For Quick Alerts
ALLOW NOTIFICATIONS  
For Daily Alerts

ಭಾರತದ ಆರ್ಥಿಕತೆ 3.2 ಪರ್ಸೆಂಟ್ ಕುಸಿಯುವ ಎಚ್ಚರಿಕೆ ನೀಡಿದ ವಿಶ್ವ ಬ್ಯಾಂಕ್

|

ಪ್ರಸಕ್ತ ಹಣಕಾಸು ವರ್ಷದಲ್ಲಿ ಭಾರತದ ಆರ್ಥಿಕತೆ 3.2 ಪರ್ಸೆಂಟ್ ನಷ್ಟು ಕುಗ್ಗಲಿದೆ ಎಂದು ವಿಶ್ವಬ್ಯಾಂಕ್ ಸೋಮವಾರ ಹೇಳಿದೆ. ಕೊರೊನಾ ಲಾಕ್ ಡೌನ್ ನಿಂದ ಭಾರತದ ಆರ್ಥಿಕತೆ ಮೇಲೆ ಪರಿಣಾಮ ಆಗಲಿದೆ ಎಂದು ಇತರ ಸಂಸ್ಥೆಗಳು ತಿಳಿಸಿರುವ ವಿಷಯಗಳನ್ನೇ ವಿಶ್ವ ಬ್ಯಾಂಕ್ ಮತ್ತೊಮ್ಮೆ ಹೇಳಿದಂತಾಗಿದೆ.

ಕೊರೊನಾ ಹರಡದಂತೆ ತಡೆಯಲು ಬಹು ಹಂತದಲ್ಲಿ ಹೇರಿದ ಲಾಕ್ ಡೌನ್ ನಿಂದಾಗಿ ಆರ್ಥಿಕತೆಗೆ ದೊಡ್ಡ ಹೊಡೆತ ಬಿದ್ದಿದೆ. ಜಾಗತಿಕ ಆರ್ಥಿಕ ಸ್ಥಿತಿಗತಿ ಬಗ್ಗೆ ಈಚೆಗೆ ಬಿಡುಗಡೆ ಮಾಡಿದ ಅವತರಣಿಕೆಯಲ್ಲಿ ಭಾರತವನ್ನು ನೆಗೆಟಿವ್ 9 ಪರ್ಸೆಂಟ್ ಗೆ ಅಂದಾಜು ಮಾಡಲಾಗಿದೆ.

ಕೊರೊನಾದಿಂದ 6 ಕೋಟಿಗೂ ಹೆಚ್ಚು ಜನರು ಬಡತನಕ್ಕೆ ಸಿಲುಕಬಹುದು : ವಿಶ್ವ ಬ್ಯಾಂಕ್ಕೊರೊನಾದಿಂದ 6 ಕೋಟಿಗೂ ಹೆಚ್ಚು ಜನರು ಬಡತನಕ್ಕೆ ಸಿಲುಕಬಹುದು : ವಿಶ್ವ ಬ್ಯಾಂಕ್

ಆದರೆ, 2021ರಲ್ಲಿ ಭಾರತದ ಆರ್ಥಿಕತೆ ಚೇತರಿಸಿಕೊಳ್ಳಲಿದೆ ಎಂದು ವಿಶ್ವ ಬ್ಯಾಂಕ್ ಹೇಳಿದೆ. "2019- 20ನೇ ಸಾಲಿನಲ್ಲಿ (2020ರ ಮಾರ್ಚ್ ಕೊನೆಗೆ) ಭಾರತದ ಬೆಳವಣಿಗೆ ದರ 4.2 ಪರ್ಸೆಂಟ್ ಗೆ ಕುಸಿಯಬಹುದು ಮತ್ತು ಕೊರೊನಾ ಕಾರಣಕ್ಕೆ 2020- 21ಕ್ಕೆ ಉತ್ಪಾದನೆ 3.2 ಪರ್ಸೆಂಟ್ ಗೆ ಕುಗ್ಗಬಹುದು. ಕೊರೊನಾ ವೈರಸ್ ಹಬ್ಬದಿರಲಿ ಎಂದು ಅಲ್ಪಾವಧಿ ಚಟುವಟಿಕೆಗಳನ್ನು ನಿಗ್ರಹಿಸಿದ್ದು, ಆರ್ಥಿಕ ಕುಸಿತಕ್ಕೆ ಕೊಡುಗೆ ನೀಡಿದೆ" ಎಂದು ಜಾಗತಿಕ ಆರ್ಥಿಕ ಸ್ಥಿತಿಗತಿ ವರದಿ ನೀಡಿದೆ.

ಭಾರತದ ಆರ್ಥಿಕತೆ 3.2% ಕುಸಿಯುವ ಎಚ್ಚರಿಕೆ ನೀಡಿದ ವಿಶ್ವ ಬ್ಯಾಂಕ್

ಅಂತರರಾಷ್ಟ್ರೀಯ ರೇಟಿಂಗ್ ಏಜೆನ್ಸಿ ಮೂಡೀಸ್ ಇನ್ವೆಸ್ಟರ್ಸ್ ಸರ್ವೀಸ್, ಫಿಚ್ ರೇಟಿಂಗ್ ಮತ್ತು S&P ಗ್ಲೋಬಲ್ ರೇಟಿಂಗ್ಸ್ ಎಲ್ಲವೂ ಹೇಳಿರುವ ಪ್ರಕಾರ, ಏಪ್ರಿಲ್ 2020ರಿಂದ ಮಾರ್ಚ್ 2021ರ ಆರ್ಥಿಕ ವರ್ಷದ ಮಧ್ಯೆ ಭಾರತದ ಆರ್ಥಿಕ ಬೆಳವಣಿಗೆ 4ರಿಂದ 5 ಪರ್ಸೆಂಟ್ ಕುಗ್ಗಬಹುದು.

ಇನ್ನು ಕ್ರಿಸಿಲ್ ಪ್ರಕಾರ, ಸ್ವಾತಂತ್ರ್ಯ ನಂತರ ಭಾರತದ ಪಾಲಿಗೆ ನಾಲ್ಕು ಹಾಗೂ ಉದಾರೀಕರಣದ ನಂತರ ಮೊದಲನೇ ಆರ್ಥಿಕ ಕುಸಿತ ಇದು. ಇನ್ನು ಈವರೆಗೆ ಕಂಡ ಅತ್ಯಂತ ಕೆಟ್ಟ ಆರ್ಥಿಕ ಕುಸಿತ ಇದಾಗಿರಲಿದೆ.

2017ರಲ್ಲಿ ಭಾರತದ ಆರ್ಥಿಕತೆ ದರವು 7 ಪರ್ಸೆಂಟ್ ಇತ್ತು. ಆ ನಂತರ 2018ರಲ್ಲಿ 6.1 ಪರ್ಸೆಂಟ್ ಗೆ ಇಳಿಯಿತು. 2020ರ ಆರ್ಥಿಕ ವರ್ಷದಲ್ಲಿ 4.2% ಕುಗ್ಗಿದೆ ಎಂದು ವಿಶ್ವ ಬ್ಯಾಂಕ್ ಹೇಳಿದೆ.

English summary

Indian Economy Contract By 3.2 Percent, Said World Bank

World bank on Monday said that, due to Corona lock down Indian economy contract by 3.2 percent.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X