ಷೇರು ಮಾರ್ಕೆಟ್, ಅಲ್ಲಿನ ವಹಿವಾಟು, ಕಂಪೆನಿಗಳು, ಅವುಗಳು ನೀಡುವ ಲಾಭಾಂಶ, ಬೆಳವಣಿಗೆ ವೇಗ ಇವೆಲ್ಲದರ ಬಗ್ಗೆ ಆಸಕ್ತಿ ಮೂಡಿಸುವಂಥ ವರದಿ ಇದು. ಭಾರತದ ಐ.ಟಿ. (ಮಾಹಿತಿ ತಂತ್ರಜ್ಞಾನ) ಕಂಪೆನಿಗಳು ಕಳೆದ ಐದು ವರ್ಷದಲ್ಲಿ ಹೂಡಿಕೆದಾರರ ವಿಚಾರದಲ್ಲಿ ಅದೆಷ್ಟು ಉದಾರಿಗಳಾಗಿವೆ ಗೊತ್ತೆ? ಆ ಕಂಪೆನಿಗಳಿಗೆ ಬರುವ ಲಾಭದಲ್ಲಿ ಶೇಕಡಾ 70ರಷ್ಟನ್ನು ಹೂಡಿಕೆದಾರರಿಗೆ ಹಿಂತಿರುಗಿಸಿವೆ.
2016ನೇ ಇಸವಿಯಿಂದ 2020ರ ಮಧ್ಯೆ ಐದು ವರ್ಷದಲ್ಲಿ ಭಾರತದ ಟಾಪ್ 5 ಐ.ಟಿ. ಕಂಪೆನಿಗಳಾದ ಟಿಸಿಎಸ್, ಇನ್ಫೋಸಿಸ್, ಎಚ್ ಸಿಎಲ್ ಟೆಕ್, ವಿಪ್ರೋ ಮತ್ತು ಟೆಕ್ ಮಹೀಂದ್ರಾ ಇವೆಲ್ಲವೂ ಸೇರಿ ಒಟ್ಟು 3.3 ಲಕ್ಷ ಕೋಟಿ ರುಪಾಯಿ ಲಾಭ ಮಾಡಿವೆ. ಆ ಪೈಕಿ 2.3 ಲಕ್ಷ ಕೋಟಿ ರುಪಾಯಿಯನ್ನು ಷೇರುದಾರರಿಗೆ ನೀಡಿವೆ ಎಂದು ಬ್ರೋಕರೇಜ್ ಹಾಗೂ ರೀಸರ್ಚ್ ಸಂಸ್ಥೆ ಮೋತಿಲಾಲ್ ಓಸ್ವಾಲ್ ಹೇಳಿದೆ.
ಕಳೆದ ಐದು ವರ್ಷದಲ್ಲಿ ಟಿಸಿಎಸ್ ಕಂಪೆನಿಯೊಂದೇ ಷೇರುದಾರರಿಗೆ 1.1 ಲಕ್ಷ ಕೋಟಿ ರುಪಾಯಿ ನೀಡಿದೆ. ಆ ನಂತರ ಇನ್ಫೋಸಿಸ್ 65,000 ಕೋಟಿ, ವಿಪ್ರೋ 30,000 ಕೋಟಿ, ಎಚ್ ಸಿಎಲ್ ಟೆಕ್ನಾಲಜೀಸ್ 17,000 ಕೋಟಿ ಮತ್ತು ಟೆಕ್ ಮಹೀಂದ್ರಾ 8600 ಕೋಟಿ ರುಪಾಯಿಯನ್ನು ಹೂಡಿಕೆದಾರರಿಗೆ ಮರಳಿಸಿವೆ.

ಆಸಕ್ತಿಕರ ಸಂಗತಿ ಏನೆಂದರೆ ಇ ಯಾವ ಕಂಪೆನಿಯೂ 2016ರಿಂದ 2020ರ ಮಧ್ಯೆ ಎರಡಂಕಿಯ ಲಾಭದ CAGR ನೀಡಿಲ್ಲ. ಅತಿ ಹೆಚ್ಚು ಅಂದರೆ ಎಚ್ ಸಿಎಲ್ ಟೆಕ್ನಾಲಜೀಸ್ 9 ಪರ್ಸೆಂಟ್, ವಿಪ್ರೋ ಅತ್ಯಂತ ಕಡಿಮೆ ಅಂದರೆ 2 ಪರ್ಸೆಂಟ್ ತೆರಿಗೆ ಪಾವತಿಸಿದ ನಂತರ CAGR ಇದೆ.
More From GoodReturns

ಷೇರು ಮಾರುಕಟ್ಟೆ ಏರಿಳಿತ: ಇಂದಿನ ಹೂಡಿಕೆದಾರರ ಆತಂಕವೇನು?

ಷೇರು ಮಾರುಕಟ್ಟೆ ಇಂದು ಭರ್ಜರಿ ಏರಿಕೆ: ಹೂಡಿಕೆದಾರರಿಗೆ ಬಂಪರ್ ಲಾಭ?

ಓಮ್ ಪವರ್ ಟ್ರಾನ್ಸ್ಮಿಷನ್ ಐಪಿಒ: ಸೋಮವಾರ ಹೂಡಿಕೆದಾರರಿಗೆ ಅಗ್ನಿಪರೀಕ್ಷೆ?

ಷೇರು ಮಾರುಕಟ್ಟೆ ಶನಿವಾರದ ವಿಶೇಷ ವಹಿವಾಟು: ಹೂಡಿಕೆದಾರರೇ ಎಚ್ಚರ!

ಎಮಿಯಾಕ್ ಟೆಕ್ನಾಲಜೀಸ್ ಐಪಿಒ: ಹೂಡಿಕೆದಾರರ ಮುಗಿಬಿದ್ದ ಭರ್ಜರಿ ಬೇಡಿಕೆ!

ಓಮ್ ಪವರ್ ಟ್ರಾನ್ಸ್ಮಿಷನ್ ಐಪಿಒ: ಹೂಡಿಕೆದಾರರಿಗೆ ಭರ್ಜರಿ ಲಾಭ ಸಿಗುತ್ತಾ?

ಆರ್ಬಿಐ ಪಾಲಿಸಿಗೂ ಮುನ್ನ ನಿಮ್ಮ ಬಂಡವಾಳಕ್ಕೆ ಈ ರಕ್ಷಣೆ ಬೇಕೇ?

ಟಿಸಿಎಸ್ ಫಲಿತಾಂಶದ ಬಳಿಕ ಮಾರುಕಟ್ಟೆಯಲ್ಲಿ ಅನಿರೀಕ್ಷಿತ ಏರಿಳಿತದ ಭೀತಿ!

ಆರ್ಬಿಐ ಪಾಲಿಸಿ: ಇಂದಿನ ನಿರ್ಧಾರ ನಿಮ್ಮ ಹೂಡಿಕೆಯನ್ನು ಬದಲಿಸುತ್ತಾ?

ನಿಫ್ಟಿ 24,000 ದಾಟಿದೆ: ಸೋಮವಾರದ ಲಾಭಕ್ಕೆ ಈ ಷೇರುಗಳೇ ದಾರಿ!

ಷೇರು ಮಾರುಕಟ್ಟೆ ಏರಿಕೆ: ಹೂಡಿಕೆದಾರರಿಗೆ ಸಿಕ್ಕಿತು ಭರ್ಜರಿ ಲಾಭದ ಅವಕಾಶ



Click it and Unblock the Notifications