For Quick Alerts
ALLOW NOTIFICATIONS  
For Daily Alerts

ನವೋದ್ಯಮಗಳಿಗೆ ಉದ್ಯಮಿ ರತನ್ ಟಾಟಾ ಎಚ್ಚರಿಕೆ ಮಾತು

|

ಹೂಡಿಕೆದಾರರ ಹಣವನ್ನು ಹಾಳು ಮಾಡುವ ಹಾಗೂ ನಾಪತ್ತೆ ಅಗುವ ನವೋದ್ಯಮಗಳಿಗೆ (ಸ್ಟಾರ್ಟ್ ಅಪ್ಸ್) ಎರಡು ಅಥವಾ ಮೂರನೇ ಅವಕಾಶ ದೊರೆಯುವುದಿಲ್ಲ ಎಂದು ಉದ್ಯಮಿ ರತನ್ ಟಾಟಾ ಎಚ್ಚರಿಕೆ ನೀಡಿದ್ದಾರೆ. ಅಂದ ಹಾಗೆ ಟಾಟಾ ಅವರೂ ಸ್ಟಾರ್ಟ್ ಅಪ್ಸ್ ಗಳಲ್ಲಿ ಹಣ ಹೂಡಿದ್ದಾರೆ. ಹೊಸಾ ಬಗೆಯ ಆಲೋಚನೆಗಳನ್ನು ಹುಟ್ಟುಹಾಕುವ ಕಂಪೆನಿಗಳ ಸ್ಥಾಪಕರೇ ಭಾರತದ ಕೈಗಾರಿಕೋದ್ಯಮದ ಭವಿಷ್ಯದ ನಾಯಕರು ಎಂದಿದ್ದಾರೆ.

ಈಚೆಗೆ ಹಲವು ಸ್ಟಾರ್ಟ್ ಅಪ್ಸ್ ಗಳಿಂದ ಹೂಡಿಕೆದಾರರ ಹಣವು ನಷ್ಟವಾಗಿದೆ. ಭವಿಷ್ಯದಲ್ಲಿ ಹಣ ಮಾಡಬಹುದು ಎಂಬ ಕಾರಣಕ್ಕೆ ಸ್ಟಾರ್ಟ್ ಅಪ್ಸ್ ಗಳಲ್ಲಿ ಹೂಡಿಕೆ ಮಾಡಲಾಗುತ್ತದೆ. ಆದರೆ ಕಂಪೆನಿಗಳು ನಿರಂತರ ನಷ್ಟವನ್ನು ಅನುಭವಿಸುತ್ತವೆ. ಅಂದ ಹಾಗೆ ಫ್ಲಿಪ್ ಕಾರ್ಟ್ ವಿಪರೀತ ನಷ್ಟ ಅನುಭವಿಸಿದ ಸಮಯದಲ್ಲಿ ತಿಂಗಳಿಗೆ ನೂರೈವತ್ತು ಮಿಲಿಯನ್ ಅಮೆರಿಕನ್ ಡಾಲರ್ ನಷ್ಟ ದಾಖಲಿಸಿತ್ತು.

ಬೆಂಗಳೂರಿನಲ್ಲಿ ಸ್ಟಾರ್ಟ್ ಅಪ್‌ ಆರಂಭಿಸಿ ಶತಕೋಟ್ಯಾಧಿಪತಿಗಳಾದವರುಬೆಂಗಳೂರಿನಲ್ಲಿ ಸ್ಟಾರ್ಟ್ ಅಪ್‌ ಆರಂಭಿಸಿ ಶತಕೋಟ್ಯಾಧಿಪತಿಗಳಾದವರು

ಆರಂಭದಲ್ಲಿ ಗಮನ ಸೆಳೆದು, ಹಣ ಸಂಗ್ರಹಿಸಿ, ಆ ನಂತರ ನಾಪತ್ತೆಯಾಗುವ ಸ್ಟಾರ್ಟ್ ಅಪ್ಸ್ ಗಳು ಇವೆ. ಅಂಥವು ಎರಡು ಅಥವಾ ಮೂರನೇ ಅವಕಾಶ ಪಡೆಯುವುದಿಲ್ಲ ಎಂದು ಅವರು ಅಭಿಪ್ರಾಯ ಪಟ್ಟಿದ್ದಾರೆ. ಸ್ಟಾರ್ಟ್ ಅಪ್ಸ್ ಗಳಿಗೆ ಮಾರ್ಗದರ್ಶನ, ಸಲಹೆ, ನೆಟ್ ವರ್ಕಿಂಗ್ ಮತ್ತು ಪುರಸ್ಕಾರ ಸಿಗಬೇಕು. ಭಾರತದಲ್ಲಿ ಸ್ಟಾರ್ಟ್ ಅಪ್ ಗಳನ್ನು ಪ್ರೋತ್ಸಾಹಿಸಬೇಕು ಎಂದು ಹೇಳಿದ್ದಾರೆ.

ನವೋದ್ಯಮಗಳಿಗೆ ಉದ್ಯಮಿ ರತನ್ ಟಾಟಾ ಎಚ್ಚರಿಕೆ ಮಾತು

ಅಂದಹಾಗೆ, ಉದ್ಯಮ ಕ್ಷೇತ್ರದಲ್ಲಿ ರತನ್ ಟಾಟಾ ಅವರ ಸಾಧನೆಯನ್ನು ಪರಿಗಣಿಸಿ, ಟಿಐಸಿ ಸಂಸ್ಥೆಯಿಂದ ಗೌರವಿಸಲಾಯಿತು. ಇನ್ಫೋಸಿಸ್ ಸಹ ಸಂಸ್ಥಾಪಕ ಎನ್.ಆರ್. ನಾರಾಯಣಮೂರ್ತಿ ಗೌರವಿಸಿದರು.

English summary

Industrialist Ratan Tata Warning To Startups

Industrialist Ratan Tata word of caution to start ups in India. Here is the complete details.
Story first published: Wednesday, January 29, 2020, 9:07 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X