ಪೋಸ್ಟ್ ಮ್ಯಾನ್ ಕೂಡ ಇನ್ಷೂರೆನ್ಸ್ ಪಾಲಿಸಿ ಮಾರುವ ದಿನ ದೂರವಿಲ್ಲ

ಪೋಸ್ಟ್ ಮ್ಯಾನ್ ಮತ್ತು ಗ್ರಾಮೀಣ್ ಡಾಕ್ ಸೇವಕರೇ ಸದ್ಯದಲ್ಲಿ ಇನ್ಷೂರೆನ್ಸ್ ಪಾಲಿಸಿಗಳ ಮಾರಾಟ ಮಾಡಲಿದ್ದಾರೆ. ಐಆರ್ ಡಿಎಐ ಮಾರ್ಗದರ್ಶಿ ಸೂತ್ರದಂತೆ, ಇಂಡಿಯಾ ಪೋಸ್ಟ್ ಪೇಮೆಂಟ್ಸ್ ಬ್ಯಾಂಕ್ (ಐಪಿಪಿಬಿ) ಪ್ರಾಯೋಜಕತ್ವದಲ್ಲಿ ಇನ್ಷೂರೆನ್ಸ್ ಮಾರಾಟ ಮಾಡಲಿದ್ದಾರೆ. ಆಂದ ಹಾಗೆ ಐಪಿಪಿಬಿ ಕಾರ್ಪೊರೇಟ್ ಏಜೆಂಟ್ ಆಗಿ, ಐಆರ್ ಡಿಎಐನಿಂದ ಅನುಮತಿ ಕೋರಿದೆ.

ಆ ಮೂಲಕ ಅಂಚೆ ಇಲಾಖೆಯ ಪೋಸ್ಟ್ ಮ್ಯಾನ್ ಹಾಗೂ ಗ್ರಾಮೀಣ್ ಡಾಕ್ ಸೇವಕರಿಗೆ ಪ್ರಾಯೋಜಕತ್ವ ನೀಡಲಿದೆ. ಆ ನಂತರ ಇವರು ಪಾಯಿಂಟ್ ಆಫ್ ಸೇಲ್ಸ್ ಪರ್ಸನ್ (ಪಿಒಎಸ್) ರೀತಿ ಕಾರ್ಯ ನಿರ್ವಹಿಸಲಿದ್ದಾರೆ ಎಂದು ಐಆರ್ ಡಿಎಐ ತಿಳಿಸಿದೆ. ಒಂದು ವೇಳೆ ಅನುಮತಿ ಸಿಕ್ಕಲ್ಲಿ ಐಪಿಪಿಬಿಗೆ ಪಿಒಎಸ್ ನೇಮಕ ಹಾಗೂ ವಜಾ ಮಾಡುವ ಜವಾಬ್ದಾರಿ ಇರುತ್ತದೆ.

ಎಲ್ಲೆಲ್ಲಿ ಕಡಿಮೆ ಬ್ಯಾಂಕ್ ಗಳಿವೆಯೋ ಅಥವಾ ಬ್ಯಾಂಕ್ ಇಲ್ಲವೋ ಅಂಥ ಕಡೆಗಳಲ್ಲಿ ಈ ಪೋಸ್ಟ್ ಮ್ಯಾನ್ ಮತ್ತು ಗ್ರಾಮೀಣ್ ಡಾಕ್ ಸೇವಕರು ಕೆಲಸ ನಿರ್ವಹಿಸುತ್ತಾರೆ. ತೀರಾ ದೂರದ ಹಾಗೂ ಹಳ್ಳಿಗಾಡಿನ ಪ್ರದೇಶದಲ್ಲಿ ಇನ್ಷೂರೆನ್ಸ್ ಉತ್ಪನ್ನಗಳನ್ನು ಮಾರಾಟ ಮಾಡುತ್ತಾರೆ.

ಪೋಸ್ಟ್ ಮ್ಯಾನ್ ಕೂಡ ಇನ್ಷೂರೆನ್ಸ್ ಪಾಲಿಸಿ ಮಾರುವ ದಿನ ದೂರವಿಲ್ಲ

ಅಂದ ಹಾಗೆ ಇನ್ಷೂರೆನ್ಸ್ ಪಾಲಿಸಿಗಳು ಅಟೋಮೆಟಿಕ್ ಆಗಿ ಸಿಸ್ಟಮ್ ನಿಂದ ಜನರೇಟ್ ಆಗುತ್ತದೆ. ಇದರಲ್ಲಿ ಇತರರ ಹಸ್ತಕ್ಷೇಪ ಬಹಳ ಕಡಿಮೆ ಇರುತ್ತದೆ. ಮತ್ತು ಇಂಥ ಕೆಲಸಕ್ಕೆ ನಿಯೋಜಿಸಿಕೊಳ್ಳುವವರಿಗೆ ಕನಿಷ್ಠ ಮಟ್ಟದ ತರಬೇತಿ ಮತ್ತು ಪರೀಕ್ಷೆ ಸಾಕಾಗುತ್ತದೆ ಎಂದು ಐಆರ್ ಡಿಎಐ ತಿಳಿಸಿದೆ.

ಪೋಸ್ಟ್ ಮ್ಯಾನ್ ಮತ್ತು ಗ್ರಾಮೀಣ್ ಡಾಕ್ ಸೇವಕರಿಗೆ ತರಬೇತಿ ಹಾಗೂ ಪ್ರಮಾಣ ಪತ್ರ ನೀಡುವ ಜವಾಬ್ದಾರಿ ಐಪಿಪಿಬಿಗೆ ಸೇರಿರುತ್ತದೆ. ನಿತ್ಯದ ವ್ಯವಹಾರಗಳನ್ನು ನೋಡಿಕೊಳ್ಳುವುದು, ವ್ಯವಹಾರಗಳ ಬಗ್ಗೆ ವರದಿಯನ್ನು ನೀಡುವುದು, ಸಮಸ್ಯೆಗಳು ಕಂಡುಬಂದಲ್ಲಿ ಅವುಗಳನ್ನು ಬಗೆಹರಿಸುವುದು ಎಲ್ಲವೂ ತರಬೇತಿ ಪೂರ್ಣಗೊಳಿಸಿದವರದೇ ಆಗಿರುತ್ತದೆ.

More From GoodReturns

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+