For Quick Alerts
ALLOW NOTIFICATIONS  
For Daily Alerts

ಒಂದು ವರ್ಷದಲ್ಲಿ ಶೇ. 97-118 ರಿಟರ್ನ್ ನೀಡಿದ ಮ್ಯೂಚುವಲ್‌ ಫಂಡ್‌ಗಳು

|

ಮ್ಯೂಚುವಲ್ ಫಂಡ್ ಎಂದರೆ ಷೇರು ಮತ್ತು ಬಾಂಡುಗಳಲ್ಲಿ ಹೂಡಿಕೆ ಮಾಡುವ ವಿಧಾನ. ಮ್ಯೂಚುವಲ್ ಫಂಡ್‌ನಲ್ಲಿ ಹಲವರಿಂದ ಹಣವನ್ನು ಚಿಕ್ಕ ಮೊತ್ತಗಳಲ್ಲಿ ಸಂಗ್ರಹ ಮಾಡಿ ಅದನ್ನು ಒಂದು ದೊಡ್ಡ ಮೊತ್ತವಾಗಿಸಿ ಈ ದೊಡ್ಡ ಮೊತ್ತವನ್ನು ಷೇರು ಮಾರುಕಟ್ಟೆ, ಬಾಂಡುಗಳು, ಹಣದ ಮಾರುಕಟ್ಟೆಯ ಇತರ ವಿಧಾನಗಳಲ್ಲಿ ಹೂಡಲಾಗುತ್ತದೆ. ಈ ಹಿನ್ನೆಲೆಯಲ್ಲಿ ನಾವು ಮ್ಯೂಚುವಲ್ ಫಂಡ್ ಅನ್ನು ಅತಿಯಾಗಿ ಲಾಭ ದೊರೆಯುವ ಕ್ಷೇತ್ರ ಎಂದರೂ ಸರಿಯೇ.

 

ಮಾರ್ಚ್ 2020 ರಿಂದ ಬೃಹತ್‌ ಸ್ಟಾಕ್‌ ಮಾರುಕಟ್ಟೆಯಲ್ಲಿ ಮೂಲಸೌಕರ್ಯ ಸ್ಟಾಕ್‌ಗಳಲ್ಲಿ ಅಧಿಕ ಮಂದಿ ಹೂಡಿಕೆ ಮಾಡುತ್ತಿದ್ದಾರೆ. ಸಾಮಾನ್ಯವಾಗಿ ಈ ಷೇರುಗಳಲ್ಲಿ ಪ್ರತ್ಯೇಕವಾಗಿ ಹೂಡಿಕೆ ಮಾಡಿದ ಮ್ಯೂಚುವಲ್‌ ಫಂಡ್‌ಗಳಿಗೆ ಬಹಳ ಅಧಿಕ ರಿಟರ್ನ್ ದೊರೆತಿದೆ. ವ್ಯಾಲ್ಯೂಸರ್ಚ್‌ನ ಮಾಹಿತಿಯ ಪ್ರಕಾರ, ಟಾಪ್‌ ಐದು ಮ್ಯೂಚುವಲ್‌ ಫಂಡ್‌ಗಳು ಕಳೆದ ಒಂದು ವರ್ಷದಲ್ಲಿ ತಮ್ಮ ಹೂಡಿಕೆದಾರರ ಹಣವನ್ನು ದ್ವಿಗುಣಗೊಳಿಸಿದೆ.

ಭಾರತದ ಟಾಪ್‌ 7 ಗೋಲ್ಡ್‌ ಕಂಪನಿಗಳ ಸ್ಟಾಕ್‌ಗಳು, ಇಲ್ಲಿದೆ ಸಂಪೂರ್ಣ ಮಾಹಿತಿ..ಭಾರತದ ಟಾಪ್‌ 7 ಗೋಲ್ಡ್‌ ಕಂಪನಿಗಳ ಸ್ಟಾಕ್‌ಗಳು, ಇಲ್ಲಿದೆ ಸಂಪೂರ್ಣ ಮಾಹಿತಿ..

ಮೂಲಸೌಕರ್ಯ ಫಂಡ್‌ಗಳು ಮುಖ್ಯವಾಗಿ ವಿದ್ಯುತ್, ನಿರ್ಮಾಣ, ಬಂಡವಾಳ ಸರಕುಗಳು ಮತ್ತು ಲೋಹಗಳ ವಿಭಾಗಗಳಲ್ಲಿ ಕಂಪನಿಗಳ ಷೇರುಗಳಲ್ಲಿ ಹೂಡಿಕೆ ಮಾಡುತ್ತವೆ. ಈ ಫಂಡ್‌ಗಳು ಅಪಾಯಕಾರಿ ಆಗಿದ್ದರೂ ಅಧಿಕ ಲಾಭ ದೊರೆಯುತ್ತದೆ. ಹಾಗಾದರೆ ಕಳೆದ ಒಂದು ವರ್ಷದಲ್ಲಿ ಯಾವ ಮ್ಯೂಚುವಲ್‌ ಫಂಡ್‌ಗಳು ಅಧಿಕ ರಿಟರ್ನ್ ಅನ್ನು ಪಡೆದಿದೆ? ಒಂದು ವರ್ಷದಲ್ಲಿ ಶೇ. 97-118 ರಿಟರ್ನ್ ನೀಡಿದ ಮ್ಯೂಚುವಲ್‌ ಫಂಡ್‌ಗಳು ಯಾವುದು ಎಂದು ತಿಳಿಯಲು ಮುಂದೆ ಓದಿ.

 ಕ್ವಾಂಟ್‌ ಮೂಲಸೌಕರ್ಯ ಫಂಡ್‌ನಲ್ಲಿ ಶೇ.118 ರಿಟರ್ನ್

ಕ್ವಾಂಟ್‌ ಮೂಲಸೌಕರ್ಯ ಫಂಡ್‌ನಲ್ಲಿ ಶೇ.118 ರಿಟರ್ನ್

ಕ್ವಾಂಟ್‌ ಮೂಲಸೌಕರ್ಯ ಫಂಡ್‌ನಲ್ಲಿ ಕಳೆದ ಒಂದು ವರ್ಷದಲ್ಲಿ ಶೇಕಡ 118 ರಿಟರ್ನ್ ದೊರೆತಿದೆ. ಮೂಲಸೌಕರ್ಯ ಫಂಡ್‌ಗಳ ಪೈಕಿ ಈ ಕ್ವಾಂಟ್‌ ಮೂಲಸೌಕರ್ಯ ಫಂಡ್‌ ಅಗ್ರ ಸ್ಥಾನದಲ್ಲಿ ಇದೆ. ಈ ಯೋಜನೆಯು ಕೇವಲ 85 ಕೋಟಿ ರೂಪಾಯಿಗಳದ್ದು ಆಗಿದೆ. ಇದರ ಡೈರೆಕ್ಟ್‌ ಪ್ಲ್ಯಾನ್‌ಗಾಗಿ ಶೇಕಡ 2.15 ವೆಚ್ಚದ ಅನುಪಾತವನ್ನು ವಿಧಿಸುತ್ತದೆ. ಇದರಲ್ಲಿ ದೊಡ್ಡ ಮೊತ್ತದ ಬಂಡವಾಳ ಹಾಗೂ ಮಧ್ಯಮ ಬಂಡವಾಳವನ್ನು ಹೆಚ್ಚಾಗಿ ಹೂಡಿಕೆ ಮಾಡಲಾಗುತ್ತದೆ.

 ಐಸಿಐಸಿಐ ಪ್ರುಡೆನ್ಶಿಯಲ್ ಮೂಲಸೌಕರ್ಯ ಫಂಡ್‌ ಶೇ. 108.6 ರಿಟರ್ನ್
 

ಐಸಿಐಸಿಐ ಪ್ರುಡೆನ್ಶಿಯಲ್ ಮೂಲಸೌಕರ್ಯ ಫಂಡ್‌ ಶೇ. 108.6 ರಿಟರ್ನ್

ಐಸಿಐಸಿಐ ಪ್ರುಡೆನ್ಶಿಯಲ್ ಮೂಲಸೌಕರ್ಯ ಫಂಡ್‌ನಲ್ಲಿ ಕಳೆದ ಒಂದು ವರ್ಷದಲ್ಲಿ ಶೇಕಡ 108.6 ರಿಟರ್ನ್ ಲಭಿಸಿದೆ. ಇದು ಮೂಲಸೌಕರ್ಯ ಫಂಡ್‌ಗಳ ಪೈಕಿ ಕ್ವಾಂಟ್‌ ಮೂಲಸೌಕರ್ಯ ಫಂಡ್‌ನ ನಂತರದ ಸ್ಥಾನದಲ್ಲಿದೆ. ಇದು ಅತೀ ದೊಡ್ಡ ಯೋಜನೆಯನ್ನು ಹೊಂದಿರುವ ಫಂಡ್‌ ಆಗಿದೆ. ಇದರ ಮೊತ್ತ 1,680 ಕೋಟಿ ರೂಪಾಯಿ ಆಗಿದೆ. ಇದರ ಡೈರೆಕ್ಟ್‌ ಪ್ಲ್ಯಾನ್‌ ವೆಚ್ಚವು ಶೇಕಡ 1.74 ಆಗಿದೆ. ವಿದ್ಯುತ್, ಶಕ್ತಿ, ನಿರ್ಮಾಣ ಮತ್ತು ಹಣಕಾಸು ಷೇರುಗಳಲ್ಲಿ ಹೆಚ್ಚಾಗಿ ಈ ಫಂಡ್‌ಗಳನ್ನು ಹೂಡಿಕೆ ಮಾಡಲಾಗುತ್ತದೆ. ಈ ಫಂಡ್‌ ಶೇಕಡ 61 ರಷ್ಟು ಬಂಡವಾಳವನ್ನು ದೊಡ್ಡ ಮೊತ್ತದ ಸ್ಟಾಕ್‌ಗಳಲ್ಲಿ ಹೂಡಿಕೆ ಮಾಡಲಾಗುತ್ತದೆ. ಉಳಿದವುಗಳನ್ನು ಮಧ್ಯಮ ಹಾಗೂ ಸಣ್ಣ ಸ್ಟಾಕ್‌ಗಳಲ್ಲಿ ಹೂಡಿಕೆ ಮಾಡಲಾಗುತ್ತದೆ.

ಹೂಡಿಕೆದಾರರ ಹಣವನ್ನು 1 ವರ್ಷದಲ್ಲಿ ದ್ವಿಗುಣಗೊಳಿಸಿದ 5 ಮ್ಯೂಚುವಲ್ ಫಂಡ್‌ಗಳು ಯಾವುದು ಗೊತ್ತಾ?ಹೂಡಿಕೆದಾರರ ಹಣವನ್ನು 1 ವರ್ಷದಲ್ಲಿ ದ್ವಿಗುಣಗೊಳಿಸಿದ 5 ಮ್ಯೂಚುವಲ್ ಫಂಡ್‌ಗಳು ಯಾವುದು ಗೊತ್ತಾ?

 ಐಡಿಎಫ್‌ಸಿ ಮೂಲಸೌಕರ್ಯ ಫಂಡ್‌ನಲ್ಲಿ ಶೇ. 104.8 ರಿಟರ್ನ್

ಐಡಿಎಫ್‌ಸಿ ಮೂಲಸೌಕರ್ಯ ಫಂಡ್‌ನಲ್ಲಿ ಶೇ. 104.8 ರಿಟರ್ನ್

ಕಳೆದ ಒಂದು ವರ್ಷದಲ್ಲಿ ಐಡಿಎಫ್‌ಸಿ ಮೂಲಸೌಕರ್ಯ ಫಂಡ್‌ನಲ್ಲಿ ಶೇಕಡ 104.8 ರಿಟರ್ನ್ ದೊರೆತಿದ್ದು, ಹೂಡಿಕೆದಾರರಿಗೆ ಅಧಿಕ ಲಾಭ ದೊರೆತಿದೆ. ಈ ಫಂಡ್‌ನ ಒಟ್ಟು ಮೊತ್ತವು 650 ಕೋಟಿ ರೂಪಾಯಿ ಆಗಿದೆ. ಸಾಮಾನ್ಯವಾಗಿ ಈ ಫಂಡ್‌ ಅನ್ನು ನಿರ್ಮಾಣ, ಸಿಮೆಂಟ್, ವಿದ್ಯುತ್ ಮತ್ತು ಇಂಧನ ಕಂಪನಿಗಳಲ್ಲಿ ಹೂಡಿಕೆ ಮಾಡುತ್ತದೆ. ಇದರ ವೆಚ್ಚದ ಅನುಪಾತವು ಶೇಕಡ 1.25 ಆಗಿದ್ದು, ಬೇರೆ ಫಂಡ್‌ಗಳಿಗೆ ಹೋಲಿಕೆ ಮಾಡಿದರೆ ಕಡಿಮೆ ಆಗಿದೆ. ಈ ಫಂಡ್‌ ಅನ್ನು ಅಧಿಕವಾಗಿ ಮಧ್ಯಮ ಹಾಗೂ ಸಣ್ಣ ಮೊತ್ತದ ಸ್ಟಾಕ್‌ಗಳಲ್ಲಿ ಹೂಡಿಕೆ ಮಾಡಲಾಗುತ್ತದೆ.

 ಈಚ್‌ಎಸ್‌ಬಿಸಿ ಮೂಲಸೌಕರ್ಯ ಈಕ್ವಿಟಿ ಫಂಡ್‌: ಶೇ. 102 ರಿಟರ್ನ್

ಈಚ್‌ಎಸ್‌ಬಿಸಿ ಮೂಲಸೌಕರ್ಯ ಈಕ್ವಿಟಿ ಫಂಡ್‌: ಶೇ. 102 ರಿಟರ್ನ್

ಎಚ್‌ಎಸ್‌ಬಿಸಿ ಮೂಲಸೌಕರ್ಯ ಈಕ್ವಿಟಿ ಫಂಡ್‌ ಕಳೆದ ಒಂದು ವರ್ಷದಲ್ಲಿ ಶೇಕಡ 102 ರಿಟರ್ನ್ ಹೊಂದಿದೆ. ಇದು ಬೇರೆ ಎಲ್ಲಾ ಮೂಲಸೌಕರ್ಯ ಫಂಡ್‌ಗಳಿಗೆ ಹೋಲಿಕೆ ಮಾಡಿದರೆ ಸಣ್ಣ ಮೊತ್ತದ ಫಂಡ್‌ ಆಗಿದೆ. ಆದರೆ ಇದರಲ್ಲಿ ರಿಟರ್ನ್ ಅಧಿಕವಾಗಿದೆ. ಈ ಮ್ಯೂಚುವಲ್‌ ಫಂಡ್‌ನ ಒಟ್ಟು ಮೊತ್ತವು 112 ಕೋಟಿ ಆಗಿದೆ. ಇದರ ವೆಚ್ಚ ಅನುಪಾತ ಶೇಕಡ 1.18 ಆಗಿದೆ.

ಎನ್‌ಆರ್‌ಐಗಳಿಗೆ 2021ರ ಉತ್ತಮ ಹೂಡಿಕೆ ಆಯ್ಕೆಗಳು, ಇಲ್ಲಿದೆ ಮಾಹಿತಿಎನ್‌ಆರ್‌ಐಗಳಿಗೆ 2021ರ ಉತ್ತಮ ಹೂಡಿಕೆ ಆಯ್ಕೆಗಳು, ಇಲ್ಲಿದೆ ಮಾಹಿತಿ

 ಆದಿತ್ಯ ಬಿರ್ಲಾ ಸನ್ ಲೈಫ್ ಇನ್ಫ್ರಾಸ್ಟ್ರಕ್ಚರ್ ಫಂಡ್‌: ರಿಟರ್ನ್ ಶೇ. 97.4

ಆದಿತ್ಯ ಬಿರ್ಲಾ ಸನ್ ಲೈಫ್ ಇನ್ಫ್ರಾಸ್ಟ್ರಕ್ಚರ್ ಫಂಡ್‌: ರಿಟರ್ನ್ ಶೇ. 97.4

ಆದಿತ್ಯ ಬಿರ್ಲಾ ಸನ್ ಲೈಫ್ ಇನ್ಫ್ರಾಸ್ಟ್ರಕ್ಚರ್ ಫಂಡ್‌ ಕಳೆದ ಒಂದು ವರ್ಷದಲ್ಲಿ ಶೇಕಡ 97.4 ರಿಟರ್ನ್ ಅನ್ನು ಹೊಂದಿದೆ. ಇದರ ಒಟ್ಟು ಮೊತ್ತವು 570 ಕೋಟಿ ರೂಪಾಯಿ ಆಗಿದೆ. ಇದರ ಒಟ್ಟು ವೆಚ್ಚ ಅನುಪಾತ ಶೇಕಡ 1.82 ಆಗಿದೆ. ಸಾಮಾನ್ಯವಾಗಿ ಆದಿತ್ಯ ಬಿರ್ಲಾ ಸನ್ ಲೈಫ್ ಇನ್ಫ್ರಾಸ್ಟ್ರಕ್ಚರ್ ತನ್ನ ಫಂಡ್‌ ಅನ್ನು ನಿರ್ಮಾಣ, ಎಂಜಿನಿಯರಿಂಗ್, ಶಕ್ತಿ ಮತ್ತು ಲೋಹದ ಸ್ಟಾಕ್‌ಗಳ ಮೇಲೆ ಹೂಡಿಕೆ ಮಾಡುತ್ತದೆ. ಇದರಲ್ಲಿ ಸಾಮಾನ್ಯವಾಗಿ ಮಧ್ಯಮ ಹಾಗೂ ಸಣ್ಣ ಬಂಡವಾಳ ಹೂಡಿಕೆ ಮಾಡಲಾಗಿದೆ.

 ಸೂಚನೆ: ಇಲ್ಲಿ ಗಮನಿಸಿ

ಸೂಚನೆ: ಇಲ್ಲಿ ಗಮನಿಸಿ

ಈ ಮೇಲಿನ ಮಾಹಿತಿಯು ಕೇವಲ ಮಾಹಿತಿ ನೀಡುವ ಉದ್ದೇಶದಿಂದ ಮಾತ್ರ ವಿವರಿಸಲಾಗಿದೆ. ಲೇಖಕರಾಗಲಿ ಅಥವಾ ಗ್ರೇನಿಯಮ್‌ ಇನ್ಫಾರ್‍ಮೇಶನ್‌ ಟೆಕ್ನಾಲಜಿಯು ಈ ಲೇಖನದ ಆಧಾರದಲ್ಲಿ ಯಾವುದೇ ನಷ್ಟ ಉಂಟಾದರೆ ಅದಕ್ಕೆ ಜವಾಬ್ದಾರಿ ಆಗಿರುವುದಿಲ್ಲ. ಯಾವುದೇ ಕ್ಷೇತ್ರದಲ್ಲೂ ಹೂಡಿಕೆ ಮಾಡುವ ಮೊದಲು ದಯವಿಟ್ಟು ಎಚ್ಚರಿಕೆಯಿಂದಿರಿ ಮತ್ತು ನುರಿತ ಸಲಹೆಗಾರರನ್ನು ಸಂಪರ್ಕ ಮಾಡಿ ಬಳಿಕ ಹೂಡಿಕೆ ಮಾಡಿ.

English summary

Infrastructure mutual funds that delivered 97-118% returns in the last one year, Details in Kannada

Infrastructure mutual funds that delivered 97-118% returns in the last one year, Details here in Kannada. Read on.
Story first published: Friday, October 22, 2021, 17:11 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X