONS  
For Daily Alerts

ಲಾಕ್‌ಡೌನ್ ಎಫೆಕ್ಟ್: ಮಕ್ಕಳನ್ನು ಮನೆಗೆ ಕರೆತರಲು ಲಕ್ಷಗಟ್ಟಲೆ ಹಣ ಖರ್ಚು ಮಾಡಿದ್ದ ಶ್ರೀಮಂತರು

|

ಕೊರೊನಾವೈರಸ್‌ನಿಂದ ಭಾರತ ಲಾಕ್‌ಡೌನ್ ಆಗುವುದಕ್ಕೂ ಮೊದಲು ತಮ್ಮ ವಿದೇಶದಲ್ಲಿರುವ ಮಕ್ಕಳನ್ನು ಕರೆತರಲು ಶ್ರೀಮಂತ ಪೋಷಕರು ಲಕ್ಷಗಟ್ಟಲೇ ಹಣವನ್ನು ಖರ್ಚು ಮಾಡಿದ್ದರು ಎಂದು ಬಹಿರಂಗವಾಗಿದೆ.

ಮಾರ್ಚ್ 8 ರಿಂದ 21 ರವರೆಗೆ ಎರಡು ವಾರಗಳ ಅವಧಿಯಲ್ಲಿ ಸ್ವದೇಶಕ್ಕೆ ಖಾಸಗಿ ವಿಮಾನಗಳ ಮೂಲಕ ಹದಿ ಹರೆಯದ ಯುವಕ- ಯುವತಿಯರು ಆಗಮಿಸಿದ್ದರು. ಅದರಲ್ಲೂ ಪ್ರಮುಖವಾಗಿ ದೆಹಲಿ ಮತ್ತು ಮುಂಬೈನಲ್ಲಿ ಅತಿ ಹೆಚ್ಚು ಖಾಸಗಿ ಜೆಟ್‌ಗಳು ಬಂದಿಳಿದಿವೆ ಎಂದು ಸುದ್ದಿಯಾಗಿದೆ.

ಮುಂಬೈ ಮತ್ತು ದೆಹಲಿ ನಗರಗಳ ಶ್ರೀಮಂತರು ವಿದೇಶಗಳ ವಿಶ್ವವಿದ್ಯಾನಿಲಯದಲ್ಲಿ ತಮ್ಮ ಮಕ್ಕಳನ್ನು ಕರೆತರಲು ಖಾಸಗಿ ಜೆಟ್‌ಗಳನ್ನೇ ಬುಕ್ ಮಾಡಿದ್ದರು. ಒಂದು ಖಾಸಗಿ ಜೆಟ್‌ನಲ್ಲಿ ಇಬ್ಬರು ಇಲ್ಲವೇ ಮೂವರು ಬಂದಿರುವ ಉದಾಹರಣೆಯು ದಾಖಲಾಗಿದೆ. ಇದಕ್ಕಾಗಿ 90 ಲಕ್ಷದಿಂದ ಒಂದು ಕೋಟಿ ರುಪಾಯಿ ಖರ್ಚು ಮಾಡಿದ್ದಾರೆ.

ಖಾಸಗಿ ಜೆಟ್‌ಗಳನ್ನು ಬಾಡಿಗೆ ತೆಗೆದುಕೊಂಡಿದ್ದ ಶ್ರೀಮಂತರು

ಖಾಸಗಿ ಜೆಟ್‌ಗಳನ್ನು ಬಾಡಿಗೆ ತೆಗೆದುಕೊಂಡಿದ್ದ ಶ್ರೀಮಂತರು

ಕೊರೊನಾವೈರಸ್ ಹರಡುವಿಕೆ ಹೆಚ್ಚಾದಂತೆ ಭಾರತ ಸರ್ಕಾರ ವಾಯು ಪ್ರದೇಶವನ್ನು ಯಾವುದೇ ಸಮಯದಲ್ಲಿ ಬೀಗ ಹಾಕಬಹುದು ಎಂಬುದು ಸ್ಪಷ್ಟವಾಗುತ್ತಿದ್ದಂತೆ. ಭಾರತದ ಶ್ರೀಮಂತರು ಐಷಾರಾಮಿ ಖಾಸಗಿ ಜೆಟ್‌ಗಳನ್ನು ಬಾಡಿಗೆಗೆ ತೆಗೆದುಕೊಂಡು ವಿದೇಶದಲ್ಲಿ ಅಧ್ಯಯನ ಮಾಡುವ ತಮ್ಮ ಮಕ್ಕಳನ್ನು ಮನೆಗೆ ಹಿಂದಿರುಗಿಸಲು ಮುಂದಾದರು.

ಇಂಗ್ಲೆಂಡ್, ಫ್ರಾನ್ಸ್, ಜರ್ಮನಿಯಿಂದ ಮಕ್ಕಳು ವಾಪಸ್

ಇಂಗ್ಲೆಂಡ್, ಫ್ರಾನ್ಸ್, ಜರ್ಮನಿಯಿಂದ ಮಕ್ಕಳು ವಾಪಸ್

ಮಾರ್ಚ್ 21 ರಂದು ಸರ್ಕಾರವು ಒಳಬರುವ ವಾಣಿಜ್ಯ ವಿಮಾನಗಳನ್ನು ನಿಲ್ಲಿಸುವ ಎರಡು ವಾರಗಳ ಮೊದಲು, 102 ಖಾಸಗಿ ಚಾರ್ಟರ್ ಫ್ಲೈಟ್‌ಗಳು ಯುನೈಟೆಡ್ ಕಿಂಗ್‌ಡಮ್ ಮತ್ತು ಯುರೋಪಿನ ವಿಶ್ವವಿದ್ಯಾಲಯಗಳಿಂದ ಶ್ರೀಮಂತರ ಮಕ್ಕಳನ್ನು ಮನೆಗೆ ಕರೆದೊಯ್ಯುತ್ತಿದ್ದವು. ಅದರಲ್ಲೂ ಹೆಚ್ಚಾಗಿ ಫ್ರಾನ್ಸ್, ಜರ್ಮನಿ ಮತ್ತು ಸ್ವಿಟ್ಜರ್ಲೆಂಡ್ ಹಾಗೂ ಇಂಗ್ಲೆಂಡ್‌ನಿಂದಲೇ ಅತಿ ಹೆಚ್ಚು ವಿಮಾನಗಳು ಆಗಮಿಸಿವೆ.

ಕೇವಲ ಇಬ್ಬರು, ಮೂವರಿಗೆ ಐಷಾರಾಮಿ ಜೆಟ್‌ಗಳು

ಕೇವಲ ಇಬ್ಬರು, ಮೂವರಿಗೆ ಐಷಾರಾಮಿ ಜೆಟ್‌ಗಳು

ವಾಯುಯಾನ ಬಂದ್‌ಗೂ ಮೊದಲು ಎರಡು ವಾರಗಳು ದೆಹಲಿ ಮತ್ತು ಮುಂಬೈಗೆ ಐಷಾರಾಮಿ ಜೆಟ್‌ಗಳು ಬಂದಿಳಿದವು. ಡಸಾಲ್ಟ್ ಫಾಲ್ಕನ್ 2000, ಬೊಂಬಾರ್ಡಿಯರ್ ಚಾಲೆಂಜರ್ ಸೀರಿಸ್ ಮತ್ತು ಹಾಕರ್ ವ್ಯಾಪಾರ ವಿಮಾನಗಳಂತಹ ಉನ್ನತ-ಮಟ್ಟದ ಐಷಾರಾಮಿ ಜೆಟ್‌ಗಳನ್ನು ಒಳಗೊಂಡಿತ್ತು. ಇವುಗಳನ್ನು ಕೇವಲ ಒಂದು ವಾಯುಯಾನ ಸಂಸ್ಥೆ ಆಯೋಜಿಸಿದೆ.

ಇನ್ನೂ 31 ಬಿಜ್ ಜೆಟ್ ವಿಮಾನಗಳು ಆ ಎರಡು ವಾರಗಳಲ್ಲಿ ಹಿರಿಯ ನಾಗರೀಕರನ್ನು, ಹೆಚ್ಚಾಗಿ ಉದ್ಯಮಿಗಳ ಪೋಷಕರನ್ನು, ಶ್ರೇಣಿ 2 ಮತ್ತು ಶ್ರೇಣಿ 1 ನಗರಗಳಾದ ದೆಹಲಿ ಮತ್ತು ಮುಂಬೈಗಳ ನಡುವೆ ಸಾಗಿಸುತ್ತಿದ್ದವು.

 

85 ಪರ್ಸೆಂಟ್ ವಿಮಾನಗಳು ಕೇವಲ ಒಬ್ಬರು ಇಬ್ಬರನ್ನು ಕರೆತಂದಿದ್ದವು

85 ಪರ್ಸೆಂಟ್ ವಿಮಾನಗಳು ಕೇವಲ ಒಬ್ಬರು ಇಬ್ಬರನ್ನು ಕರೆತಂದಿದ್ದವು

"85 ಪರ್ಸೆಂಟ್‌ನಷ್ಟು ಈ ವಿಮಾನಗಳಲ್ಲಿ ಒಂದರಿಂದ ಮೂರು ಪ್ರಯಾಣಿಕರ ನಡುವೆ ಸಾಗಿಸಲ್ಪಟ್ಟಿದೆ" ಎಂದು ಜೆಟ್‌ಸೆಟ್‌ಗೊ ಸಂಸ್ಥಾಪಕ ಕಾನಿಕಾ ತೆಕ್ರಿವಾಲ್ ಹೇಳಿದ್ದಾರೆ. ವಿಮಾನ ಹಾರಾಟದಲ್ಲಿ ಉಬರ್ ಆಫ್ ಸ್ಪೈಸ್ ಎಂದು ಪ್ರಸಿದ್ಧವಾಗಿರುವ ಟೆಕ್ರಿವಾಲ್ ಸಂಸ್ಥೆಯು ಭಾರತೀಯ ಖಾಸಗಿ ವಾಯುಯಾನ ಮಾರುಕಟ್ಟೆಯಲ್ಲಿ 21.7 ಪರ್ಸೆಂಟ್‌ರಷ್ಟು ನಿಯಂತ್ರಣ ಹೊಂದಿದೆ.

English summary

India's Rich People Paid Lakhs To Fly Kids Home From Abroad

Two weeks before inbound commercial flights were stopped India's Rich People Paid Lakhs To Fly Kids Home From Abroad
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X