For Quick Alerts
ALLOW NOTIFICATIONS  
For Daily Alerts

ಇನ್ಫೋಸಿಸ್ ಷೇರುದಾರರ ಸಂಪತ್ತಿಗೆ 1 ಗಂಟೆಯಲ್ಲಿ 50 ಸಾವಿರ ಕೋಟಿ ಸೇರ್ಪಡೆ

|

ಬೆಂಗಳೂರು ಮೂಲದ ಐಟಿ ಸೇವೆ ಒದಗಿಸುವ ಕಂಪೆನಿ ಇನ್ಫೋಸಿಸ್ ನಿರೀಕ್ಷೆಗಳನ್ನೂ ಮೀರಿ ಅತ್ಯುತ್ತಮ ಫಲಿತಾಂಶ ನೀಡಿದೆ. ಆದ್ದರಿಂದ ಇನ್ಫೋಸಿಸ್ ಷೇರುಗಳು ಗುರುವಾರ ಬೆಳಗ್ಗೆ ಷೇರು ಮಾರುಕಟ್ಟೆಯಲ್ಲಿ ದಾಖಲೆಯ ಎತ್ತರಕ್ಕೆ ಏರಿತು. ಆ ಮೂಲಕ ಬಿಎಸ್ ಇ ಸೆನ್ಸೆಕ್ಸ್ ಸೂಚ್ಯಂಕದಲ್ಲಿ ಹೂಡಿಕೆದಾರರ ಸಂಪತ್ತು ಕೇವಲ 1 ಗಂಟೆಯಲ್ಲಿ 50 ಸಾವಿರ ಕೋಟಿ ಹೆಚ್ಚುವಂತೆ ಮಾಡಿತು.

ಏಪ್ರಿಲ್- ಜೂನ್ ತ್ರೈಮಾಸಿಕದ ಇನ್ಫೋಸಿಸ್ ಫಲಿತಾಂಶ ಬುಧವಾರ ಪ್ರಕಟಿಸಲಾಗಿದ್ದು, ನಿವ್ವಳ ಲಾಭ 11.4 ಪರ್ಸೆಂಟ್ ಹೆಚ್ಚಳವಾಗಿದೆ. ಕೊರೊನಾ ವೈರಾಣು ಸಮಸ್ಯೆ ದಿನಗಳಲ್ಲೂ ದೊಡ್ಡ ದೊಡ್ಡ ವ್ಯಾಪಾರ ಒಪ್ಪಂದಗಳನ್ನು ಮಾಡಿಕೊಂಡಿದೆ. ಈ ಎಲ್ಲ ಸಕಾರಾತ್ಮಕ ಬೆಳವಣಿಗೆ ಹಿನ್ನೆಲೆಯಲ್ಲಿ ಗುರುವಾರ ಬೆಳಗ್ಗೆ ವಹಿವಾಟಿನಲ್ಲಿ ಇನ್ಫೋಸಿಸ್ ಷೇರು ಒಂದು ಹಂತದಲ್ಲಿ 15 ಪರ್ಸೆಂಟ್ ಏರಿಕೆ ಕಂಡು, 952 ರುಪಾಯಿಗೆ ವಹಿವಾಟು ನಡೆಸಿತು.

ಕೋವಿಡ್ ಹಾವಳಿಯ ನಡುವೆಯೂ ಇನ್ಫೋಸಿಸ್ ನಿವ್ವಳ ಲಾಭದಲ್ಲಿಕೋವಿಡ್ ಹಾವಳಿಯ ನಡುವೆಯೂ ಇನ್ಫೋಸಿಸ್ ನಿವ್ವಳ ಲಾಭದಲ್ಲಿ

ಜೂನ್ 30ಕ್ಕೆ ಕೊನೆಯಾದ ತ್ರೈಮಾಸಿಕಕ್ಕೆ ಇನ್ಫೋಸಿಸ್ ಕಂಪೆನಿಯು 4,233 ಕೋಟಿ ರುಪಾಯಿ ನಿವ್ವಳ ಲಾಭವನ್ನು ಪಡೆದಿದೆ. ಕಳೆದ ವರ್ಷದ ಇದೇ ಅವಧಿಯಲ್ಲಿ 3,798 ಕೋಟಿ ರುಪಾಯಿ ಲಾಭ ಗಳಿಸಿತ್ತು. ಇನ್ನು ಈ ತ್ರೈ ಮಾಸಿಕದಲ್ಲಿ 174 ಕೋಟಿ ಅಮೆರಿಕನ್ ಡಾಲರ್ ಮೌಲ್ಯದ ವ್ಯವಹಾರಗಳು ಹೊಸದಾಗಿ ಬಂದಿವೆ. ಕಳೆದ ತ್ರೈಮಾಸಿಕದಲ್ಲಿ 165 ಕೋಟಿ ಅಮೆರಿಕನ್ ಡಾಲರ್ ವ್ಯವಹಾರಗಳು ಬಂದಿದ್ದವು.

ಇನ್ಫೋಸಿಸ್ ಷೇರುದಾರರ ಸಂಪತ್ತಿಗೆ 1 ಗಂಟೆಯಲ್ಲಿ 50,000 ಕೋಟಿ ಸೇರ್ಪಡೆ

ಇನ್ನು ಡಾಲರ್ ವಿರುದ್ಧ ರುಪಾಯಿ ಮೌಲ್ಯ ಕಡಿಮೆ ಇರುವ ಕಾರಣಕ್ಕೂ ಇನ್ಫೋಸಿಸ್ ಆದಾಯ ಹೆಚ್ಚಳಕ್ಕೆ ಸಹಾಯ ಆಗುತ್ತಿದೆ. ಇನ್ಫೋಸಿಸ್ ಆದಾಯದಲ್ಲಿ 8.5% ಏರಿಕೆ ಕಂಡು, 23,665 ಕೋಟಿ ರುಪಾಯಿ ತಲುಪಿದೆ.

English summary

Infosys Shareholders Wealth Increased By 50000 Crore In One Hour

Infosys share price increased by more than 15% and share holders wealth surge by 50,000 crore in 1 hour of trading on July 16, after company Q1 result announced on Wednesday.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X