For Quick Alerts
ALLOW NOTIFICATIONS  
For Daily Alerts

ಯುಎಇಯಲ್ಲಿ 10 ಲಕ್ಷ USD ಲಾಟರಿ ಜಾಕ್ ಪಾಟ್ ಹೊಡೆದ ಭಾರತೀಯ ಮಹಿಳೆ

|

ಯುಎಇಯ ಅಜ್ಮಾನ್ ಶಾಲೆಯೊಂದರಲ್ಲಿ ಪ್ರಾಂಶುಪಾಲರಾಗಿ ಕಾರ್ಯ ನಿರ್ವಹಿಸುವ ಭಾರತೀಯ ಮಹಿಳೆಗೆ 10 ಲಕ್ಷ ಡಾಲರ್ (7.50 ಕೋಟಿ ರುಪಾಯಿಗೂ ಹೆಚ್ಚು) ಜಾಕ್ ಪಾಟ್ ಹೊಡೆದಿದೆ. ಮಾಲತಿ ದಾಸ್ ಅವರಿಗೆ ರಾಫೆಲ್ ಡ್ರಾ ಲಾಟರಿ ಹೊಡೆದಿದ್ದು, ದೀರ್ಘ ಕಾಲದಿಂದಲೂ ಯುಎಇಯ ಅಜ್ಮಾನ್ ನಲ್ಲಿ ಇರುವ ಭಾರತೀಯ ಪ್ರೌಢಶಾಲೆಯಲ್ಲಿ ಪ್ರಾಂಶುಪಾಲರಾಗಿದ್ದಾರೆ.

ಜೂನ್ 26ನೇ ತಾರೀಕಿನಂದು ಮಾಲತಿ ದಾಸ್ ಆನ್ ಲೈನ್ ನಲ್ಲಿ ಟಿಕೆಟ್ ಖರೀದಿಸಿದ್ದರು. ಜುಲೈ 15ರಂದು ಒಂದು ಮಿಲಿಯನ್ ಅಮೆರಿಕನ್ ಡಾಲರ್ ಬಹುಮಾನ ಗೆದ್ದಿದ್ದಾರೆ. ಈ ಲಾಟರಿ ಟಿಕೆಟ್ ಡ್ರಾ ದುಬೈ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಟರ್ಮಿನಲ್ 2ರಲ್ಲಿ ನಡೆಯಿತು.

7 ವರ್ಷದ ಪೋರನಿಗೆ 7.30 ಕೋಟಿ ರುಪಾಯಿ ಬಹುಮಾನ7 ವರ್ಷದ ಪೋರನಿಗೆ 7.30 ಕೋಟಿ ರುಪಾಯಿ ಬಹುಮಾನ

ಇಂಥ ಸಮಯದಲ್ಲಿ ಇದು ದೊಡ್ಡ ಆಶೀರ್ವಾದ. ಈ ಹಣವನ್ನು ಒಳ್ಳೆ ಉದ್ದೇಶಕ್ಕೆ ಬಳಸುತ್ತೇನೆ. ಸ್ವಲ್ಪ ಮೊತ್ತವನ್ನು ಅಜ್ಮಾನ್ ಶಾಲೆಗೆ ಕೂಡ ಎತ್ತಿಡುತ್ತೇನೆ ಎಂದು ದಾಸ್ ಹೇಳಿದ್ದಾರೆ. ಲಾಟರಿ ಬಹುಮಾನದ ಆಯೋಜಕರ ಪ್ರಕಾರ, 1999ರಿಂದ ಆರಂಭವಾದಾಗಿನಿಂದ ಈ ಬಹುಮಾನ ಗೆಲ್ಲುತ್ತಿರುವ 165ನೇ ಭಾರತೀಯರು ಮಾಲತಿ ದಾಸ್.

ಯುಎಇಯಲ್ಲಿ 10 ಲಕ್ಷ USD ಲಾಟರಿ ಜಾಕ್ ಪಾಟ್ ಹೊಡೆದ ಭಾರತೀಯ ಮಹಿಳೆ

ಮಾಲತಿ ದಾಸ್ ಗೂ ಮುನ್ನ, ಕಳೆದ ತಿಂಗಳು ಡಿಕ್ಸನ್ ಕಥಿರಾ ಅಬ್ರಾಹಂ ಎಂಬ ಭಾರತೀಯರು ಯುಎಇಯಲ್ಲಿ 10 ಮಿಲಿಯನ್ ದಿರ್ಹಾಮ್ ಬಹುಮಾನವನ್ನು ರಾಫಲ್ ಡ್ರಾದಲ್ಲಿ ಗೆದ್ದಿದ್ದರು. ಕಳೆದ ಏಪ್ರಿಲ್ ನಲ್ಲಿ ದುಬೈನಲ್ಲಿದ್ದ ಭಾರತೀಯ ಚಾಲಕರೊಬ್ಬರು ಅಬುಧಾಬಿಯಲ್ಲಿ ನಡೆದ ರಾಫಲ್ ಡ್ರಾನಲ್ಲಿ 1.20 ಕೋಟಿ ದಿರ್ಹಾಮ್ ಗೆದ್ದಿದ್ದರು.

ಕಳೆದ ಜನವರಿಯಲ್ಲಿ ಯುಎಇಯಲ್ಲಿದ್ದ ಭಾರತೀಯರೊಬ್ಬರು ಅಬು ಧಾಬಿಯಲ್ಲಿ ನಡೆದ ರಾಫಲ್ ಡ್ರಾನಲ್ಲಿ 1.2 ಕೋಟಿ ದಿರ್ಹಾಮ್ ಗೆದ್ದಿದ್ದರು.

English summary

Indian Woman Won Raffle Draw Jackpot Of 1 Million USD In UAE

Malathi Das, principal in Indian school at UAE, Ajman won 1 million USD Raffle ticket jackpot.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X