For Quick Alerts
ALLOW NOTIFICATIONS  
For Daily Alerts

ಇನ್ಫೋಸಿಸ್ ಸಿಇಒ ಸಲೀಲ್ ಪಾರೇಖ್ ಒಟ್ಟು ವೇತನ 27% ಏರಿಕೆ

|

ಬೆಂಗಳೂರು ಮೂಲದ ಇನ್ಫೋಸಿಸ್ ಕಂಪೆನಿಯ ಸಿಇಒ ಸಲೀಲ್ ಪಾರೇಖ್ ಒಟ್ಟು ವೇತನದಲ್ಲಿ (ಬೋನಸ್, ಇನ್ಸೆಂಟಿವ್ ಮತ್ತು ರಿಸ್ಟ್ರಿಕ್ಟೆಡ್ ಸ್ಟಾಕ್ ಯೂನಿಟ್ ಸೇರಿ) 27% ಏರಿಕೆ ಆಗಿದೆ. ಅಂದರೆ 2019- 20ರ ಆರ್ಥಿಕ ವರ್ಷದಲ್ಲಿ 6.1 ಮಿಲಿಯನ್ ಡಾಲರ್ ಆಗಿದೆ. ಈ ಬಗ್ಗೆ ಕಂಪೆನಿಯು ಯು.ಎಸ್. ಸೆಕ್ಯೂರಿಟೀಸ್ ಅಂಡ್ ಎಕ್ಸ್ ಚೇಂಜ್ ಕಮಿಷನ್ (ಎಸ್ ಇಸಿ)ಗೆ ನೀಡಿದ ಮಾಹಿತಿಯಲ್ಲಿ ತಿಳಿದುಬಂದಿದೆ.

ಕೊರೊನಾದ ಕಾರಣಕ್ಕೆ ಕೆಲವು ಗ್ರಾಹಕರು ಬೆಲೆಯಲ್ಲಿ ಇಳಿಕೆ ಹಾಗೂ ರಿಯಾಯಿತಿ ಕೇಳುತ್ತಿರುವುದರಿಂದ ಈ ವರ್ಷ ಲಾಭದ ಪ್ರಮಾಣದಲ್ಲಿ ಸ್ವಲ್ಪ ಇಳಿಕೆ ಆಗಬಹುದು ಎಂದು ಇನ್ಫೋಸಿಸ್ ತಿಳಿಸಿದೆ. ಲಾಭದಲ್ಲಿನ ಇಳಿಕೆ, ಪಾವತಿಯಲ್ಲಿ ತಡವಾಗುವುದರಿಂದ ನಗದು ಹರಿವಿನ ಮೇಲೆ ನಕಾರಾತ್ಮಕ ಪರಿಣಾಮ ಆಗಬಹುದು. ಇದರಿಂದ ಷೇರುದಾರರಿಗೆ ಲಾಭಾಂಶ ನೀಡುವ ನಮ್ಮ ಸಾಮರ್ಥ್ಯ ಕುಂದಬಹುದು ಎಂದು ಹೇಳಲಾಗಿದೆ.

ಇನ್ಫೋಸಿಸ್ ಸಿಇಒ ಸಲೀಲ್ ಪರೇಖ್ ವೇತನ ಎಷ್ಟು ಗೊತ್ತೆ?ಇನ್ಫೋಸಿಸ್ ಸಿಇಒ ಸಲೀಲ್ ಪರೇಖ್ ವೇತನ ಎಷ್ಟು ಗೊತ್ತೆ?

ಕೊರೊನಾದ ಕಾರಣಕ್ಕೆ ಭವಿಷ್ಯದಲ್ಲಿ ಉದ್ಭವಿಸುವ ಯಾವುದೇ ಅನಿಶ್ಚಿತತೆ ಮತ್ತಷ್ಟು ಸಂಕಷ್ಟಕ್ಕೆ ದೂಡಬಹುದು. ಹಣಕಾಸು ಸೇವೆ ಸಂಸ್ಥೆಗಳು, ರೀಟೇಲ್, ಗ್ರಾಹಕ ಉಪಯೋಗೊ ವಸ್ತುಗಳು ಸೇರಿದಂತೆ ವಿವಿಧ ವಲಯಗಳಿಗೆ ಇನ್ಫೋಸಿಸ್ ಸೇವೆ ಒದಗಿಸುತ್ತದೆ. ಅವುಗಳ ಮೇಲೆ ಕೊರೊನಾ ಪ್ರಭಾವ ಬೀರುವುದರಿಂದ ಇನ್ಫೋಸಿಸ್ ಆದಾಯದ ಮೇಲೂ ಪರಿಣಾಮ ಆಗುತ್ತದೆ ಎಂದು ಕಂಪೆನಿ ತಿಳಿಸಿದೆ.

ಇನ್ಫೋಸಿಸ್ ಸಿಇಒ ಸಲೀಲ್ ಪಾರೇಖ್ ಒಟ್ಟು ವೇತನ 27% ಏರಿಕೆ

ತೈಲ ಬೆಲೆಯಲ್ಲಿನ ಏರಿಳಿತದಿಂದ ಗ್ರಾಹಕರ ಮೇಲೆ ಒತ್ತಡ ಹೆಚ್ಚಾಗಿದೆ. ಇನ್ನು ಕೊರೊನಾದಿಂದ ಜನರು ಕೆಲಸ ಕಳೆದುಕೊಂಡು ಯುಎಸ್, ಯುಕೆನಲ್ಲಿ ಹೊರಗುತ್ತಿಗೆ (ಔಟ್ ಸೋರ್ಸಿಂಗ್) ವಿರುದ್ಧ ಸಿಟ್ಟಾಗಿ ಪರಿವರ್ತನೆ ಆಗಿದೆ. ಇದರಿಂದ ಕಂಪೆನಿ ಬೆಳವಣಿಗೆ, ಪ್ರಗತಿ ಮೇಲೆ ಪ್ರಭಾವ ಆಗಲಿದೆ ಎಂದು ಇನ್ಫೋಸಿಸ್ ತಿಳಿಸಿದೆ.

English summary

Infosys CEO Salil Parekh Compensation Rose By 27 Percent

Bengaluru based Infosys CEO Salil Parekh compensation rose by 27 percent amidst Coronavirus pandemic.
Story first published: Sunday, May 31, 2020, 17:47 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X