For Quick Alerts
ALLOW NOTIFICATIONS  
For Daily Alerts

Indian Rupee : ಏಷ್ಯಾದಲ್ಲೇ ಅತೀ ಕಳಪೆ ಕರೆನ್ಸಿ ಭಾರತದ ರೂಪಾಯಿ!

|

ಭಾರತದ ರೂಪಾಯಿ ಕಳೆದ ವರ್ಷ 2022ರಲ್ಲಿ ಏಷ್ಯಾದಲ್ಲೇ ಅತೀ ಕಳಪೆ ಸಾಧನೆ ಮಾಡಿದ ಕರೆನ್ಸಿಯಾಗಿದೆ. ಭಾರತೀಯ ರೂಪಾಯಿ 2022ರಲ್ಲಿ ಒಟ್ಟು ಶೇಕಡ 11.3ರಷ್ಟು ಇಳಿಕೆ ಕಂಡಿದೆ. 2013ರ ಬಳಿಕ ಇದೇ ಮೊದಲ ಬಾರಿಗೆ ಭಾರತೀಯ ರೂಪಾಯಿ ಇಷ್ಟೊಂದು ಕುಸಿತವಾಗಿದೆ.

 

2022ರಲ್ಲಿ ಯುಎಸ್ ಡಾಲರ್ ಎದುರು ನಿರಂತರವಾಗಿ ಭಾರತೀಯ ರೂಪಾಯಿ ತನ್ನ ಮೌಲ್ಯವನ್ನು ಕಳೆದುಕೊಂಡಿದೆ. ಹಣದುಬ್ಬರದ ನಡುವೆ ಯುಎಸ್ ಡಾಲರ್ ಬಲಗೊಳ್ಳುತ್ತಿದ್ದಂತೆ ಫೆಡರಲ್ ರಿಸರ್ವ್ ಕೂಡಾ ತನ್ನ ವಿತ್ತೀಯ ನೀತಿಯಲ್ಲಿ ಬದಲಾವಣೆ ಮಾಡಿದೆ. ಭಾರತದಲ್ಲಿ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾವು ಕೂಡಾ ಹಣದುಬ್ಬರವನ್ನು ತಡೆಯುವ ನಿಟ್ಟಿನಲ್ಲಿ ರೆಪೋ ದರವನ್ನು ಸತತ ಐದು ಬಾರಿ ಹೆಚ್ಚಿಸಿದೆ.

ರೂಪಾಯಿಯು ಯುಎಸ್ ಡಾಲರ್ ಎದುರು ಕಳೆದ ಅಕ್ಟೋಬರ್‌ನಲ್ಲಿ 83.29ರ ಕೆಳಮಟ್ಟಕ್ಕೆ ಇಳಿದಿದೆ. ಕಳೆದ ಕೆಲವು ವಾರಗಳಿಂದ ಅದರ ಆಸುಪಾಸಿನಲ್ಲಿಯೇ ರೂಪಾಯಿ ಮೌಲ್ಯವಿದೆ. ಶುಕ್ರವಾರ ಡಿಸೆಂಬರ್ 30ರಂದು ಭಾರತೀಯ ರೂಪಾಯಿ ಯುಎಸ್ ಡಾಲರ್ ಎದುರು 15 ಪೈಸೆ ಏರಿಕೆಯಾಗಿ, 82.72ಕ್ಕೆ ವಹಿವಾಟು ಅಂತ್ಯ ಮಾಡಿದೆ. ಕಳೆದ ವರ್ಷದಲ್ಲಿ ಭಾರತೀಯ ರೂಪಾಯಿ ಡಿಸೆಂಬರ್‌ನಲ್ಲಿ 74.33ಕ್ಕೆ ತಲುಪಿತ್ತು.

 ಏಷ್ಯಾದಲ್ಲೇ ಅತೀ ಕಳಪೆ ಕರೆನ್ಸಿ ಭಾರತದ ರೂಪಾಯಿ!

2015ರ ಬಳಿಕ ಡಾಲರ್ ಅತೀ ಬಲಯುತ

2015ರ ಬಳಿಕ ಡಾಲರ್ ಅತೀ ಬಲಗೊಂಡಿದೆ. ಸಾಮಾನ್ಯವಾಗಿ ಡಾಲರ್ ಬಲಗೊಂಡರೆ ಜಾಗತಿಕವಾಗಿ ಹಲವಾರು ಸಮಸ್ಯೆಗಳು ಉಂಟಾಗಲಿದೆ. ಆಮದು, ರಫ್ತಿನ ವೆಚ್ಚ ಹೆಚ್ಚಾಗಲಿದ್ದು, ಇದರಿಂದಾಗಿ ಹೆಚ್ಚಿನ ದೇಶಗಳು ಆಮದು, ರಫ್ತಿನ ಮೇಲೆ ನಿಯಂತ್ರಣ ಮಾಡಿದೆ.

ಕೋವಿಡ್ ಸಾಂಕ್ರಾಮಿಕ ಸಂದರ್ಭದಲ್ಲಿ ಜಾಗತಿಕವಾಗಿ ಹಲವಾರು ಆರ್ಥಿಕ ಸಮಸ್ಯೆ ಉಂಟಾಗಿದೆ. ಆದರೆ ನಿರ್ಬಂಧಗಳು ಸಡಿಲಿಕೆಯಾಗುತ್ತಿದ್ದಂತೆ ಸ್ಥಿತಿಯು ಕೊಂಚ ಸುಧಾರಣೆಯನ್ನು ಕಾಣುತ್ತಿತ್ತು. ಆದರೆ ರಷ್ಯಾವು ಉಕ್ರೇನ್ ಮೇಲೆ ದಾಳಿ ಮಾಡಿ, ಯುದ್ಧ ಆರಂಭ ಮಾಡಿದ ಬಳಿಕ ಇದರ ಪರಿಣಾಮ ವಿಶ್ವದ ಬಹುತೇಕ ದೇಶಗಳ ಮೇಲೆ ಬೀರಿದೆ.

2023ರಲ್ಲಿ ಹೇಗಿರಲಿದೆ, ಹೇಗಿದೆ ರೂಪಾಯಿ?

2023ರಲ್ಲಿ ರೂಪಾಯಿಯು ಸುಮಾರು 81.50ರಿಂದ 83.50ರ ನಡುವೆ ಇರಲಿದೆ. ಪ್ರಮುಖವಾಗಿ ಮೊದಲ ತ್ರೈಮಾಸಿಕದಲ್ಲಿ ನಾವು ಅಂದಾಜು ಮಾಡಿದ ಲೆಕ್ಕಾಚಾರದ ಆಸುಪಾಸಿನಲ್ಲಿ ರೂಪಾಯಿ ಮೌಲ್ಯ ಇರಲಿದೆ ಎಂದು ತಜ್ಞರು ಅಂದಾಜಿಸಿದ್ದಾರೆ. ಆದರೆ ಜಾಗತಿಕವಾಗಿ ಹಿಂಜರಿತ ಕೂಡಾ ಉಂಟಾಗಬಹುದು ಎಂಬ ಎಚ್ಚರಿಕೆಯನ್ನು ಕೂಡಾ ನೀಡಿದ್ದಾರೆ.

 

2022ರ ಕೊನೆಯ ವಹಿವಾಟಿನಲ್ಲಿ ರೂಪಾಯಿ 82.61ರಷ್ಟಿತ್ತು. ನಿನ್ನೆ ಅಂದರೆ ಈ ವರ್ಷದ ಮೊದಲ ಮಾರುಕಟ್ಟೆ ದಿನದಂದು ರೂಪಾಯಿಯು ಮೌಲ್ಯ ಇಳಿಕೆಯಾಗಿ, ವಹಿವಾಟಿಗೆ ಇಳಿದಿದೆ. 5 ಪೈಸೆ ಇಳಿಕೆಯಾಗಿ, 82.66 ರೂಪಾಯಿಗೆ ಕುಗ್ಗಿದೆ. ಇನ್ನು ನಿನ್ನೆ ವಹಿವಾಟಿನ ಅಂತ್ಯದಲ್ಲಿ ರೂಪಾಯಿ 82.74ಕ್ಕೆ ಕುಗ್ಗಿ ವಹಿವಾಟು ಅಂತ್ಯ ಮಾಡಿದೆ.

English summary

Indian rupee is Asia's worst-performing currency in 2022

The domestic currency declined by 11.3% from last year – its worst annual performance since 2013. Indian rupee is Asia's worst-performing currency in 2022.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X