For Quick Alerts
ALLOW NOTIFICATIONS  
For Daily Alerts

ಇನ್ಫೋಸಿಸ್ ಬಯ್‌ಬ್ಯಾಕ್ ಧಮಾಕ; ಷೇರು ಬೆಲೆ ಶೇ. 5 ಜಿಗಿತ; ಹೂಡಿಕೆಗೆ ಇದು ಸಮಯವಾ?

|

ಬೆಂಗಳೂರು, ಅ. 14: ಇನ್ಫೋಸಿಸ್ ಸಂಸ್ಥೆಯ ಷೇರು ಬೆಲೆ ಶುಕ್ರವಾರದ ಬೆಳಗಿನ ವಹಿವಾಟಿನಲ್ಲಿ ಶೇ. 5ರಷ್ಟು ಹೆಚ್ಚಳವಾಗಿದೆ. ಬೆಳಗ್ಗೆ 11 ಗಂಟೆಯ ವೇಳೆ ಇನ್ಫೋಸಿಸ್‌ನ ಷೇರು ಮೌಲ್ಯ ಶೇ. 4.72ರಷ್ಟು ಹೆಚ್ಚಾಗಿ ಪ್ರತೀ ಷೇರಿಗೆ 1486 ರೂ ಆಗಿದೆ.

 

ಇನ್ಫೋಸಿಸ್‌ನ ಲಾಭದಲ್ಲಿ ಏರಿಕೆ ಆಗಿದ್ದು, ಮತ್ತು 9300 ಕೋಟಿ ರೂ ಮೌಲ್ಯದ ಷೇರುಗಳನ್ನು ಮರುಖರೀದಿಸುವುದಾಗಿ ಹೇಳಿದ್ದು ಇನ್ಫೋಸಿಸ್‌ಗೆ ಷೇರುಪೇಟೆಯಲ್ಲಿ ಸಕಾರಾತ್ಮಕ ಸ್ಪಂದನೆ ಸಿಕ್ಕಿದೆ.

ಅಮೆರಿಕ, ಚೀನಾಗೆ ಭಾರತದ ರಫ್ತು ಇಳಿಕೆ; ಕಾರಣ ಏನು?ಅಮೆರಿಕ, ಚೀನಾಗೆ ಭಾರತದ ರಫ್ತು ಇಳಿಕೆ; ಕಾರಣ ಏನು?

ಜುಲೈನಿಂದ ಸೆಪ್ಟೆಂಬರ್‌ವರೆಗಿನ ತ್ರೈಮಾಸಿಕ ಅವಧಿಯಲ್ಲಿ 6021 ಕೋಟಿ ರೂ ನಿವ್ವಳ ಲಾಭ ಆಗಿದೆ ಎಂದು ಇನ್ಫೋಸಿಸ್ ನಿನ್ನ ಗುರುವಾರ (ಅ. 13) ವರದಿ ನೀಡಿತ್ತು. ಕಳೆದ ವರ್ಷಕ್ಕೆ ಹೋಲಿಸಿದರೆ ಇನ್ಫೋಸಿಸ್‌ನ ಲಾಭ ಶೇ. 11.1ರಷ್ಟು ಹೆಚ್ಚಾಗಿದೆ.

ಷೇರುದಾರರಿಗೆ ಉಡುಗೊರೆ

ಷೇರುದಾರರಿಗೆ ಉಡುಗೊರೆ

ಇದೇ ವೇಳೆ ಇನ್ಫೋಸಿಸ್ ಇನ್ನೊಂದು ಅಚ್ಚರಿಯ ನಿರ್ಧಾರ ಹೊರಹಾಕಿತು. 9300 ಕೋಟಿ ರೂ ಮೌಲ್ಯದ ಷೇರುಗಳನ್ನು ಮರುಖರೀದಿ (Share Buyback) ಮಾಡುವುದಾಗಿ ಹೇಳಿತು. ಪ್ರತೀ ಷೇರಿಗೆ 1850 ರೂ ನಂತೆ ಇನ್ಫೋಸಿಸ್ ಖರೀದಿಸುವ ಪ್ರಸ್ತಾಪ ಇಟ್ಟಿತು. ಇದು ಹಿಂದಿನ ದಿನಾಂತ್ಯದಲ್ಲಿ ಇದ್ದ ಷೇರಿಗಿಂತ ಶೇ. 30ರಷ್ಟು ಹೆಚ್ಚು ಬೆಲೆ. ತನ್ನ ಷೇರುದಾರರಿಗೆ ಇನ್ಫೋಸಿಸ್ ನೀಡಿದ ಉಡುಗೊರೆ ಇದಾಗಿತ್ತು.

ಅಷ್ಟೇ ಅಲ್ಲ, ಪ್ರತೀ ಷೇರಿಗೆ 16.50 ರೂನಂತೆ ಮಧ್ಯಂತರ ಲಾಭಾಂಶವನ್ನು (Interim Dividend) ಇನ್ಫೋಸಿಸ್ ಪ್ರಕಟಿಸಿತು. 2022ರ ಹಣಕಾಸು ವರ್ಷದ ಮಧ್ಯಂತರ ಲಾಭಾಂಶದಲ್ಲಿ ಶೇ. 10ರಷ್ಟು ಹೆಚ್ಚಳ ಇದು. ಒಟ್ಟಾರೆ ಮಧ್ಯಂತರ ಲಾಭಾಂಶ ಮೊತ್ತ 6,940 ಕೋಟಿ ರೂ ಇರಲಿದೆ.

ಇನ್ಫೋಸಿಸ್ ಷೇರು ಖರೀದಿಗೆ ಸುಸಮಯವೇ?
 

ಇನ್ಫೋಸಿಸ್ ಷೇರು ಖರೀದಿಗೆ ಸುಸಮಯವೇ?

ಷೇರುಪೇಟೆಯಲ್ಲಿ ಇನ್ಫೋಸಿಸ್ ಒಳ್ಳೆಯ ಟ್ರೆಂಡಿಂಗ್‌ನಲ್ಲಿದೆ. ಹೂಡಿಕೆದಾರರನ್ನು ಆಕರ್ಷಿಸುತ್ತಿರುವುದು ಹೌದು. ಆದರೆ, ಆರ್ಥಿಕ ಹಿಂಜರಿತರದ ಈ ಕಷ್ಟಕಾಲದಲ್ಲಿ ಇನ್ಫೋಸಿಸ್‌ನಂತಹ ಅಧಿಕ ಬೆಲೆಯ ಷೇರಿ ಮೇಲೆ ಹೂಡಿಕೆ ಮಾಡಲು ಸರಿಯಾದ ಸಮಯವಾ ಎಂಬ ಗೊಂದಲ ಇರಬಹುದು. ಈ ಬಗ್ಗೆ ವಿವಿಧ ಷೇರು ತಜ್ಞರು ಬೇರೆ ಬೇರೆ ಅಭಿಪ್ರಾಯಗಳನ್ನು ಮತ್ತು ಸಲಹೆಗಳನ್ನು ನೀಡಿದ್ದಾರೆ.

ಕ್ರೆಡಿಟ್ ಸ್ಯೂಸ್ ಸಂಸ್ಥೆಯು ಇನ್ಫೋಸಿಸ್ ಷೇರಿಗೆ ಉತ್ತಮ ರೇಟಿಂಗ್ ನೀಡಿದ್ದಾರೆ. ಇದರ ಷೇರು ಬೆಲೆ 1710 ರೂ ಗೆ ಹೆಚ್ಚಾಗಬಹುದು ಎಂದು ಅಂದಾಜಿಸಿದೆ. 2024ರ ಹಣಕಾಸು ವರ್ಷದಲ್ಲಿ ಐಟಿ ಉದ್ಯಮ ಹಿನ್ನಡೆ ಆಗಬಹುದಾದರೂ ಬೇರೆ ಐಟಿ ಕಂಪನಿಗಳಿಂತ ಇನ್ಫೋಸಿಸ್ ಉತ್ತಮ ಸ್ಥಿತಿಯಲ್ಲಿದೆ. ಈ ಹಂತದಲ್ಲಿ ಇನ್ಫೋಸಿಸ್ ಷೇರಿನ ಮೇಲೆ ಹೂಡಿಕೆ ಮಾಡುವುದು ಉತ್ತಮ ಎಂಬ ಸುಳಿವನ್ನು ಈ ಸಂಸ್ಥೆ ನೀಡಿದೆ.

ಸಿಎಲ್‌ಎಸ್‌ಎ ಮತ್ತು ಮೆಕ್ವಾರೀ ಸಂಸ್ಥೆಗಳು ಇನ್ಫೋಸಿಸ್‌ನ ಷೇರು ಟಾರ್ಗೆಟ್ ಅನ್ನು 1800 ರೂಗಿಂತ ಹೆಚ್ಚು ನೀಡಿದ್ದಾರೆ. ಮುಂದಿನ ದಿನಗಳಲ್ಲಿ ಇನ್ಫೋಸಿಸ್ ಇನ್ನಷ್ಟು ವೇಗದಲ್ಲಿ ಬೆಳವಣಿಗೆ ಸಾಧಿಸುವ ನಿರೀಕ್ಷೆಯನ್ನು ಈ ಸಂಸ್ಥೆಗಳು ಹೊಂದಿವೆ. ಹೀಗಾಗಿ, ಇನ್ಫೋಸಿಸ್‌ಗೆ ಹೆಚ್ಚು ಔಟ್‌ಪರ್ಫಾರ್ಮ್ ರೇಟಿಂಗ್ ನೀಡಿವೆ.

ಜೆಪಿ ಮಾರ್ಗನ್, ಜೆಫೆರೀಸ್, ನೊಮುರಾ ಸಂಸ್ಥೆಗಳು ಇನ್ಫೋಸಿಸ್ ಷೇರಿಗೆ 1600 ರೂಗಿಂತ ಹೆಚ್ಚು ಬೆಲೆಯ ಟಾರ್ಗೆಟ್ ಇಟ್ಟಿದ್ದಾರೆ. ಅಂದರೆ ಇನ್ಫೋಸಿಸ್ ಷೇರು ಬೆಲೆ 1600 ರೂ ದಾಟುವ ಸಾಧ್ಯತೆ ಇದೆ ಎಂಬುದು ಈ ಹಣಕಾಸು ವಿಶ್ಲೇಷಣಾ ಸಂಸ್ಥೆಗಳ ಅನಿಸಿಕೆ.

ಪ್ರಬಲ ಸ್ಥಿತಿ ಇಲ್ಲ

ಪ್ರಬಲ ಸ್ಥಿತಿ ಇಲ್ಲ

ಇನ್ನು, ಯುಬಿಎಸ್ ಸಂಸ್ಥೆ ಇನ್ಫೋಸಿಸ್‌ನ ಷೇರಿಗೆ ನೀಡಿರುವ ರೇಟಿಂಗ್ 1,490 ರೂ. ಇನ್ಫೋಸಿಸ್ ಉತ್ತಮವಾಗಿ ಸಾಧಿಸಿ ಒಳ್ಳೆಯ ಲಾಭ ತೋರಿದೆ. ಆಪರೇಟಿಂಗ್ ಮಾರ್ಜಿನ್ ನಿರೀಕ್ಷೆಮೀರಿ ಹೆಚ್ಚಿದೆ. ಆದರೆ, ಹೂಡಿಕೆದಾರರನ್ನು ದೊಡ್ಡ ಮಟ್ಟದಲ್ಲಿ ಆಕರ್ಷಿಸುವಷ್ಟು ಪ್ರಬಲವಾದ ಪರಿಸ್ಥಿತಿಯಲ್ಲಿ ಇನ್ಫೋಸಿಸ್ ಇಲ್ಲ ಎಂಬುದು ಯುಬಿಎಸ್‌ನ ಅನಿಸಿಕೆ.

ಒಟ್ಟಾರೆ, ಬಹುತೇಕ ಹಣಕಾಸು ವಿಶ್ಲೇಷಣಾ ಸಂಸ್ಥೆಗಳು ಮತ್ತು ಷೇರುಪೇಟೆ ತಜ್ಞರು ಇನ್ಫೋಸಿಸ್ ಷೇರು ಖರೀದಿಗೆ ಈಗ ಒಳ್ಳೆಯ ಸಂದರ್ಭ ಎಂಬ ಅಭಿಪ್ರಾಯ ವ್ಯಕ್ತಪಡಿಸಿವೆ. ಆದರೆ, ಷೇರುಪೇಟೆ ಹೇಗೆ ವರ್ತಿಸುತ್ತದೆ ಎಂಬುದನ್ನು ಯಾರೂ ನಿಖರವಾಗಿ ಅಂದಾಜು ಮಾಡಲು ಸಾಧ್ಯವಿಲ್ಲವಾದ್ದರಿಂದ ನೀವು ಎಲ್ಲೇ ಹೂಡಿಕೆ ಮಾಡಿದರೂ ರಿಸ್ಕ್ ಅಂಶ ಇದ್ದೇ ಇರುತ್ತದೆ. ಯೋಚಿಸಿ ಹೂಡಿಕೆ ಮಾಡಿ ಎಂಬುದು ನಮ್ಮ ಸಲಹೆ.

English summary

Infosys Share Price Rises 5pc, A Day After Its Share Buyback and Profit Announcement

Infosys share price has rised 5% on Friday after it shared its profit yesterday. Infosys had announced share buy back worth over 6000 crore. Its net profit to has rised compared to previous year.
Story first published: Friday, October 14, 2022, 11:56 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X