For Quick Alerts
ALLOW NOTIFICATIONS  
For Daily Alerts

ಇಂಡಿಗೋದಿಂದ ಈ ತನಕ 1000 ಕೋಟಿ ರುಪಾಯಿ ಟಿಕೆಟ್ ರೀಫಂಡ್ ಗ್ರಾಹಕರಿಗೆ ಪಾವತಿ

By ಅನಿಲ್ ಆಚಾರ್
|

ಗ್ರಾಹಕರಿಗೆ ಪಾವತಿ ಮಾಡಬೇಕಿರುವ 'ಕ್ರೆಡಿಟ್ ಶೆಲ್' ಎಲ್ಲ ಬಾಕಿ ಮೊತ್ತವನ್ನು ಜನವರಿ 31, 2021ರೊಳಗೆ ನೀಡುವುದಾಗಿ ಸೋಮವಾರ ಇಂಡಿಗೋ ಏರ್ ಲೈನ್ಸ್ ಘೋಷಣೆ ಮಾಡಿದೆ. ಗ್ರಾಹಕರಿಗೆ ನೀಡಬೇಕಿದ್ದ ಮೊತ್ತದಲ್ಲಿ ಶೇ 90ರಷ್ಟು, ಅಂದಾಜು 1000 ಕೋಟಿ ರುಪಾಯಿಯನ್ನು ಪಾವತಿ ಮಾಡಲಾಗಿ ಎಂದು ಸಂಸ್ಥೆಯು ಮಾಹಿತಿ ನೀಡಿದೆ.

ಲಾಕ್ ಡೌನ್ ಘೋಷಣೆ ಮಾಡಿದ ನಂತರ ಎಲ್ಲ ವಿಮಾನಗಳ ಹಾರಾಟ ರದ್ದು ಮಾಡಲಾಯಿತು. ಹಲವು ವಿಮಾನ ಯಾನ ಸಂಸ್ಥೆಗಳು ಟಿಕೆಟ್ ಹಣವನ್ನು ಕ್ರೆಡಿಟ್ ಶೆಲ್ ನಲ್ಲಿ ಹಾಕಿದವು. ಅದನ್ನು ನಂತರದ ದಿನಗಳಲ್ಲಿ ರಿಡೀಮ್ ಮಾಡಿಕೊಳ್ಳಬಹುದು ಎಂದಿದ್ದವು. ಇದರಿಂದಾಗಿ ಲಾಕ್ ಡೌನ್ ಅವಧಿಯಲ್ಲಿ ಗ್ರಾಹಕರ ಟಿಕೆಟ್ ಹಣವನ್ನು ಹಿಂತಿರುಗಿಸದೆ ಏರ್ ಲೈನ್ಸ್ ಗಳು ತಮ್ಮ ಬಳಿಕೆಯೇ ಇರಿಸಿಕೊಂಡವು.

ಕೊರೊನಾದಿಂದ ರದ್ದಾದ ವಿಮಾನದ ಟಿಕೆಟ್ ರೀಫಂಡ್: ಸುಪ್ರೀಂ ಕೋರ್ಟ್ ಮಹತ್ವದ ಆದೇಶಕೊರೊನಾದಿಂದ ರದ್ದಾದ ವಿಮಾನದ ಟಿಕೆಟ್ ರೀಫಂಡ್: ಸುಪ್ರೀಂ ಕೋರ್ಟ್ ಮಹತ್ವದ ಆದೇಶ

"ದಿಢೀರ್ ಕಾಣಿಸಿಕೊಂಡ ಕೋವಿಡ್ 19 ಮತ್ತು ಅದರ ಪರಿಣಾಮವಾಗಿ ಘೋಷಣೆ ಮಾಡಿದ ಲಾಕ್ ಡೌನ್ ನಿಂದಾಗಿ ಈ ವರ್ಷದ ಮಾರ್ಚ್ ಅಂತ್ಯದ ಹೊತ್ತಿಗೆ ನಮ್ಮ ಕಾರ್ಯಾಚರಣೆ ಸಂಪೂರ್ಣ ನಿಂತುಹೋಯಿತು. ನಮಗೆ ಬರಬೇಕಿ ಹಣದ ಒಳಹರಿವಿಗೂ ನಿಂತಿತು. ರದ್ದಾದ ವಿಮಾನಗಳ ರೀಫಂಡ್ ತಕ್ಷಣಕ್ಕೆ ಮಾಡಲು ಆಗಲಿಲ್ಲ. ನಮ್ಮ ಗ್ರಾಹಕರಿಗೆ ನೀಡಬೇಕಾದ ಹಣಕ್ಕೆ ಆಗ ಕ್ರೆಡಿಟ್ ಶೆಲ್ ಸೃಷ್ಟಿಸಬೇಕಾಯಿತು," ಎಂದು ಇಂಡಿಗೋದ ಸಿಇಒ ರೋನೋಜಾಯ್ ದತ್ತಾ ಹೇಳಿದ್ದಾರೆ.

ಇಂಡಿಗೋದಿಂದ 1000 ಕೋಟಿ ರು. ಟಿಕೆಟ್ ರೀಫಂಡ್ ಗ್ರಾಹಕರಿಗೆ  ಪಾವತಿ

ಆದರೆ, ಮತ್ತೆ ಕಾರ್ಯ ನಿರ್ವಹಣೆ ಆರಂಭವಾದ ಮೇಲೆ ಬೇಡಿಕೆ ಹೆಚ್ಚುತ್ತಿದೆ. ದತ್ತಾ ಹೇಳುತ್ತಿರುವಂತೆ, ಈಗ ಕಂಪೆನಿ ಆದ್ಯತೆ ಕ್ರೆಡಿಟ್ ಶೆಲ್ ಮೊತ್ತದ ರೀಫಂಡ್ ಆಗಿದೆ. ಜನವರಿ 31, 2021ರೊಳಗೆ 100 ಪರ್ಸೆಂಟ್ ನಷ್ಟು ಪೂರ್ತಿ ಕ್ರೆಡಿಟ್ ಶೆಲ್ ಪಾವತಿಯನ್ನು ಮಾಡಲಾಗುತ್ತದೆ. ಹಿಂದೆಂದೂ ಕಂಡಿರದಂಥ ಬಿಕ್ಕಟ್ಟಿನ ಸಮಯದಲ್ಲಿ ಗ್ರಾಹಕರು ನಮ್ಮ ಜತೆಗಿದ್ದು, ಸಂಯಮದಿಂದ ಕಾದಿದ್ದಾರೆ. ಅವರಿಗೆ ಧನ್ಯವಾದ ಹೇಳಲು ಬಯಸುತ್ತೇನೆ ಎಂದು ಅವರು ಹೇಳಿದ್ದಾರೆ.

ವೇತನ ರಹಿತ ರಜಾ ನಿಯಮವನ್ನು ಕಳೆದ ವಾರ ಇಂಡಿಗೋದಿಂದ ತೆಗೆಯಲಾಗಿದೆ. ಲಾಕ್ ಡೌನ್ ಅವಧಿಯಲ್ಲಿ ಸಿಬ್ಬಂದಿಗೆ ಈ ನಿಯಮವನ್ನು ತರಲಾಗಿತ್ತು.

English summary

Indigo Said, It Has Already Refunded Rs 1000 Crore Amount Which Owed To Customers

Indigo airlines Monday said, it has already refunded 90% of the ticket amount it owed to customers during corona lock down, which is approximately Rs 1,000 crore.
Story first published: Monday, December 7, 2020, 19:42 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X