For Quick Alerts
ALLOW NOTIFICATIONS  
For Daily Alerts

2019ರಲ್ಲಿ ಈಕ್ವಿಟಿ, ಮ್ಯೂಚುವಲ್ ಫಂಡ್‌ಗಳಲ್ಲಿ 75,000 ಕೋಟಿ ಹೂಡಿಕೆ: 41 ಪರ್ಸೆಂಟ್ ಇಳಿಕೆ

|

ದೇಶದಲ್ಲಿನ ಆರ್ಥಿಕತೆಯ ಮಂದಗತಿಯಿಂದಾಗಿ 2019ರಲ್ಲಿ ಈಕ್ವಿಟಿ, ಮ್ಯೂಚುವಲ್ ಫಂಡ್ ಮೇಲಿನ ಬಂಡವಾಳ ಹೂಡಿಕೆಯು ತಗ್ಗಿದ್ದು, 41 ಪರ್ಸೆಂಟ್ ಇಳಿಕೆಯಾಗಿ 75,000 ಕೋಟಿ ರುಪಾಯಿಗೆ ಎಂದು ಅಮ್ಫಿ ಅಂಕಿ-ಅಂಶಗಳು ತಿಳಿಸಿವೆ.

''ಮಾರುಕಟ್ಟೆಯಲ್ಲಿನ ಚಂಚಲತೆಯು ಇನ್ನೂ ಕೆಲವು ಸಮಯ ಮುಂದುವರಿಯಬಹುದಾದರೂ, ಹೂಡಿಕೆದಾರರು ಈ ಚಂಚಲತೆಯಿಂದ ಲಾಭ ಪಡೆಯಲು ಬಯಸುತ್ತಿದ್ದಾರೆ. ಅವರ ಸಂಪತ್ತನ್ನು ಸೃಷ್ಟಿಸಲು ಮತ್ತು ಬೆಳೆಸಲು ಅದನ್ನು ಬಳಸುತ್ತಾರೆ ಎಂದು ನಾವು ನಂಬುತ್ತೇವೆ. ಉದ್ಯಮದ ಒಳಹರಿವು ಹೆಚ್ಚಾಗುತ್ತದೆ ಎಂದು ನಾವು ನಿರೀಕ್ಷಿಸಿದಂತೆ, ಈಕ್ವಿಟಿ ಫಂಡ್‌ಗಳು, ನಿಧಿಗಳು ಪರಸ್ಪರ ಸ್ಥಿರವಾದ ಏರಿಕೆಯನ್ನು ಕಾಣುವ ನಿರೀಕ್ಷಿಯಿದೆ ಎಂದು '' ಎಸ್‌ಬಿಐ ಮ್ಯೂಚುವಲ್ ಫಂಡ್ ಎಂಡಿ ಮತ್ತು ಸಿಇಒ ಅಶ್ವನಿ ಭಾಟಿಯಾ ಹೇಳಿದ್ದಾರೆ.

2019ರಲ್ಲಿ ಈಕ್ವಿಟಿ, ಮ್ಯೂಚುವಲ್ ಫಂಡ್‌ಗಳಲ್ಲಿ 75,000 ಕೋಟಿ ಹೂಡಿಕೆ

ಅಸೋಸಿಯೇಷನ್ ಆಫ್ ಮ್ಯೂಚುವಲ್ ಫಂಡ್ಸ್ ಇನ್ ಇಂಡಿಯಾದ (ಅಮ್ಫಿ) ಮಾಹಿತಿಯ ಪ್ರಕಾರ, 2018ಕ್ಕೆ ಹೋಲಿಸಿದರೆ 2019ರಲ್ಲಿ ಹೂಡಿಕೆದಾರರು 74, 870 ಕೋಟಿ ರುಪಾಯಿಗಳನ್ನು ಈಕ್ವಿಟಿ, ಮ್ಯೂಚುವಲ್ ಫಂಡ್‌ಗಳಲ್ಲಿ ಹೂಡಿಕೆ ಮಾಡಿದ್ದಾರೆ. ಇದು ಹಿಂದಿನ ವರ್ಷಕ್ಕೆ ಹೋಲಿಸಿದರೆ 41 ಪರ್ಸೆಂಟ್ ಕುಸಿದಿದೆ. ಈಕ್ವಿಟಿ, ಈಕ್ವಿಟಿ ಲಿಂಕ್ಡ್ ಯೋಜನೆಗಳು (ಇಎಲ್ಎಸ್ಎಸ್) 2018ರಲ್ಲಿ 1.2 ಲಕ್ಷ ಕೋಟಿಗಳಷ್ಟು ಒಳಹರಿವನ್ನು ಆಕರ್ಷಿಸಿದೆ.

2017ರಲ್ಲಿ ಇಂತಹ ಯೋಜನೆಗಳು 1.33 ಲಕ್ಷ ಕೋಟಿಗಳಷ್ಟು ಒಳಹರಿವು ಕಂಡಿದೆ. ಇದು 2016ರಲ್ಲಿ 51,000 ಕೋಟಿಯಷ್ಟಿದೆ.

English summary

Investment In Equity Mutual Funds Drops 41 Percent

Equity and equity-linked saving schemes (ELSS) attracted an inflow of ₹74,870 crore in 2019, much lower than 2018, Amfi data said
Story first published: Monday, January 20, 2020, 10:44 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X