For Quick Alerts
ALLOW NOTIFICATIONS  
For Daily Alerts

ಜಿಯೋದಲ್ಲಿ ಹೂಡಿಕೆ ಮಾಡಲು ಮುಂದಾದ ಮತ್ತೊಂದು ಟೆಕ್ ದೈತ್ಯ

|

ಮುಂಬೈ, ಜುಲೈ 3: ಇತ್ತೀಚೆಗೆ ಭಾರತೀಯ ಟೆಲಿಕಾಂ ದೈತ್ಯ 'ರಿಲಯನ್ಸ್ ಜಿಯೋ' ಕಂಪನಿ ಮೇಲೆ ಭಾರೀ ಪ್ರಮಾಣದಲ್ಲಿ ಹೂಡಿಕೆ ಹರಿದು ಬರುತ್ತಿದೆ. ಇದರಿಂದ 'ಜಿಯೋ' ಹೂಡಿಕೆದಾರರಿಗೆ ಹಾಟ್ ಪೇವರೇಟ್ ಆಗಿದೆ.

 

ಇದೀಗ ಇಂಟೆಲ್ ಕಾರ್ಪೊರೇಶನ್‌ನ ಹೂಡಿಕೆ ವಿಭಾಗವಾದ ಇಂಟೆಲ್ ಕ್ಯಾಪಿಟಲ್ ಸುಮಾರು 1,894 ಕೋಟಿ ರುಪಾಯಿಯನ್ನು ಜಿಯೋ ಪ್ಲಾಟ್‌ಫಾರ್ಮ್‌ನಲ್ಲಿ ಹೂಡಲು ಮುಂದಾಗಿದೆ.

ಎರಡೂವರೆ ತಿಂಗಳೊಳಗೆ 1 ಲಕ್ಷ ಕೋಟಿಯ 9 ಡೀಲ್; ಇದು ಜಿಯೋ ಕಮಾಲ್ಎರಡೂವರೆ ತಿಂಗಳೊಳಗೆ 1 ಲಕ್ಷ ಕೋಟಿಯ 9 ಡೀಲ್; ಇದು ಜಿಯೋ ಕಮಾಲ್

ಜಿಯೋಕ್ಕೆ ಇಂಟೆಲ್ ಕ್ಯಾಪಿಟಲ್ ಬರುತ್ತಿರುವುದರಿಂದ, ರಿಲಯನ್ಸ್ ಜಿಯೋದ ಒಟ್ಟು ಹೂಡಿಕೆ ಈಗ 1,17,588 ಕೋಟಿ ರುಪಾಯಿಗೆ ಏರಿಕೆ ಕಂಡಂತಾಗಿದೆ.

ಫೇಸ್‌ಬುಕ್‌ನೊಂದಿಗೆ, 43,573.62 ಕೋಟಿ ರು ಒಪ್ಪಂದ

ಫೇಸ್‌ಬುಕ್‌ನೊಂದಿಗೆ, 43,573.62 ಕೋಟಿ ರು ಒಪ್ಪಂದ

ರಿಲಯನ್ಸ್ ಜಿಯೋ ಹೂಡಿಕೆ ಏಪ್ರಿಲ್ 22 ರಂದು ಫೇಸ್‌ಬುಕ್‌ನೊಂದಿಗೆ, 43,573.62 ಕೋಟಿ ರು ಒಪ್ಪಂದ ಪ್ರಾರಂಭವಾಯಿತು. ನಂತರ ಜಿಯೋ ಪ್ಲಾಟ್‌ಫಾರ್ಮ್‌ಗಳು ಸಿಲ್ವರ್ ಲೇಕ್, ವಿಸ್ಟಾ, ಜನರಲ್ ಅಟ್ಲಾಂಟಿಕ್, ಕೆಕೆಆರ್, ಮುಬಡಾಲಾ, ಎಡಿಐಎ, ಟಿಪಿಜಿ, ಎಲ್ ಕ್ಯಾಟರ್ಟನ್ ಇತ್ಯಾದಿಗಳಿಂದ ಹೂಡಿಕೆಗಳು ಜಿಯೋಕ್ಕೆ ಬಂದವು.

ತುಂಬಾ ಸಂತೋಷಪಡುತ್ತೇವೆ: ಮುಖೇಶ್ ಅಂಬಾನಿ

ತುಂಬಾ ಸಂತೋಷಪಡುತ್ತೇವೆ: ಮುಖೇಶ್ ಅಂಬಾನಿ

"ಭಾರತವನ್ನು ವಿಶ್ವದ ಪ್ರಮುಖ ಡಿಜಿಟಲ್ ಹಬ್ ಆಗಿ ಪರಿವರ್ತಿಸುವ ತಂತ್ರಜ್ಞಾನ ನಾಯಕರೊಂದಿಗಿನ ನಮ್ಮ ಸಂಬಂಧವನ್ನು ಇನ್ನಷ್ಟು ಗಾಢವಾಗಿಸಲು ನಾವು ತುಂಬಾ ಸಂತೋಷಪಡುತ್ತೇವೆ. ಇಂಟೆಲ್ ನಿಜವಾದ ಉದ್ಯಮದ ನಾಯಕರಾಗಿದ್ದು, ವಿಶ್ವ-ಬದಲಾಗುತ್ತಿರುವ ತಂತ್ರಜ್ಞಾನ ಮತ್ತು ಆವಿಷ್ಕಾರಗಳನ್ನು ರಚಿಸುವತ್ತ ಕೆಲಸ ಮಾಡುತ್ತಿದ್ದಾರೆ ಎಂದು ರಿಲಯನ್ಸ್ ಇಂಡಸ್ಟ್ರೀಸ್ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ಮುಖೇಶ್ ಅಂಬಾನಿ ಹೇಳಿದ್ದಾರೆ.

ಭಾರತದ ಸಾಮರ್ಥ್ಯಗಳನ್ನು ಹೆಚ್ಚಿಸಲು
 

ಭಾರತದ ಸಾಮರ್ಥ್ಯಗಳನ್ನು ಹೆಚ್ಚಿಸಲು

'ಇಂಟೆಲ್ ಕ್ಯಾಪಿಟಲ್ ಜಾಗತಿಕವಾಗಿ ಪ್ರಮುಖ ತಂತ್ರಜ್ಞಾನ ಕಂಪನಿಗಳಿಗೆ ಅಮೂಲ್ಯವಾದ ಪಾಲುದಾರ ಎಂಬ ಅತ್ಯುತ್ತಮ ದಾಖಲೆಯನ್ನು ಹೊಂದಿದೆ. ಆದ್ದರಿಂದ ನಮ್ಮ ಆರ್ಥಿಕತೆಯ ಎಲ್ಲಾ ಕ್ಷೇತ್ರಗಳನ್ನು ಸಬಲೀಕರಣಗೊಳಿಸುವ ಮತ್ತು 1.3 ಶತಕೋಟಿ ಭಾರತೀಯರ ಜೀವನ ಮಟ್ಟವನ್ನು ಸುಧಾರಿಸುವ ಅತ್ಯಾಧುನಿಕ ತಂತ್ರಜ್ಞಾನಗಳಲ್ಲಿ ಭಾರತದ ಸಾಮರ್ಥ್ಯಗಳನ್ನು ಹೆಚ್ಚಿಸಲು ಇಂಟೆಲ್‌ನೊಂದಿಗೆ ಒಟ್ಟಾಗಿ ಕೆಲಸ ಮಾಡಲು ನಾವು ಉತ್ಸುಕರಾಗಿದ್ದೇವೆ' ಎಂದು ರಿಲಯನ್ಸ್ ಇಂಡಸ್ಟ್ರೀಸ್ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ಮುಖೇಶ್ ಅಂಬಾನಿ ಹೇಳಿದ್ದಾರೆ.

 ಡಿಜಿಟಲ್ ರೂಪಾಂತರಕ್ಕೆ ಸಹಾಯ

ಡಿಜಿಟಲ್ ರೂಪಾಂತರಕ್ಕೆ ಸಹಾಯ

ಇಂಟೆಲ್ ಕ್ಯಾಪಿಟಲ್ ಅಧ್ಯಕ್ಷ ವೆಂಡೆಲ್ ಬ್ರೂಕ್ಸ್ , 'ಕಡಿಮೆ-ವೆಚ್ಚದ ಡಿಜಿಟಲ್ ಸೇವೆಗಳ ಶಕ್ತಿಯನ್ನು ಭಾರತಕ್ಕೆ ತರಲು ಜಿಯೋ ಪ್ಲಾಟ್‌ಫಾರ್ಮ್‌ಗಳು ಕಾರಣವಾಗಿವೆ. ಈ ಹೂಡಿಕೆಯ ಮೂಲಕ, ಭಾರತದಲ್ಲಿ ಡಿಜಿಟಲ್ ರೂಪಾಂತರಕ್ಕೆ ಸಹಾಯ ಮಾಡಲು ನಾವು ಉತ್ಸುಕರಾಗಿದ್ದೇವೆ, ಇಲ್ಲಿ ಇಂಟೆಲ್ ಪ್ರಮುಖ ಉಪಸ್ಥಿತಿಯನ್ನು ಕಾಯ್ದುಕೊಳ್ಳುತ್ತಿದೆ' ಎಂದು ಒಪ್ಪಂದದ ಬಗ್ಗೆ ಹೇಳಿದ್ದಾರೆ.

English summary

Intel Capital Investing 1,894 Crore Rupees In Reliance Jio

Invest In Jio: Intel Capital Investing 1,894 Crore Rupees In Reliance Jio
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X