For Quick Alerts
ALLOW NOTIFICATIONS  
For Daily Alerts

ಇನ್ಫೋಸಿಸ್, ವಿಪ್ರೋ 2ನೇ ತ್ರೈಮಾಸಿಕ ವರದಿ: ಕೋಟಿಗಟ್ಟಲೆ ನಿವ್ವಳ ಲಾಭ

|

ದೇಶದ ಎರಡನೇ ಅತಿದೊಡ್ಡ ಐಟಿ ಕಂಪನಿಯಾದ ಇನ್ಫೋಸಿಸ್ ತನ್ನ ತ್ರೈಮಾಸಿಕ ಹಣಕಾಸು ಫಲಿತಾಂಶಗಳನ್ನು ನೀಡಿದೆ. ಇದರ ಜೊತೆಗೆ ದೇಶದ ಮೂರನೇ ಅತಿದೊಡ್ಡ ಐಟಿ ಕಂಪನಿಯಾಗಿರುವ ವಿಪ್ರೋ ಕೂಡ ಇಂದು ಫಲಿತಾಂಶ ಪ್ರಕಟಿಸಿದೆ.

ಮೊದಲಿಗೆ ಇನ್ಫೋಸಿಸ್ ಕಂಪನಿಯ ಲಾಭವು ಸೆಪ್ಟೆಂಬರ್ 2021ರ ತ್ರೈಮಾಸಿಕದಲ್ಲಿ 5,421 ಕೋಟಿ ರೂಪಾಯಿಗಳಷ್ಟಿದ್ದು, ಜೂನ್ ತ್ರೈಮಾಸಿಕದಲ್ಲಿ 5,195 ಕೋಟಿ ರೂಪಾಯಿ ಲಾಭವನ್ನು ಗಳಿಸಿದೆ. ಅಂದರೆ, ಅದರ ಲಾಭವು ತ್ರೈಮಾಸಿಕ ಆಧಾರದ ಮೇಲೆ 4.4 ಪ್ರತಿಶತದಷ್ಟು ಬೆಳೆದಿದೆ. ಆದರೆ ಇನ್ಫೋಸಿಸ್ ಲಾಭವು ವರ್ಷದಿಂದ ವರ್ಷಕ್ಕೆ ಶೇ 11.9ರಷ್ಟು ಬೆಳವಣಿಗೆಯಾಗಿದೆ.

ಡೈಮ್ಲರ್ ಒಪ್ಪಂದ, ಗ್ರಾಹಕರು ಹೆಚ್ಚಿನ ಡಿಜಿಟಲ್ ರೂಪಾಂತರಕ್ಕೆ ಹೊಂದಿಕೊಳ್ಳುವುದು, ವ್ಯಾಪಾರ ಬೆಳವಣಿಗೆ ಮತ್ತು ಬಲವಾದ ಸೀಸನ್‌ನಿಂದ ಇನ್ಫೋಸಿಸ್ ಲಾಭ ದಾಖಲಿಸಿದೆ.

ಇನ್ಫೋಸಿಸ್, ವಿಪ್ರೋ Q2 ವರದಿ: ಕೋಟಿಗಟ್ಟಲೆ ನಿವ್ವಳ ಲಾಭ

ಸೆಪ್ಟೆಂಬರ್ 2021 ಕ್ಕೆ ಕೊನೆಗೊಂಡ ತ್ರೈಮಾಸಿಕದಲ್ಲಿ ಇನ್ಫೋಸಿಸ್ ಆದಾಯವು 29,602 ಕೋಟಿ ರೂಪಾಯಿನಷ್ಟಿದ್ದು, ಹಿಂದಿನ ತ್ರೈಮಾಸಿಕದಲ್ಲಿ 27,896 ಕೋಟಿಯಷ್ಟಿತ್ತು. ಅಂದರೆ, ಅದರ ಆದಾಯವು ತ್ರೈಮಾಸಿಕದಲ್ಲಿ ಶೇಕಡಾ 6.1 ರಷ್ಟು ಹೆಚ್ಚಾಗಿದೆ. ಕಂಪನಿಯ ಮಂಡಳಿಯು ತನ್ನ ಸಭೆಯಲ್ಲಿ ಇಂದು ಪ್ರತಿ ಷೇರಿಗೆ 15 ರೂಪಾಯಿಗಳ ಡಿವಿಡೆಂಡ್ ಅನುಮೋದಿಸಿದೆ. ಇದಲ್ಲದೆ, ಕಂಪನಿಯ ಆದಾಯವು 14 ರಿಂದ 16 ಪ್ರತಿಶತದಷ್ಟು ಹೆಚ್ಚಾಗುತ್ತದೆ ಎಂದು ಅಂದಾಜಿಸಲಾಗಿದೆ. ಕಂಪನಿಯು ತ್ರೈಮಾಸಿಕದಲ್ಲಿ $ 2.15 ಬಿಲಿಯನ್ ಮೌಲ್ಯದ ವ್ಯವಹಾರಗಳನ್ನು ಗೆದ್ದಿದೆ.

ವಿಪ್ರೋ ಲಾಭವು ಕಡಿಮೆಯಾಗಿದೆ
ವಿಪ್ರೋ ಲಾಭವು ಸೆಪ್ಟೆಂಬರ್ 2021 ಕ್ಕೆ ಕೊನೆಗೊಂಡ ತ್ರೈಮಾಸಿಕದಲ್ಲಿ ರೂ 2,930.7 ಕೋಟಿನಷ್ಟಿದೆ. ಆದರೆ ಜೂನ್ ತ್ರೈಮಾಸಿಕಕ್ಕೆ ಹೋಲಿಸಿದರೆ ಅದರ ಲಾಭವು ಶೇಕಡಾ 9.6ರಷ್ಟು ಕಡಿಮೆಯಾಗಿದೆ. ಆದಾಗ್ಯೂ, ಹಿಂದಿನ ಹಣಕಾಸು ವರ್ಷದ ಇದೇ ತ್ರೈಮಾಸಿಕಕ್ಕೆ ಹೋಲಿಸಿದರೆ ಕಂಪನಿಯ ಲಾಭವು ಶೇಕಡಾ 18.9 ರಷ್ಟು ಹೆಚ್ಚಾಗಿದೆ. ಸೆಪ್ಟೆಂಬರ್ ತ್ರೈಮಾಸಿಕದಲ್ಲಿ ಕಂಪನಿಯ ಆದಾಯವು ತ್ರೈಮಾಸಿಕದಲ್ಲಿ ಶೇಕಡಾ 7.7ರಷ್ಟು ಏರಿಕೆಯಾಗಿ 19,667.4 ಕೋಟಿಗಳಿಗೆ ತಲುಪಿದೆ. ಕಂಪನಿಯ ಆದಾಯವು ತಜ್ಞರ ಅಂದಾಜುಗಳಿಗಿಂತ ಉತ್ತಮವಾಗಿದೆ.

ವಿಪ್ರೋ ಲಾಭ ಏಕೆ ಕಡಿಮೆಯಾಗಿದೆ?
ಸೆಪ್ಟೆಂಬರ್ ತ್ರೈಮಾಸಿಕದಲ್ಲಿ ವಿಪ್ರೋ ಲಾಭದ ಕುಸಿತವು ಹೆಚ್ಚಿನ ತೆರಿಗೆ ಪಾವತಿಗಳು ಮತ್ತು ವೆಚ್ಚದಲ್ಲಿ ತೀವ್ರ ಏರಿಕೆಯಿಂದಾಗಿ ಸಂಭವಿಸಿದೆ. ತ್ರೈಮಾಸಿಕದಲ್ಲಿ ಇದರ ಐಟಿ ಸೇವೆಗಳ ಆದಾಯವು $ 2.58 ಬಿಲಿಯನ್ ಆಗಿದೆ, ಇದು ತ್ರೈಮಾಸಿಕ ಆಧಾರದ ಮೇಲೆ ಶೇಕಡಾ 6.9ರಷ್ಟು ಬೆಳವಣಿಗೆಯಾಗಿದೆ. ಮತ್ತೊಂದೆಡೆ, ವಿಪ್ರೊದ ಐಟಿ ಸೇವಾ ಆದಾಯವು ಶೇ .8.1 ರಷ್ಟಿದೆ.

English summary

Infosys And Wipro Q2 Result: Net Profit Rises 12 Percent

September quarter, Infosys company reported net profit at Rs 5,428 crore, up 12 per cent year on year and sequentially grew by 4.3 per cent. Revenue for the quarter was up 20 per cent at Rs 29,602 crore.
Story first published: Wednesday, October 13, 2021, 19:14 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X