For Quick Alerts
ALLOW NOTIFICATIONS  
For Daily Alerts

ಇನ್ಫೋಸಿಸ್ 3ನೇ ತ್ರೈಮಾಸಿಕ ಹಣಕಾಸು ವರದಿ: ನಿವ್ವಳ ಲಾಭ 23.5 ಪರ್ಸೆಂಟ್ ಏರಿಕೆ

|

ಭಾರತದ ಐಟಿ ದಿಗ್ಗಜ ಕಂಪನಿಗಳಲ್ಲಿ ಒಂದಾದ ಇನ್ಫೋಸಿಸ್ ಮೂರನೇ ತ್ರೈಮಾಸಿಕ ಹಣಕಾಸು ವರದಿ ಬಿಡುಗಡೆ ಮಾಡಿದ್ದು, ಕಂಪನಿಯ ನಿವ್ವಳ ಲಾಭವು 23.49 ಪರ್ಸೆಂಟ್ ಏರಿಕೆಯಾಗಿದೆ.

ಇನ್ಫೋಸಿಸ್ ಲಿಮಿಟೆಡ್‌ನ ತ್ರೈಮಾಸಿಕ ಲಾಭದ ಪ್ರಮಾಣವು ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಾ ಬಂದಿದ್ದು, 4,457 ಕೋಟಿ ರುಪಾಯಿಗೆ ತಲುಪಿದೆ ಎಂದು ವರದಿ ಮಾಡಿದೆ. ಇದರ ಆದಾಯವು 7.9 ಪರ್ಸೆಂಟ್ ಏರಿಕೆಯಾಗಿ 23,097 ಕೋಟಿ ರುಪಾಯಿಗೆ ತಲುಪಿದೆ. ಜೊತೆಗೆ 2020ರ ಹಣಕಾಸು ವರ್ಷದ ಆದಾಯದ ದೃಷ್ಟಿಕೋನವನ್ನು 10 ಪರ್ಸೆಂಟ್‌ನಿಂದ 10.5 ಪರ್ಸೆಂಟ್‌ಗೆ ಪರಿಷ್ಕರಿಸಿದೆ. QoQ ಆಧಾರದ ಮೇಲೆ ಇನ್ಪೋಸಿಸ್ ಲಾಭವು 10.9 ಪರ್ಸೆಂಟ್ ಏರಿಕೆಯಾಗಿದೆ.

ಇನ್ಫೋಸಿಸ್ 3ನೇ ತ್ರೈಮಾಸಿಕ ಹಣಕಾಸು ವರದಿ:ನಿವ್ವಳ ಲಾಭ 23.5 ಪರ್ಸೆಂಟ್

ಕಳೆದ ವರ್ಷ ಇನ್ಪೋಸಿಸ್ ನಿವ್ವಳ ಲಾಭವು 3,610 ಕೋಟಿ ರುಪಾಯಿ ಎಂದು ಪ್ರಕಟಿಸಿತ್ತು. ರಿಫಿನಿಟಿವ್ ಅಂಕಿ-ಅಂಶಗಳ ಪ್ರಕಾರ ಬೆಂಗಳೂರಿನಲ್ಲಿ ಪ್ರಧಾನ ಕಚೇರಿ ಹೊಂದಿರುವ ಇನ್ಫೋಸಿಸ್ 3ನೇ ತ್ರೈಮಾಸಿಕ ಹಣಕಾಸು ವರದಿಯಲ್ಲಿ 4,206 ಕೋಟಿ ರುಪಾಯಿ ಲಾಭಗಳಿಸುತ್ತದೆ ಎಂದು ವಿಶ್ಲೇಷಕರು ಅಂದಾಜಿಸಿದ್ದರು. ಆದರೆ ಇದೀಗ ಅಂದಾಜಿಗಿಂತಲೂ ಹೆಚ್ಚಿನ ಲಾಭ ಪಡೆದಿದೆ.

ಇನ್ಫೋಸಿಸ್ ಡಿಸೆಂಬರ್ ತ್ರೈಮಾಸಿಕದಲ್ಲಿ 84 ಹೊಸ ಗ್ರಾಹಕರನ್ನು ಸೇರಿಸಿದೆ. ಡಾಲರ್ ಲೆಕ್ಕದಲ್ಲಿ ಹೇಳುವುದಾದರೆ ಅದರ ಆದಾಯವು 3,243 ಮಿಲಿಯನ್ ಅಮೆರಿಕನ್ ಡಾಲರ್ ಆಗಿದ್ದು, YoY ಅನ್ನು 8.6 ಪರ್ಸೆಂಟ್‌ಗೆ ಮತ್ತು ಸ್ಥಿರ ಕರೆನ್ಸಿ ಪರಿಭಾಷೆಯಲ್ಲಿ 9.5 ಪರ್ಸೆಂಟ್‌ಗೆ ಹೆಚ್ಚಿಸಿದೆ.

ಆದರೆ ಕಳೆದ 2ನೇ ತ್ರೈಮಾಸಿಕ ಹಣಕಾಸು ಅವಧಿಯಲ್ಲಿ ಇನ್ಫೋಸಿಸ್ ಲಾಭ ತುಸು ಇಳಿದಿದ್ದು. ಜುಲೈನಿಂದ-ಸೆಪ್ಟೆಂಬರ್ ತ್ರೈಮಾಸಿಕದಲ್ಲಿ 2.2 ಪರ್ಸೆಂಟ್ ನಿವ್ವಳ ಲಾಭ ತಗ್ಗಿ 4,010 ಕೋಟಿ ರುಪಾಯಿ ಬಂದಿತ್ತು.

English summary

Infosys Q3 Result Net Profit 23.5 Percent Increased

On Friday, Infosys Ltd reported a 23.49 percent increase in profit to Rs 4,457 crore
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X